ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಂತ್ರ-ಜಪದ ಸಿದ್ಧಿ ಸಂದೇಹದ ಕಥೆ

ll ಅಜ್ಞಾನತಿಮಿರಾಂಧಸ್ಯ
ಜ್ಞಾನಾಂಜನ ಶಲಾಕಯಾ l
ಚಕ್ಷುರ್ ಉನ್ಮೀಲಿತಂ ಯೇನ
ತಸ್ಮೈ ಶ್ರೀ ಗುರವೇ ನಮಃ ll 🙏

ಒಮ್ಮೆ ಒಬ್ಬ ಬ್ರಹ್ಮಚಾರಿಗಳು ಕಂಚಿ ಜಗದ್ಗುರು ಚಂದ್ರಶೇಖರೆಂದ್ರ ಸರಸ್ವತೀ ಮಹಾಸ್ವಾಮಿಗಳ ದರ್ಶನಕ್ಕೆ ಬಂದ ಸಂದರ್ಭ… ಬ್ರಹ್ಮಚಾರಿಗಳು ಪ್ರವರ ಹೇಳುತ್ತಾ ಮಹಾಸ್ವಾಮಿಗಳಿಗೆ ನಮಸ್ಕರಿಸಿ ಏಳುವಾಗ,
ಮಹಾಸ್ವಾಮಿಗಳು (ಬ್ರಹ್ಮಚಾರಿಗಳ ಕಡೆಗೆ ತೀಕ್ಷ್ಣವಾಗಿ ದೃಷ್ಟಿಸುತ್ತಾ): ಏನಪ್ಪಾ ನೀನು ‘ಕುಳಿತಲೈ-ಶಂಕರನ್’ ಅಲ್ವೇ! ಎಲ್ಲಾ ಕ್ಷೇಮವೇ!
ಶಂಕರನ್: ಗುರುದೇವಾ, ನಿಮ್ಮ ಆಶೀರ್ವಾದದ ಬಲದಿಂದ ಎಲ್ಲವೂ ಕ್ಷೇಮ.

ಮಹಾಸ್ವಾಮಿಗಳು: ಶಂಕರಾ,ನಿನ್ನ ವಯಸ್ಸೆಷ್ಟು?
ಶಂಕರನ್: ಗುರುದೇವಾ, ನನಗೀಗ 30 ವರ್ಷ.

ಮಹಾಸ್ವಾಮಿಗಳು (ನಗುತ್ತಾ): ಗೃಹಸ್ಥನಾಗುವ ಆಲೋಚನೆ ಇಲ್ಲವೇ! ಬ್ರಹ್ಮಚಾರಿಯಾಗಿ ಇರಬೇಕೆಂದೇ ನಿನ್ನ ಮನಸ್ಸೇನು?
ಶಂಕರನ್ (ವ್ಯಾಕುಲ ಭಾವದಿಂದ): ಹೂsss… ಗುರುದೇವಾ ಆಲೋಚಿಸಿದ್ದೇನೆ.

ಮಹಾಸ್ವಾಮಿಗಳು (ಮತ್ತೊಮ್ಮೆ ನಗುತ್ತಾ): ಸರಿ ನೀನು ಬಂದ ಕಾರಣ ಹೇಳು. ಕಾರಣವಿಲ್ಲದೆ ನೀನು ಇಲ್ಲಿಗೆ ಬರುವವನಲ್ಲ ಅಲ್ಲವೇ!
ಶಂಕರನ್ : ಗುರುದೇವಾ, ನನ್ನ ಮನಸ್ಸಿನಲ್ಲಿ ಒದಗಿದ ಒಂದು ದೊಡ್ಡ ಸಂದೇಹಕ್ಕೆ ನಿಮ್ಮ ಮಾರ್ಗದರ್ಶನ – ಪರಿಹಾರ ಪಡೆಯಲು ಬಂದಿದ್ದೇನೆ.

ಮಹಾಸ್ವಾಮಿಗಳು: ಯಾವುದರ ಬಗ್ಗೆ ಏನು ಸಂದೇಹವಪ್ಪಾ!
ಶಂಕರನ್ (ಧ್ವನಿ ತಗ್ಗಿಸಿ): ನಾನು ಮಾಡುತ್ತಿರುವ ಮಂತ್ರ-ಜಪದ ಬಗ್ಗೆ ನನಗೊಂದು ಸಂದೇಹ!

ಮಹಾಸ್ವಾಮಿಗಳು: ಮಂತ್ರ-ಜಪದ ಬಗ್ಗೆಯೇ! ನೀನು ಮಂತ್ರ-ಜಪ ಮಾಡುತ್ತಿರುವೆಯೇ! ಉಪದೇಶವಾಗಿದೆಯೇ!
ಶಂಕರನ್: ಗುರುದೇವಾ ನನಗೆ ಮಂತ್ರ-ಜಪ ಉಪದೇಶವಾಗಿದೆ. ನನ್ನ ಗುರುಗಳು ‘ಮೈಸೂರಿನ ಯಜ್ಞ ನಾರಾಯಣ ಘನಪಾಠಿಗಳು.

ಮಹಾಸ್ವಾಮಿಗಳು: ಘನಪಾಠಿಗಳು ಬಹಳ ಪಾಂಡಿತ್ಯ ಉಳ್ಳವರು. ಅದ್ಯಾವ ಮಂತ್ರ-ಜಪವೇ ಇರಲಿ…
ಶಂಕರನ್ (ಗುರುಗಳ ಮಾತಿನ ಮದ್ಯೆ ಬಾಯಿ ತೆರೆದು ಉಪದೇಶವಾದ ಮಂತ್ರ-ಜಪ ಹೇಳುವ ಕ್ಷಣ… )
ಮಹಾಸ್ವಾಮಿಗಳು: ಇರಪ್ಪ! ಇರು! ನನಗೆ ನಿನ್ನ ಉಪದೇಶದ ಮಂತ್ರವನ್ನು ಹೇಳಬೇಡ. ಅದು ಬಹಳ ಗೌಪ್ಯ. ಮಂತ್ರ-ಜಪದ ದೇವತಾ ಹೆಸರು ಹೇಳು ಸಾಕು.
ಶಂಕರನ್: ಗುರುದೇವಾ ಅದು ಹನುಮತ್ ಉಪಾಸನಾ ಮೂಲ ಮಂತ್ರ.

ಮಹಾಸ್ವಾಮಿಗಳು: ಸರಿ. ಅದೇನು ಸಂದೇಹವೆಂದು ವಿವರಿಸು.
ಶಂಕರನ್: ನನಗೆ 23 ವರ್ಷವಾದಾಗ ಮಂತ್ರ-ಜಪದ ಉಪದೇಶವಾಯಿತು. ಸುಮಾರು ಏಳು ವರ್ಷಗಳಿಂದ ನಾನು ಮಂತ್ರ-ಜಪ ಮಾಡುತ್ತಿರುವೆ. ಆದರೂ ನನಗೆ ಏನೂ ಗೊತ್ತಿಲ್ಲ-ತಿಳಿಯುತ್ತಿಲ್ಲ!

  ನಿಷ್ಪ್ರಯೋಜಕ ಜೀವನ

ಮಹಾಸ್ವಾಮಿಗಳು (ಆಶ್ಚರ್ಯದಿಂದ) : ‘ನನಗೆ ಏನೂ ಗೊತ್ತಿಲ್ಲ-ತಿಳಿಯುತ್ತಿಲ್ಲ’ ಎಂದರೆ ಏನಪ್ಪಾ!
ಶಂಕರನ್ (ದುಃಖದಿಂದ) : ಗುರುದೇವಾ, ‘ನನಗೆ ಏನೂ ಗೊತ್ತಿಲ್ಲ – ತಿಳಿಯುತ್ತಿಲ್ಲ’ ಎಂದರೆ ಮಂತ್ರ-ಜಪದ ಸಿದ್ಧಿ ಆಗಿದೆಯೋ ಇಲ್ಲವೋ ಏನೂ ತಿಳಿಯುತ್ತಿಲ್ಲ…

ಮಹಾಸ್ವಾಮಿಗಳು (ತೀಕ್ಷ್ಣವಾಗಿ): ಅದನ್ನು ತಿಳಿದು ಏನು ಮಾಡುವೆ? ನೀನು ಮಂತ್ರ-ಜಪ ಮಾಡುತ್ತಿರುವುದು ಆತ್ಮಾರ್ಥಕ್ಕೋ ಅಥವಾ ಕಾಮ್ಯಾರ್ಥಕ್ಕೋ!
ಶಂಕರನ್, “ನಾನು ಮಾಡುತ್ತಿರುವುದು ಆತ್ಮಾರ್ಥಕ್ಕಾಗಿಯಾದರೂ, ಮಂತ್ರ-ಜಪದ ಸಿದ್ಧಿಯಾಗಿದೆಯೋ ಇಲ್ಲವೋ, ಜಪದ ದೇವತಾ ಅನುಗ್ರಹವಾಗಿದೆಯೋ ಇಲ್ಲವೋ ಎನ್ನುವ ಯೋಚನೆಯಲ್ಲಿ ಮನಸ್ಸು ಗೊಂದಲವಾಗಿದೆ. ಆದ್ದರಿಂದ ಗುರುಗಳು ಕರುಣೆ ತೋರಿ ಮಂತ್ರ-ಜಪದ ಪ್ರಗತಿಯ ಬಗ್ಗೆ ತಿಳಿಸಿ ಆಶೀರ್ವದಿಸಬೇಕು” ಎನ್ನುತ್ತಾ ಬಿಕ್ಕಿಸತೊಡಗುತ್ತಾರೆ.

ಮಹಾಸ್ವಾಮಿಗಳು (ಬಹು ವಾತ್ಸಲ್ಯದಿಂದ) : ಮಂತ್ರ-ಜಪ ಸಿದ್ಧಿಯಾಗಿದೆಯೋ ಇಲ್ಲವೋ ಎಂಬುದು ಮಂತ್ರ-ಜಪ ಮಾಡುವ ವ್ಯಕ್ತಿಯ ಅನುಭವಕ್ಕೆ ಮಾತ್ರ ಸೀಮಿತವಾದದ್ದು, ಆತ್ಮೀಯವಾದದ್ದು.
ಶಂಕರನ್, “ಗುರುದೇವಾ, ನಾನು ಕಳೆದ ಏಳು ವರ್ಷಗಳಿಂದ ಗುರುಗಳು ಹೇಳಿದಂತೆ ಮಂತ್ರ-ಜಪ ನಿರಂತರ ಮಾಡುತ್ತಿರುವೆ. ಆದರೆ ನನಗೆ ಮಂತ್ರದ ಸಿದ್ಧಿಯ ಲವಲೇಶದ ಅನುಭವವಾಗಿಲ್ಲ. ಈಗೀಗ ಜಪ ಮಾಡುತ್ತಾ ತುಂಬಾ ದಣಿವಾಗುತ್ತದೆ. ಆದ್ದರಿಂದ ತಾವು ದಯೆ ತೋರಿ ಮಂತ್ರ-ಸಿದ್ಧಿ ಆಗಿದೆಯೋ ಇಲ್ಲವೋ ಎಂದು ತಿಳಿಯುವ ದಾರಿ ತೋರಬೇಕು” ಎನ್ನುತ್ತಾ ಮಹಾಸ್ವಾಮಿಗಳಿಗೆ ವಂದಿಸುತ್ತಾ ಮತ್ತೊಮ್ಮೆ ಗದ್ಗದಿತರಾಗುತ್ತಾರೆ.

ಭಕ್ತನ ಯೋಗ – ಯೋಗ್ಯತೆ – ಗೊಂದಲ ಯಾವುದೂ ಸದ್ಗುರುವಿಗೆ ತಿಳಿಯದಿರುವಂಥದಲ್ಲ! ಕರುಣಾಮೂರ್ತಿಯಾದ ಗುರುಗಳು ಶಂಕರನ್ ಗೆ ಕುಳಿತು ಕೊಳ್ಳುವುದಕ್ಕೆ ಸನ್ನೆ ಮಾಡುತ್ತಾ ಈ ಕೆಳಗಿನ ದೃಷ್ಟಾಂತ ವಿವರಿಸುತ್ತಾರೆ…

“ಹಲವು ವರ್ಷಗಳ ಹಿಂದೆ ಶೃಂಗಗಿರಿ ಶಾರದಾ ಪೀಠದಲ್ಲಿ ‘ನೃಸಿಂಹ ಭಾರತೀ’ ಎನ್ನುವ ಮಹಾತ್ಮರು ವಿರಾಜಮಾನರಾಗಿದ್ದರು. ಆಗಲೂ ಕೂಡ ನೀನು ನನ್ನ ಬಳಿ ಬಂದ ಹಾಗೆ ಒಬ್ಬ ಬ್ರಹ್ಮಚಾರಿಯೊಬ್ಬರು ಸ್ವಾಮೀಜಿಗಳ ದರ್ಶನಕ್ಕೆ ಬಂದರು. ಬ್ರಹ್ಮಚಾರಿ ತಾವು ತಂದಿದ್ದ ಫಲವನ್ನು ಸ್ವಾಮೀಜಿಗಳ ಮುಂದೆ ಇಟ್ಟು ನಮಸ್ಕರಿಸಿದಾಗ, ಸ್ವಾಮೀಜಿಗಳು ಬಹು ವಾತ್ಸಲ್ಯದಿಂದ, ‘ಏನಪ್ಪಾ ಬಂದ ಕಾರಣ!’ ಎಂದು ಕೇಳಿದರು. ಬ್ರಹ್ಮಚಾರಿಯು, ‘ಗುರುಗಳೇ ನನಗೆ ಉಪದೇಶವಾದ ಮಂತ್ರ-ಜಪವನ್ನು ಬಹಳ ವರ್ಷಗಳಿಂದಲೂ ಮಾಡುತ್ತಿರುವೆ. ಆ ಮಂತ್ರ-ಜಪ ಇನ್ನೂ ಸಿದ್ಧಿ ಆಗಿದೆಯೋ ಇಲ್ಲವೋ ಎಂದು ತಿಳಿಯುತ್ತಿಲ್ಲ. ಅದನ್ನು ತಿಳಿಯುವ ಮಾರ್ಗ ತೋರಿಸಿ ಆಶೀರ್ವದಿಸಬೇಕು’ ಎಂದು ಸ್ವಾಮೀಜಿಗಳಲ್ಲಿ ಪ್ರಾರ್ಥಿಸಿದರು.

  ವಿಷ್ಣುಶತನಾಮ ಅಥ೯ ಸಹಿತ

ತಮ್ಮ ಎದುರು ನಿಂತ ಶಿಷ್ಯನ/ಬ್ರಹ್ಮಚಾರಿಯ ಮನಸ್ಥಿತಿ ಅರ್ಥಮಾಡಿಕೊಂಡ ಸ್ವಾಮೀಜಿಗಳು, ‘ಆತ್ಮಾರ್ಥಕಾಗಿ ಶ್ರದ್ಧೆಯಿಂದ ಮಂತ್ರ-ಜಪ ನಿರಂತರ ಮಾಡುತ್ತಿರು. ಒಂದಲ್ಲ ಒಂದು ದಿನ ಮಂತ್ರದ ದೇವತೆಯಿಂದ ಅನುಗ್ರಹವಾಗುತ್ತದೆ’ ಎನ್ನುತ್ತಾರೆ. ಬ್ರಹ್ಮಚಾರಿಗೆ ಸ್ವಾಮೀಜಿಗಳ ಮಾತಿನಿಂದ ತೃಪ್ತಿಯಾಗದೇ ಮತ್ತೆ ಮತ್ತೆ ಪ್ರಾರ್ಥಿಸುತ್ತಾರೆ.
ಸ್ವಾಮೀಜಿಗಳು ಬಹು ಅಕ್ಕರೆಯಿಂದ ಬ್ರಹ್ಮಚಾರಿಯನ್ನು ಬಳಿಗೆ ಕರೆದು, ‘ಪ್ರತೀ ದಿನ ನೀನು ಮಂತ್ರ-ಜಪ ಶುರು ಮಾಡುವ ಮೊದಲು ನಿನ್ನ ಆಸನದ ಮಣೆಯ ಮೇಲೆ ಭತ್ತವನ್ನು ಹರವು. ಭತ್ತದ ಮೇಲೆ ವಸ್ತ್ರವೊಂದನ್ನು ಹಾಕಿ ನೀನು ಅದರ ಮೇಲೆ ಕುಳಿತು ಜಪ ಮಾಡು. ಈ ರೀತಿ ನಿತ್ಯವೂ ಮಾಡು. ಯಾವ ಕ್ಷಣ ಭತ್ತ ಒಡೆದು, ಅರಳಿ ಅಕ್ಕಿಯಾಗುತ್ತದೆಯೋ ಆ
ಕ್ಷಣ ನಿನಗೆ ಮಂತ್ರ ಸಿದ್ಧಿಯಾಯಿತೆಂದು’ ಎನ್ನುತ್ತಾ ಮಂದಸ್ಮಿತರಾಗುತ್ತಾರೆ.

ಸ್ವಾಮೀಜಿಗಳ ಮಾತು ಕೇಳಿದ ಬ್ರಹ್ಮಚಾರಿಗೆ ಮನಸ್ಸಿನಲ್ಲಿ, ‘ಗುರುಗಳು ನನ್ನ ಒತ್ತಾಯಕ್ಕಾಗಿ – ಸಮಾಧಾನಕ್ಕಾಗಿ ಹೀಗೆ ಹೇಳಿದರೇನೋ’ ಎಂಬ ಗೊಂದಲ!
ಬ್ರಹ್ಮಚಾರಿ ಮತ್ತೆ ಸ್ವಾಮೀಜಿಗಳಲ್ಲಿ, ‘ಗುರುಗಳೇ ಕ್ಷಮಿಸಬೇಕು! ದೇವರ ಸ್ಥಾನದಲ್ಲಿ ಇರುವ ನಿಮ್ಮನ್ನು ನಾನು ಯಾವುದೇ ಕಾರಣಕ್ಕೂ ಪರೀಕ್ಷಿಸುತ್ತಿಲ್ಲ. ಆ ಯೋಗ್ಯತೆಯೂ ನನಗಿಲ್ಲ. ನನಗೆ ಬರುವುದೂ ಬೇಡ. ಆದರೆ ಮಣೆಯ ಮೇಲೆ ಭತ್ತ ಹರವಿ ಅದನ್ನು ವಸ್ತ್ರದಿಂದ ಮುಚ್ಚಿ.ssss .. ನಂತರ ಅದು ಅರಳಿ..sss…ಯಾಕೋ ಎಲ್ಲವೂ ಅಸ್ಪಷ್ಟ’ ಎನ್ನುತ್ತಿರುವಾಗ ಸ್ವಾಮೀಜಿಗಳು ನಗುತ್ತಾ , ‘ನನಗೆ ಈ ಅನುಭವ ಆಗಿದೆಯೋ ಇಲ್ಲವೋ ಅಥವಾ ನಿನ್ನ ಸಮಾಧಾನಕ್ಕಾಗಿ ಹೇಳಿದೆನೋ’ ಎಂದು ನಿನ್ನ ಪ್ರಶ್ನೆ ತಾನೇ ಎನ್ನುತ್ತಾ ತಮ್ಮ ಪರಿಚಾರಕಾರಿಗೆ ಒಂದು ಮಣೆಯನ್ನು ತಂದು, ಮಣೆಯ ಬೆಲೆ ಭತ್ತವನ್ನು ಹರಡಲು ಹೇಳುತ್ತಾರೆ.
ಪರಿಚಾರಕರು ಸ್ವಾಮೀಜಿಗಳ ಆಜ್ಞೆಯನ್ನು ಪಾಲಿಸಿದ ನಂತರ, ಸ್ವಾಮೀಜಿಗಳು ತಮ್ಮ ವಸ್ತ್ರವೊಂದಿನಿಂದ ಭತ್ತವನ್ನು ಮುಚ್ಚಿ ಅದರ ಮೇಲೆ ಪೂರ್ವಾಭಿಮುಖವಾಗಿ ಪದ್ಮಾಸನದಲ್ಲಿ ಕಣ್ಣು ಮುಚ್ಚಿ ಕುಳಿತು ಕೊಳ್ಳುತ್ತಾರೆ.

  ಕನ್ನಡ ಜಾನಪದ ಒಗಟುಗಳ ಕ್ವಿಜ್ - Kannada Janapada Riddles - Ogatu

ಅಷ್ಟರಲ್ಲಿ ಭಾರೀ ಪ್ರಮಾಣದಲ್ಲಿ ಭಕ್ತರುಗಳು ಅಲ್ಲಿ ನೆರೆಯ ತೊಡಗುತ್ತಾರೆ…

ಸ್ವಾಮೀಜಿಗಳು ಮಣೆಯ ಮೇಲೆ ಕುಳಿತ ಕೆಲವೇ ಕ್ಷಣಗಳಲ್ಲಿ ಭತ್ತ ಒಡೆದು ಅರಳುತ್ತಾ ಪುಟಿಯುವ ಶಬ್ದ ಶುರುವಾಗುತ್ತದೆ. ಭತ್ತ ಒಡೆಯುವಾಗ ಸಣ್ಣದಾಗಿ ಹೊಗೆಯು ಕಾಣಿಸಿ ಕೊಳ್ಳುತ್ತದೆ. ಶಿಷ್ಯನ ಮನದ ಗೊಂದಲವನ್ನು ದೂರ ಮಾಡುವುದಕ್ಕೆ ಸ್ವಾಮೀಜಿಗಳು ಮಂತ್ರ-ಜಪದ ಸಿದ್ಧಿಯ ಬಗ್ಗೆ ಮಾಡಿದ ನಿರೂಪಣೆಯಿಂದ ಅಲ್ಲಿ ನೆರೆದ ಸಮಸ್ತ ಭಕ್ತರು ಮೂಕ ವಿಸ್ಮಿತರಾಗುತ್ತಾರೆ.
ಸ್ವಾಮೀಜಿಗಳು ನಗುತ್ತಾ ಬ್ರಹ್ಮಚಾರಿಯ ಕಡೆಗೊಮ್ಮೆ ನೋಡುತ್ತಾರೆ. ಬ್ರಹ್ಮಚಾರಿಯ ಗುರುದೇವರ ಕರುಣೆಗೆ ಬಿಕ್ಕುತ್ತಾ ಶಿರಸಾಷ್ಟಾಂಗ ನಮಸ್ಕರಿಸುತ್ತಿರುತ್ತಾರೆ.”

ಜಗದ್ಗುರು ಮಹಾಸ್ವಾಮಿಗಳಿಂದ, ಶೃಂಗಗಿರಿಯ ಜಗದ್ಗುರು ಮಹಾಸ್ವಾಮಿಗಳ ಪ್ರಸಂಗದ ವಿವರಣೆಯನ್ನು ಕೇಳಿದ ಶಂಕರನ್ ಕೆಲವು ಸಮಯ ಸ್ತಬ್ಧರಾಗಿ ಬಿಡುತ್ತಾರೆ.
ಕೆಲ ಸಮಯದ ನಂತರ ಏನೋ ಕೇಳಲಿಕ್ಕೆ ಶಂಕರನ್ ಬಾಯಿ ತೆಗೆದಾಗ ಮಹಾಸ್ವಾಮಿಗಳು, “ಶಂಕರಾ, ನಿನಗೂ ಕೂಡ ನಾನು ಮಂತ್ರ-ಸಿದ್ಧಿಯ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಬೇಕಾ” ಎನ್ನುತ್ತಾ ನಗ ತೊಡಗುತ್ತಾರೆ.

ಶಂಕರನ್ ತಮ್ಮ ಕೆನ್ನೆ ಬಡಿದುಕೊಳ್ಳುತ್ತಾ, “ಇಲ್ಲ ಇಲ್ಲ ಖಂಡಿತ ಇಲ್ಲ. ಗುರುದೇವ, ನಿಮ್ಮ ಆಶೀರ್ವಾದೊಂದನ್ನು ಬಿಟ್ಟು ನನಗೆ ಏನೂ ಬೇಡ” ಎಂದು ಜಗದ್ಗುರು ಮಹಾಸ್ವಾಮಿಗಳಿಗೆ ನಮಸ್ಕರಿಸಿ ಗುರುಗಳ ಅಪ್ಪಣೆ ಪಡೆದು ಹೊರಡಲು ಅನುವಾಗುತ್ತಾರೆ.

🙏 ॥ ಶಾಸ್ತ್ರಂ ಶಾರೀರಮೀಮಾಂಸಾ
ದೇವಸ್ತು ಪರಮೇಶ್ವರಃ l
ಆಚಾರ್ಯಾಃ ಶಂಕರಾಚಾರ್ಯಾಃ
ಸಂತು ಮೇ ಜನ್ಮ ಜನ್ಮನೀ॥ ಸದ್ಗುರುಚರಣಾರವಿಂದಾರ್ಪಣ ಮಸ್ತು ll ತತ್ಸದ್ಬ್ರಹ್ಮಾರ್ಪಣಮಸ್ತು ll 🙏

Source: ‘ಶ್ರೀ ರಮಣಿ ಅಣ್ಣ’ ಅವರ ತಮಿಳಿನ ಲೇಖನ. ನನ್ನ ಶ್ರದ್ಧಾ ಪೂರ್ವಕ ಸಾಷ್ಟಾಂಗ ನಮಸ್ಕಾರಗಳೊಂದಿಗೆ ಸದ್ಗುರು ಚರಣಾರವಿಂದಾಭ್ಯೋ ನಮಃ 🙏

Leave a Reply

Your email address will not be published. Required fields are marked *

Translate »