ಪ್ರದೋಷ ವ್ರತವು ಸೋಮವಾರದಂದು ಬಂದಾಗ ಅದನ್ನು ಸೋಮ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ..!! 🌻🌻 🌻 ಸೋಮ ಪ್ರದೋಷ 🌻🌻
🌷ಪ್ರದೋಷ ವ್ರತವು ಸೋಮವಾರದಂದು ಬಂದಾಗ ಅದನ್ನು ಸೋಮ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಪ್ರತಿ ತಿಂಗಳ ತ್ರಯೋದಶಿಯಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ವರ್ಷದ ಪ್ರದೋಷ ವ್ರತವು ಸೋಮವಾರದಂದು ಬರುತ್ತದೆ, ಆದ್ದರಿಂದ ಇದನ್ನು ಸೋಮ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ.
🌷ಸೋಮವಾರ ಮಹಾದೇವನಿಗೆ ಸಮರ್ಪಿಸಲಾಗಿದೆ. ಸೋಮವಾರದಂದು ಮಹಾದೇವನನ್ನು ಪೂಜಿಸುವುದರಿಂದ ನಿಮ್ಮ ಜೀವನದಲ್ಲಿನ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಮಹಾದೇವನನ್ನು ದೇವರ ದೇವರು ಎಂದು ಕರೆಯಲಾಗುತ್ತದೆ. ಈ ವರ್ಷದ ಸೋಮ ಪ್ರದೋಷ ವ್ರತ ಯಾವಾಗ ಮತ್ತು ಸೋಮ ಪ್ರದೋಷ ವ್ರತದಲ್ಲಿ ಮಹಾದೇವನನ್ನು ಹೇಗೆ ಮತ್ತು ಯಾವ ಶುಭ ಮುಹೂರ್ತದಲ್ಲಿ ಪೂಜಿಸಬೇಕು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.🌷
ಇದು ಶಿವನಿಗೆ ಸಂಬಂಧ ಪಟ್ಟ ಆಚರಣೆ ಹಾಗೂ ಇದು 3 ಘಂಟೆಗಳ ಕಾಲ ಅಂದರೆ , ಒಂದೂವರೆ ಘಂಟೆ ಕಾಲ ಸೂರ್ಯಾಸ್ತದ ಮುನ್ನ ಹಾಗೂ ಒಂದೂವರೆ ಘಂಟೆ ಕಾಲ ಸೂರ್ಯಾಸ್ತದ ನಂತರ ಶಿವನನ್ನು ಪ್ರಾರ್ಥಿಸುವುದಕ್ಕೆ ಅತ್ಯುತ್ತಮ ಸಮಯ ಎಂದು ಸೂಚಿಸುತ್ತದೆ.ಈ ಸಮಯದಲ್ಲಿ ಮಾಡುವ ಆರಾಧನೆಯನ್ನು ’ಪ್ರದೋಷ ವ್ರತ’ ಎನ್ನುತ್ತಾರೆ. ದಿನಗಳ 13 ನೆಯ ದಿನ) ಕೊನೆಯನ್ನು ಸೇರಿದಾಗ, ಆ ಸಮಯವನ್ನು ’ಪ್ರದೋಷ’ ಎನ್ನುತ್ತಾರೆ. ಪ್ರದೋಷದ ಸಮಯದಲ್ಲಿ ನಂದಿಯನ್ನು ಶಿವನ ದೇವಸ್ಥಾನಗಳಲ್ಲಿ ಪೂಜಿಸುತ್ತಾರೆ. ಶಿವ ಹಾಗೂ ಪಾರ್ವತಿಯು ನಂದಿಯ ಮೇಲೆ ಕುಳಿತಿರುವ ಉತ್ಸವ ಮೂರ್ತಿಯನ್ನು ದೇವಸ್ಥಾನದ ಆವರಣದಲ್ಲೇ ಮೆರವಣಿಗೆ ಮಾಡಲಾಗುತ್ತದೆ.🌷
ದೇವಾನು ದೇವತೆಗಳು ತಮ್ಮನ್ನು ರಾಕ್ಷಸರಿಂದ ಕಾಪಾಡಲೆಂದು ಶಿವನನ್ನುಮೊರೆ ಹೋಗುತ್ತಾರೆ, “ಪ್ರದೋಷ” ಅಂದರೆ ಶಿವನು ಪ್ರಸನ್ನನಾಗಿರುವ ಸಮಯ ಅಂತ ಯೋಚಿಸುತ್ತಾರೆ. ಕೈಲಾಸದ ಸುತ್ತ ಮುತ್ತಲೂ ತಿರುಗಿದ ಮೇಲೆ ತ್ರಯೋದಶಿಯ ಸಂಜೆ ನಂದಿಯಿಂದ ಶಿವನನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ. ಶಿವನು ಅಸುರರಿಂದ ದೇವಾನು ದೇವತೆಗಳನ್ನು ಕಾಪಾಡುತ್ತಾನೆ,ಎಂಬ ನಂಬಿಕೆ.ಆಗಿನಿಂದ ಶಿವನ ಜೊತೆ ನಂದಿಯನ್ನು ತ್ರಯೋದಶಿಯಂದ ಪ್ರದೋಷದ ಸಮಯದಲ್ಲಿ ಪೂಜಿಸುವ ಆಚರಣೆ ಪ್ರಾರಂಭವಾಯಿತು.
🌷ಪ್ರದೋಷ ಪೂಜೆ ಮತ್ತು ಅದರ ಲಾಭಗಳು;ಪ್ರದೋಷ ಎಂದರೆ – ಪಾಪಗಳಿಂದ ಮುಕ್ತಿ ಎಂದರ್ಥ.ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವು ಉಕ್ಕಿ ಬಂದಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಆ ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ. ಸಂಜೆ ನಾಲ್ಕು ಮೂವತ್ತರಿಂದ ಏಳೂವರೆಯವರೆಗೆ ಈ ಕಾಲ ಇರುತ್ತದೆ. ಸಾಮಾನ್ಯವಾಗಿ ಧ್ಯಾನದಿಂದ ಶಿವ ಎಚ್ಚರಗೊಂಡಾಗ ಕೋಪಗೊಳ್ಳುವುದು ಸಹಜ. ಆದರೆ ಲೋಕ ಕಲ್ಯಾಣಕ್ಕಾಗಿ ಎಚ್ಚರಗೊಂಡ ಶಿವನು ಹಾಲಾಹಲವನ್ನು ಕುಡಿಯಲು ಸಂತೋಷದಿಂದ ಆಗಮಿಸುತ್ತಾನೆ. ಬರುವ ದಾರಿಯಲ್ಲಿ ನಂದಿಯ ಮೇಲೆ “ಆನಂದ ತಾಂಡವ” (ಸಂತೋಷಕ್ಕಾಗಿ ನೃತ್ಯ ಮಾಡುವ ವಿಧಾನ. ರುದ್ರ ತಾಂಡವ ಎಂದರೆ ಪ್ರಪಂಚದ ಪ್ರಳಯಕ್ಕಾಗಿ ಮಾಡುವ ವಿಧಾನ) ಮಾಡಿಕೊಂಡು ಸ್ವಯಂ ಸಂತೋಷದಿಂದ ಆಗಮಿಸಿದ ಶಿವ ಹಾಲಾಹಲವನ್ನು ಕುಡಿದು ಮೂರ್ಛೆ ತಪ್ಪುತ್ತಾನೆ. ಅದು ಶ್ರಾವಣ ಮಾಸದ ಶನಿವಾರದ ದಿನವಾಗಿರುತ್ತದೆ. ಆಗ ಬ್ರಹ್ಮ ದೇವನು ಗಂಗೆಯನ್ನು ಕರೆದು ಶಿವನ ದೇಹಕ್ಕೆ ನೀರಿನಿಂದ ಮಂತ್ರ ಪಠಣೆ ಮಾಡುತ್ತಾ ಜಳಕ ಮಾಡಿಸುತ್ತಾನೆ. ಇದನ್ನೇ ರುದ್ರಾಭೀಷೇಕ ಎಂಬ ಹೆಸರಿನಿಂದ ಈಗ ಕರೆಯುತ್ತಾರೆ. ಅಂದಿನಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ ತ್ರಯೋದಶಿಯಂದು ಸಾಕ್ಷಾತ್ ದೇವತೆಗಳೇ ಪ್ರದೋಷ ಪೂಜೆಯನ್ನು ಮಾಡುತ್ತಾ ಬಂದರು.ಅಂದು ಉಪವಾಸವಿದ್ದು, ಶಿವನ ಪೂಜೆಯನ್ನು ಮಾಡಿದರೆ ಒಳ್ಳೆಯದು.ಅಂದಿನ ದಿನ ಪ್ರದೋಷ ಕಾಲದಲ್ಲಿ (ಸೂರ್ಯ ಮುಳುಗುವ ಹೊತ್ತಿನಲ್ಲಿ) ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹವನ್ನು ಗಳಿಸಬಹುದು.ಸೋಮವಾರ ಬರುವ ಪ್ರದೋಷ ಸೋಮ ಪ್ರದೋಷ ಎಂದು ಹೆಸರಾಗಿದೆ.
🌷ಸೋಮ ಪ್ರದೋಷದಂದು ಮಾಡಬಹುದಾದ ಪೂಜೆಗಳು;🔷️ಅರ್ಚನೆ, ಶಿವ ಅಷ್ಟೋತ್ತರದ ಸಮೇತ🔷️ಹಾಲಿನ ಅಭಿಷೇಕ🔷️ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ🔷️ಶಿವನ ದೇವಾಲಯದಲ್ಲಿ ದೀಪ ಹಚ್ಚುವಿಕೆ🔷️ಪ್ರದೋಷ ಅಭಿಷೇಕದ ವಸ್ತುಗಳು ಮತ್ತು ಅದರ ಫಲಗಳು🔷️ಪಂಚಗವ್ಯ – ಎಲ್ಲಾ ಪಾಪಗಳಿಂದ ಮುಕ್ತಿ🔷️ಪಂಚಾಮೃತ – ಸಂಪತ್ತನ್ನು ನೀಡುತ್ತದೆ🔷️ತುಪ್ಪ – ಮೋಕ್ಷವನ್ನು ನೀಡುತ್ತದೆ🔷️ಹಾಲು – ದೀರ್ಘಾಯುಷ್ಯ🔷️ಮೊಸರು – ಮಕ್ಕಳ ಭಾಗ್ಯ🔷️ಜೇನು ತುಪ್ಪ – ಉತ್ತಮ ಧ್ವನಿ🔷️ಅಕ್ಕಿ ಪುಡಿ – ಸಾಲಗಳಿಂದ ಮುಕ್ತಿ🔷️ಕಬ್ಬಿನ ರಸ – ಆರೋಗ್ಯ ಭಾಗ್ಯ, ಶತ್ರು ನಾಶ🔷️ನಿಂಬೆ ರಸ – ಸಾವಿನ ಭಯದಿಂದ ದೂರ ಮಾಡುತ್ತದೆ🔷️ಎಳೆನೀರು – ಸಂತೋಷ ಮತ್ತು ಜೀವನ ಆನಂದ🔷️ಬೇಯಿಸಿದ ಅನ್ನ – ಜೀವನವನ್ನು ಅದ್ಭುತ ಗೊಳಿಸುತ್ತದೆ.🔷️ಗಂಧೋದಕ – ಲಕ್ಷ್ಮೀ ಕಟಾಕ್ಷ🔷️ಸಕ್ಕರೆ – ಶತ್ರು ನಾಶ



