ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗೋವಿನ ಧಾರ್ಮಿಕ ವಿಚಾರಗಳು

‌ ‌‌‌ ‌ ‌ ‌
ಧಾರ್ಮಿಕ ವಿಚಾರಗಳು

  1. ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದರೆ, ಗೋವಿನ ಬಾಲದ ಒಂದು ಕೂದಲನ್ನು, ತಂದು ದೇವರ ಮನೆಯಲ್ಲಿಟ್ಟು, ಪೂಜಿಸುವುದರಿಂದ ಮನೆಯಲ್ಲಿ ಧನಾತ್ಮಕಶಕ್ತಿಗಳ ಪ್ರವೇಶ ಆಗುತ್ತದೆ, ಮತ್ತು ನಕರಾತ್ಮಕ ಶಕ್ತಿಗಳು ದೂರವಾಗುತ್ತವೆ.
  2. ಶುಕ್ರವಾರದಂದು ಸಗಣಿಯನ್ನು ಮನೆಗೆ ತಂದರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.
  3. ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಪ್ರತಿದಿನ ಪೂಜೆ ಮಾಡಿದ ನಂತರ ಹಸುವಿನ ಬೆರಣಿಯನ್ನು ಮನೆಯಒಳಭಾಗದಲ್ಲಿ, ಸುಡುವುದರಿಂದ ಆರೋಗ್ಯದ ಸಮಸ್ಯೆ ದೂರವಾಗುತ್ತದೆ. ಪ್ರತಿನಿತ್ಯ ಅಗ್ನಿಹೋತ್ರ ಸಹ ಮಾಡಬಹುದು. (ದೀಕ್ಷೆ ಪಡೆದು ಮಾಡಬೇಕು).
  4. ಮನೆಯ ಮುಖ್ಯಬಾಗಿಲಿನ ಹೊರಗಡೆ ಗೋವಿನ ಸಗಣಿಯನ್ನು ಬಳಸಿದರೆ ಲಕ್ಷ್ಮಿ ದೇವಿಯು ಪ್ರಸನ್ನಲಾಗುತ್ತಾಳೆ.
  5. ಜಾತಕದಲ್ಲಿ ಸೂರ್ಯನು ಅಶುಭ/ಪೀಡಿತನಾಗಿದ್ದರೆ ಹಸುವಿಗೆ ರೊಟ್ಟಿಯನ್ನು ಆಹಾರವಾಗಿ ನೀಡಿದರೆ, ಸೂರ್ಯದೇವನ ಕೃಪೆ ಉಂಟಾಗುತ್ತದೆ.
  6. ಜಾತಕದಲ್ಲಿ ಚಂದ್ರನು ಶುಭನಾಗಿಲ್ಲದಿದ್ದರೆ ಅವರು ಮನೆಯಲ್ಲಿ ಹಸುವನ್ನು ಸಾಕಬೇಕು, ಆಗದೇ ಇದ್ದ ಪಕ್ಷದಲ್ಲಿ ಹಸು ಸಾಕಿರುವವರಿಗೆ, ನೀರನ್ನು ಕೊಡಬೇಕು, ಇದರಿಂದ ಚಂದ್ರನ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.
  7. ಜಾತಕದಲ್ಲಿ ಮಂಗಳ ಗ್ರಹ ಅಶುಭನಾಗಿದ್ದರೆ ಮಂಗಳವಾರದಿಂದ ದಿನದಂದು ಎತ್ತಿಗೆ ಬೆಲ್ಲ ಮತ್ತು ನೆನೆಸಿದ ಬೇಳೆಯನ್ನು ತಿನ್ನಿಸಿ.
  8. ಜಾತಕದಲ್ಲಿ ಬುಧ ಗ್ರಹದ ದುರ್ಬಲತೆ ಇದ್ದರೆ, ಬುಧವಾರ ದಿನದಂದು ಹಸುಗಳಿಗೆ ಹಸಿರು ಹುಲ್ಲನ್ನು ತಿನ್ನಿಸಿ.
  9. ಜಾತಕದಲ್ಲಿ ಗುರು ಗ್ರಹದ ಪ್ರಭಾವವನ್ನು ಸುಧಾರಿಸಲು ಗುರುವಾರ ದಿನದಂದು ಹಸುಗಳಿಗೆ ಬಾಳೆಹಣ್ಣು, ಕಡಲೆ, ಬೆಲ್ಲವನ್ನು ನೀಡಿ.
  10. ಶುಕ್ರ ಗ್ರಹವನ್ನು ಬಲಿಷ್ಠ ಗೊಳಿಸಲು ನಿಮ್ಮ ಆಹಾರದ ಒಂದು ಭಾಗವನ್ನು ಎಂಜಲು ಮಾಡದೆ ಹಸುವಿಗೆ ನೀಡಿ.
  11. ಶನಿ ಅಥವಾ ರಾಹು ಗ್ರಹವನ್ನು ತೃಪ್ತಿಪಡಿಸಲು, ಶನಿವಾರದಂದು ಕಪ್ಪು ಎಳ್ಳು ಉದ್ದು, ಇವನ್ನು ಹಸುವಿಗೆ ತಿನ್ನಿಸಿ.
  12. ಕೇತು ಗ್ರಹವನ್ನು ತೃಪ್ತಿಪಡಿಸಲು ಮಂಗಳವಾರದಂದು, ತೊಗರಿ ಬೇಳೆಯನ್ನು, ಹಸುವಿಗೆ ನೀಡಿ.

    ಎಲ್ಲದಕ್ಕೂ ನಂಬಿಕೆ ಭಕ್ತಿ ಶ್ರದ್ಧೆ ಮುಖ್ಯ, ಪರಿಹಾರ ಮಾಡುತ್ತಾ ತಾಳ್ಮೆಯಿಂದ ಕಾಯಬೇಕು.

Leave a Reply

Your email address will not be published. Required fields are marked *

Translate »