ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀವಿಷ್ಣು ಸಹಸ್ರನಾಮದ ಮಹತ್ವ

ಶ್ರೀವಿಷ್ಣುಸಹಸ್ರನಾಮ ಸ್ತೋತ್ರ.

ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಬೇಕಾದರೆ, ಮೊದಲು ಈ ಮೂರನ್ನು ತಿಳಿದುಕೊಳ್ಳುವುದು ಬಹುಮುಖ್ಯವಾದುದು.

  1. “ಶ್ರೀವಿಷ್ಣುಸಹಸ್ರನಾಮ” ಎಂದರೆ ಏನು?
  2. “#ಸ್ತೋತ್ರ” ಎಂದರೆ ಏನು?
  3. “#ಪಾರಾಯಣ” ಎಂದರೆ ಏನು?

#ಶ್ರೀವಿಷ್ಣುಸಹಸ್ರನಾಮ.

ಇದರಲ್ಲಿ ಮೂರು ಶಬ್ದಗಳಿವೆ:-

ಶ್ರೀವಿಷ್ಣು, ಸಹಸ್ರ ನಾಮ.

ಶ್ರೀವಿಷ್ಣು = ಭಗವಂತ.

ಸಹಸ್ರ = ಸಾವಿರ ಅಥವಾ ಸಾವಿರಾರು.

ನಾಮ/ನಾಮನ್ = ಹೆಸರು, ಒಂದು ವಸ್ತುವನ್ನು ತಿಳಿಸುವ ಶಬ್ದ, ಒಬ್ಬ ವ್ಯಕ್ತಿಯನ್ನು ಕರೆಯುವ ಸಂಜ್ಞಾ ಶಬ್ದ.

ಇದರಿಂದ ತಿಳಿಯುವುದೇನೆಂದರೆ “#ಶ್ರೀವಿಷ್ಣುಸಹಸ್ರನಾಮ” ಎಂದರೆ ಭಗವಂತನ ಸಾವಿರ/ಸಾವಿರಾರು ಹೆಸರುಗಳು.
ಆದರೆ ಭಗವಂತ ಒಂದು ವಸ್ತುವೂ ಅಲ್ಲ, ಒಬ್ಬ ವ್ಯಕ್ತಿಯೂ ಅಲ್ಲ. ಭಗವಂತ #ಜ್ಞಾನಸ್ವರೂಪ.

ಹಾಗಾದರೆ ಭಗವಂತನ ಸಾವಿರ ನಾಮಗಳು ಎಂದರೆ ಏನು ಎನ್ನುವ ಪ್ರಶ್ನೆ ಬರುತ್ತದೆ.

ಭಗವಂತನ ಸಾವಿರ ನಾಮಗಳು ಎಂದರೆ ಭಗವಂತನ ಸಾವಿರ ಗುಣವಾಚಕ ಸಂಜ್ಞೆಗಳು” ಎನ್ನುವುದಾಗಿರುತ್ತದೆ.

#ಸ್ತೋತ್ರ = ಶ್ಲಾಘನೆ, ಸ್ತುತಿ, ಪ್ರಶಂಸೆ, ಹೊಗಳುವುದು.

#ಪಾರಾಯಣ. = ಆದಿಯಿಂದ ಕೊನೆಯವರೆಗೆ ಗ್ರಂಥವನ್ನು ಓದುವುದು.

ಆದುದರಿಂದ ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಎಂದರೆ “ಭಗವಂತನ ಸಾವಿರ ಗುಣವಾಚಕ ಸಂಜ್ಞೆಗಳನ್ನು ಮನನ ಮಾಡಿ ಭಗವಂತನನ್ನು ಪ್ರಶಂಸಿಸುವುದು” ಎಂದು ಹೇಳಬಹುದಾಗಿದೆ.

ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಮಾಡುವಾಗ #ತ್ರಿಕರಣಪೂರ್ವಕವಾಗಿ ಮಾಡಬೇಕಾಗಿರುತ್ತದೆ.

ತ್ರಿಕರಣಪೂರ್ವಕ ಎಂದರೆ ಕಾಯೇನವಾಚಾಮನಸಾ ಅಂದರೆ ವಾಣಿಯಿಂದ ವರ್ಣಿಸಿ; ಮನಸ್ಸಿನಿಂದ ಸ್ಮರಿಸಿ; ಭಗವಂತನ ಚರಣಗಳಿಗೆ ಶರಣಾಗತನಾಗಿ (ಮಾತು, ಮನಸ್ಸು ಮತ್ತು ಕೃತಿ) ಮಾಡುವ ಉಪಾಸನೆ.

ಈ ರೀತಿಯಾಗಿ ಶ್ರೀವಿಷ್ಣುಸಹಸ್ರನಾಮ ಸ್ತೋತ್ರದ ಪಾರಾಯಣ ಮಾಡಿದರೆ ಇಚ್ಛಿತ ಫಲ ಸಿದ್ಧಿಯಾಗುತ್ತದೆ.

  ದಾನಗಳು ಮತ್ತು ಫಲಗಳು

||ಶ್ರೀಕೃಷ್ಣಾರ್ಪಣಮಸ್ತು||

||ನಾಹಂ ಕರ್ತಾ ಹರಿ: ಕರ್ತಾ:||


ಶ್ರೀವಿಷ್ಣು ಸಹಸ್ರನಾಮದ ಮಹತ್ವ…!

ಮನುಷ್ಯನ ಆಯಸ್ಸು ನೂರು ವರ್ಷ.ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.
ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..
ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.
ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ. ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ.

ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ ‘ಇಡೀ ಜಗತ್ತಿನ ದೈವ ಯಾರು ? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ನಮಗೆ ಶ್ರೇಯಸ್ಸಾಗುತ್ತದೆ ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಮಸ್ತ ಪಾಪ, ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು’? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು

  ಅಷ್ಟ ಲಕ್ಷ್ಮಿ ಸ್ತೋತ್ರ ಮಂತ್ರದ ಅರ್ಥ

ಶ್ರೀವಿಷ್ಣು #ಸಹಸ್ರನಾಮ ಎಂದು” ಒಂದೇ ಉತ್ತರ ಹೇಳುತ್ತಾರೆ. ಅದಕ್ಕೆ ತಮ್ಮ ಜೀವನದ ಪ್ರಸಂಗವೊಂದನ್ನು ಈ ರೀತಿಯಾಗಿ ವಿವರಿಸಿದರು.

ನಿಮ್ಮನ್ನು ನಾಶಮಾಡಲೆಂದೇ ದುರ್ಯೋಧನನು ಅರಗಿನ ಅರಮನೆಯಲ್ಲಿ ಉಳಿಯುವಂತೆ ಮಾಡಿ ರಾತ್ರಿಯಲ್ಲಿ ಅದಕ್ಕೆ ಬೆಂಕಿ ಇಡಿಸಿದ್ದನು.ಆದರೆ ವಿದುರನ ದೂರದೃಷ್ಟಿ ನಿಮ್ಮನ್ನೇನೋ ಮೃತ್ಯುದವಡೆಯಿಂದ ಪಾರಾಗಿಸಿತ್ತು.ನಿಮಗೆ ಏನು ಆಗಿಲ್ಲವೆಂದು ತಿಳಿದು ಎಲ್ಲಕ್ಕಿಂತ ಹೆಚ್ಚು ಸಂತೋಷವಾಗಿದ್ದು ನನಗೆ. ಸಂತೋಷವಿರಲಿ, ದುಃಖವಿರಲಿ ಅದನ್ನು ತಾಯಿ ಗಂಗಾಮಾತೆಯೊಡನೆ ಹಂಚಿಕೊಳ್ಳುವುದು ನನಗೆ ಅತ್ಯಂತ ಖುಷಿಯ ಸಂಗತಿಯಾಗಿತ್ತು.

ಹೀಗೇಯೇ ಒಂದು ಮುಂಜಾನೆ ಕೈಯಲ್ಲೊಂದು ಊರುಗೋಲು ಹಿಡಿದು ತಾಯಿ ಮಡಿಲೆಡೆಗೆ ಸಾಗುತ್ತಿದ್ದ ನನಗೆ ಮನಸಿನ ತುಂಬಾ ನೀವುಗಳೇ ಆವರಿಸಿಬಿಟ್ಟಿದ್ದಿರಿ.
ನೀವು ಅನುಭವಿಸಿದ ಕಷ್ಟಕ್ಕೆ ಮರುಗುತ್ತ ಹೆಜ್ಜೆಹಾಕುತ್ತಿದ್ದ ನಾನು ಊರಿ ನಡೆಯುತ್ತಿದ್ದ ಕೋಲಿನ ತುದಿಗೆ ಆಕಸ್ಮಿಕವಾಗಿ ಓತಿಕ್ಯಾತವೊಂದು ಸಿಲುಕಿ ನರಳಿತು.
ಆಲೋಚನಾಸರಣಿಗೆ ಭಂಗವಾಗಿದ್ದಕ್ಕೆ ಗೊಣಗಿದ ನಾನು ಕೋಲಿಗೆ ಸಿಲುಕಿದ ಆ ಓತಿಕ್ಯಾತವನ್ನು ಬೀಸಿ ಎಸೆದು ಮುಂದೆ ನಡೆದೆ. ಮುಳ್ಳುಪೊದೆಯ ಮೇಲೆ ಬಿದ್ದ ಅದು ರೋದಿಸುತ್ತ, “ಅಯ್ಯಾ! ಮಹಾನುಭಾವರೇ! ಸ್ವಲ್ಪ ನಿಲ್ಲಿ.ನನ್ನನ್ನು ಬೀಸಿ ಎಸೆದು ಸಂಬಂಧವೇ ಇಲ್ಲದಂತೆ ಹೋಗುತ್ತಿದ್ದೀರಲ್ಲ,ಇದು ಸರಿಯೇ?” ಎಂದಾಗ ನಾನು “ಇದರಲ್ಲಿ ನನ್ನದೇನು ತಪ್ಪಿದೆ? ನನ್ನ ಕೋಲಿಗೆ ಸಿಲುಕಿದ್ದು ನೀನೇ ತಾನೆ?!”
ಎಂದಾಗ
“ಹೌದು! ಸಿಲುಕಿದ್ದು ನಾನೇ. ಆದರೆ ನರಳುತ್ತಿದ್ದ ನನ್ನ ಸ್ಥಿತಿಯನ್ನು ನೋಡಿಯೂ ಮುಳ್ಳಿನ ಪೊದೆಯ ಮೇಲೆ ಎಸೆದಿರಲ್ಲ,ಇದು ನೀವು ತಿಳಿದೂ ಮಾಡಿದ ತಪ್ಪಲ್ಲವೇ? ಹಾಗಾಗಿ ನೀವೂ ನಿಮ್ಮ ಅಂತ್ಯಕಾಲಕ್ಕೆ ಶರಶಯ್ಯೆಯಲ್ಲಿ ನನ್ನಂತೆ ನರಳಿ ಸಾಯುವಂತಾಗಲಿ” ಎಂದು ಶಪಿಸಿತು.
ನನಗೆ ಆಗ ನನ್ನ ತಪ್ಪಿನ ಅರಿವಾಗಿತ್ತು.ಕ್ಷಮೆ ಬೇಡುತ್ತ ಆ ಮುಳ್ಳಿನ ಬೇಲಿಯಿಂದ ಓತಿಕ್ಯಾತವನ್ನು ಮೇಲೆತ್ತಿ ಕಾಪಾಡಲು ಧಾವಿಸಿದೆನು. ಆದರೆ ಕಾಲ ಮಿಂಚಿತ್ತು. ರಕ್ತಸ್ರಾವಗೊಂಡ ಅದು ಅದಾಗಲೇ ಪ್ರಾಣ ಬಿಟ್ಟಿದ್ದಿತು!

  ಮಂತ್ರಗಳ ಮಹತ್ವ

ಭೀಷ್ಮಾಚಾರ್ಯರಿಗೆ ವಿಷ್ಣುಸಹಸ್ರನಾಮದ ಶಕ್ತಿ ಸ್ವಯಂ ವೇದ್ಯವಾಗಿತ್ತು. ಅವರು ಮೃತ್ಯುವನ್ನೂ ಸಹ ಆ ಶಕ್ತಿಯಿಂದ ದೂರ ಇಟ್ಟಿದ್ದರು.ಅಷ್ಟೇ ಅಲ್ಲ ಅವರ ಭಕ್ತಿಯ ಶಕ್ತಿಯಿಂದ ಶ್ರೀಕೃಷ್ಣ ಪರಮಾತ್ಮ ಅವರು ಮಲಗಿದ್ದ ಕಡೆಗೆ ಬಂದು ದರ್ಶನ,ಸ್ಪರ್ಶನ ಭಾಗ್ಯನೀಡಿದನು. ಭೀಷ್ಮಾಚಾರ್ಯರು ಹೇಳುತ್ತಾರೆ.
“ನ ವಾಸುದೇವ ಭಕ್ತಾನಾಮ್
ಅಶುಭಂ ವಿದ್ಯತೇಕ್ವಚಿತ್ || ಇದನ್ನು ಪಾರಾಯಣ ಮಾಡುವವರು, ಪರಿಹರಿಸಲಾಗದ ಪರಿಪರಿಯ ಕಷ್ಟಗಳಿಂದ ಬಿಡುಗಡೆ ಹೊಂದುತ್ತಾರೆ. ಅಷ್ಟೇ ಅಲ್ಲ,ವಾಸುದೇವನ ಭಕ್ತರಿಗೆ ಅಶುಭವೆಂಬುದೇ ಇರುವುದಿಲ್ಲ. ಅವರಿಗೆ ಅಪಮೃತ್ಯು, ಮರಣ, ಮುಪ್ಪು ಹಾಗೂ ರೋಗಗಳ ಭಯವಿರುವುದಿಲ್ಲ ಎನ್ನುತ್ತಾರೆ..
ಇಷ್ಟೇ ಅಲ್ಲದೇ ಪ್ರಾಮಾಣಿಕ ಭಕ್ತಿಶ್ರದ್ಧೆಯಿಂದ ಪಾರಾಯಣ ಮಾಡಿದ್ದೇ ಆದರೆ ಭಗವಂತನು ಅಂತಹ ಸುಕೃತಿಗಳಿಗೆ ಸಾಕ್ಷಾತ್ ಮೋಕ್ಷವನ್ನೇ ಕರುಣಿಸುತ್ತಾನೆ.

ಓಂನಮೋ ಭಗವತೇ ವಾಸುದೇವಾಯ.

Leave a Reply

Your email address will not be published. Required fields are marked *

Translate »