ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜೆಗಳಿಗೆ ಸರಕಾರದಿಂದ ಬರುವ ಉಚಿತ ಆಹಾರ ಸಾಮಾಗ್ರಿ – ಪ್ರಜಾಕೀಯಾ

PDS- PUBLIC DISTRIBUTION SYSTEM – RATION.

BPL ( Below Poverty Line) ನ ಪ್ರಜೆಗಳಿಗೆ ಸರಕಾರದಿಂದ ಬರುವ ಉಚಿತ ಆಹಾರ ಸಾಮಾಗ್ರಿ.

ಇದರಲ್ಲಿ ಸುಮಾರು ₹ 1100 ಬೆಲೆಯ ಆಹಾರ ಸಾಮಾಗ್ರಿ ಪ್ರತೀ BPL ಕುಟುಂಬಕ್ಕೆ ಸರ್ಕಾರ ಪ್ರತೀ ತಿಂಗಳು ಒದಗಿಸುವುದು.

ಇಲ್ಲಿ ₹ 1100 ಬೆಲೆಯ ಆಹಾರ ಸಾಮಾಗ್ರಿ ಸರಬರಾಜು ಮಾಡಲು ಸರ್ಕಾರ ₹ 2000 ರಷ್ಟು ಖರ್ಚು ಮಾಡುವುದು.

ಖರೀದಿ, ಸಾರಿಗೆ ಸಿಬ್ಬಂದಿ, ಗೋಡೌನ್ ಹಾಗು ಅಲ್ಲಿಯ ಸಿಬ್ಬಂದಿ, ಪುನಹ ಸಾರಿಗೆ – ಗೋಡೌನ್ ನಿಂದ ರೇಷನ್ ಅಂಗಡಿಗೆ, ರೇಷನ್ ಅಂಗಡಿಯ ಮಾಲಿಕನ ಕಮಿಷನ್, ಹಾಗೆ ಗೋಡೌನ್ ಗಳಲ್ಲಿ ಪ್ರತೀ ವರ್ಷ ಇಲಿ- ಹೆಗ್ಗಣಗಳು ತಿಂದು ಹೋಗುವುದು, ಹಾಳಾಗುವ ಆಹಾರ ಸಾಮಾಗ್ರಿ ಹಾಗು ಈ ಪ್ರಕ್ರೀಯೆಯಲ್ಲಿ ಎಲ್ಲಾ ಹಂತದಲ್ಲಿ ನಡೆಯುವ ಭ್ರಷ್ಟಾಚಾರ ಹೀಗೆ ಸುಮಾರು ₹ 2000 ಪ್ರತೀ BPL ಕುಟುಂಬದ ಮೇಲೆ ಖರ್ಚು ಮಾಡುವುದು.

  PRAJAAKEEYA (Uttama Prajaakeeya Party) official social media accounts

ಅಷ್ಟೆ ಅಲ್ಲ, ಕಳೆದ ವರ್ಷದಿಂದ 26,000 ರೇಷನ್ ಅಂಗಡಿಗಳಿಗೆ ಬೆರಳಚ್ಚು ( Finger Print) ಯಂತ್ರಕ್ಕೆ ಸುಮಾರು 100 ಕೋಟಿ ( ಪ್ರತೀ ಯಂತ್ರಕ್ಕೆ₹ 46,500) ಖರ್ಚು. ಇದು ಬೇರೆ ಖರ್ಚು.

ಇದೆಲ್ಲಾ ಖರ್ಚು ಮಾಡಿದ ಮೇಲೂ ಗುಣಮಟ್ಟದ ಧಾನ್ಯಗಳು ವಿಸ್ತರಣೆಯಾಗದೆ, ಲಾಭ ಪಡೆಯುವ ಹೆಚ್ಚಿನ ಕುಟುಂಬಗಳು ಇದನ್ನು ಅಂಗಡಿಗೆ ಮಾರಿ, ಅವರಿಗೆ ಬೇಕಾದ್ದನ್ನು ಖರೀದಿಸುತ್ತಿರುವರು.

ಇಷ್ಟೆಲ್ಲಾ ತಿಳಿದಿದ್ದರೂ, ನಮ್ಮ ರಾಜ್ಯ ಸರ್ಕಾರ ” ಕುರುಡರ ರಾಜ್ಯದಲ್ಲಿ ಕಾಣ್ಯ ರಾಜ” ಎಂಬಂತೆ ಇದೆ.

ಇದಕ್ಕೆ ಪರಿಹಾರ ಹಾಗು ಪ್ರಜೆಗಳಿಗೆ ನಿಜವಾಗಿ ಉಪಯೋಗವಾಗ ಬೇಕಾದರೆ,

ಇದಕ್ಕೆ ತಗಲುವ ಖರ್ಚಿನಲ್ಲಿ ₹ 1500 ಹಾಗು ಆಹಾರ ಸಾಮಾಗ್ರಿಯ ಬೆಲೆ ₹ 1100 ನ್ನು ಕೂಡೀಸಿ ₹ 2600 ನ್ನು ಬಿಪಿಎಲ್ ಕುಟುಂಬದ ಯಜಮಾನಿಯ ಬ್ಯಾಂಕ್ ಅಕೌಂಟ್ ಗೆ ಪ್ರತೀ ತಿಂಗಳು ಟ್ರಾನ್ಸಫರ್ ಮಾಡಿದರೆ, ಅವರಿಗೆ ಬೇಕಾದ ಆಹಾರ ಸಾಮಾಗ್ರಿ ಮಾರ್ಕೇಟಿನಿಂದ ಅವರೆ ಖರೀದಿಸುವರು. ಇದು ಖಂಡಿತಾ ಕುಟುಂಬದ ಯಜಮಾನನ ಅಕೌಂಟ್ ಗೆ ಹೋಗಬಾರದು. ಕೇವಲ ಹೆಂಡತಿ ಇಲ್ಲದವನಿಗೆ ಮಾತ್ರ ಹೋಗಬೇಕು.

  ಭಾರತದ ಚುನಾವಣಾ ಆಯೋಗ - ಪ್ರಜಾಕೀಯ

ಇದರಲ್ಲಿರುವ ಭ್ರಷ್ಟಾಚಾರವೂ ಮಾಯವಾಗುವುದು.

ಸುಮಾರು 60,00,000( 60 ಲಕ್ಷ) ಬಿಪಿಎಲ್ ಕುಟುಂಬ ಇದ್ದರೆ ರಾಜ್ಯ ಸರ್ಕಾರಕ್ಕೆ ಹೊರೆ.

ಈಗ- 60,00,000x ₹1100= ₹ 660,0000000 (660 ಕೋಟಿ)

660 X 12 Month =₹ 7,920 ಕೋಟಿ ವರ್ಷಕ್ಕೆ.
ಇದರಲ್ಲಿ 75% ಕೇಂದ್ರ ಸರ್ಕಾರ ಕೊಡುವುದು.

ಅಂದರೆ ರಾಜ್ಯ ಸರ್ಕಾರಕ್ಕೆ ಕೇವಲ ₹ 1980 ಕೋಟಿ.

ಹಾಗು ಬೇರೆ ಖರ್ಚು
60,00,000X 2000= 1200, 0000000 ( 1200 ಕೋಟಿ).
1200X 12 Month = 12,000 ಕೋಟಿ.

ಒಟ್ಟು ರಾಜ್ಯ ಸರ್ಕಾರಕ್ಕೆ ಆಗುವ ಖರ್ಚು = ₹ 13,980 ಕೋಟಿ ವಾರ್ಷಿಕ.

ಅದರ ಬದಲು ಬಿಪಿಎಲ್ ಕುಟುಂಬಕ್ಕೆ ತಿಂಗಳಿಗೆ ₹ 2500 ನಗದು ಕೊಡುವುದಾದರೆ.

60,00,000 X 2500= ₹ 1500,0000000 ( 1500 ಕೋಟಿ)
1500 X 12 Month = 18,000 ಕೋಟಿ.
ಇದರಲ್ಲಿ ಕೇಂದ್ರ ಸರ್ಕಾರದ ಪಾಲು ₹ 7920 ಕೋಟಿ.
18,000- 7920 = 10, 080 ಕೋಟಿ.

  ನಾಗೋದ್ಭವ ಮತ್ತು ಗರುಡೋದ್ಭವ (ನಾಗರ ಪಂಚಮಿ)

ಸರ್ಕಾರಕ್ಕೆ ಒಟ್ಟು ವಾರ್ಷಿಕ ಖರ್ಚು = 10,080 ಕೋಟಿ.

ಇದರಲ್ಲಿ ರಾಜ್ಯ ಸರ್ಕಾರಕ್ಕೆ ಸುಮಾರು 3,900 ಕೋಟಿ ಸೇವಿಂಗ್ಸ್ ಆಗುವುದು.

ಹಾಗೆ ಬಿಪಿಎಲ್ ಕುಟುಂಬಗಳಿಗೆ 2.5 ಪಟ್ಟು ಲಾಭ ಸಿಗುವುದು.ಈಗಾಗಲೆ ಜನ್ ಧನ್ ಖಾತೆಗೆ ಇರುವುದರಿಂದ ಯಾವ ರೀತಿಯ ತೊಂದರೆ ಇಲ್ಲ.

ಆದರೆ ರಾಜಕೀಯಾದ ಸರ್ಕಾರಗಳು ಇದನ್ನು ಮಾಡುವುದಿಲ್ಲ. ಹಣ ಮಾಡಲು ಅವಕಾಶವಿಲ್ಲವಲ್ಲ ?

ಎದ್ದೇಳಿ ಪ್ರಜೆಗಳೇ, ಇದು ಪ್ರಜಾಕೀಯಾದಿಂದ ಸಾಧ್ಯ.

ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ (UPP).

Leave a Reply

Your email address will not be published. Required fields are marked *

Translate »