ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸತ್ತ್ವ, ರಜ ಮತ್ತು ತಮ ಗುಣ ಎಂದರೇನು ?

ಸತ್ತ್ವ, ರಜ ಮತ್ತು ತಮ ಎಂದರೇನು…?

ಇಂದಿನ ವಿಜ್ಞಾನದ ಪ್ರಕಾರ, ಬ್ರಹ್ಮಾಂಡದ ನಿರ್ಮಿತಿಯು ಎಲೆಕ್ಟ್ರಾನ್, ನ್ಯೂಟ್ರಾನ್, ಪ್ರೋಟಾನ್, ಮೆಸೋನ್, ಗ್ಲೂಆನ್, ಕ್ವಾರ್ಕ್ಸ್‌ನಂತಹ ಅತಿ ಸಣ್ಣ ಸ್ಥೂಲ ಕಣಗಳಿಂದ ಆಗಿದೆ.

ಆದರೆ ಅಧ್ಯಾತ್ಮಶಾಸ್ತ್ರದಿಂದ ಬ್ರಹ್ಮಾಂಡದ ನಿರ್ಮಿತಿಯು ಅತಿ ಸೂಕ್ಷ್ಮ ಕಣಗಳಿಂದ ಆಗಿದೆ ಎಂದು ತಿಳಿದುಬರುತ್ತದೆ. ಈ ಅತಿ ಸೂಕ್ಷ್ಮ ಕಣಗಳು ಎಂದರೆ ‘ತ್ರಿಗುಣಗಳು’. ‘ತ್ರಿಗುಣ’ ಶಬ್ದದ ವ್ಯುತ್ಪತ್ತಿಯು ಸಂಸ್ಕೃತ ಶಬ್ದ ‘ತ್ರಿ’ (ಎಂದರೆ ಮೂರು) ಮತ್ತು ‘ಗುಣ’ (ಎಂದರೆ ‘ಸೂಕ್ಷ್ಮ ಕಣಗಳು’) ಇವುಗಳಿಂದ ಆಗಿದೆ. ‘ಸತ್ತ್ವ’, ‘ರಜ’ ಮತ್ತು ‘ತಮ’ ಇವುಗಳು ತ್ರಿಗುಣಗಳು.

‘ಸತ್ತ್ವ’ ಗುಣವು ರಜ ಮತ್ತು ತಮ ಗುಣಗಳ ತುಲನೆಯಲ್ಲಿ ಅತಿ ಸೂಕ್ಷ್ಮವಾಗಿದೆ. ದೇವತ್ವಕ್ಕೆ ಅತಿ ಹತ್ತಿರವಾದ ಗುಣವೂ ಹೌದು. ಸತ್ತ್ವ ಗುಣವು ಹೆಚ್ಚಿನ ಪ್ರಮಾಣದಲ್ಲಿರುವವರಲ್ಲಿ ಮುಂದಿನ ಲಕ್ಷಣಗಳು ಕಂಡುಬರುತ್ತವೆ – ತಾಳ್ಮೆ, ಸಾತತ್ಯ, ಕ್ಷಮಿಸುವ ವೃತ್ತಿ, ಜಿಜ್ಞಾಸೆ ಇತ್ಯಾದಿ.

  ತೆನಾಲಿ ರಾಮ ಮತ್ತು ವರ್ಣರಂಜಿತ ಹಕ್ಕಿ

‘ತಮೋ’ ಗುಣವು ಉಳಿದೆರಡು ಗುಣಗಳು ತುಲನೆಯಲ್ಲಿ ಕನಿಷ್ಠ ಮಟ್ಟದ್ದಾಗಿದೆ. ತಮೋ ಗುಣಿ ಮನುಷ್ಯನಲ್ಲಿ ಆಲಸ್ಯ, ಅತಿಯಾಸೆ, ಭೌತಿಕ ವಿಷಯಗಳ ಆಸಕ್ತಿ ಇತ್ಯಾದಿಗಳು ಕಂಡುಬರುತ್ತವೆ.

‘ರಜೋ’ ಗುಣವು ಸತ್ತ್ವ ಮತ್ತು ತಮೋ ಗುಣಗಳಿಗೆ ಕ್ರಿಯಾ ಶಕ್ತಿಯನ್ನು ಪ್ರದಾನಿಸುತ್ತದೆ. ಅಂದರೆ ಸತ್ತ್ವ ಗುಣ ಪ್ರಧಾನವಾಗಿರುವವರಲ್ಲಿ ಸಾತ್ತ್ವಿಕ ಕೃತಿಗಳನ್ನು ಮತ್ತು ತಮೋ ಗುಣ ಪ್ರಧಾನವಾಗಿರುವವರಲ್ಲಿ ತಾಮಸಿಕ ಕೃತ್ಯಗಳನ್ನು ಮಾಡುವ ಶಕ್ತಿಯು ಸೂಕ್ಷ್ಮ ‘ರಜೋ’ ಗುಣದಿಂದ ದೊರೆಯುತ್ತದೆ.

ಸತ್ತ್ವ, ರಜ ಮತ್ತು ತಮೋ ಗುಣಗಳು ಅತಿ ಸೂಕ್ಷ್ಮವಾಗಿವೆ. ಆದುದರಿಂದ ವಿಜ್ಞಾನವನ್ನು ಕಲಿಸುವ, ಕಲಿಯುವ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಇವುಗಳನ್ನು ಅಧ್ಯಯನ ಮಾಡುವ ವಿಧಾನಗಳು ಇಲ್ಲದೆ, ವಿಜ್ಞಾನಿಗಳಿಗೆ ಈ ಸೂಕ್ಷ್ಮ ಕಣಗಳ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಶಾಲೆಯ ಪಠ್ಯಕ್ರಮದಲ್ಲಿ ಬಾರದ ಈ ವಿಷಯಗಳು ನಮ್ಮಲ್ಲಿ ಕೆಲವರಿಗೆ ವಿಚಿತ್ರವೆನಿಸಬಹುದು. ಆದರೆ ಈ ಸೂಕ್ಷ್ಮ ಕಣಗಳು, ನಮ್ಮನ್ನು ಮತ್ತು ನಾವು ಜೀವಿಸುತ್ತಿರುವ ಸೃಷ್ಟಿಯನ್ನು ಆಧರಿಸುತ್ತಿವೆ ಎಂಬುವುದು ಸತ್ಯ. ನಮ್ಮಲ್ಲಿ ಯಾವ ಸೂಕ್ಷ್ಮ ಗುಣದ ಪ್ರಮಾಣ ಅಧಿಕವಿದೆ ಎಂಬುವುದು

  ಮುತ್ತೈದೆ ಎಂದರೆ ಯಾರು ?

ನಾವು ಪ್ರಸಂಗಗಳನ್ನು ಎದುರಿಸುವ ಬಗೆ
ನಾವು ತೆಗೆದುಕೊಳ್ಳುವ ನಿರ್ಧಾರಗಳು
ನಮ್ಮ ಆಯ್ಕೆಗಳು
ನಮ್ಮ ಜೀವನ ಶೈಲಿ

ಮುಂತಾದವುಗಳನ್ನು ನಿರ್ಧರಿಸುತ್ತದೆ.

ಈ ಕಣಗಳು ಸ್ಥೂಲ ರೂಪದಲ್ಲಿ ಇರದಿರುವುದರಿಂದ, ಅವುಗಳಿಗೆ ಸ್ಥೂಲ ಗುಣ ಲಕ್ಷಣಗಳನ್ನು ನೀಡುವುದು ಕಷ್ಟ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »