ಪ್ರಜಾಕೀಯಾ ಸಿದ್ಧಾಂತ – ಉತ್ತಮ ಪ್ರಜಾಕೀಯಾ ಪಕ್ಷ

ಉತ್ತಮ ಪ್ರಜಾಕೀಯಾ ಪಕ್ಷ ( ಉ.ಪಿ.ಪಿ).

” ಪ್ರಜಾಕೀಯಾ ಸಿದ್ಧಾಂತ”

1. ಅಧಿಕಾರ ಪ್ರಜೆಗಳಿಗೆ ಹಸ್ತಾಂತರ – ಪ್ರಜೆಗಳೆ ಅಗ್ರಗಣ್ಯರು- ನಿಜವಾದ ಪ್ರಜಾಪ್ರಭುತ್ವದ ಹಾಗು ಭಾರತದ ಸಂವಿಧಾನದ ತತ್ವ. ಸರಕಾರದ ಪ್ರತಿಯೊಂದು ಕ್ರಿಯೆಯು ಪ್ರಜೆಗಳಿಗೆ ತಿಳಿಸಿ, ಸಮ್ಮತಿ ಪಡೆದು ಹಾಗು ಪ್ರಜೆಗಳಿಗೆ ಪಾರದರ್ಶಕವಾಗಿ ನಡೆಯಬೇಕು.

ಪ್ರಜೆಗಳಿಂದ,
ಪ್ರಜೆಗಳಿಗಾಗಿ,
ಪ್ರಜೆಗಳಿಗೊಸ್ಕರ ನಡೆಯುವ ಕ್ರಿಯೆಯೆ
ಪ್ರಜಾಪ್ರಭುತ್ವ.

2. ಹೊಣೆಗಾರಿಕೆ, ಜವಾಬ್ದಾರಿ ಹಾಗು ಪಾರದರ್ಶಕ ಸರಕಾರ- ART of Governance-( Accountability, Responsibility and Transparency Governance) ರಚಿಸುವುದು.

ಇದರಿಂದ ಸರ್ಕಾರದ ಎಲ್ಲಾ ಅಂಗಗಳಲ್ಲಿ ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ.

3. ಸಂವಿಧಾನದ ನಾಲ್ಕು ಸ್ತಂಭಗಳಾದ

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗು ಮಾಧ್ಯಮಗಳು

ಸ್ವತಂತ್ರವಾಗಿ ಕೆಲಸ ಮಾಡುವುದು. ಒಂದು ಇನ್ನೊಂದರ ಕೆಲಸದಲ್ಲಿ ಕೈ ಹಾಕುವಂತಿಲ್ಲ.

ಒಂದರ ಮೇಲೆ ಇನ್ನೊಂದು ನಿಗಹ ಇಟ್ಟು , ಭ್ರಷ್ಟರನ್ನು ನ್ಯಾಯಾಂಗಕ್ಕೆ ಒಪ್ಪಿಸಬೇಕು.

ಎಲ್ಲಾ ಭ್ರಷ್ಟಾಚಾರಕ್ಕೆ ಮೂಲವೇ ಶಾಸಕಾಂಗ ( ಆರಿಸಿ ಬಂದ ಪ್ರತಿನಿಧಿಗಳು).
ಅಲ್ಲಿಂದಲೇ ಭ್ರಷ್ಟಾಚಾರದ ನಿರ್ಮೂಲನೆ ಆಗಬೇಕು.

  ಕರ್ನಾಟಕ ಬಜೆಟ್ ಹೇಗಿರಬೇಕು ? - ಉತ್ತಮ ಪ್ರಜಾಕೀಯಾ ಪಕ್ಷ

4. ಪ್ರಜಾಕೀಯಾದ ಸರ್ಕಾರದಲ್ಲಿ ಯಾರು ನಾಯಕರು ಅಥವಾ ಸೇವಕರು ಇರುವುದಿಲ್ಲ-

ಕೇವಲ “ಪ್ರಜಾಕಾರ್ಮಿಕರು”.

ಪ್ರಜೆಗಳ ತೆರಿಗೆ ಹಣದಿಂದ ಸಂಬಳ, ಭತ್ತೆ, ಸಾರಿಗೆ, ಮೆಡಿಕಲ್ ಹಾಗು ಪಿಂಚಣಿ ಪಡೆಯುವವರು ನಾಯಕರು ಹಾಗು ಸೇವಕರು ಆಗಲು ಸಾಧ್ಯವಿಲ್ಲ.

5. ಬುಸಿನೆಸ್ಸ್ ರಾಜಕೀಯಾದಿಂದ, ಕಾರ್ಮಿಕ ಪ್ರಜಾಕೀಯಾ. ಯಾವುದೇ ಚುಣಾವಣಾ ಸಭೆ, ಸಮಾರಂಭ, ಪೋಸ್ಟರ್- ಬ್ಯಾನರ್, ಅಥವಾ ಯಾವುದೆ ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ- ಗದ್ದಲ ಇಲ್ಲದೆ ಚುನಾವಣೆಯ ಪ್ರಕ್ರೀಯೆ.

6. ಪ್ರಜಾಕೀಯಾದ ಆಧ್ಯತೆ, ಪ್ರಜೆಗಳ ಮೂಲಭೂತ ಸೌಕರ್ಯಗಳಾದ

ಗುಣಮಟ್ಟದ

ವಿಧ್ಯಾಭ್ಯಾಸ, ಆರೋಗ್ಯ,
ವಸತಿ,
ಕಾನೂನು ವ್ಯವಸ್ಥೆ,
ರೈತ ಸಮಸ್ಯೆ ಪರಿಹಾರ, ಕಸ ವಿಳೆವಾರಿ, ಉದ್ಯೋಗ,
ನೀರು,
ವಿಧ್ಯುತ್,
ಆಹಾರ,
ಸಾರಿಗೆ ವ್ಯವಸ್ಥೆ ಹಾಗು ಪ್ರವಾಸೋಧ್ಯಮ.

ಸೂಕ್ಷ್ಮ ಯೋಜನೆ ( Micro Management) ಯಿಂದ ಪ್ರಜೆಗಳ ತೆರಿಗೆ ಹಣವನ್ನು ಸಂಪೂರ್ಣ, ಯಾವುದೇ ಭ್ರಷ್ಟಾಚಾರವಿಲ್ಲದೆ ಪ್ರಜೆಗಳ ಹಾಗು ರಾಜ್ಯದ ಸೌಕರ್ಯ- ಸೌಲಭ್ಯಕ್ಕಾಗಿ ಉಪಯೋಗಿಸುವುದು.

7. ಉ.ಪಿ.ಪಿ ಪಕ್ಷದಲ್ಲಿ ಯಾವುದೇ
ಸದಸ್ಯತ್ವ ಶುಲ್ಕ ಇಲ್ಲ, ಪಾರ್ಟಿ ಫಂಡ್ ಇರುವುದಿಲ್ಲ ಹಾಗು ಯಾವುದೇ ದೇಣಿಗೆ (Donation) ತೆಗೆದು ಕೊಳ್ಳುವುದಿಲ್ಲ. ಕೇವಲ ಸಾಮಾಜಿಕ ಜಾಲತಾಣ ಹಾಗು ಜನರಿಂದ ಜನರ ಸಂಪರ್ಕದಿಂದ ಪ್ರಜೆಗಳನ್ನು ತಲುಪಲಾಗುವುದು.
ಕೇವಲ ಸಣ್ಣ- ಪುಟ್ಟ ಖರ್ಚುಗಳಾದ ಸಾರಿಗೆ, ಚುಣಾವಣಾ ಡಿಪೊಸಿಟ್ ಹಾಗು ಬೇರೆ ಅವಶ್ಯಕತೆಯ ಖರ್ಚುಗಳನ್ನು ಅಭ್ಯರ್ಥಿಯೆ ಮಾಡುವನು.

  ಜನಸಂಖ್ಯೆ ಸ್ಪೋಟ ಬೆಂಗಳೂರು- POPULATION EXPLOSION -BENGALURU

ಎಲ್ಲಾ ಖರ್ಚಿಗೂ ಪಾರ್ಟಿ ಕಡೆಯಿಂದ ಅನುಮತಿ ಪಡೆಯಬೇಕು.

8. ಉತ್ತಮ ಪ್ರಜಾಕೀಯಾ ಪಕ್ಷದಲ್ಲಿ ಕೇವಲ ಬೆಂಗಳೂರಿನಲ್ಲಿ ಒಂದು ಕಚೇರಿ ಇರುವುದು. ಅಲ್ಲಿಯೂ ಯಾವುದೇ ಪಧಾಧಿಕಾರಿಗಳು ಇರುವುದಿಲ್ಲ. ಪಕ್ಷದ ಅನುಯಾಯಿಗಳು ಸ್ವಾಇಚ್ಚೆಯಿಂದ ತಮ್ಮ ಬಿಡುವು ಸಮಯದಲ್ಲಿ ಬಂದು ಪಕ್ಷದ ಕೆಲಸಗಳನ್ನು ಮಾಡುವರು.

9. ಉತ್ತಮ ಪ್ರಜಾಕೀಯಾ ಪಕ್ಷದಿಂದ ಚುಣಾವಣೆಗೆ ಅಭ್ಯರ್ಥಿಯಾಗ ಬಯಸುವವರು, ಪ್ರಜಾಕೀಯಾದ ಸಿದ್ಧಾಂತವನ್ನು ಸಂಪೂರ್ಣ ಒಪ್ಪಿ, ತಮ್ಮ ಅರ್ಜಿಯನ್ನು, ಉ.ಪಿ.ಪಿ ವೆಬ್ಸೈಟ್ “www.prajaakeeya.org” ಗೆ ಕಳುಹಿಸ ತಕ್ಕದ್ದು.

ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಸೂಕ್ತ ಅಭ್ಯರ್ಥಿಯನ್ನು ಸಂದರ್ಶನೆಗಾಗಿ ಕರೆಯಲಾಗುವುದು. ಇಲ್ಲಿ ಯಾವುದೇ ಶಿಫಾರಸು ಹಾಗು ಪ್ರತೀಷ್ಟೆಗೆ ಬೆಲೆ ಇರುವುದಿಲ್ಲ.

  ಕರ್ನಾಟಕದ MLA ಗೆ ಸಿಗುವ ಸಂಭಾವನೆ ವಿವರಗಳು

ಅಭ್ಯರ್ಥಿಯು ದ್ರಡ ಪ್ರಾಮಾಣಿಕ, ಮಾನಸಿಕ ಪ್ರಬುದ್ಧನಾಗಿರ ಬೇಕು. ಯಾವುದೇ ಕ್ರಿಮಿನಲ್ ಹಿನ್ನೆಲೆ ಅಥವಾ ಮೊಕದ್ದಮೆಯಲ್ಲಿ ಭಾಗಿಯಾಗಿರಬಾರದು. ಕೇವಲ ಆರಿಸಿ ಬಂದ ಅಭ್ಯರ್ಥಿಗೆ ಸಿಗುವ ಸಂಭಾವನೆಗಾಗಿ, ಪ್ರಜೆಗಳಿಗಾಗಿ 5 ವರ್ಷ ಕೆಲಸ ಮಾಡಲು ಸಂಪೂರ್ಣ ತನ್ನ ಸಮಯವನ್ನು ಅರ್ಪಣೆ ಮಾಡುವಂತಿರಬೇಕು‌.

10. ಆರಿಸಿ ಬಂದರೆ ಉತ್ತಮ ಪ್ರಜಾಕೀಯಾ ಪಕ್ಷದ ಕಾರ್ಯವೈಖರಿ – (SOP- Standard Operating Procedure) ಪ್ರಕಾರ ಕೆಲಸ ಮಾಡಲು ಸಂಪೂರ್ಣ ಒಪ್ಪಿಗೆ ಇರಬೇಕು.

ಉತ್ತಮ ಪ್ರಜಾಕೀಯಾ ಪಕ್ಷದ ಅಭ್ಯರ್ಥಿಗಳು ಯಾವುದೆ ಸ್ವಂತ ಆಸೆ- ಆಕಾಂಕ್ಷೆ ಹಾಗು ಪ್ರತೀಷ್ಟೆಗಾಗಿ ಖಂಡಿತಾ ಬರಬಾರದು.

ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ.(UPP).

Leave a Reply

Your email address will not be published. Required fields are marked *

Translate »