ಪ್ರಜಾಕೀಯ ಸಿಧ್ಧಾಂತದ ಪ್ರಕಾರ ನಡೆಯುವ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)ದ ಚುನಾವಣಾ ಅಭ್ಯರ್ಥಿ ಹಾಗು ಅಭ್ಯರ್ಥಿ ಅಕಾಂಕ್ಷಿ ಆಗುವವರ ಗಮನಕ್ಕೆ.
ಭಾಗ. I.
ಚುನಾಯಿತ ಪ್ರತಿನಿಧಿಗಳ ನಮೂನೆ
1. ಗ್ರಾಮ ಪಂಚಾಯಿತಿ ಸಧಸ್ಯ – ವಾರ್ಡ್ಗೆ ಒಬ್ಬ- ಸುಮಾರು 1,05,000
2. ತಾಲೂಕು ಪಂಚಾಯಿತಿ ಸಧಸ್ಯ -ಗ್ರಾಮ ಪಂಚಾಯಿತಿಗೆ ಒಬ್ಬ. – ಸುಮಾರು 5,000
3. ಜಿಲ್ಲಾ ಪಂಚಾಯಿತಿ ಸಧಸ್ಯ -ಸುಮಾರು 5 ಗ್ರಾಮ ಪಂಚಾಯಿತಿಗೆ ಒಬ್ಬ. -ಸುಮಾರು 1,100
4. ಕೌನ್ಸಿಲರ್ ಹಾಗು ಕಾರ್ಪರೇಟರ್ -ಪಟ್ಟಣ, ನಗರ ಹಾಗು ನಗರ ಪಾಲಿಕೆ (275) ವಾರ್ಡ್ಗೆ ಒಬ್ಬ. – ಸುಮಾರು 6700
5. ವಿಧಾನ ಸಭಾ ಸಧಸ್ಯ- MLA- ಸುಮಾರು 2,25,000 ಮತದಾರರಿಗೆ ಒಬ್ಬರಂತೆ -224.
6. ವಿಧಾನ ಪರಿಷತ್ ಸಧಸ್ಯ – MLC – 75. ( ವಿಧಾನ ಸಭಾ ಸಧಸ್ಯರು- 25, ಸ್ಥಳಿಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು- 25 ಅಧ್ಯಾಪಕರು- 7, ಪಧವೀದರು- 7 ಹಾಗು ರಾಜ್ಯಪಾಲರು -11 ಸಧಸ್ಯರನ್ನು ಚುನಾಯಿಸುವರು).
7. ಲೋಕ ಸಭಾ ಸಧಸ್ಯ- MP ( ಕರ್ನಾಟಕ – 28, ಬಾರತ – 543).
8. ರಾಜ್ಯ ಸಭಾ ಸಧಸ್ಯರು -225
ಹೀಗೆ, ಸುಮಾರು 1,18,000 ( 7 ಮತ್ತು 8 ಹೊರತು ಪಡಿಸಿ)ಚುನಾಯಿತ ಪ್ರತಿನಿಧಿಗಳು ಕೇವಲ ಕರ್ನಾಟಕ ರಾಜ್ಯಕ್ಕೆ ಸಂಬಂದ ಪಟ್ಟವರೂ ಹಾಗು ಕರ್ನಾಟಕ ರಾಜ್ಯ ಸರಕಾರಕ್ಕೆ ಸಂಬಂದ ಪಟ್ಟವರು ಇರುವರು. ಕರ್ನಾಟಕದಲ್ಲಿರುವ ಪೋಲೀಸ್ ಪಡೆ, ಕೇವಲ 80,000.
ಅಂದರೆ, ಪ್ರತೀ 550 ಪ್ರಜೆಗೆ ಒಬ್ಬ ಪ್ರತಿನಿಧಿ ಇರುವನು.ಇಲ್ಲಿ ಕರ್ನಾಟಕದ ಜನ ಸಂಖ್ಯೆ 6,50,00,000(6 ಕೋಟಿ 50 ಲಕ್ಷ ) ಎಂದು ತೆಗೆದು ಕೊಳ್ಳಲಾಗಿದೆ.
ವಿಶೇಷ ಸೂಚನೆ:
1. ಗ್ರಾಮ ಪಂಚಾಯಿತಿ ಸಧಸ್ಯರನ್ನು ಚುನಾಯಿಸುವಾಗ, ಯಾವುದೇ ರಾಜಕೀಯ ಪಕ್ಷದಿಂದ ಪ್ರತಿನಿಧಿಸುವಂತಿಲ್ಲ. ಇಲ್ಲಿ ಪಕ್ಷಗಳ ಹೆಸರಾಗಲಿ ಅಥವಾ ಚಿಹ್ನೆ ಆಗಲಿ ಉಪಯೋಗಿಸುವಂತಿಲ್ಲ. ಇದು ಸ್ಥಳಿಯ ಪ್ರಜೆಗಳಿಗೆ ಅವಕಾಶ ಕೊಡಲು ಹಾಗು ಸ್ಥಳಿಯ ಆಡಳಿತಕ್ಕೆ ಅವಕಾಶ ಕೊಡಲು ಹೀಗೆ ಮಾಡಲಾಗಿದೆ.
ಆದ್ದರಿಂದ, ಪ್ರಜಾಕೀಯದಲ್ಲೂ, ಗ್ರಾಮ ಪಂಚಾಯಿತಿ ಸಧಸ್ಯ ಚುನಾವಣೆಗೆ ಯಾವುದೇ ಶಿಫಾರಷು ಪತ್ರ ಇರುವುದಿಲ್ಲ ಅಥವಾ ಆಯಿಕೆ(Selection) ಪ್ರಕ್ರಿಯೆ ಇರುವುದಿಲ್ಲ.
ಆದ್ದರಿಂದ, ಪ್ರಜಾಕೀಯದ ಸಿಧ್ಧಾಂತದಂತೆ, ಗ್ರಾಮ ಪಂಚಾಯಿತಿ ಸಧಸ್ಯತ್ವಕ್ಕೆ ಚುನಾವಣೆಯಲ್ಲಿ ಭಾಗವಹಿಸುವವರಿಗೆ ಒಂದು 7 ಪೋಯಿಂಟ್ನ SOP( Standard Operating Procedure)ಯನ್ನು ಕೊಡಲಾಗಿದೆ. ಅದನ್ನು ಪ್ರಿಂಟ್ ಮಾಡಿಕೊಂಡು, ಅದರಲ್ಲಿ ನಿಮ್ಮ ಸಹಿ ಮಾಡಿ, ತಮ್ಮ ವಾರ್ಡ್ನ ಪ್ರಜೆಗಳಿಗೆ ವಿವರಿಸಿ ಮತ ಹಾಕಲು ಪ್ರೋತ್ಸಾಹಿಸಬೇಕು. ಆರಿಸಿ ಬಂದರೆ, ಅದರಂತೆ ನಡೆದು ಕೊಳ್ಳಬೇಕು.
ಇಲ್ಲಿ, ಬೇರೆ ಯಾವುದೇ ಆಯಿಕೆ ಪ್ರಕ್ರಿಯೆ ಇರುವುದಿಲ್ಲ. ಪಕ್ಷದ ಕಡೆಯಿಂದ, ಯಾವುದೇ ದಾಖಲೆಗಳು ಅವಶ್ಯಕತೆ ಇರುವುದಿಲ್ಲ.
ಆದರೆ, ಪ್ರಜಾಕೀಯದ ಸಿಧ್ಧಾಂತದ ಪ್ರಕಾರ ಚುನಾವಣೆ ನಿಲ್ಲುವವರು, ತಮ್ಮ ವಿವರಗಳನ್ನು, ಉತ್ತಮ ಪ್ರಜಾಕೀಯ ಪಕ್ಷದ ಕಚೇರಿಗೆ ತಲುಪಿಸ ಬೇಕಾಗಿ ವಿನಂತಿ.
ಉತ್ತಮ ಪ್ರಜಾಕೀಯ ಪಕ್ಷದ ವೆಬ್ ಸೈಟ್ ” www.prajaakeeya.org” ಗೆ ತಲುಪಿಸ ಬಹುದು.
ಎಲ್ಲಾ ಪ್ರಜಾಕೀಯ ಅನುಯಾಯಿಗಳಿಗೆ ಸ್ಪಷ್ಟವಾದ ಅರಿವು ಮೂಡಲೆಂದು, ಈ ಲೇಖನವನ್ನು ಬರೆಯಲಾಗಿದೆ. ಹಾಗು ಕೆಳಗೆ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲುವವರು ಪಾಲಿಸ ಬೇಕಾದ SOP ಪ್ರತಿ (ಕನ್ನಡ & ಇಂಗ್ಲೀಷ್ ) ಕೊಡಲಾಗಿದೆ.
ಗ್ರಾಮ ಪಂಚಾಯಿತಿ ಹೊರತು ಪಡಿಸಿ, ಬೇರೆ ಚುನಾವಣೆಯ ಪ್ರಕ್ರೀಯೆಯನ್ನು ಮುಂದಿನ ಭಾಗ II ರಲ್ಲಿ ವಿವರಿಸಲಾಗಿದೆ.
ಜೈ ಪ್ರಜಾಕೀಯ