ಪ್ರಜಾಕೀಯದ ಶಿಸ್ತು
1. ಪ್ರಜಾಕೀಯದಲ್ಲಿ ಧರ್ಮ, ಜಾತಿ, ಪಂಗಡ ಹಾಗು ಸಂಸ್ಕ್ರತಿ ಎಂಬುದನ್ನು ಮಾತನಾಡುವಂತಿಲ್ಲ ಹಾಗು ದೂಷಿಸುವಂತಿಲ್ಲ.
2. ಪ್ರಜಾಕೀಯದಲ್ಲಿ, ಯಾವುದೇ ರಾಜಕೀಯ ಪಕ್ಷ ಹಾಗು ರಾಜಕೀಯ ವ್ಯಕ್ತಿಗಳ ವಿಷಯ ವಿಮರ್ಶೆ, ದೂಷಣೆ ಅಥವಾ ಹಿಯಾಳಿಸುವಂತಿಲ್ಲ. ಕೇವಲ ರಾಜಕೀಯ ಕಣ ವ್ಯವಸ್ಥೆಯ ವಿಷಯ ವಿಮರ್ಶೆ ಆಗಬೇಕು.
3. ಪ್ರಜಾಕೀಯದಲ್ಲಿ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಪರಿಗಣಿಸಬೇಕು.
4. ಪ್ರಜಾಕೀಯದಲ್ಲಿ ಯಾವುದೇ ಬೈಗಳನ್ನು, ಅಸಭ್ಯ ಬಾಷೆಗಳನ್ನು ಖಂಡಿತಾ ಉಪಯೋಗಿಸಬಾರದು.
5. ಪ್ರಜಾಕೀಯದ ಸಾಮಾಜಿಕ ಜಾಲತಾಣಗಳಲ್ಲಿ “ಶುಭೊದಯ(Good Morning), ಶುಭರಾತ್ರಿ(Good Night), ಹಬ್ಬ- ಹರಿದನಗಳ ಶುಭಾಶಯ, ಇತ್ಯಾದಿಗಳನ್ನು” ಖಂಡಿತಾ ಪೋಸ್ಟ್ ಮಾಡಬಾರದು. ಅವುಗಳು, ನಿಮ್ಮ ವೈಕ್ತಿಕ ಗ್ರೂಪ್ಗಳಿಗೆ ಸೀಮಿತ ಆಗಿರಲಿ.
6. ಯಾವುದೇ ವ್ಯವಹಾರಕ್ಕೆ ಸಂಬಂದ ಪಟ್ಟ ಅಥವಾ ವ್ಯವಹಾರದ ಪ್ರಚಾರಕ್ಕೆ ಸಂಬಂದ ಪಟ್ಟ ವಿಷಯಗಳನ್ನು ಪೋಸ್ಟ್ ಮಾಡಬಾರದು.
7. ಯಾವುದೇ, 18 ವರ್ಷದ ಕೆಳಗಿನ ಮಕ್ಕಳನ್ನು ಪ್ರಜಾಕೀಯದಲ್ಲಿ ಉಪಯೋಗಿಸಿ ಕೊಳ್ಳಬಾರದು. ಅಥವಾ, ಅವರ ಅಡಿಯೋ-ವಿಡಿಯೋಗಳನ್ನು ಪ್ರಜಾಕೀಯದ ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು.
8. ಯಾವುದೇ, ಖಾಸಾಗಿ- ವೈಕ್ತಿಕ ಆಡಿಯೋ- ವಿಡಿಯೋಗಳನ್ನು ಖಂಡಿತಾ ಪೋಸ್ಟ್ ಮಾಡಬಾರದು.
9. ಪ್ರಜಾಕೀಯದಲ್ಲಿ ಯಾರನ್ನೂ ಬಲವಂತ ಮಾಡುವಂತಿಲ್ಲ. ಕೇವಲ ಬೇರೆಯವರಿಗೆ ಪ್ರಜಾಕೀಯವನ್ನು ತಿಳಿಸಿ ಕೊಡುವುದು.
10. ಪ್ರಜಾಕೀಯದಲ್ಲಿ, ಪ್ರಜೆಗಳನ್ನು ಸಂಪರ್ಕಿಸಲು ಆಗುವ ಸಾರಿಗೆ ಖರ್ಚು ಹಾಗು ಊಟದ ಖರ್ಚು, ಹೀಗೆ ಸಣ್ಣ-ಪುಟ್ಟ ಅನಿವಾರ್ಯ ಖರ್ಚುಗಳನ್ನು ಬಿಟ್ಟು, ಬೇರೆ ಯಾವುದೇ ಖರ್ಚು ಮಾಡುವಂತಿಲ್ಲ.
11. ಪ್ರಜಾಕೀಯದಲ್ಲಿ, ಪ್ರಜೆಗಳಿಗೆ, ಯಾವುದೇ ಸುಳ್ಳುಅಶ್ವಾಸನೆ ಕೊಡುವಂತಿಲ್ಲ. ಅಭ್ಯರ್ಥಿ ಅಕಾಂಕ್ಷಿಗಳು, ಪ್ರಜೆಗಳ ಅಭಿಪ್ರಾಯದಂತೆ ತಮ್ಮ ಜವಾಬ್ದಾರಿ ಮಾಡಲು, “ಪ್ರಜೆಗಳ ಶಿಫಾರಷು ಪತ್ರದಲ್ಲಿ” ಸಹಿ ಹಾಕಿ ಒಪ್ಪಿ ಕೊಳ್ಳುವುದು ಮಾತ್ರ. ಪ್ರಜಾಪ್ರಭುತ್ವದಲ್ಲಿ, ಪ್ರಜೆಗಳ ಅಭಿಪ್ರಾಯದಂತೆ ಆಡಳಿತ ನಡೆಯಬೇಕು.
12. ಪ್ರಜಾಕೀಯ ಅನುಯಾಯಿಗಳು- ಸಂಪನ್ಮೂಲ ಪ್ರಜೆಗಳು, ತಮ್ಮ ಉದ್ಯೋಗ, ವ್ಯವಹಾರ, ವ್ಯವಸಾಯ ಅಥವಾ ತಮ್ಮ ವೈಕ್ತಿಕ ಜವಾಬ್ದಾರಿಯನ್ನು ತ್ಯಜಿಸಿ, ಪ್ರಜಾಕೀಯದಲ್ಲಿ ತೊಡಗಿಸಿ ಕೊಳ್ಳುವ ಅವಶ್ಯಕತೆ ಇಲ್ಲ. ತಮ್ಮ-ತಮ್ಮ ಬಿಡುವಿನ ಸಮಯವನ್ನು ಪ್ರಜಾಕೀಯಕ್ಕಾಗಿ ಉಪಯೋಗಿಸ ಬಹುದು.
13. ಪ್ರಜಾಕೀಯದ ಅನುಯಾಯಿಗಳು ಮಾಡ ಬೇಕಾದ ಅವಶ್ಯ ಕೆಲಸ,
A. ಪ್ರಜೆಗಳ ನೇರ ಸಂಪರ್ಕದಿಂದ ( ನಿಮ್ಮ ಸಂಬಂದಿಕರುನ್ನು, ನೆರೆ-ಹೊರೆಯವರನ್ನು, ನಿಮ್ಮ ವಠಾರದವರನ್ನು, ಉದ್ಯೋಗದಲ್ಲಿ ನಿಮ್ಮ ಸಹಪಾಠಿಗಳನ್ನು ಹಾಗು ನೀವು ಸಂಪರ್ಕಕ್ಕೆ ಬರುವ ಪ್ರಜೆಗಳನ್ನು) ಪ್ರಜಾಕೀಯವನ್ನು ತಿಳಿಸಬೇಕು
B. ನೀವು ಉಪಯೋಗಿಸುವ, ಎಲ್ಲಾ ರೀತಿಯ ಸಾಮಾಜಿಕ ಜಾಲತಾಣದಿಂದ ಪ್ರಜಾಕೀಯವನ್ನು ಪ್ರಜೆಗಳಿಗೆ ತಿಳಿಸಬೇಕು.
C. ಟಿ.ವಿ., ಮುದ್ರಣ ಮಾಧ್ಯಮ ಹಾಗು ಸಾಮಾಜಿಕ ಜಾಲತಾಣದ ಮಾಧ್ಯಮಗಳಲ್ಲಿ ಅವಕಾಶ ಸಿಕ್ಕಿದರೆ, ಯಾವುದೇ ಹಣ ಖರ್ಚು ಮಾಡದೆ, ಪ್ರಜಾಕೀಯವನ್ನು ಪ್ರಜೆಗಳಿಗೆ ತಲುಪಿಸಬೇಕು.
ಅಥವಾ ಬೇರೆ ಯಾವುದೇ ರೀತಿಯಲ್ಲಿ ಅನಾವಶ್ಯವಾಗಿ ಖರ್ಚು ಮಾಡುವುದು ಅಥವಾ ನಿಮ್ಮ ಮೇಲೆ ಹೊರೆಯಾಗುವಂತಹ ವಿಧಾನಗಳನ್ನು ಉಪಯೋಗಿಸುವಂತಿಲ್ಲ. ಖರ್ಚು ಮಾಡುವುದು ನಿಮ್ಮ ವೈಕ್ತಿಕ ನಿರ್ಧಾರ ಆಗಿರುವುದು.
ನೆನಪಿರಲಿ, ಪ್ರಜಾಕೀಯ ಸಿಧ್ಧಾಂತದಂತೆ ನಡೆಯುವ ಉತ್ತಮ ಪ್ರಜಾಕೀಯ ಪಕ್ಷ(ಉ.ಪಿ.ಪಿ)ವು ಹಣದ ವ್ಯವಹಾರ ಇಲ್ಲದೆ ನಡೆಯುವ ಪಕ್ಷ.
14. ಪ್ರಜಾಕೀಯದಲ್ಲಿ ಅಥವಾ ಪ್ರಜಾಕೀಯದ ಹೆಸರಿನಲ್ಲಿ ಯಾವುದೇ ಸಮಾಜ ಸೇವೆ ಅಥವಾ ಹೋರಾಟ ಮಾಡುವಂತಿಲ್ಲ. ಅವುಗಳನ್ನು, ನಿಮ್ಮ ವೈಕ್ತಿಕ ಮಟ್ಟದಲ್ಲಿ ಮಾಡುವುದಕ್ಕೆ, ಯಾವುದೇ ಅಭ್ಯಂತರ ಇಲ್ಲ.
15. ಪ್ರಜಾಕೀಯದಲ್ಲಿ ಸದಸ್ಯತ್ವ ಎಂಬ ವಿಕಲ್ಪ ಇಲ್ಲದಿರುವುದರಿಂದ, ಪ್ರಜಾಕೀಯ ಸಿಧ್ಧಾಂತವನ್ನು ಅರ್ಥ ಮಾಡಿಕೊಂಡು, ಒಪ್ಪಿ, ಅದನ್ನು ಬೇರೆ ಪ್ರಜೆಗಳಿಗೆ ಮನದಟ್ಟಾಗುವಂತೆ ತಿಳಿಯ ಹೇಳುವುದೇ, ಪ್ರಜಾಕೀಯ ಅನುಯಾಯಿಗಳು ಮಾಡಬೇಕಾದ ಮುಖ್ಯ ಕೆಲಸ. ಇಲ್ಲಿ ಯಾರ ಮೇಲೂ ಒತ್ತಡ ಹೇರುವಂತಿಲ್ಲ. ಬದಲಾವಣೆ, ನಮ್ಮಿಂದಲೆ ಪ್ರಾರಂಭ ಆಗಬೇಕು.
ಪ್ರಜಾಕೀಯದಲ್ಲಿ ವ್ಯಕ್ತಿ ಅಥವಾ ಪಕ್ಷ ಮುಖ್ಯವಾಗುವುದಿಲ್ಲ. ಇಲ್ಲಿ ವಿಚಾರ-ಸಿಧ್ಧಾಂತ ಅತೀ ಪ್ರಾಮುಖ್ಯವಾಗಿದೆ. ಆದ್ದರಿಂದ, ಪ್ರಜಾಕೀಯದ ಸಿಧ್ಧಾಂತದಂತೆ, ಪ್ರತಿಯೊಬ್ಬ ಪ್ರಜಾಕೀಯ ಅನುಯಾಯಿಯು ಶಿಸ್ತು ಪಾಲನೆ ಮಾಡುವುದು ಅತೀ ಅವಶ್ಯ. ಈ ಕೆಟ್ಟು ಹೋದ ಹಾಗು ಭ್ರಷ್ಟ ವ್ಯವಸ್ಥೆಯಿಂದ ಬದಲಾವಣೆ ಬಯಸುವುದಾದರೆ, ಖಂಡಿತಾ ನಮ್ಮಲ್ಲಿ ಶಿಸ್ತು ಪಾಲನೆ ಆಗಲೇ ಬೇಕು.
ಪರಿವರ್ತನೆಯು, ಕೇವಲ ಪರಿವರ್ತನೆ ಆಗಿರುವವರಿಂದ ಸಾಧ್ಯ. ಬದಲಾವಣೆ, ಬದಲಾವಣೆ ಆಗಿರುವವರಿಂದ ಸಾಧ್ಯ. ರಾಜಕೀಯದಿಂದ, ಪ್ರಜಾಕೀಯಕ್ಕೆ ಬದಲಾವಣೆ ಅನಿವಾರ್ಯ.
ಭಾರತದ ಸಂವಿಧಾನ ಹಾಗು ನಿಜವಾದ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಯು ಶುಧ್ಧ ಪ್ರಜಾಪ್ರಭುತ್ವದ ಕಲ್ಪನೆಯೆ ಪ್ರಜಾಕೀಯ.
ಜೈ ಪ್ರಜಾಕೀಯ