ಖಾಸಾಗಿ ಹಾಗು ಸಾರ್ವಜನಿಕ. PRIVATE & PUBLIC
ಸಾರ್ವಜನಿಕ ಜವಾಬ್ದಾರಿ ಮತ್ತು ಖಾಸಾಗಿ ಜವಾಬ್ದಾರಿ.
1. ಭಾರತದ ಸಂವಿಧಾನ.
2. ದೇಶದ ಕಾನೂನು ವ್ಯವಸ್ಥೆ.
ಇವೆರಡೂ ಸಾರ್ವಜನಿಕ ವಾಗಿಯೂ ಹಾಗು ಖಾಸಾಗಿಯಾಗಿಯೂ ಪಾಲನೆ ಮಾಡ ಬೇಕಾದ ಅತೀ ಅವಶ್ಯ ವಿಷಯ.
ಖಾಸಾಗಿ ವಿಷಯ
1. ಧರ್ಮ
2. ಜಾತಿ
3. ಪಂಗಡ
4. ಪ್ರಾಂತ್ಯ
5. ಸಂಸ್ಕ್ರತಿ
6. ಭಾಷೆ
7. ಬಟ್ಟೆ ಧರಿಸುವ ವಿಧಾನ
7. ಆಹಾರ ಪದ್ದತಿ
ಇವುಗಳು ಪ್ರತೀ ಪ್ರಜೆಯ ಖಾಸಾಗಿ(Private) ವಿಷಯ.
ನಮ್ಮ ಸಂವಿಧಾನವು ಇದನ್ನು ನಮ್ಮ ಮೂಲಭೂತ ಹಕ್ಕಿನ ಮುಖಾಂತರ ಖಾತ್ರಿ ಮಾಡಿದೆ.
ಅದರಲ್ಲೂ ಯಾವುದೆ ಕ್ರಿಯೆ ದೇಶದ ಕಾನೂನು ವಿರೋದ ಮಾಡಿದ್ದಲ್ಲಿ, ಕಾನೂನು ಸಂವಿಧಾನ ಪ್ರಕಾರ ಕಾರ್ಯರೂಪಕ್ಕೆ ಬರುವುದು.
ಈ ಖಾಸಾಗಿ ವಿಷಯದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾತನಾಡುವ ಸ್ವಾತಂತ್ರ್ಯವನ್ನೂ ಸಂವಿಧಾನದಿಂದಲೆ ಕೊಡಲಾಗಿದೆ. ಆದರೆ, ಅದನ್ನು ಯಾರ ಮೇಲೂ ಬಲತ್ಕಾರದಿಂದ ಹೇರಿಸಿದರೆ, ಅದು ಸಂವಿಧಾನ ಪ್ರಕಾರ ಕಾನೂನು ಬಾಹಿರವಾಗುವುದು.
ಅದರಲ್ಲೂ ಸಂವಿಧಾನದ ಶಪತ ತೆಗೆದು ಕೊಂಡು ಪ್ರಜೆಗಳ ಪ್ರತಿನಿಧಿಯಾದವರು ಈ ಖಾಸಾಗಿ ವಿಷಯ ಮಾತನಾಡಿದಲ್ಲಿ, ಅವರನ್ನು ಅಲ್ಲಿಯೇ ಖಂಡಿಸಬೇಕು.
ಪ್ರತಿನಿಧಿಗಳನ್ನು ಶಾಸನ (ಅವಶ್ಯಕತೆ ಅನುಗುಣವಾಗಿ ಕಾನೂನು) ಮಾಡಲು ಹಾಗು ಪ್ರಜೆಗಳ ಮೂಲಭೂತ ಸೌಕರ್ಯ- ಸೌಲಭ್ಯಗಳನ್ನು ಒದಗಿಸಲು ಕೇವಲ ಆರಿಸಿರುವೆವು.
ಈ ಖಾಸಾಗಿ ವಿಷಯದಲ್ಲಿ ಮನೆಯೊಳಗೆಯೇ ಭೇದ- ಭಾವ ವಿರುವಾಗ, ಈ ಪ್ರತಿನಿಧಿಗಳು ಅದರ ವಿಷಯ ಮಾತನಾಡುವುದು ಅಕ್ಷಮ್ಯ ಅಪರಾದ.
ಯಾವುದೇ ಕಾನೂನು ಹಾಗು ಸಂವಿಧಾನ ಬಾಹಿರ ಕೆಲಸ ನಡೆದಾಗ ಕಾನೂನು ಕೂಡಲೆ ಸ್ಪಂದಿಸುವಂತೆ, ಆ ವಿಭಾಗಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಒದಗಿಸುವುದು ಪ್ರತಿನಿಧಿಗಳ ಕೆಲಸ. ಆದರೆ, ಅವರು ಅದರಲ್ಲಿ ಕೈ ಹಾಕುವಂತಿಲ್ಲ.
ಆದ್ದರಿಂದ ಖಾಸಾಗಿ ಹಾಗು ಸಾರ್ವಜನಿಕ ಜವಾಬ್ದಾರಿಯನ್ನು ಅರ್ಥ ಮಾಡುವುದು ಅತೀ ಅವಶ್ಯ.
ಇದನ್ನು ಪುನಹ – ಪುನಹ ಬರೆಯಲು ಕಾರಣ, ನಾವು ಪ್ರಜೆಗಳ ಖಾಸಾಗಿ ಹಾಗು ಸಾರ್ವಜನಿಕ ಜವಾಬ್ದಾರಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಅಬಿವ್ರದ್ದಿಯಿಂದ ನಮ್ಮ ಗಮನವನ್ನು ದೂರ ಸಳೆದು, ಮಾನಸಿಕವಾಗಿ ಖಾಸಾಗಿ ವಿಷಯವನ್ನು ಮಾತನಾಡಿ ಬ್ಲಾಕ್ ಮೈಲ್ ಮಾಡುವ ರಾಜಕಾರಣಿಗಳಿಂದ ಸಾವಧಾನವಾಗಿರ ಬಹುದು.
ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ (UPP).
Reference from : Prajaakeeya Member