ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯಾ – ಸಭೆ ಸಮಾರಂಭ ಪ್ರಚಾರ ಬೇಕೆ? ಬೇಡವೇ?

ಬುದ್ದಿವಂತ ಮೂರ್ಖ ಮತ್ತು ಮೂರ್ಖ ಬುದ್ದಿವಂತ !…… ಉಪೇಂದ್ರ ರಸ್ತೆಗೆ ಇಳಿಯಬೇಕು…..ಉಪೇಂದ್ರ ಜನರ ಮದ್ಯೆ ಬರಬೇಕು…..ಬರೇ ಫೇಸ್ ಬುಕ್, ಟ್ವಿಟರ್ ನಲ್ಲಿದ್ದರೆ ಆಗಲ್ಲ…..ಇದನ್ನ ಹೇಳಿ ಉಪೇಂದ್ರ ಅವರನ್ನ ಒಪ್ಪಸ್ಲೇಬೇಕು. ಈವತ್ತು ಅದು ಆಗ್ಲೇಬೇಕು… ನೇರವಾಗಿ ಉಪೇಂದ್ರ ಮನೇಗೆ ಹೋದೆ….. ಪ್ರಜಾಕೀಯ ಪ್ರಜಾಕೀಯ ಪ್ರಜಾಕೀಯ ಅಂತಾ ಮೂರು ಹೊತ್ತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡೋ ಉಪೇಂದ್ರ ಅವರೇ ಹೀಗೇ ಇದ್ರೆ ಇದು ಸಕ್ಸಸ್ ಆಗೋ ಚಾನ್ಸ್ ಕಡಿಮೆ, ನೀವು ದಯವಿಟ್ಟು ಈ ಚುನಾವಣೆಗೂ ಮುನ್ನ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮುಂದಿನ ತಿಂಗಳಿನಿಂದ ರಸ್ತೆಗೆ ಇಳಿದು ಜನರನ್ನು ನೇರವಾಗಿ.ಬೇಟಿ ಮಾಡಿ ಮಾತಾಡ್ಲೇ ಬೇಕು, ಕೆಲವು ಸಭೆ, ಸಮಾವೇಶ ಏರ್ಪಡಿಸೋಣ ಅಂದೆ ಅವರನ್ನು ಬಲವಂತವಾಗಿ ಒಪ್ಪಿಸ್ದೆ. ಇದಕ್ಕೆ ಉಪೇಂದ್ರ “ಆಯ್ತು ಪ್ರಸನ್ನ ಮಾಡೋಣ ನನಗೆ ಇದನ್ನು ಹೇಗೆ ಮಾಡಬಹುದು ? ಸ್ವಲ್ಪ ಡೀಟೇಲ್ಸ್ ಕೊಡಿ, ಇದಕ್ಕೆ ಆಗುವ ಕರ್ಚು ನಾನೇ ಮಾಡುತ್ತೇನೆ” ಎಂದರು. ಕುಷಿ ಆಯ್ತು…. ಒಂದು ಪೇಪರ್ ಪನ್ ಹಿಡಿದು ಕೂತೆ…. ಕಡಿಮೆ ಬಡ್ಜೆಟ್ನಲ್ಲಿ ಸಿಂಪಲ್ ಸಮಾವೇಶ ಏರ್ಪಡಿಸೋದಕ್ಕೂ…ಜನರನ್ನು ಸೇರಿಸಬೇಕು ಎಂದರೆ ಜನರಿಗೆ ಉಪೇಂದ್ರ ಬರುತ್ತಿದ್ದಾರೆ ಎನ್ನುವ ವಿಷಯ ಜನರಿಗೆ ಗೊತ್ತಾಗಲು ರೋಡ್ ರೋಡಲ್ಲಿ ಕಟೌಟ್ ಗಳನ್ನು ಹಾಕಬೇಕು, ಅಲ್ಲಲ್ಲಿ ಉಪೇಂದ್ರರವರು ಬರ್ತಿದಾರೆ ಅಂತಾ ಬಿತ್ತಿಚಿತ್ರಗಳನ್ನು ಅಂಟಿಸಬೇಕು, ಟಿವಿ-ರೇಡಿಯೋ- ದಿನಪತ್ರಿಕೆಗಳಲ್ಲಿ ಈ ಸುದ್ದಿಯನ್ನು ಜಾಹಿರಾತು ನೀಡಬೇಕು..ಸಮಾವೇಶ ನಡೆಯೋ ಮೈದಾನಕ್ಕೆ ಬಾಡಿಗೆ ಕಟ್ಟಬೇಕು.. ಪೆಂಡಾಲ್ , ಕುರ್ಚಿಗಳು, ಷಾಮಿಯಾನಗಳನ್ನು ಹಾಕಿಸಬೇಕು, ಮೈಕ್ ಸೆಟ್ ಸೌಂಡ್ ಸಿಸ್ಟಮ್ ಲೈಟಿಂಗ್ಸ್ ವ್ಯವಸ್ಥೆ ಮಾಡಬೇಕು.. ಇದರ ಜೊತೆ ಉಪೇಂದ್ರ ಉಳಿದುಕೊಳ್ಳಲು ಹೋಟೇಲ್, ಪ್ರಯಾಣ ಇತರೆ ಕರ್ಚು,ಕೆಲವು ಸಾವಿರ ಜನರನ್ನು ಸೇರಿಸಿ ಇಂತಹ ಒಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕು ಎಂದರೆ ಕನಿಷ್ಟ 3 ರಿಂದ 4 ಲಕ್ಷ ರೂ.ಗಳು ಬೇಕು… ಕರ್ನಾಟಕದ 50 ಲಕ್ಷ ಜನರನ್ನಾದರೂ ನೇರವಾಗಿ ಬೇಟಿ ಮಾಡಲು ಕನಿಷ್ಟ 500 ಸಭೆ, ಸಮಾವೇಶ ನಡೆಸಬೇಕು. ಇದಕ್ಕೆ ಹಣ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಕೇಳೋಣ ಅಂದರೆ, ಪಕ್ಷದಲ್ಲಿ ಪಾರ್ಟಿ ಫಂಡ್ ಸ್ವೀಕರಿಸುವುದಿಲ್ಲ. ಇದನ್ನು ಉಪೇಂದ್ರರವರೆ ಕರ್ಚು ಮಾಡಿದರೆ 20 ಕೋಟಿ ಬೇಕು ! ಉಪೇಂದ್ರ ಅವರು ಆ ಸಮಾವೇಶಕ್ಕೆ ಬಂದು ಮಾತನಾಡುವಾಗ ಯಾವ ರಾಜಕೀಯ ಪಕ್ಷದವರಿಗೂ ಬಯ್ಯಲ್ಲ… ಭಾವನಾತ್ಮಕ- ಧಾರ್ಮಿಕ ವಿಷಯಗಳನ್ನು ಮಾತನಾಡಲ್ಲ.. ವ್ಯಾಪಾರೀ ರಾಜಕಾರಣದಿಂದ ವೃತ್ತಿಪರ ಪ್ರಜಾಕೀಯದೆಡೆಗೆ ಮುನ್ನಡೆಯೋಣ ಅಂತಾರೆ.. ವಿಚಾರಗಳಿಗೆ ಮತ ಚಲಾಯಿಸಿ ಅಂತ ಹೇಳ್ತಾರೆ.. ಅಧಿಕಾರ ಜನಗಳ ಕೈನಲ್ಲಿ ಇರಬೇಕು ಅಂತಾ ಹೇಳ್ತಾರೆ… ಈ ಮಾತುಗಳನ್ನೆಲ್ಲಾ ಸುಡು ಬಿಸಿಲಲ್ಲಿ ನಿಂತು‌ ನೀವೆಲ್ಲಾ ಕೇಳ್ತಿರಾ?⁉️ ಉಪೇಂದ್ರರವರು ಹೇಳಿದ ಪ್ರತಿ ವಿಷಯಗಳನ್ನು ಮನದಟ್ಟು ಮಾಡಿಕೊಂಡು ಹೋಗಿ ನಾಲ್ಕು ಜನಕ್ಕೆ ಹೇಳ್ತಿರಾ?….ಅಯ್ಯೋ ನಮ್ ಜನಾ ಸರಿ ಇಲ್ಲಾ ರೀ… ಪ್ರಜಾಕೀಯ ಬೇಗ ಆಗೋದಿಲ್ಲ ಟೈಂ ಬೇಕು, ಪ್ರಜಾಕೀಯದಲ್ಲಿ ಮುಖಂಡರು- ಕಾರ್ಯಕರ್ತರು ಯಾರೂ‌ ಇಲ್ವಲ್ಲಾ… ಉಪೇಂದ್ರ ಅವರು ಹೇಳೊದೆಲ್ಲಾ ಸರಿನೇ ಆದ್ರೆ ಪ್ರಾಕ್ಟಿಕಲ್ ಆಗಿ ಆಗುತ್ತಾ… ಅಂತೆಲ್ಲಾ ಡೈಲಾಗ್ ಡೆಲಿವರಿ ಮಾಡ್ಕೊಂಡು.. ಸಾಧ್ಯ ಆದ್ರೆ ಉಪೇಂದ್ರ ಅವರ ಜೊತೆ ಫೋಟೋ ಹೊಡೆಸ್ಕೊಂಡು ಫೇಸ್ಬುಕ್ಗೆ ಅಪ್ಲೋಡ್ ಮಾಡಿ ಮನೆ ಸೇರ್ಕೊತಿರಾ…😡ಇನ್ನೊಂದು ಆಪ್ಷನ್….. ?ಬೆಸ್ಟ್ ಒಂದು ಆಪ್ಷನ್ ಇದೆ.. ಉಪೇಂದ್ರ ಅವರ ಸಾಮಾಜಿಕ ಜಾಲತಾಣಗಳಲ್ಲಿ (ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್) ಈಗಾಗಲೇ ಸುಮಾರು 2.5ಮಿಲಿಯನ್ ಜನ (25ಲಕ್ಷ) ಹಿಂಬಾಲಿಸುತ್ತಾ ಇದ್ದಾರೆ… ಉಪೇಂದ್ರ ರವರು ಒಂದು ವೀಡಿಯೋ ಪೋಸ್ಟ್ ಮಾಡಿದರೆ, ನೀವೆಲ್ಲಾ.. ಮನೆಲೇ ಇದ್ದು, ಆಫಿಸಲ್ಲೇ ಕೂತ್ಕೊಂಡು, ಕಾಲೇಜಲ್ಲಿ ಫ್ರೀ ಟೈಮಲ್ಲಿ, ಬಸ್ಸಲ್ಲಿ ಟ್ತೈನಲ್ಲಿ ಓಡಾಡುತ್ತಾ ಅರಾಮಾಗಿ ನೋಡಿ.. ವಿಚಾರಗಳನ್ನು ಅಕ್ಕ ಪಕ್ಕದಲ್ಲಿರೋ ನಾಲ್ಕು ಜನಕ್ಕೆ ಷೇರ್ ಮಾಡಿದರೆ ಒಂದೇ ನಿಮಿಷಕ್ಕೆ ಸುಮಾರು ಒಂದು ಕೋಟಿ ಜನರಿಗೆ ಪ್ರಜಾಕೀಯದ ವಿಷಯಗಳನ್ನು ತಲುಪಿಸಬಹುದು… !! ಇದನ್ನೇ ಅಲ್ವಾ ಉಪೇಂದ್ರ ನಾಲ್ಕು ವರ್ಷಗಳಿಂದ ಹೇಳ್ತಾ ಇರೋದು ?ಇದು ಬೆಟರ್ ಅಲ್ವಾ ?ಇಷ್ಟಕ್ಕೂ ಮೀರಿ ಪ್ರಜಾಕೀಯ ಬೇಕಿರುವುದು ಯಾರಿಗೆ ? ನನಗಾ ಅಥವಾ ಉಪೇಂದ್ರ ಅವರಿಗಾ ? ಸಭೆ, ಸಮಾವೇಶಕ್ಕೆ ಆಗುವ ಕರ್ಚಿನ ವಿವರದ ಪೇಪರ್ …… ಅಲ್ಲೇ ನನ್ನನ್ನು ನೋಡಿ ನಗುತ್ತಿದ್ದ ಡಸ್ಟ್ ಬಿನ್ ಗೆ ಎಸೆದೆ. “ಏನ್ರೀ ಏನಾಯ್ತು ? ಸಭೆ, ಸಮಾರಂಭ ಮಾಡೋದು ಬೇಡ್ವಾ ?” ಅಂತ ಮುಗ್ಧವಾಗಿ ಉಪೇಂದ್ರ ಕೇಳ್ದಾಗ…. ಮೂರ್ಖ ಬುದ್ದಿವಂತನಿಗೆ ಬುದ್ದಿವಂತ ಮೂರ್ಖ ಬುದ್ದಿ ಹೇಳಿದ ಅನುಭವ ಈವತ್ತು ನನಗಾಯ್ತು

-ಪ್ರಸನ್ನ ಕೃಷ್ಣಮೂರ್ತಿ @prasanna_ask

Leave a Reply

Your email address will not be published. Required fields are marked *

Translate »