ರಾಜಕಾರಣ, ರಾಜಕೀಯಾ ಹಾಗು ರಾಜಕಾರಣಿ.
ರಾಜಕೀಯಾ ಪಕ್ಷ ಹಾಗು ರಾಜಕಾರಣಿಗಳ ಸರ್ವಾಧಿಕಾರದಲ್ಲಿ, ಪ್ರಜಾಪ್ರಭುತ್ವದ ಅಸ್ತಿತ್ವವೇ ಉಳಿದಿಲ್ಲ.
ರಾಜಕೀಯಾ ಪಕ್ಷಕ್ಕಾಗಿ ರಾಜಕಾರಣಿಗಳು ಪ್ರಜೆ, ರಾಜ್ಯ ಹಾಗು ದೇಶವನ್ನೇ ಬಲಿ ಕೊಡಲು ಹೇಸುವುದಿಲ್ಲ.
ಇದೆಂತಹ ಪ್ರಜಾಪ್ರಭುತ್ವ ?
ಪ್ರಜೆಗಳ ಮೂಲಭೂತ ಸೌಕರ್ಯ- ಸೌಲಭ್ಯಗಳನ್ನು ಒದಗಿಸುವ ಬದಲು, ಅವರ ಕುಟುಂಬದ ಹಾಗು ಸಹಪಾಠಿಗಳ ಐಶ್ವರ್ಯ ಆರಾಮ ಒದಗಿಸುವುದು ಹಾಗು ಹಣ- ಪ್ರತೀಷ್ಟೆಗಾಗಿ ಈ ರಾಜಕಾರಣಿಗಳು ಹೆಣಗಾಡುತ್ತಿದ್ದಾರೆ.
ಇದೆಂತಹ ಪ್ರಜಾಪ್ರಭುತ್ವ ?
ದೇಶದ ಕಣ್ಣಾಗಿರ ಬೇಕಾದ ಮಾಧ್ಯಮಗಳು ಹಣಕ್ಕಾಗಿ ತಮ್ಮನ್ನು ತಾವೆ ಮಾರಿ ಕೊಂಡಿದೆ.
ಇದೆಂತಹ ಪ್ರಜಾಪ್ರಭುತ್ವ ?
ಕಾರ್ಯಾಂಗವು ಶಾಸಕಾಂಗದ ಗುಲಾಮರಾಗಿದ್ದಾರೆ, ಇಲ್ಲವಾದರೆ ಟ್ರಾನ್ಸಫರ್ನ ಶಿಕ್ಷೆ.
ಇದೆಂತಹ ಪ್ರಜಾಪ್ರಭುತ್ವ ?
ಆಡಳಿತ ಪಕ್ಷವನ್ನು ಟೀಕೆ ಮಾಡಿದರೆ, ದೇಶ ದ್ರೋಹವೆಂದು ಆಪಾಧನೆ.
ಇದೆಂತಹ ಪ್ರಜಾಪ್ರಭುತ್ವ ?
ಹಣದಿಂದ ಮತ ಖರೀದಿಸಿ ಆರಿಸಿ ಬರುತ್ತಾರೆ ಪ್ರತಿನಿಧಿಗಳು.
ಇದೆಂತಹ ಪ್ರಜಾಪ್ರಭುತ್ವ ?
ಸಾವಿರ- ಸಾವಿರ ಕೋಟಿ ಖರ್ಚು ಮಾಡಿ, ಮುಗ್ದ ಪ್ರಜೆಯನ್ನು ಮೋಡಿ ಮಾಡಿ, ಕ್ರಿಮಿನಲನ್ನು ಸತ್ಯ ಹರೀಶ್ಚಂದ್ರನೆಂದು ನಮೂದಿಸಲಾಗುತ್ತಿದೆ.
ಇದೆಂತಹ ಪ್ರಜಾಪ್ರಭುತ್ವ ?
ಸಾವಿರ- ಸಾವಿರ ಕೋಟಿ ಖರ್ಚು ಮಾಡಿ ಹಣ ಕೊಟ್ಟು ಒಟ್ಟುಗೂಡಿಸಿದ ಜನಸ್ತೋಮದಿಂದ, ತಾನೆಷ್ಟು ಜನರಿಗೆ ಬೇಕಾದವನೆಂಬ ಮಿಥ್ಯಾ ಪ್ರಪಂಚ ನಿರ್ಮಿಸುವರು.
ಇದೆಂತಹ ಪ್ರಜಾಪ್ರಭುತ್ವ ಅಥವಾ ಪ್ರತಿನಿಧಿ ?
ಹಲ್ಲುಜ್ಜುವ ಪೇಸ್ಟ್, ಮುಖ ಕಾಂತಿಯ ಕ್ರೀಮ್ ಗಳಂತೆ ಈ ರಾಜಕಾರಣಿಗಳನ್ನು ಮಾರ್ಕೆಟ್ ಮಾಡಲಾಗುತ್ತಿದೆ.
ಇದೆಂತಹ ಪ್ರಜಾಪ್ರಭುತ್ವ ?
ಎಲ್ಲಿದೆ, ನಮ್ಮ ಹಿರಿಯರು, ಸ್ವಾತಂತ್ರ ಹೊರಾಟಗಾರರು ಹಾಗು ಮೇಧಾವಿಗಳು ಕನಸ್ಸು ಕಂಡ ಭಾರತ ?
ಎಲ್ಲಿದೇ ಪ್ರಜಾಪ್ರಭುತ್ವ ?
ಬಿಕ್ಷೆ ಬೇಡುವ ಪ್ರಜೆಯೂ ತೆರಿಗೆ ಕೊಡುವ ಈ ದೇಶದಲ್ಲಿ, ಕೇವಲ 1% ಪ್ರಜೆ ಎಲ್ಲಾ ಸೌಕರ್ಯ ಪಡೆದು, ಉಳಿದ 99% ಜೀವನ ಪೂರ್ತಿ ಬದುಕಲು ಹೊರಾಟ ಮಾಡುತ್ತಿರುವನು.
ಇದೆಂತಹ ಪ್ರಜಾಪ್ರಭುತ್ವ ?
ನಿಜವಾದ ಪ್ರಜಾಪ್ರಭುತ್ವ ಯಾವಾಗ ?
ಎದ್ದೇಳಿ ಪ್ರಜೆಗಳೇ, ನೀವೂ, ಈ ಕೆಸರು ನೀರಿನಲ್ಲಿ ಹರಿದು ಹೋಗ ಬೇಡಿ.
ಹಣದಿಂದ ಆಡುವ- ಮಿಥ್ಯಾ ಪ್ರಪಂಚದಲ್ಲಿ ಹಾಗು ಭ್ರಷ್ಟ ರಾಜಕಾರಣಿಗಳ ಕೈ ಗೊಂಬೆ ಯಾಗಿ, ಮುಂದಿನ ಜನಾಂಗದ ಭವಿಷ್ಯವನ್ನು ಬಲಿ ಕೊಡಬೇಡಿ.
ಈಗಾಗಲೇ, ಮೂರು ತಲೆಮಾರು ಸವಿದು ಹೋಯಿತು.
ಎದ್ದೇಳಿ ಪ್ರಜೆಗಳೇ, ಸಮಯ ಮೀರಿ ಹೋಗುವ ಮುನ್ನ !