ಹೋರಾಟ
ಪ್ರಜೆಗಳಿಗೆ ಬೇಕಾದ ಮೂಲಭೂತ ಅವಶ್ಯಕತೆಯನ್ನು ಮಾಡಿಸಿ ಕೊಳ್ಳಲು ಹಾಗು ಅದಕ್ಕಾಗಿ ಪ್ರಜೆಗಳ ಪರವಾಗಿ ಹೋರಾಟ ಮಾಡಲು, ನಾವು ಪ್ರತಿನಿಧಿಗಳನ್ನು ಆರಿಸುವುದಲ್ಲವೇ ?
ಪ್ರಜೆಗಳು ಎಲ್ಲರೂ ಹೋರಾಟ ಮಾಡಿದರೆ ಅದು ಕ್ರಾಂತಿ- ಚಳುವಳಿ ಆಗುವುದಿಲ್ಲವೇ?
ಪ್ರಜೆಗಳೇ ಹೋರಾಟ- ಕ್ರಾಂತಿ-ಚಳುವಳಿ ಮಾಡಬೇಕಾದರೆ, ಪ್ರತಿನಿಧಿಯ ಅವಶ್ಯಕತೆ ಇಲ್ಲವಲ್ಲ. ನಾವೇ, ಕಾರ್ಯಾಂಗದೊಡನೆ ಹೋರಾಟ ಮಾಡಬಹುದಲ್ಲ ?
ಕರ್ನಾಟಕದ 9 ಲಕ್ಷ ಕಾರ್ಯಾಂಗದ ನೌಕರರೊಂದಿಗೆ, 6.5 ಕೋಟಿ ಪ್ರಜೆಗಳು ತಮ್ಮ ಅವಶ್ಯಕತೆಗೆ ಹೋರಾಟ ಮಾಡಿದರೆ, ಎಂತಹ ಸ್ತಿತಿ ಉಧ್ಭವವಾಗ ಬಹುದು ? ಆಲೋಚಿಸಿ !
ಕೇವಲ ಸಣ್ಣ ಪುಟ್ಟ ಕಾನೂನು ಮಾಡಲು ಇವರ ಅವಶ್ಯಕತೆ ಇದೆಯೇ ? ಅದು ಕೂಡಾ, ಕಾರ್ಯಾಂಗದಲ್ಲಿರುವ, ಕಾನೂನು ತಜ್ಞರೆ ತಯಾರು ಮಾಡಿದ ಮೇಲೆ, ವಿಧಾನ ಸಭೆ ಅಥವಾ ಲೋಕ ಸಭೆಯಲ್ಲಿ, ಕೇವಲ ಮಂಡಿಸುವ ಕೆಲಸ ಜನ ಪ್ರತಿನಿಧಿಗಳು ಮಾಡುವುದಲ್ಲವೇ ?
ಜನ ಪ್ರತಿನಿಧಿಗಳು, ಪ್ರಜೆಗಳ ಅಭಿಪ್ರಾಯ ತಿಳಿಯದೆ ಮಾಡುವ ಕಾನೂನು, ಯೋಜನೆ ಹಾಗು ಖರ್ಚು ವೆಚ್ಚ ಹಾಗು ಪಾರಧರ್ಶಕ ವ್ಯವಹಾರ ಇಲ್ಲದ ಕಾರಣ, ಇವತ್ತು, ದೇಶದ ಎಲ್ಲಾ ಕಡೆ ಚಳವಳಿ, ಕ್ರಾಂತಿ, ಆರ್.ಟಿ.ಐ. ಕಾರ್ಯ ಕರ್ತರು, ಗಲಾಟೆ-ಗದ್ದಲ, ಹೋರಾಟಗಾರರು, ಎಂಬ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ.
ಎಲ್ಲದರ ಮೂಲ ಹುಡುಕುತ್ತಾ ಹೋದರೆ, ಅವುಗಳಿಗೆ ಕಾರಣ, ನಮ್ಮ ಜನ ಪ್ರತಿನಿಧಿಗಳು ಸ್ವಂತ ಪ್ರತೀಷ್ಟೆ, ಪಕ್ಷ ಪ್ರತೀಷ್ಟೆ, ಮಾಡುವ ಭ್ರಷ್ಟಾಚಾರ ಹಾಗು ದೇಶದಲ್ಲಿರುವ ಭ್ರಷ್ಟ ವ್ಯವಸ್ಥೆ ಎಂದು, ಎಲ್ಲರೂ ಒಪ್ಪಿ ಕೊಳ್ಳಲೇ ಬೇಕು.
ಇನ್ನೂ ಒಳ ಹೊಕ್ಕರೆ, ಅದಕ್ಕೆ ಕಾರಣ, ನಾವು ಪ್ರಜೆಗಳು. ಹಣ-ವಸ್ತುವಿಗಾಗಿ ನಮ್ಮ ಮತ ಮಾರಿಕೊಳ್ಳುವುದು, ವ್ಯಕ್ತಿ ಹಾಗು ಪಕ್ಷದ ಹಿಂದೆ ತಮ್ಮನ್ನು ಅರ್ಪಣೆ ಮಾಡಿ ಕೊಳ್ಳುವುದು, ಇದಕ್ಕೆ ಮೂಲ ಕಾರಣ. ನಾವು ಆಡನ್ನು ಹಿಂಬಾಲಿಸುವ ಕುರಿಗಳಾಗಿರುವೆವು
ನಾವು ಹೇಳಿದ ಹಾಗೆ, ನಮ್ಣ ಅಭಿಪ್ರಾಯ ಕೇಳಿ, ನಮಗೆ ಪಾರಧರ್ಶಕವಾಗಿ, ಜವಾಬ್ದಾರಿಯಿಂದ ಹಾಗು ಹೊಣೆಗಾರಿಕೆಯಿಂದ ಕೆಲಸ ಮಾಡುವ ಪ್ರಜಾ ಪ್ರತಿನಿಧಿಯನ್ನು , ನಾವು ಆರಿಸ ಬೇಕಲ್ಲವೇ ?
ಪ್ರಶ್ನೆ ಈಗ ಬರುವುದು, ಇದು ಸಾಧ್ಯವೇ ?
ಖಂಡಿತಾ ಸಾಧ್ಯವಿದೆ. ಮೇಲೆ ಹೇಳಿದಂತೆ ನಿಯಮಿತ ಕಾರ್ಯ ವೈಖರಿ (SOP) ಪ್ರಕಾರ ಕೆಲಸ ಮಾಡುವ ಪ್ರಜಾ ಕಾರ್ಮಿಕನನ್ನು (ಪ್ರಜಾ ಪ್ರತಿನಿಧಿ) ಕೊಡುವ ಹಾಗು ಯಾವುದೇ ಹಣದ ವ್ಯವಹಾರ ಇಲ್ಲದೆ ನಡೆಯುವ ಪ್ರಪಂಚದ ಎಕೈಕ ಪಕ್ಷ, ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.) ದಿಂದ ಖಂಡಿತಾ ಸಾಧ್ಯವಿದೆ. ಇದು ಪ್ರಜೆಗಳ ಪಕ್ಷ.
ದಯಾಮಾಡಿ, ಸಂಪರ್ಕಿಸಿ.
www.prajaakeeya.org