ಪ್ರಜಾಕೀಯಾದ ಸರ್ಕಾರ ಬಂದರೆ ರಾಜ್ಯದಲ್ಲಿ ಏನಾಗುವುದು.
1. ART of Governance. Accountable, Responsible & Transparent Government ಆಗುತ್ತದೆ.
2. ಎಲ್ಲಾ ಸರಕಾರದ ವ್ಯವಹಾರ( ಟೆಂಡರಿಂಗ್ ಕೂಡಾ) ಪ್ರಜೆಗಳ ಎದುರಿಗೆ TV ಹಾಗು ಮಾಧ್ಯಮದ ಮುಖಾಂತರ ಪ್ರಜೆಗಳಿಗೆ ಧ್ರಶ್ಯಮೂಲಕ ತಿಳಿಸಲಾಗುವುದು.
3. ಪ್ರತಿಯೊಂದು ಪ್ರೋಜೆಕ್ಟ್ಗಳನ್ನು ಆ ಏರಿಯಾದ ಮೇಜೋರಿಟಿ ಪ್ರಜೆಗಳ ಒಪ್ಪಿಗೆ ಪಡೆದೆ ಮಾಡಲಾಗುವುದು.
4. ಪ್ರಜೆಗಳ ಮೂಲಭೂತ ಅವಶ್ಯಕತೆಗಳಾದ ಸರ್ಕಾರಿ ವಿಧ್ಯಾಭ್ಯಾಸ, ಆರೋಗ್ಯ, ಕಾನೂನು ವ್ಯವಸ್ಥೆ, ನೀರು, ವಿದ್ಯುತ್ ಹಾಗು ಕಸ ವಿಲೆವಾರಿಯ ವ್ಯವಸ್ಥೆಗಳನ್ನು ಕ್ರಾಂತಿಕಾರಿಯಾಗಿ ಅಂತರಾಷ್ಟ್ರಿಯ ಮಟ್ಟದನ್ನಾಗಿ ಮಾಡುವುದು.
5. ಎಲ್ಲಾ ವಿಷಯದಲ್ಲಿ ಪ್ರಜೆಗಳಿಗೆ ಪ್ರಾಮುಖ್ಯತೆ ಕೊಡಲಾಗುವುದು.
6. ಎಲ್ಲಾ ಪ್ರಜಾಕೀಯಾ MLA ಗಳು ಕೇವಲ ಸಂಬಳಕ್ಕಾಗಿ ಕೆಲಸ ಮಾಡುವರು. ಯಾರಿಗೂ ಜಿರೋ ಟ್ರಾಫಿಕ್ ವ್ಯವಸ್ಥೆ ಇರುವುದಿಲ್ಲ.
7. ಪ್ರಜಾಕೀಯಾದ MLA ಗಳು ನಿರಂತರ ಪ್ರಜೆಗಳ ಸಂಪರ್ಕದಲ್ಲಿದ್ದು ಪ್ರಜೆಗಳ ಅವಶ್ಯಕತೆಯನ್ನು ಕಾರ್ಯಾಂಗದಿಂದ ಮಾಡಿಸಿ ಕೊಡುತ್ತಾರೆ.
8. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗು ಮಾಧ್ಯಮಗಳು ಸಂಪೂರ್ಣ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ನೋಡಿ ಕೊಳ್ಳುವುದು.
9. ಲೋಕಾಯುಕ್ತ, Anti Corruption Buruea, CID, Police ಗಳಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟು, ಭ್ರಷ್ಟಾಚಾರವನ್ನು ಸಂಪೂರ್ಣ ಕಿತ್ತೊಗೆಯುವುದು.
10. ಸರ್ಕಾರಿ ವಿಭಾಗಗಳು ತಮಗೆ ಸಂಬಳ ಕೊಡುವ ಪ್ರಜೆಗಳನ್ನು ಗೌರವದಿಂದ ನೋಡಿ ಕೊಂಡು, ಪ್ರತೀಯೊಂದು ಪ್ರಜೆಗಳ ಕೆಲಸವನ್ನು ನಿರ್ಧಿಷ್ಟ ಸಮಯದಲ್ಲಿ ಮಾಡಿ ಕೊಡುವಂತೆ ನೋಡಿ ಕೊಳ್ಳುವುದು. ಅವಶ್ಯಕತೆ ಇದ್ದರೆ ಪ್ರಜೆಗಳ ಸ್ಥಳಕ್ಕೆ ಬಂದು ಮಾಡಿ ಕೊಡಬೇಕು.
11. ರೈತರಿಗೆ Co- operative Farming ನ್ನು ತಂದು ಅದಕ್ಕೆ ಬೇಕಾದ ಮಶಿನರಿ, ಬೀಜ, ಗೊಬ್ಬರ ಹಾಗು ಗೋಡೌನ್ಗಳ ವ್ಯವಸ್ಥೆ ಮಾಡುವುದು. ಹಾಗೆ Farm Product ಗಳ ಮಾರ್ಕೇಟ್ ಮಾಡಲು ರೈತರಿಗೆ ಸಹಾಯ ಮಾಡುವುದು
12. ಸಂಪೂರ್ಣ ಕರ್ನಾಟಕದ ಸರ್ವೆ ಮಾಡಿ, ಎಲ್ಲಾ ಪ್ರಜೆಗಳ ಡಾಟಾ ಒಂದು ಬ್ರಹತ್ ಕಂಪ್ಯೂಟರ್ನಲ್ಲಿ ಸ್ಟೋರ್ ಮಾಡಿ, ಪ್ರತಿಯೊಂದು ಸರಕಾರದ ಯೋಜನೆಗಳನ್ನು ಹಾಗು ಹಣದ ವ್ಯವಸ್ಥೆಯನ್ನು ಡೈರೆಕ್ಟ್ ಆಗಿ ಸಂಬಂದ ಪಟ್ಟ ಪ್ರಜೆಗಳ ಬ್ಯಾಂಕ್ ಅಕೌಂಟ್ ಗೆ ತಲುಪಿಸಲಾಗುವುದು. ಇಲ್ಲಿ ಯಾರೂ ಮಿಡ್ಲ್ ಮ್ಯಾನ್ ಇರುವುದಿಲ್ಲ. ಪ್ರತಿಯೊಬ್ಬ 18 ವರ್ಷದ ಮೇಲಿನ ಪ್ರಜೆಯ ಬ್ಯಾಂಕ್ ಅಕೌಂಟ್ ಡಿಟೈಲ್ ಸರಕಾರದ ಹತ್ತಿರ ಇರುವುದು.
13. ಅದಕ್ಕಾಗಿ ” Block Chain Technology” ಯ ಸಾಫ್ಟ್ ವೇರ್ ಇನ್ಸ್ಟಾಲ್ ಮಾಡಿ, ಸಂಪೂರ್ಣ ಸರಕಾರದ ವ್ಯವಹಾರ ಕಂಪೂಟರ್ನ ಮುಖಾಂತರ ಮಾಡಲಾಗುವುದು.
14. ಸರ್ಕಾರಿ ಆಫೀಸುಗಳನ್ನು ಮೋಡರ್ನೈಸ್ ಮಾಡಲಾಗುವುದು. ಹಾಜಿರಿ ಫಿಂಗರ್ ಪ್ರಿಂಟ್ ಮುಖಾಂತರ ಮಾಡಲಾಗುವುದು ಹಾಗು ಸಂಪೂರ್ಣ ಸರ್ಕಾರಿ ಆಫೀಸರ್ ಗಳು CCTVಯ ವಿಜಿಲೆನ್ಸ್ ಮುಖಾಂತರ ಮಾಡಲಾಗುವುದು. ಪ್ರತಿಯೊಂದು ಸರ್ಕಾರಿ ಆಫೀಸ್ ಗಳಲ್ಲಿ ಪ್ರಜೆಗಳ ಕಂಪ್ಲೈಂಟ್ ತೆಗೆದು ಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಅಷ್ಟೆ ಅಲ್ಲ, 48 ಗಂಟೆಯ ಒಳಗೆ ಕಂಪ್ಲೈಂಟ್ನ ವಿಲೆವಾರಿ ಆಗುವಂತೆ ನೋಡಿ ಕೊಳ್ಳುವುದು. ಅವಶ್ಯಕತೆ ಇದ್ದರೆ, ಸರ್ಕಾರಿ ವಿಭಾಗಗಳಿಗೆ ಸಮವಸ್ತ್ರದ ವ್ಯವಸ್ಥೆ ಮಾಡಲಾಗುವುದು. ಪ್ರತಿ ಸರ್ಕಾರಿ ನೌಕರರು ತಮ್ಮ ದಿನದ 8 ಗಂಟೆ ಕೆಲಸವನ್ನು ಸಂಪೂರ್ಣ ಪ್ರಜೆಗಳ ಸೇವೆಗಾಗಿ ಪ್ರೊಡಕ್ಟಿವ್ ಆಗಿ ಉಪಯೋಗಿಸಬೇಕು. ಎಲ್ಲವೂ ಆಡಿಟ್ ಆಗುವುದು. ಸರ್ಕಾರಿ ನೌಕರರಿಗೆ ಡಿಗ್ನಿಫೈಡ್ ಸೇವೆ ಮಾಡುವಂತಹ ಸರ್ಕಾರಿ ಕಚೇರಿಗಳನ್ನು ನಿರ್ಮಿಸಲಾಗುವುದು..
15. ಎಲ್ಲಾ ಪ್ರಜೆಗಳನ್ನು ಸಮಾನವಾಗಿ ನೋಡುವಂತಹ ಹಾಗು ಗೌರವದಿಂದ ನೋಡುವ ಸಮಾಜ ನಿರ್ಮಾಣವಾಗ ಬೇಕು.
16. ಯಾವುದೆ ಧರ್ಮ, ಜಾತಿ, ಪಂಗಡ, ಪ್ರಾಂತ್ಯ, ಭಾಷೆ, ಎಂಬ ಭೇದ ಭಾವ ಇರಬಾರದು. ಸಂವಿಧಾನದಲ್ಲಿ ಶೋಷಿತ ಸಮಾಜಕ್ಕೆ ಒದಗಿಸಲಾದ ಸೌಕರ್ಯಗಳು ಹಾಗೆ ಮುಂದುವರಿಯುವುದು.
17. ಯಾವುದೇ ದೇಶ-ರಾಜ್ಯ, ಪ್ರಜಾ ವಿರೋದಿ ಕಾರ್ಯಗಳನ್ನು ಬುಡದಿಂದಲೆ ಅಗೆದು ತೆಗೆಯಲಾಗುವುದು. ಇದರಲ್ಲಿ ಯಾರಿಗೂ ಕನ್ಸೇಷನ್ ಇರುವುದಿಲ್ಲ.
18. ಸಂಪೂರ್ಣ ರಾಜ್ಯವನ್ನು ಪೋಲೀಸ್ ವಿಜಿಲೆನ್ಸ್ ನಲ್ಲಿ ಇಡಲಾಗುವುದು. ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಹಾಗು ವಾರ್ಡ್ಗಳಲ್ಲಿ ಸುಸಜ್ಜಿತ ಪೋಲೀಸ್ ಸ್ಟೇಷನ್ ನಿರ್ಮಾಣ ಮಾಡಲಾಗುವುದು. ಇದರಿಂದ ಕ್ರೈಮ್ ಕಂಟ್ರೋಲ್ ಮಾಡಲಾಗುವುದು.
19. ಉದ್ಯೋಗ ನಿರ್ಮಾಣದ ಕಡೆ ಸ್ಪೇಷಲ್ ಧ್ಯಾನ ಕೊಡಲಾಗುವುದು ಹಾಗು ಪ್ರವಾಸೋಧ್ಯಮದಲ್ಲಿ ಮೋಡರ್ನ್ ಸುವಿಧಗಳನ್ನು ಒದಗಿಸಲಾಗುವುದು. ಸಂಪೂರ್ಣ Sea Beach ಗಳನ್ನು ಡೆವೆಲಪ್ ಮಾಡಲಾಗುವುದು.
20. Integrated ಹಾಗು 25 ರಿಂದ 50 ವರ್ಷ ಬಾಳುವ Infrastructure ಮಾಡಲಾಗುವುದು.
21.PDS ( Public Distribution System) ನಲ್ಲಿ ಸುಧಾರಣೆ ತಂದು, ಅನುಕೂಲವೆಂದು ಕಂಡು ಬಂದಲ್ಲಿ, ಅದರ ಬೆಲೆಯನ್ನು BPL ಕುಟುಂಬದ ಯಜಮಾನಿಯ( ಹೆಂಗಸರ) ಬ್ಯಾಂಕ್ ಅಕೌಂಟ್ ಗೆ ಡೈರೆಕ್ಟ್ ಪ್ರತಿ ತಿಂಗಳು ಮಾಡಲಾಗುವುದು. ಕೇವಲ ಹೆಂಗಸಿರಲ್ಲದ ಕುಟುಂಬದ ಯಜಮಾನನ ಅಕೌಂಟ್ಗೆ ಮಾಡಲಾಗುವುದು.
22. ಪ್ರತಿಯೊಬ್ಬ MLA ಯ ಕೆಲಸ ಮಾಡುವ ವೈಖರಿಯನ್ನು ಪಾರ್ಟಿ ಕಡೆಯಿಂದ ಮೊನಿಟರ್ ಮಾಡಲಾಗುವುದು. ಎಲ್ಲಿಯಾದರೂ ಭ್ರಷ್ಟಾಚಾರಾದಲ್ಲಿ ಕೈ ಹಾಕಿದರೆ ಪಾರ್ಟಿಯಿಂದ ಪರ್ಮನೆಂಟ್ಲಿ ತೆಗೆದು ಹಾಕಲಾಗುವುದು.
23. ಸಂಪೂರ್ಣ ಮೈಕ್ರೋ ಪ್ಲಾನಿಂಗ್ನಿಂದ ಹಣವನ್ನು ಸಂಬಂದ ಪಟ್ಟ ಸಂಸ್ಥೆ ಗಳಿಗೆ ಖಜಾನೆಯಿಂದ ಡೈರೆಕ್ಟ್ ತಲುಪಿಸುವಂತೆ ಮಾಡಲಾಗುವುದು.
24. ಪ್ರಜೆಗಳ ತೆರಿಗೆ ಹಣ ನೂರಕ್ಕೆ- ನೂರು ಶೇಕಡಾ ಪ್ರಜೆಗಳ ಮೂಲಭೂತ ಸೌಕರ್ಯಕ್ಕೆ ಉಪಯೋಗಿಸಲಾಗುವುದು.
25. ಎಲ್ಲವೂ ಸಂಕ್ಷಿಪ್ತ ಪ್ಲಾನ್ ಮಾಡಿದ ಮೇಲೆಯೆ, ಪ್ರಜೆಗಳಿಂದ ಒಪ್ಪಿಗೆ ಪಡೆದು ಮಾಡಲಾಗುವುದು.
ಪ್ರಜೆಯೇ ಇಲ್ಲಿ ಅಂತಿಮ- Superior.
ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ (UPP).