ಅಬಿವ್ರಧ್ಧಿ ಹೊಂದಿದ ದೇಶ- Developed Nation.
ಈ ದೇಶಗಳಲ್ಲಿ ಪ್ರಜೆಗಳ ಪಾಡು ಏನು ಎಂದು ವಿಮರ್ಶೆ ಮಾಡುವ.
1. ಇಲ್ಲಿ ಒಬ್ಬ Unskilled Workerಗೆ ಕೂಡಾ ಒಬ್ಬ ಡಾಕ್ಟರ್- ಇಂಜಿನಿಯರ್ಗೆ ಸಿಗುವ ಸಂಬಳದ 50- 60 % ಸಂಬಳ ಸಿಗುವುದು. ಅಷ್ಟೆ ಅಲ್ಲ, ಈ ಸಂಬಳದಿಂದ ಅವನ ಮುಖ್ಯ ಅವಶ್ಯಕತೆಯಾದ ಮನೆ ಬಾಡಿಗೆ, ಮನೆಯ ಎಲ್ಲಾ ಖರ್ಚು, ವಿಧ್ಯಾಭ್ಯಾಸ- ಆರೋಗ್ಯ ಹಾಗು ಅವನ ಸ್ವಂತ ಅವಶ್ಯಕತೆಗಳು ಪೂರೈಸುವಷ್ಟು ಇರುವುದು.
2. ಎಲ್ಲಾ ಪ್ರಜೆಯ ಹತ್ತಿರ ಬ್ಯಾಂಕ್ ಅಕೌಂಟ್, ಕ್ರೇಡಿಟ್ ಕಾರ್ಡ್ಗಳು ಇರುವುದು. ಅದರಲ್ಲೂ ಕ್ರೆಡಿಟ್ ಕಾರ್ಡ್ ಗಳು ಕನೀಷ್ಟ 2 ರಿಂದ 3 ಇರುವುದು.
3. ಇಲ್ಲಿ ಎಲ್ಲಾ ಪ್ರಜೆಗಳಿಗೆ, ಅವರ ಸಂಬಳದ ಮೇಲೆ ಸಾಲವೂ ಸಿಗುವುದು. ಆದ್ದರಿಂದ ಭ್ಯಾಂಕ್ಗಳ ಬಂಡವಾಳವೂ ಪ್ರಜೆಗಳ ಕೈಯಲ್ಲಿಯೇ ಇರುವುದು. ನಾಳೆ ಬ್ಯಾಂಕ್ಗಳಿಗೆ ತೊಂದರೆಯಾದರೆ, ಏನೂ ನಿರಾಶೆ ಇಲ್ಲ. ಯಾಕೆಂದರೆ ಗರೀಷ್ಟ ಹಣ ಪ್ರಜೆಗಳಲ್ಲಿ ಹಾಗು ಅವರಲ್ಲಿರುವ ಮನೆ- ಕಟ್ಟಡದಲ್ಲಿರುವುದು. ಪ್ರಜೆಗಳೆಲ್ಲರೂ ಅನುಭವಿಸಿರುತ್ತಾರೆ. ಆದ್ದರಿಂದ ಹೌಸಿಂಗ್ ಲೋನ್ಗಳಿಗೆ ಎಲ್ಲಾ ಬ್ಯಾಂಕ್ಗಳು ಪ್ರಾಮುಖ್ಯತೆ ಕೊಡುತ್ತದೆ. ಇಲ್ಲಿ ಕೋಟಿ- ಕೋಟಿ ಮುಳುಗಿಸಿ ಬೇರೆ ದೇಶಕ್ಕೆ ಓಡಿ ಹೋಗುವ ಬಿಸಿನೆಸ್ ಕುಲೆವಾರಿಗೆ ಪ್ರಾಮುಖ್ಯತೆ ಇಲ್ಲ.
4. ಇಲ್ಲಿ ಕಾನೂನು ವ್ಯವಸ್ಥೆ ತುಂಬಹ ಕಠಿಣವಾಗಿ ಇರುವುದು. ಕಾನೂನಿಗೆ ಪ್ರಥಮ ಆಧ್ಯಾತೆ, ಸರ್ಕಾರದಿಂದಲೂ ಹಾಗು ಪ್ರಜೆಗಳಿಂದಲೂ.
5. ಪ್ರತೀ ಸಾರ್ವಜನಿಕ ವ್ಯವಸ್ಥೆಯನ್ನು ಮುಂದಿನ 25 -50 ವರ್ಷಕ್ಕೆ ಬೇಕಾಗುವಂತೆ ಈಗಾಗಲೆ ಮಾಡಲಾಗುವುದು. ಮುಂದಿನ 25-50 ವರ್ಷ ಕೇವಲ ಅದನ್ನು ಮೈಂಟೈನ್ ಮಾಡುವ ಸಣ್ಣ ಖರ್ಚು ಇರುವುದು. ಇವುಗಳನ್ನು ಮಾಡುವಾಗ ಮುಂದಿನ 50 ವರ್ಷದ ಜನಸಂಖ್ಯೆಯ ಅವಶ್ಯಕತೆಯಂತೆ ಮಾಡಲಾಗುವುದು. ನಮ್ಮಲ್ಲಿ ಈ ವರ್ಷಕ್ಕೆ ಬೇಕಾದಷ್ಟು ಮಾಡುವುದಿಲ್ಲ. ಇದು ನಮ್ಮ ದುರಾಧ್ರಷ್ಟ.
6. ಇಲ್ಲಿಯ ವಾರ್ಷಿಕ ಬಜೆಟ್ ಪ್ರಜೆಗಳ ಅವಶ್ಯಕತೆಯಾದ ನೀರು, ವಿಧ್ಯುತ್, ವಿಧ್ಯಾಭ್ಯಾಸ, ಆರೋಗ್ಯ, ತ್ಯಾಜ್ಯ ವಿಲೆವಾರಿ, ಸಾರಿಗೆ, ಸಾರ್ವಜನಿಕ ವ್ಯವಸ್ಥೆಗಳಿಗೆ ವಿನಿಯೋಗಿಸಲಾಗುವುದು.
ಒಂದು ಟೌನ್ನ ಮುನ್ಸಿಪಾಲಿಟಿಯ 32% ಬಜೆಟ್ ತ್ಯಾಜ್ಯ ವಿಲೆವಾರಿಗೆ ಹಾಗು 21% ಸಾರ್ವಜನಿಕ ಸೌಲಭ್ಯವನ್ನು ನೋಡಿ ಕೊಳ್ಳಲು ಉಪಯೋಗಿಸಲಾಗುವುದೆಂದು ತಿಳಿಯಲು ಆಶ್ಚರ್ಯವಾಗ ಬಹುದು. ಅಬಿವ್ರದ್ದಿ ಹೊಂದಿದ ಹಾಗು ಪ್ರಜಾಪ್ರಭುತ್ವವಿರುವ ದೇಶಗಳು ಜನರ ಅವಶ್ಯಕತೆಗಳಿಗೆ ಎಷ್ಷು ಬೆಲೆ ಕೊಡುವುದೆಂದು.
7. ಆದ್ದರಿಂದ ಪ್ರಜೆಗಳ ವ್ಯವಹಾರದಲ್ಲಿಯೂ ಅದೇ ಕಂಡು ಬರುತ್ತದೆ. ಒಬ್ಬ ಪ್ರಜೆ ತನ್ನಿಂದ ಬೇರೆಯವರಿಗೆ ಯಾವ ರೀತಿಯ ತೊಂದರೆಯಾಗದಂತೆ ನೋಡಿ ಕೊಳ್ಳುವುದೇ ಅವನ ಪ್ರಮುಖ ಆಧ್ಯಾತೆಯಾಗುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸುವುದು. ಕಠೀಣವಾದ ಕಾನೂನು ಇದಕ್ಕೆ ಪೂರಕವಾಗುವುದು. ಇಂಗ್ಲೀಷ್ನಲ್ಲಿ ಇದಕ್ಕೆ ” Civic Sense” ಎಂದು ಕರೆಯುತ್ತಾರೆ.
8. ಕಾನೂನು ಕಠೀಣವಾಗಿರುವುದರಿಂದ ಇಲ್ಲಿ ಇನ್ಸುರೆನ್ಸ್ ಬಿಸಿನೆಸ್ ಬ್ರಹತ್ ರೀತಿಯಲ್ಲಿ ಬೆಳೆದಿರುವುದು. ಸಾಕು ನಾಯಿಗೂ ಇನ್ಸುರೆನ್ಸ್ ಮಾಡ ಬಹುದು. ಇಲ್ಲಿ ಎಲ್ಲಾ ತರಹದ ವಿಮಾ ಯೋಜನೆ ಇರುವುದು ಹಾಗು ಪ್ರಜೆಗಳು ಇದರ ವಿಷಯ ಅತೀ ಸೂಕ್ಷ್ಮವಾಗಿ ಆಲೋಚಿಸುತ್ತಾರೆ.
9. ಇಲ್ಲಿ ಧರ್ಮ, ಜಾತಿ, ಪಂಗಡ, ಪ್ರಾಂತ್ಯ, ನಂಬಿಕೆ, ಸಂಸ್ಕ್ರತಿ, ಉಡುಪು- ತೊಡುಗೆ, ಹಣವಂತ, ಬಡವ, ಸಣ್ಣ ಕೆಲಸ- ದೊಡ್ಡ ಕೆಲಸ, ಎಲ್ಲರಿಗೂ ಸ್ವಾಇಚ್ಚೆಯಿಂದ ಬದುಕಲು ಯಾರ ಅಡ್ಡಿ- ಅಭ್ಯಂತರವಿಲ್ಲ. ಕೇವಲ ಬೇರೆಯವರಿಗೆ ತೊಂದರೆ ಕೊಡಬೇಡ. ಅದು ಶಬ್ದ ಮಾಲಿನ್ಯ ಹಾಗು ವಸ್ತು ಮಾಲಿನ್ಯವಾಗ ಬಾರದು.
10. ಇಲ್ಲಿ ಸರ್ಕಾರಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ಮಾಡುವುದರಿಂದ ಹಾಗು ಕಠಿಣ ಕಾನೂನು ಇರುವುದರಿಂದ ಪ್ರಜೆಗಳು ಅಷ್ಟೊಂದು ರಾಜಕೀಯಾದ ವಿಷಯ ಮಾತನಾಡುವುದಿಲ್ಲ. ಫ್ರ್ಂಡ್ಸ್ ಸರ್ಕಲ್ ನಲ್ಲಿಯೂ ಈ ವಿಷಯ ವಿಮರ್ಶೆಯಾಗುವುದಿಲ್ಲ.
ಇದು ನನ್ನ ವಿಶ್ಲೇಷಣೆ.
ನಾವು ಎಲ್ಲಿ ಎಡವಿರುವೆವೆಂದು ಇದರಿಂದ ನಮಗೆ ಅರಿವಾಗುವುದು.
ಭಾರತದಲ್ಲಿ ಏನೂ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಎಲ್ಲರೂ ರಾಜಕೀಯಾದ ವಿಷಯ ಮಾತನಾಡುತ್ತಾರೆ ಹಾಗು ಪ್ರಶ್ನೆ ಮಾಡುತ್ತಾರೆ.