🙏ಹರಿ ಚಿತ್ತ ಸತ್ಯ,🙏ನರ ಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು.
ಮಹಾಭಾರತದ ಕುರುಕ್ಷೇತ್ರ ಯುದ್ಧ ಭೂಮಿ. ಯುದ್ಧ ನಡೆಯುತ್ತಿದೆ ಸಾವಿರಾರು ಸೈನ್ಯ, ರಥ, ಆನೆ, ಕುದುರೆಗಳು, ಓಡಾಟ, ಬಾಣಗಳ ಸುರಿಮಳೆ.
ಅಲ್ಲಿಯೇ ಇದ್ದ ಎತ್ತರದ ಧ್ವಜ ಸ್ಥಂಭ, ಮೇಲೊಂದು ಗರ್ಭಿಣಿ ಪಕ್ಷಿ ಕುಳಿತಿದೆ.
ಒಬ್ಬ ಸೈನಿಕ ಬಿಟ್ಟ ಬಾಣ ಪಕ್ಷಿಯ ಹೊಟ್ಟೆ ಸವರಿ ಹೋಯಿತು ಹೊಟ್ಟೆ ಸೀಳಿ ಪಕ್ಷಿ ಬೀಳುವಾಗ ಆದರ ಹೊಟ್ಟೆ ಯಲ್ಲಿದ್ದ ನಾಲಕು ಮೊಟ್ಟೆಗಳು ದಟ್ಟವಾಗಿ ಬೆಳೆದ ಹುಲ್ಲಿನ ಮೇಲೆ ಬಿತ್ತು. ಯಾರ ಕಾಲ್ತುಳಿತಕ್ಕೂ ಸಿಗದಂತೆ, ಸೈನಿಕನ ಬಾಣದ ಗುರಿಗೊಳಗಾಗಿ ಆನೆಯ ಕೊರಳಿನ ಗಂಟೆ ಮುರಿದು ಆ ಮೊಟ್ಟೆಗಳ ಮೇಲೆ ಕವಚದಂತೆ ಬಿದ್ದು ಮೊಟ್ಟೆ ಸೇಫ್ ಆಗಿದ್ದು.
ಯುದ್ಧ ಮುಗಿಯಿತು. ಪಾಂಡವರಿಗೆ ಜಯ.
ಅದು ಸರಸ್ವತೀ ನದಿ ತೀರ,
ಋಷಿಗಳು ಸ್ನಾನಕ್ಕೆಂದು ಬಂದಾಗ ಚಿಲಿಪಿಲಿ ಶಬ್ದ ಕೇಳಿಸಿ ಹತ್ತಿರ ಹೋಗಿ ನೋಡಿದಾಗ ಮೊಟ್ಟೆಗಳು ಒಡೆದು ಪಕ್ಷಿಗಳು ಹೊರಬಂದಿದ್ದು. ಇದನ್ನೇ ಹರಿಯ ಸಂಕಲ್ಪ ಎನ್ನುವುದು. ಅಂತಹ ಭೀಕರ ಸಂದರ್ಭ ವಿದ್ದಾಗಲೂ ಮೊಟ್ಟೆಗಳು ಹಾಳಾಗದೆ ಉಳಿದದ್ದು ಹರಿಯ ಚಿತ್ತವಲ್ಲವೇ.
ಇನ್ನು ನರಚಿತ್ತ :
ಹೆಸರಾಂತ ಗಣಿತಜ್ಞ ಭಾಸ್ಕರಾಚಾರ್ಯ ತನ್ನ ಮಗಳಾದ ಲೀಲಾವತಿಯ ಮದುವೆಗೆ ನಿರ್ಧಾರಿಸಿದಾಗ, ಅವಳ ಜಾತಕದಲ್ಲಿ ಮದುವೆಯ ಮರುಘಳಿಗೆ ವೈಧವ್ಯ ವಿರುರುತ್ತದೆ. ಅದನ್ನು ತಪ್ಪಿಸಲು ಶ್ರೇಷ್ಠ ಮುಹೂರ್ತ ನೋಡಿ ಅದರಂತೆ, ಘಳಿಗೆ ಬಟ್ಟಲನ್ನು ಇಟ್ಟು ಸರಿಯಾದ ಮುಹೂರ್ತಕ್ಕೆಅಕ್ಷತೆ ಏರ್ಪಡಿಸಿದ್ದು, ದೈವವಶಾತ್ ಘಳಿಗೆ ಬಟ್ಟಲಲ್ಲಿ ಹುಡುಗಿಯ ಓಲೆ ಬಿದ್ದು ಅದು ಬಟ್ಟಲಿಗೆ ಅಡ್ಡ ಕೂತು ಸಮಯದ ಅರಿವಾಗದೆ ಮದುವೆ ನಡೆದೇ ಹೋಗಿ, ಅವಳಿಗೆ ವೈಧವ್ಯ ಪ್ರಾಪ್ತಿಯಗುತ್ತದೆ. ಇದರಿಂದ ಹರಿಯ ಸಂಕಲ್ಪ ಬದಲಿಸಲು ಯಾರಿಂದಾಲೂ ಸಾಧ್ಯವಿಲ್ಲ ಎನ್ನುವ ಸತ್ಯ ಅರ್ಥವಾಗುತ್ತದೆ.
ಅದನ್ನೇ ಶ್ರೀ ಪುರಂದರ ದಾಸರು “ಹರಿ ಚಿತ್ತ ಸತ್ಯ, ನರ ಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು ” ಎಂದಿದ್ದಾರೆ. ಹರಿಯು ಸರ್ವ ಸ್ವತಂತ್ರ, ಪ್ರಾಕೃತ ಬಂಧವಿಲ್ಲದವನು, ಸರ್ವ ಶಕ್ತ, ಸರ್ವ ಸಮರ್ಥ ಆತನ ಸಂಕಲ್ಪವೇ ಸಂಕಲ್ಪ.
🙏ಹರೇ ಶ್ರೀ ಶ್ರೀನಿವಾಸ 🙏
ಭಾಗವತ ಪ್ರವಚನ ಸಮಯದಲ್ಲಿ ಕೇಳಿದ್ದು.
ಶ್ರೀ ಸುವಿದ್ಯೇಂದ್ರ ತೀರ್ಥರ ಪ್ರವಚನ ಸಂದರ್ಭ.