ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸ್ವಚ್ಚ ಕರ್ನಾಟಕ – ಕಸ ವಿಲೆವಾರಿ – ಪ್ರಜಾಕೀಯ

ಕಸ ವಿಲೆವಾರಿ -WASTE MANAGEMENT.

ಒಂದು ದಿನ ಪೊರಕೆ ಹಿಡಿದು ಯಾವುದೇ ರಾಜಕಾರಣಿ ಅಥವಾ ಸಮಾಜ ಸೇವಾ ಸಂಘ, ಕೆಮರಾದ ಎದುರು ಪೋಸ್ ಮಾಡಿ, ಸಾವಿರಾರು ರುಪಾಯಿ ಪೇಪರ್ ಜಾಹಿರಾತುಗಳಿಗೆ ಖರ್ಚು ಮಾಡಿ ಸ್ವಚ್ಚ ಭಾರತ ಎಂದು ಕಂಠ ಪೂರ್ತಿ ಒದರಿದರೆ ಸ್ವಚ್ಚ ಭಾರತ ಆಗುವುದಿಲ್ಲ.

ಈ ಕೆಳಗೆ ನಾನು ಸ್ವಚ್ಚ ಕರ್ನಾಟಕದ ನನ್ನ ಪ್ರೋಜೆಕ್ಟನ್ನು ಸಂಕ್ಷಿಪ್ತವಾಗಿ ವಿವರಿಸುವೆನು.

ಈಗ ಇರುವ ಸರ್ಕಾರಗಳಿಗೆ ಇದು ಸರಿಯೆಂದು ಕಂಡು ಬಂದಲ್ಲಿ ಸಂಪರ್ಕಿಸ ಬಹುದು.

ಇದು ದೇಶದ ದೊಡ್ಡ ಸಮಸ್ಯೆ. ಇದರಿಂದ ಪರಿಸರ, ಕುಡಿಯುವ ನೀರು, ಗಾಳಿ, ಪ್ರಜೆಗಳ ಆರೋಗ್ಯ ಹಾಗು ರಾಜ್ಯದ ಇಮೇಜ್ ಎಲ್ಲವೂ ಹಾಳಾಗುತ್ತಿದೆ.

ಆದರೂ ಸರ್ಕಾರ ಹಾಗು ಸಂಬಂದ ಪಟ್ಟ ಅಧಿಕಾರಿಗಳು ಇನ್ನೂ ನಿಧ್ರಾವಸ್ಥೆಯಲ್ಲಿರುವರು. ಯಾಕೆಂದರೆ, ಅವರು ರಾಜ್ಯದ ಪೋಸ್ ಏರಿಯಾದಲ್ಲಿ ಏಯರ್ ಕಂಡಿಷನ್ ಮನೆಗಳಲ್ಲಿ ಮಲಗಿರುವರು.

ಈ ಕೆಲಸ ಗ್ರಾಮಪಂಚಾಯಿತಿ ಲೆವೆಲ್ ನಲ್ಲಿ ಆಗಲಾರದು. ಕಾರಣ, 2 X 5 ಕಿ.ಮಿ. ವ್ಯಾಪ್ತಿಯಲ್ಲಿ ಡಂಪಿಂಗ್ ಸ್ಥಳ ಮಾಡುವುದು ಕಷ್ಟ ಸಾಧ್ಯ ಹಾಗೂ, ಅದು ಜನರ ಮಧ್ಯೆ ಮಾಡ ಬೇಕಾಗುವುದು.

ಕಸ ವಿಲೆವಾರಿಗೆ ಬೇಕಾಗುವ ಸೌಕರ್ಯ ಹಾಗು ಸೌಲಭ್ಯಗಳು.

1. ಡಂಪಿಂಗ್ ಯಾರ್ಡ್. 0.5X0.5 Km. ಸಂಪೂರ್ಣ 6 ರಿಂದ 8 ಫೀಟ್ ಗೋಡೆಯನ್ನು ಸುತ್ತಲೂ ನಿರ್ಮಿಸಬೇಕು.

2. ಪ್ರತೀ 300 ಮೀಟರ್ಗೆ ಎರಡು ಡಬ್ಬ- ಒಂದು ಹಳದಿ ಬಣ್ಣದ ಡಬ್ಬ, ಇನ್ನೊಂದು ಕೆಂಪು ಬಣ್ಣದ ಡಬ್ಬ ಅಥವಾ ಆ ಬಣ್ಣದ ಮುಚ್ಚಳವಿರುವ ಡಬ್ಬ ಇಡೀ ಬೇಕು. ಎಲ್ಲೆಲ್ಲಿ ರಸ್ತೆ ಇರುವುದೋ, ಅಲ್ಲಿ ರಸ್ತೆಯ ಬದಿಯಲ್ಲಿ ಇಲ ಬೇಕು. ಅಂದರೆ ಜನರಿಗೆ 150ಮೀಟರ್ ನಡೆದು ಕಸದ ಡಬ್ಬಿಯಲ್ಲಿ ಹಾಕುವಂತಿರ ಬೇಕು. ಆಹಾರ ಹಾಗು ಒದ್ದೆ ಕಸವನ್ನು ಕೆಂಪು ಡಬ್ಬ ಹಾಗು ಪ್ಲಾಸ್ಟಿಕ್, ಮರ, ಪೇಪರ್, ಬಟ್ಟೆ, ಇತ್ಯಾದಿಗಳನ್ನು ಹಳದಿ ಡಬ್ಬಕ್ಕೆ ಹಾಕುವಂತೆ ಜನರಿಗೆ ತಿಳಿಸ ಬೇಕು.

  ಪ್ರಜಾಪ್ರಭುತ್ವ ವ್ಯವಸ್ಥೆ

ಕೆಂಪು ಡಬ್ಬದ ಕಸದಿಂದ ಗೊಬ್ಬರ ಮಾಡಬೇಕು ಹಾಗು ಹಳದಿ ಡಬ್ಬದ ಕಸ ರೀಸೈಕಲ್ ಮಾಡ ಬಹುದು.

ಡಂಪಿಂಗ್ ಯಾರ್ಡ್ನ ಹತ್ತಿರವೆ ರೀಸೈಕಲ್ ಫ್ಯಾಕ್ಟರಿಗಳಿಗೆ ಅವಕಾಶ ಮಾಡಿ ಕೊಡಬೇಕು.

ಮೇಲಿನ ಎರಡಕ್ಕೂ ಒಂದು ಸಣ್ಣ ಹಣ ತೆಗೆದು ಕೊಂಡರೆ, ಮೈಂಟೆನೆನ್ಸ್ನ ಖರ್ಚು ಸಿಗುವುದು. ಕೇವಲ ಸಂಬಳ ಕೊಡಬೇಕಾಗುವುದು.

3. ಪ್ರತಿ ಗ್ರಾಮ ಪಂಚಾಯಿತಿಗೆ 2 ರಂತೆ ಡಂಪಿಂಗ್ ಟ್ರಕ್ಕ್ಗಳು ಇರಬೇಕು. ಅಂದರೆ ಸುಮಾರು 50- 60 ಟ್ರಕ್ಕ್ಗಳು ಹಾಗು ಬೇರೆ ಬೇಕಾದ ಉಪಕರಣಗಳು.

4. ಈ ಟ್ರಕ್ಕ್ಗಳನ್ನು ಪಾರ್ಕ್ ಮಾಡಲು ಹಾಗು ಅದಕ್ಕೆ ಸಂಬಂದ ಪಟ್ಟ ವರ್ಕ್ ಶಾಪ್ ಕೂಡಾ ಅದರಲ್ಲಿಯೆ ಇರಬೇಕು.
ಅದರಲ್ಲಿಯೆ ಕೆಲಸದವರಿಗೆ ಆಫೀಸ್ ಹಾಗು ಸಂಬಂದ ಪಟ್ಟ ಆಫೀಸ್, ಟ್ರೈನಿಂಗ್ ರೂಮ್, ಚೆಂಜ್ ಓವರ್ ರೂಮು, ಸೌಚಾಲಯ,ಇತ್ಯಾದಿಗಳು ಇರಬೇಕು.

  ಗ್ರಾಮಸಭೆಯ ಕಾರ್ಯಗಳು - ಪ್ರಜಾಕೀಯ

5. ಇದಕ್ಕೆ ಬೇಕಾದ ಕೆಲಸದವರ (Manpower)ನ್ನು ಸರಿಯಾದ ಸೇಫ್ಟಿ ಟ್ರೈನಿಂಗ್ ಕೊಟ್ಟು ನೇಮಿಸಿ ಬೇಕು.

1. Manager-1
2. Supervisor- 4
3. Drivers – 50-60
4. Every Truck 3 Labour’s with Safety Gears.
5. Sorter – Dumping Yard.- 6 with full safety Gears.

( ಯಾರೂ ಕಸವನ್ನು ಡೈರೆಕ್ಟ್ ಕೈಯಿಂದ ಮುಟ್ಟ ಬಾರದು)- ಅವರಿಗೂ ಆತ್ಮಸಮ್ಮಾನದಿಂದ ಕೆಲಸ ಮಾಡಲು ಅವಕಾಶ ಮಾಡಿ ಕೊಡಬೇಕು. ಕೆಲಸ ಯಾವುದೂ ಸಣ್ಣ- ದೊಡ್ಡದೆಂಬುದು ಇಲ್ಲ. ಎಲ್ಲರೂ ಸಂಬಳಕ್ಕಾಗಿಯೆ ಕೆಲಸ ಮಾಡುವರು.

Note: – ಇವುಗಳಲ್ಲಿ ಮೊದಲ 4 ಐಟಮ್ ಗಳು ಕೇವಲ 10 ವರ್ಷಕ್ಕೊಮ್ಮೆ ಹೂಡಿಕೆ ( Invest) ಮಾಡುವ ವಸ್ತುಗಳು. ಇದು One Time Expenditure.

5ನೆಯದ್ದು ಪ್ರತೀ ತಿಂಗಳು ಇರುವ ಖರ್ಚು( ಸಂಬಳ) ಹಾಗು ಮೈಂಟೈನೆನ್ಸ್ ಖರ್ಚುಗಳು.

ಆದ್ದರಿಂದ, ಪ್ರತೀ 238 ತಾಲೂಕಿನಲ್ಲೂ ಈ ವ್ಯವಸ್ಥೆ ಮಾಡಿದರೆ ನಿಜವಾದ ಸ್ವಚ್ಚ ರಾಜ್ಯ ಹಾಗು ಸ್ವಚ್ಚ ಭಾರತ ವಾಗುವುದು.

ಬೇಕಾದರೆ ಇದಕ್ಕಾಗಿ ಒಂದು “Waste Management Corporation” ಮಾಡಿ ಖಾಸಾಗಿ ಕಂಪೆನಿಗಳೂ ಇದರಲ್ಲಿ ಹಣ ಹಾಕಬಹುದು.

ಕಚ್ಚಾ ಸಾಮಾಗ್ರಿ ಕಾಲ ಹತ್ತಿರವೇ ಸಿಗುವಾಗ, ರೀಸೈಕಲ್ ಕಂಪೆನಿಗಳು ಖಂಡಿತಾ ಬರುವುದು. ಅವರಿಗೆ ಬೇಕಾದ್ದದನ್ನು ಕೊಡುವುದು ಸರ್ಕಾರಿ ಅಥವಾ ಕಾರ್ಪೋರೇಷನ್ ನ ಕೆಲಸ.

  ಧರ್ಮ ಹಾಗು ಆಡಳಿತ - ಪ್ರಜಾಕೀಯ

ಇದರಿಂದ ಡೈರೆಕ್ಟ್ ಆಗಿ ಸುಮಾರು 50,000 ಸರ್ಕಾರಿ ಉದ್ಯೋಗ ಹಾಗು 50,000 ಖಾಸಾಗಿ ಉದ್ಯೋಗ ನಿರ್ಮಾಣ ಕರ್ನಾಟಕದಲ್ಲಿ ಆಗುವುದು.

ವರ್ಷಕ್ಕೆ 5 ರಿಂದ 6 ಸಾವಿರ ಕೋಟಿ ಖರ್ಚು ಮಾಡಿ

1. ರಾಜ್ಯ ಸಂಪೂರ್ಣ ಸ್ವಚ್ಚ.
2. 1,00,000 ಉದ್ಯೋಗ ನಿರ್ಮಾಣ.
3. ಪ್ರಜೆಗಳ ಕಸ ವಿಲೆವಾರಿ ಟೆನ್ಷನ್ ದೂರ.
4. ಮಾದರಿ ರಾಜ್ಯ.

ಅಷ್ಟೆ ಅಲ್ಲ, ಇದಕ್ಕೆ ಕೇಂದ್ರ ಸರಕಾರದ ಸ್ವಚ್ಚ ಭಾರತ ಅಭಿಮಾನದಿಂದ 50% , Fund ಕೂಡಾ ಸಿಗಬಹುದು.

ಇದು ಕೇವಲ 1ರಿಂದ 2 % ರಾಜ್ಯ ವಾರ್ಷಿಕ ಬಜೆಟ್ ಅಂಶ ವಾಗಿರುವುದು.

ಡೆವಲಪ್ಮೆಂಟ್ ದೇಶಗಳಲ್ಲಿ ಇದಕ್ಕೆ 10% ಮೇಲೆ ಖರ್ಚು ಮಾಡುತ್ತಾರೆ, ಯಾಕೆಂದರೆ ಅವರ Infrastructure ಗಳು 50 ವರ್ಷ ಬಾಳುವುದು. ನಮ್ಮದು ಒಂದು ವರ್ಷವೂ ಬರುವುದಿಲ್ಲ.

ಅವರು ಪೋಲಿಸ್ಗೆ ಎಷ್ಟು ಖರ್ಚು ಮಾಡುವರೋ, ಅಷ್ಟೇ ಕಸ ವಿಲೆವಾರಿಗೆ ಖರ್ಚು ಮಾಡುವರು. ಎರಡೂ ಡಿಪಾರ್ಟ್ಮೆಂಟ್ ಗಳು ಸ್ವಚ್ಚತಾ ಅಭಿಯಾನ ಮಾಡುತ್ತದೆ.

ಒಂದು ಕ್ರಿಮಿನಲ್ಸ್, ಕಳ್ಳ-ಕಾಕರನ್ನು, ಇನ್ನೊಂದು ಕಸವನ್ನು.

ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ.

Leave a Reply

Your email address will not be published. Required fields are marked *

Translate »