ಒಂದು ಸಂಬಳದಿಂದ ಇನ್ನೆಷ್ಟು ಬಾರಿ ತೆರಿಗೆ ಕಟ್ಟಲಿ ಮತ್ತು ಯಾಕೆ..? ಉತ್ತರವಿದೆಯೇ..?
(ಇದು ಪ್ರತಿಯೊಬ್ಬರಿಗೂ ತಿಳಿದ ವಿಷಯ ಆದರೆ ಬಹುತೇಕರಿಗೆ ಪ್ರಶ್ನಿಸುವ ತಾಕತ್ತು ಇಲ್ಲ)
ನಾನು ಮೂವತ್ತು ದಿನ ಕೆಲಸ ಮಾಡಿದೆ,
ಸಂಬಳ ತೆಗೆದುಕೊಂಡೆ – ತೆರಿಗೆ ಕೊಟ್ಟೆ…
ಮೊಬೈಲ್ ತಗೊಂಡೆ – ತೆರಿಗೆ ಕೊಟ್ಟೆ,
ರಿಚಾರ್ಜ್ ಮಾಡಿದೆ – ತೆರಿಗೆ ಕೊಟ್ಟೆ,
ಡಾಟಾ ಕೊಂಡೆ – ತೆರಿಗೆ ಕೊಟ್ಟೆ,
ವಿದ್ಯುತ್ ತಗೊಂಡೆ – ತೆರಿಗೆ ಕೊಟ್ಟೆ,
ಮನೆ ತಗೊಂಡೆ – ತೆರಿಗೆ ಕೊಟ್ಟೆ,
ಟಿ.ವಿ-ಫ್ರಿಜ್ ತಗೊಂಡೆ -ತೆರಿಗೆ ಕೊಟ್ಟೆ…
ಕಾರು ತಗೊಂಡೆ – ತೆರಿಗೆ ಕೊಟ್ಟೆ,
ಪೆಟ್ರೋಲ್-ಡೀಸೆಲ್ ತಗೊಂಡೆ – ತೆರಿಗೆ ಕೊಟ್ಟೆ,
ಸರ್ವೀಸ್ ಮಾಡಿದೆ – ತೆರಿಗೆ ಕೊಟ್ಟೆ,
ರಸ್ತೆಯಲ್ಲಿ ತಿರುಗಿದೆ – ತೆರಿಗೆ ಕೊಟ್ಟೆ,
ಮತ್ತೆ ಟೋಲಗಳಲ್ಲಿ – ತೆರಿಗೆ ಕೊಟ್ಟೆ,
ಲೈಸೆನ್ಸ್ ಮಾಡಿದೆ – ತೆರಿಗೆ ಕೊಟ್ಟೆ…
ರೆಸ್ಟೋರೆಂಟ್‌ಗೆ ಹೋದೆ – ತೆರಿಗೆ ಕೊಟ್ಟೆ,
ಪಾರ್ಕಿಂಗ್ – ತೆರಿಗೆ ಕೊಟ್ಟೆ,
ನೀರು ತಗೊಂಡೆ – ತೆರಿಗೆ ಕೊಟ್ಟೆ,
ರೇಷನ್ ಖರೀದಿಸಿದೆ – ತೆರಿಗೆ ಕೊಟ್ಟೆ,
ಬಟ್ಟೆ ತಗೊಂಡೆ – ತೆರಿಗೆ ಕೊಟ್ಟೆ,
ಚಪ್ಪಲಿ ತಗೊಂಡೆ – ತೆರಿಗೆ ಕೊಟ್ಟೆ…
ಔಷಧ ಖರೀದಿಸಿದೆ – ತೆರಿಗೆ ಕೊಟ್ಟೆ,
ಗ್ಯಾಸ್ ತಗೊಂಡೆ – ತೆರಿಗೆ ಕೊಟ್ಟೆ,
ನೂರಾರು ವಸ್ತುಗಳನ್ನು ಕೊಂಡೆ,
-ಮತ್ತೆ ತೆರಿಗೆ ಕೊಟ್ಟೆ…
ಎಲ್ಲಿ ಫೀಜ್ ಕಟ್ಟಿದೆ?
ಮತ್ತೆಲ್ಲಿ ಬಿಲ್ ಕೊಟ್ಟೆ?
ಇನ್ನೆಲ್ಲಿ ಬಡ್ಡಿ ಕೊಟ್ಟೆ?
ಮತ್ತೆ ತಪ್ಪು ಮಾಡಿದ ಸಂದರ್ಭದಲ್ಲಿ
ಲಂಚದ ರೂಪದಲ್ಲಿ ಕೊಟ್ಟೆ,
ಈ ಎಲ್ಲಾ ನಾಟಕದ ನಂತರ ಸೇವಿಂಗ್ಸ್‌ನಲ್ಲಿ
ಕೊಂಚ ಹಣ ಉಳಿದಿದ್ದರೆ
ಅದಕ್ಕೂ ತೆರಿಗೆ ಕಟ್ಟಿದೆ…
ಇಡೀ ಆಯಸ್ಸು ದುಡಿದರೂ…
ಸಾಮಾಜಿಕ ಭದ್ರತೆಯಿಲ್ಲ,
ಯಾವ ಆರೋಗ್ಯ ಸೇವೆಗಳಿಲ್ಲ,
ಸಾರ್ವಜನಿಕ ಸೇವೆಗಳಿಲ್ಲ,
ರಸ್ತೆಗಳು ಬರ್ಬಾದ್,
ಶುದ್ಧ ನೀರಿಲ್ಲ, ವಿದ್ಯುತ್ ಇಲ್ಲ…
ವಿಷಯುಕ್ತ ತರಕಾರಿಗಳು,
ದುಬಾರಿ ಆಸ್ಪತ್ರೆ,
ಪ್ರತಿ ವರ್ಷವೂ ಬೆಲೆಯೇರಿಕೆ,
ಆಕಸ್ಮಿಕ ಖರ್ಚು ವೆಚ್ಚಗಳು…
ಇಷ್ಟೆಲ್ಲಾ ಇದ್ದರೂ…
ಎಲ್ಲಿ ನೋಡಿದರೂ ಸರತಿ ಸಾಲುಗಳೇ..!
ಹಾಗಿದ್ದರೆ ಎಲ್ಲಾ ದುಡ್ಡು ಹೋಯಿತೆಲ್ಲಿಗೆ..?
ಭ್ರಷ್ಟಾಚಾರದಲ್ಲಿ,
ಚುನಾವಣೆಯಲ್ಲಿ,
ಶ್ರೀಮಂತರ ವಿನಾಯಿತಿಯಲ್ಲಿ,
ವಿಜಯಮಲ್ಯರಂತಹವರನ್ನು ಓಡಿಸುವುದರಲ್ಲಿ,
ಶ್ರೀಮಂತರ ಬೇಡಿಕೆಗಳಲ್ಲಿ,
ಸ್ವೀಸ್ ಬ್ಯಾಂಕಿನಲ್ಲಿ,
ನೇತಾರರ ಬಂಗ್ಲೆ ಮತ್ತು ಕಾರುಗಳಲ್ಲಿ,
ಬೇಕಾದ ಕಾನೂನು ಕೊಂಡುಕೊಳ್ಳುವಲ್ಲಿ,
ಮತ್ತೆ ನಮ್ಮನ್ನು
ಮಳ್ಳರನ್ನಾಗಿ ಮಾಡುವಲ್ಲಿ…
ಆದರೆ ಎಲ್ಲಿಯತನಕ ನಾವೆಲ್ಲ ದೇಶವಾಸಿಗಳು ಇಂತಹ ದುರ್ಬರ ಬದುಕು ಬದುಕುತ್ತಿರಬೇಕು..?
ಈಗ ಯಾರಿಗೆ ಹೇಳಲಿ,
ಕಳ್ಳ ಯಾರೆಂದು..?
ಮೂಲ: ಕಲ್ಪೇಶ ರಾವಲ್
(ಪ್ರಸಿದ್ಧ ಪತ್ರಕರ್ತರು ಮತ್ತು ಲೇಖಕರು-ಹಿಂದಿ)
ಕನ್ನಡಕ್ಕೆ : ನೀಲಕಂಠ ಬನಸೋಡೆ