ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಧರ್ಮ ಹಾಗು ಆಡಳಿತ – ಪ್ರಜಾಕೀಯ

*ಧರ್ಮ ಹಾಗು ಆಡಳಿತ.*

*ಯಾವುದೇ ದೇಶದಲ್ಲಿ ಧರ್ಮವನ್ನು ಆಡಳಿತಕ್ಕೆ ಅಳವಡಿಸಿದ್ದಾಗ, ಆ ದೇಶವು ತುಂಬಹ ವರ್ಷ ಶಾಂತಿ ಸೌಹಾರ್ದ್ಯದಿಂದ ಮುಂದುವರಿಯುವುದಿಲ್ಲ.*

*ಅಷ್ಟೇ ಅಲ್ಲ, ಆ ದೇಶವು ಸಮ್ರಧ್ಧಿ ಹೊಂದುವುದಿಲ್ಲ.*

ಕೊಲ್ಲಿ ದೇಶಗಳು, ಕಳೆದ 50 ವರ್ಷದಿಂದ ಧರ್ಮವನ್ನು ಆಡಳಿತದಲ್ಲಿ ಮಿಕ್ಸ್ ಮಾಡಿ ಸಮ್ರಧ್ಧಿ ಕಾಣುವೆವೆಂಬ ಭ್ರಮೆಯಲ್ಲಿ ಇತ್ತು.

ಅದು ಅವರಿಗೆಯೆ ಆತಂಕವನ್ನುಂಟು ಮಾಡಿತು. ಈಗ ಎಲ್ಲರೂ ಬದಲಾವಣೆಯಾಗುತ್ತಿದ್ದಾರೆ.

*ಪಾಕಿಸ್ತಾನ, ಅಫ್ಘಾನಿಸ್ತಾನ್, ಯೆಮೆನ್, ಸಿರಿಯಾ, ಲಿಬಿಯಾ, ಪಾಲೆಸ್ತಿನ್, ಇರಾನ್, ಇರಾಕ್, ಸುಡಾನ್, ಇತಿಯೋಪಿಯಾ,ನೈಜೀರಿಯಾ, ಈಜಿಪ್ತ್,* ಇತ್ಯಾದಿ ದೇಶಗಳು ತಮ್ಮನ್ನು ತಾವೆ ನಾಶ ಮಾಡಿಕೊಂಡರು.

ಧರ್ಮವು ಪ್ರಜೆಗಳ ಖಾಸಾಗಿ ವಿಷಯವಾಗಿರಬೇಕು. ಅದು ಪ್ರತೀಯೊಬ್ಬನ ನಂಬಿಕೆಯ ವಿಷಯವಾದ್ದರಿಂದ, ದೇಶವು ನಂಬಿಕೆಯಿಂದ ನಡೆಯಲು ಸಾಧ್ಯವಿಲ್ಲ.

*ದೇಶವು ಪ್ರಜೆಗಳ ತೆರಿಗೆ ಹಣ ಹಾಗು ದೇಶದ ಸಂಪನ್ಮೂಲದಿಂದ ನಡೆಯುವುದು.*

  ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ

ದೇಶವನ್ನು ಹಾಗು ಪ್ರಜೆಯನ್ನು ಶಿಸ್ತು ಬದ್ದವಾಗಿ ಹಾಗು ನಿಯಮಿತವಾಗಿ ನಡೆಸಲು ದೇಶದ ಕಾನೂನು ವ್ಯವಸ್ಥೆ ಕಠಿಣವಾಗಿರಬೇಕು.

ಧರ್ಮಕ್ಕೆ ಯಾರೂ ಹೆದರುವುದಿಲ್ಲ. ಆದರೆ ಕಾನೂನಿಗೆ ಎಲ್ಲರೂ ಹೆದರಲೇ ಬೇಕು. ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಆಗುವುದು.

ಧರ್ಮ ಗುರುಗಳೇ, ಸಮಾಜ ಒಪ್ಪದ ಕ್ರಿಯೆಯಲ್ಲಿ ಭಾಗಿಯಾಗುವುದನ್ನು ನಾವು ಎಷ್ಟೋ ಬಾರಿ ಕಂಡಿದ್ದೇವೆ. ಕೆಲವೊಬ್ಬರು ಈಗಲೂ ಜೈಲಿನಲ್ಲಿರುವರು. ಧರ್ಮದ ಭಯ ಯಾರಿಗೂ ಇಲ್ಲ. ಬಾಯಿಯಲ್ಲಿ ಎಲ್ಲರೂ ಹೇಳುತ್ತಾರೆ, ಆದರೆ *ಹಣ, ಆಸ್ತಿ, ಪ್ರತೀಷ್ಟೆ ಹಾಗು ಸ್ವಂತ ಸುಖದ* ವಿಷಯ ಬಂದಾಗ ಧರ್ಮಕ್ಕೆ ಬೆಲೆ, ಯಾರೂ ಕೊಡುವುದಿಲ್ಲ.

*ಯಾವ ದೇಶದಲ್ಲಿ, ಕಾನೂನಿಗೆ ಬೆಲೆ ಕೊಡುವುದು ಎಲ್ಲರಿಗೂ ಅನಿವಾರ್ಯವಾಗುವುದೊ, ಅದು ಸಮ್ರಧ್ಧಿ ಹೊಂದುವುದು. ಭ್ರಷ್ಟಾಚಾರವೂ ಕ್ಷೀಣವಾಗುವುದು.*

  ಶಿಫಾರಸು - ಪ್ರಜಾಕೀಯ

*ಅದರಲ್ಲೂ, ಜಾತ್ಯಾತೀತ ದೇಶವಾದ ಭಾರತದಲ್ಲಿ ಖಂಡಿತಾ ಧರ್ಮವು ಆಡಳಿತದಲ್ಲಿ ಬರಲೇ ಬಾರದು. ಬಂದರೆ, ದೇಶ ಅಶಾಂತಿಯ ತಾಣವಾಗುವುದು.*

ಪ್ರತೀಯೊಬ್ಬ ಮನುಷ್ಯನು ಕೆಲಸಕ್ಕೆ ಸೇರುವಾಗ, ಕಂಪೆನಿಯ ಒಡೆಯನ ಅಥವಾ ಮೆನೆಜರನ ಧರ್ಮ ನೋಡಿ ಕೆಲಸಕ್ಕೆ ಸೇರುವುದಿಲ್ಲ.

ಅಲ್ಲಿ ಕೊಡುವ *ಸಂಭಾವನೆ, ಸರಿಯಾದ ವಾತಾವರಣ ಹಾಗು ತನ್ನ ಬೆಳವಣಿಗೆಗೆ ಬೇಕಾದ ಅವಕಾಶ* ನೋಡಿ ಕೆಲಸಕ್ಕೆ ಸೇರುವುದಲ್ಲವೇ ?

ದೇಶವೂ ಪ್ರಜೆಗಳು ಕಟ್ಟಿದ ತೆರಿಗೆ ಹಣ ಹಾಗು ದೇಶದ ಸಂಪನ್ಮೂಲಗಳಿಂದಲೆ ನಡೆಯ ಬೇಕು, ವಿನಹ ಯಾವುದೆ ವ್ಯಕ್ತಿ, ಪಾರ್ಟಿ, ಧರ್ಮ, ಜಾತಿ, ಪಂಗಡ, ಸಂಸ್ಕ್ರತಿ ಹಾಗು ಸಂಸ್ಕಾರದಿಂದ ನಡೆಯಲು ಸಾಧ್ಯವಿಲ್ಲ.

*ಧರ್ಮಕ್ಕೆ ಜನರು ಅಷ್ಟೊಂದು ಬೆಲೆ ಕೊಡುವುದಾದರೆ, ಪರ್ವತದಷ್ಟು ಬ್ರಹತ್ ಭ್ರರ್ಷ್ಟಾಚಾರ ಈ ದೇಶದಲ್ಲಿ ಹೇಗೆ ಬಂತು ?*

  ಪ್ರಜಾಕೀಯದ ಬದಲಾವಣೆ ಎಲ್ಲಿಂದ ಶುರು ಆಗಬೇಕು?

ಪ್ರತೀ ಧರ್ಮದಲ್ಲೂ ಭ್ರಷ್ಟಾಚಾರ ನಿಂದನೀಯಾ ಹಾಗು ಶಿಕ್ಷಾರ್ಹವೆಂದು ಹೇಳಲಾಗಿದೆ.ಆದರೂ ಅನರ್ಥ, ಅನ್ಯಾಯ, ಅಧರ್ಮ, ಭ್ರಷ್ಟಾಚಾರ, ಕೊಲೆ, ಮೋಸ, ದರೋಡೆ, ಇತ್ಯಾದಿ ನಡೆಯುತ್ತಿದೆ.

*ಆದ್ದರಿಂದ ಆಡಳಿತದಲ್ಲಿ ಧರ್ಮವಾಗಲಿ ಅಥವಾ ಧರ್ಮದ ಪ್ರಸ್ತಾವವಾಗಲಿ ಖಂಡಿತಾ ಬರಬಾರದು.*

*ಕೇವಲ ದೇಶದ- ರಾಜ್ಯದ ಕಾನೂನು ಪ್ರಜೆಗಳ ಪ್ರತೀಯೊಂದು ಕ್ರಿಯೆಗೆ ಮಾರ್ಗ ಧರ್ಶಣ ಆಗಬೇಕು.*

*ಧರ್ಮದಲ್ಲಿ ಆಡಳಿತ ಬೇಡ.*
*ಆಡಳಿತದಲ್ಲಿ ಧರ್ಮ ಬೇಡ.*
*ಆದರೆ ಕಾನೂನು ಎರಡನ್ನೂ ನಿಯಂತ್ರಿಸಬೇಕು*

Leave a Reply

Your email address will not be published. Required fields are marked *

Translate »