ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭೀಮವರಂ ಯನಮುದುರು ತಲೆಕೆಳಗಾಗಿ ನಿಂತಿರುವ ಶಿವನ ದೇವಸ್ಥಾನ

ತಲೆಕೆಳಗಾಗಿ ನಿಂತಿರುವ (ಶೀರ್ಷಾಸನ) ಶಿವ.!

ಸಾಮಾನ್ಯವಾಗಿ ಶಿವನನ್ನು ಲಿಂಗ ರೂಪಿಯಾಗಿ
ಹಲವೆಡೆ ವಿಗ್ರಹರೂಪಿಯಾಗಿ ಕಾಣುತ್ತೇವೆ.
ಆದರೆ ಆಂಧ್ರಪ್ರದೇಶದ ಭೀಮವರಂ ನಿಂದ 4ಕಿಮೀ ದೂರದಲ್ಲಿರುವ ಯನಮುದುರು ಎಂಬ ಗ್ರಾಮದಲ್ಲಿ ಶೀರ್ಷಾಸನದಲ್ಲಿ ನಿಂತಿರುವ ಶಿವನನ್ನು ದರ್ಶಿಸಬಹುದು. ಆತನ ಪಕ್ಕದಲ್ಲಿ ಮಾತೆ ಪಾರ್ವತಿಯು ಮೂರು ತಿಂಗಳ ಹಸುಗೂಸನ್ನು ಎತ್ತಿಕೊಂಡು ಕುಳಿತಿದ್ದಾಳೆ

ಇಲ್ಲಿ ಶಿವ ಹೀಗೇಕೆ ಶೀರ್ಷಾಸನದಲ್ಲಿ ನಿಂತಿದ್ದಾನೆ ಅನ್ನುವುದಕ್ಕೆ ಒಂದು ದಂತಕಥೆಯನ್ನು ಹೇಳುತ್ತಾರೆ ಹಿರಿಯರು,

ಅಸುರನೊಬ್ಬ ತನ್ನಲ್ಲಿದ್ದ ರಕ್ಕಸ ಶಕ್ತಿಯಿಂದ ಅಟ್ಟಹಾಸವನ್ನು ಮೆರೆಯಲು ಆರಂಭಿಸ್ತಾನೆ. ಅವನಿಂದ ಜನಸಾಮಾನ್ಯರು, ಋಷಿಮುನಿಗಳು, ದೇವಾನುದೇವತೆಗಳು ಆತಂಕದಲ್ಲಿ ಜೀವನ ಸಾಗಿಸುವಂತಾಯಿತು. ಆ ರಕ್ಕಸನ ಸಂಹಾರ ಯಮನಿಂದ ಮಾತ್ರ ಸಾಧ್ಯ ಅನ್ನೋದನ್ನು ಅರಿತ ದೇವಾನುದೇವತೆಗಳು ಯಮನ ಬಳಿಗೆ ಹೋಗ್ತಾರೆ. ರಕ್ಕಸನ ಅಟ್ಟಹಾಸದ ಬಗ್ಗೆ ಹೇಳ್ತಾರೆ ಇದನ್ನು ಅರಿತ ಯಮಧರ್ಮರಾಯ ಆತನನ್ನು ಸಂಹಾರ ಮಾಡಲು ಮುಂದಾಗ್ತಾರೆ. ಆದ್ರೆ ಯಮಧರ್ಮರಾಯ ತಮ್ಮೆಲ್ಲಾ ಶಕ್ತಿಯನ್ನು ಪ್ರಯೋಗಿಸಿದ್ರೂ ಸಹಾ ಅದು ಸಾಧ್ಯವಾಗದಂತಹ ಸ್ಥಿತಿ ಎದುರಾಗುತ್ತೆ. ಅಂತಹ ಸ್ಥಿತಿಯಲ್ಲಿ ಯಮ ಆ ರಕ್ಕಸನನ್ನು ಸಂಹರಿಸಲು ಶಿವನ ಸಹಾಯ ಕೋರಿ ಕೈಲಾಸಕ್ಕೆ ಹೋಗುತ್ತಾನೆ. ಅಲ್ಲಿರುವ ಶಿವದೂತರು ಶಿವನು ಕೈಲಾಸದಲ್ಲಿ ಇಲ್ಲವೆಂದೂ
ತಪಸ್ಸಿಗೆ ಹೋಗಿದ್ದಾರೆಂದೂ ತಿಳಿಸುತ್ತಾರೆ. ಶಿವನನ್ನು ಹುಡುಕುತ್ತಾ ಹೊರಟ ಯಮನಿಗೆ ಈ ಸ್ಥಳದಲ್ಲಿ ಶಿವ ಶೀರ್ಷಾಸನದಲ್ಲಿ ತಪಸ್ಸು ಮಾಡುತ್ತಾ ಕಾಣಿಸುತ್ತಾನೆ. ಪಕ್ಕದಲ್ಲಿ ಮಾತಾ ಪಾರ್ವತಿಯು ಮೂರು ತಿಂಗಳ ಹಸುಗೂಸು ಕಾರ್ತಿಕೇಯನನ್ನು ಎತ್ತಿಕೊಂಡು ಕುಳಿತಿದ್ದಾಳೆ.

  ತಾಯಿ ಶಾರದೆಯ ನೆಲೆವೀಡು ಶೃಂಗೇರಿ

ಯಮ ತನ್ನ ಸಮಸ್ಯೆಯನ್ನು ಶಿವನಿಗೆ ಅರುಹಿ ರಕ್ಕಸ ಸಂಹಾರಕ್ಕೆ ಶಕ್ತಿಯನ್ನು ಬೇಡುತ್ತಾನೆ. ಯಮನ ಯಾವ ಮಾತಿಗೂ ಶಿವ ಪ್ರತಿಕ್ರಿಯೆ ನೀಡುವುದಿಲ್ಲ ಆಗ ಯಮನು ಮಾತೆಯ ಕಡೆಗೆ ದೃಷ್ಟಿ ಹರಿಸುತ್ತಾನೆ ಅದಾಗಲೇ ಶಿವನಿಂದ ಜ್ಞಾನ ಸಂದೇಶ ಪಡೆದಿದ್ದ ಪಾರ್ವತಿಯು ತನ್ನ ಶಕ್ತಿಯನ್ನು ಯಮನಿಗೆ ಧಾರೆ ಎರೆಯುತ್ತಾಳೆ. ಆ ದಂಪತಿಯಿಂದ ಅದ್ಭುತವಾದ ಶಕ್ತಿಯನ್ನು ಪಡೆದಂತಹ ಯಮಧರ್ಮರಾಯ ರಕ್ಕಸನನ್ನು ಸಂಹಾರ ಮಾಡ್ತಾನೆ

ಅಂದಿನಿಂದ ಈ ಸ್ಥಳದ ಹೆಸರು ಯಮಪುರಿ ಎಂದು ಆಯಿತು ಆದರೆ ಆದು ಜನರ ಬಾಯಲ್ಲಿ ಇಂದು ಯನಮದುರು ಆಗಿದೆ. ಈ ಘಟನೆ ಇಲ್ಲಿ ನಡೆದದ್ದರಿಂದ ಶೀರ್ಷಾಸನದಲ್ಲಿ ಶಿವನಿರುವಂತೆ ವಿಗ್ರಹ ಪ್ರತಿಷ್ಠೆ ಮಾಡಲಾಗಿದೆ ಪಕ್ಕದಲ್ಲಿ ಹಸುಗೂಸಿನ ಸಮೇತ ಪಾರ್ವತಿಯ ವಿಗ್ರಹ ವನ್ನು ಪ್ರತಿಷ್ಟಿಸಲಾಗಿದೆ.

  ಕುವೆಂಪು - ಕನ್ನಡ ಕವಿ ಸಂಪೂರ್ಣ ಪರಿಚಯ

ಯಮ ಇಲ್ಲಿ ಶಕ್ತಿಯನ್ನು ಪಡೆದದ್ದರಿಂದ ಇಲ್ಲಿರುವ ಶಿವನನ್ನು ಶಕ್ತೇಶ್ವರ ಎಂದೂ ಕರೆಯುತ್ತಾರೆ. ಇಲ್ಲಿಗೆ ಭಕ್ತರು ಬಂದು ಬೇಡಿದರೆ ಕರುಣಿಸುತ್ತಾರೆಂದು ಇಲ್ಲಿಗೆ ಬರುವ ಭಕ್ತರು ಹೇಳುತ್ತಾರೆ.

ಪುರಾಣಗಳ ಪ್ರಕಾರ ಕವಿ ಕಾಳಿದಾಸನು ತನ್ನ ಕುಮಾರ ಸಂಭವ ದಲ್ಲಿ ಯನಮದುರು ವಿನ ಬಗ್ಗೆ ಪ್ರಸ್ತಾಪವಿದೆ.
ಭೋಜರಾಜನೂ ಇಲ್ಲಿಗೆ ಭೇಟಿ ನೀಡಿದ್ದನು ಎಂದು ಉಲ್ಲೇಖಗಳಿವೆ. ಈ ದೇಗುಲದ ಬಳಿ ಒಂದು ಶಕ್ತಿಗುಂಡಂ ಹೆಸರಿನ ಕೆರೆ ಇದ್ದು ಇಲ್ಲಿ ಗಂಗಾ ನದಿಯು ಗುಪ್ತಗಾಮಿನಿಯಾಗಿ ಹರಿಯುತ್ತಿದ್ದಾಳೆಂದೂ ಹಾಗೂ ಈ ಕೆರೆಗೆ ಎರಡು ಶಕ್ತಿಶಾಲಿ ಸರ್ಪಗಳು ಕಾವಲು ಇವೆಯೆಂದೂ ನಂಬಿಕೆ ಈ ಕೆರೆಯ ನೀರನ್ನೇ ಈಗಲೂ ಅಭಿಷೇಕಕ್ಕಾಗಿ ಹಾಗೂ ನೈವೇದ್ಯಕ್ಕಾಗಿ ಬಳಸಲಾಗುತ್ತದೆ. ಒಂದು ವೇಳೆ ಬೇರೆ ನೀರನ್ನು ಬಳಸಿದರೆ ನೈವೇದ್ಯ ಬೇಯುವುದಿಲ್ಲವೆಂದು ಹೇಳುತ್ತಾರೆ ಇಲ್ಲಿನ ಅರ್ಚಕರು.🙏

Leave a Reply

Your email address will not be published. Required fields are marked *

Translate »