ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಧಾನಮಂತ್ರಿ ಭಾರತೀಯ ಜನಔಷಧಿ ಕೇಂದ್ರ

*ಪ್ರಧಾನಮಂತ್ರಿ ಭಾರತೀಯ ಜನಔಷಧಿ ಕೇಂದ್ರ*

ಆತ್ಮೀಯರೇ,
ಬಿ.ಪಿ., ಶುಗರ್, ಹೃದಯ ಖಾಯಿಲೆ, ಗ್ಯಾಸ್ ಟ್ರಬಲ್ ಹಾಗೂ ಇತರ ಔಷಧಗಳು
ಶೇಕಡಾ ೮೦ರ ವರೆಗೆ ರಿಯಾಯಿತಿ ದರದಲ್ಲಿ ಇಲ್ಲಿ ದೊರೆಯುತ್ತದೆ.
〰〰〰〰〰
*ಸಾಮಾನ್ಯವಾಗಿ ಜನಔಷಧಿ ಕೇಂದ್ರದ ಬಗ್ಗೆ ಜನರಲ್ಲಿ ಮೂಡುವ ಪ್ರಶ್ನೆಗಳು*
〰〰〰〰〰〰
📍 *ಪ್ರಧಾನಮಂತ್ರಿ ಜನಔಷಧಿ ಕೇಂದ್ರ ಎಂದರೇನು?*
ಪ್ರಧಾನಮಂತ್ರಿ ಜನಔಷಧಿ ಕೇಂದ್ರವು ಭಾರತ ಸರಕಾರದ ಔಷಧ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟಿರುವ ಜೆನರಿಕ್ ಔಷಧಿಗಳ ಮೆಡಿಕಲ್ ಸ್ಟೋರ್ ಆಗಿರುತ್ತದೆ. ಇದರಲ್ಲಿ ಅತ್ಯುತ್ತಮ ಗುಣಮಟ್ಟದ ಜೆನರಿಕ್ ಔಷಧಿಗಳು ಖಾಸಗಿ ಔಷಧಿಗಳ ಬೆಲೆಗಿಂತ ೩೦% ರಿಂದ ೮೦% ತನಕ ರಿಯಾಯಿತಿ ದರದಲ್ಲಿ ದೊರೆಯುತ್ತದೆ.
📍 *ಜೆನರಿಕ್ ಮೆಡಿಸಿನ್ ಎಂದರೇನು?*
ಜೆನರಿಕ್ ಔಷಧಿಯು ಭಾರತ ಸರಕಾರದ ಔಷಧ ಇಲಾಖೆಯಿಂದ ತಯಾರಿಸಲ್ಪಡುವ ಔಷಧಿಯಾಗಿದ್ದು, ಇದಕ್ಕೆ ಬ್ರಾಂಡ್‌ನ ಹೆಸರು ಇರುವುದಿಲ್ಲ. ಈ ಔಷಧ ಯಾವುದೇ ಬ್ರಾಂಡ್‌ನ ಔಷಧಿಗೆ ಹೋಲಿಸಿದರೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುತ್ತದೆ ಹಾಗೂ ಬೆಲೆಯಲ್ಲಿ ಬ್ರಾಂಡೆಡ್ ಔಷಧಿಗಿಂತ ಕಡಿಮೆಯಿರುತ್ತದೆ.
📍 *ಜೆನರಿಕ್ ಔಷಧಿಗಳು ಕಡಿಮೆ ಬೆಲೆಯಲ್ಲಿ ದೊರೆಯುವುದು ಹೇಗೆ?*
ಜೆನರಿಕ್ ಔಷಧಿಯು ಭಾರತ ಸರಕಾರದ ಪ್ರಯೋಗಶಾಲೆಯಲ್ಲಿ ತಯಾರಾಗಿ ನೇರವಾಗಿ ಔಷಧಿ ಮಳಿಗೆಗೆ ಬರುತ್ತದೆ. ಇದರಿಂದ ಖಾಸಗಿ ಔಷಧಿಗಳಂತೆ ಅಧಿಕ ತಯಾರಿಕ ವೆಚ್ಚ, ಜಾಹೀರಾತು ವೆಚ್ಚ, ಮಾರುಕಟ್ಟೆ ವೆಚ್ಚ, ಹೋಲ್‌ಸೇಲ್, ರಿಟೇಲರ್ ಇತರ ಕಮಿಶನ್‌ಗಳು, ತೆರಿಗೆ ಯಾವುದೂ ಇರುವುದಿಲ್ಲ. ಆದುದರಿಂದ ಕಡಿಮೆ ಬೆಲೆಗೆ ದೊರೆಯುತ್ತದೆ.
📍 *ಜೆನರಿಕ್ ಔಷಧಿಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯೇ?*
ಜನಔಷಧಿ ಮೆಡಿಕಲ್ ಸ್ಟೋರ್‌ನಲ್ಲಿ ದೊರೆಯುವ ಜೆನರಿಕ್ ಔಷಧಿಯು ಭಾರತದ ಪ್ರತಿಷ್ಠಿತ ಎನ್.ಎ.ಬಿ.ಎಲ್. ಪ್ರಯೋಗಶಾಲೆಯಲ್ಲಿ ಪ್ರತಿಯೊಂದು ಬ್ಯಾಚ್‌ನ ಔಷಧೀಯ ಗುಣಮಟ್ಟ ಪರೀಕ್ಷೆಗೆ ಒಳಪಟ್ಟು, ನಂತರ ಮಾರುಕಟ್ಟೆಗೆ ಬರುತ್ತದೆ. (ಖಾಸಗಿ ಔಷಧಿಗಳು ಸಹ ಇದೇ ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಡುತ್ತದೆ.) ಆದುದರಿಂದ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ.
📍 *ಜೆನರಿಕ್ ಔಷಧಿಯನ್ನು ಯಾರು ಮತ್ತು ಹೇಗೆ ತಿಳಿದುಕೊಳ್ಳುವುದು?*
ನೀವು ಈಗಾಗಲೇ ತೆಗೆದುಕೊಳ್ಳುತ್ತಿರುವ ವೈದ್ಯರಿಂದ ನೀಡಲ್ಪಟ್ಟಿರುವ ಯಾವುದೇ ಔಷಧಿಯ ಚೀಟಿ ಅಥವಾ ಹಳೆಯ ಬ್ರಾಂಡ್ ಔಷಧಿಯ ಖಾಲಿ ಕವರ್‌ನ್ನು ಜನಔಷಧಿ ಕೇಂದ್ರಕ್ಕೆ ತಂದರೆ, ಔಷಧಿ ಕೇಂದ್ರದಲ್ಲಿರುವ ಅರ್ಹತಾ ವ್ಯಕ್ತಿಯು ನೀವು ತಂದಿರುವ ಚೀಟಿ ಅಥವಾ ಖಾಲಿ ಕವರಿಗೆ ಸಮಾನವಾದ ಜೆನರಿಕ್ ಔಷಧಿಯನ್ನು ಬದಲಾಯಿಸಿಕೊಡುತ್ತಾರೆ. (ಭಾರತ ಸರಕಾರ ಹಾಗೂ ಮೆಡಿಕಲ್‌ಕ್ವಾನಿಲ್ ಆಫ್ ಇಂಡಿಯಾ (ಎಂ.ಸಿ.ಐ.) ಸಹ ವೈದ್ಯರಿಗೆ ನೇರವಾಗಿ ಜೆನರಿಕ್ ಔಷಧಿಯನ್ನೇ ರೋಗಿಗಳಿಗೆ ಶಿಫಾರಸು ಮಾಡಲು ಆದೇಶಿಸಿದೆ.)
📍 *ಜೆನರಿಕ್ ಔಷಧಿಯಲ್ಲಿ ಎಲ್ಲಾ ಕಾಂಬಿನೇಶನ್‌ಗಳು ದೊರೆಯುತ್ತದೆಯೇ?*
ಜನಔಷಧಿ ಕೇಂದ್ರದಲ್ಲಿ ಒಂದು ಅಥವಾ ಎರಡು ಸಾಮಾನ್ಯ ಕಾಂಬಿನೇಶನ್‌ಗಳ ಎಲ್ಲಾ ಔಷಧಿಗಳು ದೊರೆಯುತ್ತದೆ. ಆದರೆ ಕೆಲವೊಮ್ಮೆ 2 ಅಥವಾ ಮೂರು ಕಾಂಬಿನೇಶನ್‌ಗಳ ಔಷಧಿಗಳು ಇಲ್ಲದ ಸಂದರ್ಭದಲ್ಲಿ  ಅರ್ಹತಾ ವ್ಯಕ್ತಿಯು ಆ ಕಾಂಬಿನೇಶನ್‌ಗೆ ಸಮನಾದ 2 ಬೇರೆ ಬೇರೆ ಔಷಧಿಯನ್ನು ನೀಡುತ್ತಾರೆ. ಅದನ್ನು ಒಟ್ಟಿಗೆ ತೆಗೆದುಕೊಳ್ಳುವುದರಿಂದ 3 ಕಾಂಬಿನೇಶನ್ ಅಷ್ಟೇ ಪರಿಣಾಮಕಾರಿಯಾಗುತ್ತದೆ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲ.
📍 *ಜನಔಷಧಿ ಕೇಂದ್ರದಲ್ಲಿ ಯಾವ ಯಾವ ಔಷಧಿಗಳು ದೊರೆಯುತ್ತದೆ?*
ಜನಔಷಧಿ ಕೇಂದ್ರದಲ್ಲಿ ಬಿ.ಪಿ., ಶುಗರ್, ಹೃದಯ ಖಾಯಿಲೆ, ಗ್ಯಾಸ್‌ಟ್ರಬಲ್ ಹಾಗೂ ಇತರ ಎಲ್ಲಾ ರೀತಿಯ ೮೦೦ಕ್ಕೂ ಹೆಚ್ಚು ಔಷಧಿಗಳು ರಿಯಾಯಿತಿ ದರದಲ್ಲಿ ಜನಔಷಧಿ ಕೇಂದ್ರದಲ್ಲಿ ಮಾತ್ರ ದೊರೆಯುತ್ತವೆ.
〰〰〰〰〰
💐💐💐
*ಕೇಂದ್ರ ಸರಕಾರದ ಜನಪರ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ..* 🙏🌹

Leave a Reply

Your email address will not be published. Required fields are marked *

Translate »