ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯ – Taxation – ತೆರಿಗೆ

 Taxation- ತೆರಿಗೆ.
ಪೂನಾದ ಒಂದು ಯುವಕ ಚಾರ್ಟರ್ಡ್ ಅಕೌಂಟೆಂಟ್ 2014 ರಲ್ಲಿ ನಮ್ಮ ಪ್ರಧಾನಿಯವರಿಗೆ ತೆರಿಗೆ ಸುಧಾರಣೆಯ ಉಪಾಯವನ್ನು ಸೂಚಿಸಿದ್ದ. ಅದು ತುಂಬಹ ಕ್ರಾಂತಿಕಾರಿ ಹಾಗು ದೇಶದ ಆರ್ಥಿಕ ಸ್ಥಿತಿಯನ್ನು ದುಪ್ಪಟ್ಟು ಮಾಡುವಂತಿತ್ತು. ಆದರೆ 6 ವರ್ಷ ಕಳೆದರೂ, ಅದು ಬರಲೆ ಇಲ್ಲ. ಯಾಕೆಂದರೆ, ಇದರಲ್ಲಿ ಭ್ರಷ್ಟಾಚಾರಕ್ಕೆ ಹಾಗು ತೆರಿಗೆ ಸೋರುವಿಕೆಗೆ ಅವಕಾಶವೇ ಇರುವುದಿಲ್ಲ.

ಇಲ್ಲಿ Income Department ನ ಅವಶ್ಯಕತೆಯೇ ಇರುವುದಿಲ್ಲ.

ಜನ್ ಧನ್ ಖಾತೆಗೆ ಅವಕಾಶ ಮಾಡಿದಾಗ ಈ ಹೊಸ ತೆರಿಗೆ ವಿಧಾನ ಬರಬಹುದೆಂಬ ನನ್ನ ಊಹೆ, ಗಾಳಿಪಟವಾಯಿತು.

ಇಲ್ಲಿ ನಾನು ತಿಳಿಸುವ ಅಂಕಿ ಅಂಶಗಳು ಅಷ್ಟು ಕೂಲಂಕುಷವಾಗಿರಲಿಕ್ಕಿಲ್ಲ. ಅದಕ್ಕೆ ಎಲ್ಲರಲ್ಲೂ ಕ್ಷಮೆಯಾಚಿಸುತ್ತಾ ಇದರ ವಿಷಯ ಚುಟುಕ್ಕಾಗಿ ತಿಳಿಸುವೆನು. ಅಂಕಿ ಅಂಶ ಸರಿಯಾಗಿ ತಿಳಿದವರು ದಯಾಮಾಡಿ ಅದನ್ನು ಜನರಿಗೆ ತಿಳಿಸಬೇಕಾಗಿ ವಿನಂತಿ.

ಈ ತೆರಿಗೆ ನಿಯಮದಲ್ಲಿ ಯಾವುದೆ ತರಹದ ತೆರಿಗೆ ಇರುವುದಿಲ್ಲ ( Income Tax, GST, etc.).

ಭಾರತದಲ್ಲಿ ಸುಮಾರು 8,00,00,000( 8 ಕೋಟಿ) Transaction ಪ್ರತೀ ದಿನ ಬ್ಯಾಂಕ್ ಹಾಗು ಹಣಕಾಸಿನ ಸಂಸ್ಥೆಗಳಿಂದ ನಡೆಯುವುದು.
ಅಂದರೆ ವರ್ಷಕ್ಕೆ

8,00,00,000 X 200 Working Day = 1600,00,00,000 Transaction.( ಇದು ಕೇವಲ Transaction – ಇಲ್ಲಿ ಹಣದ ಲೆಕ್ಕವಿಲ್ಲ. ಇದರಲ್ಲಿ ಬ್ಯಾಂಕ್ಗೆ ಹಣ ಹಾಕುವುದು, ತೆಗೆಯುವುದು, ಚೆಕ್, ಡ್ರಾಫ್ಟ್, ಟ್ರಾನ್ಸ್ಫರ್, ಎಟಿಎಂ, ಕ್ಯಾಶ್, ಎಲ್ಲಾ ಪ್ರಕ್ರೀಯೆ ಗಳು ಇರುವುದು).

ಇಲ್ಲಿ ಪ್ರತೀಯೊಂದು Transaction ಗೆ 2 ರಿಂದ 5% “Transaction Charges” ಬ್ಯಾಂಕ್ಗಳೆ ಚಾರ್ಜ್ ಮಾಡಿ ಸರಕಾರದ ಖಜಾನೆಗೆ ಕಳುಹಿಸಬೇಕು.

ಅಂದರೆ ಒಬ್ಬ 100 ರುಪಾಯಿ ಬ್ಯಾಂಕಿಗೆ ಹಾಕಿದರೆ ಅಥವಾ ತೆಗೆದರೆ, 2% ಅಂದರೆ 2 ರುಪಾಯಿ ಬ್ಯಾಂಕ್ ಗಿರಾಕಿಯಿಂದ ಅಥವಾ ಅವನ ಅಕೌಂಟ್ನಿಂದ ಸರಕಾರದ ಖಜಾನೆಗೆ ಕಳುಹಿಸಬೇಕು.

ಉದಾಹರಣೆಗೆ:
₹.1,00,000 ( ಒಂದು ಲಕ್ಷ) ತೆಗೆದರೆ ಅಥವಾ ಡಿಪೋಸಿಟ್ ಮಾಡಿದರೆ ₹ 2,000 ಕಟ್ಟ್ ಮಾಡಲಾಗುವುದು.

₹ 1,00,00,000( ಒಂದು ಕೋಟಿ) ಮಾಡಿದರೆ ₹ 2,00,000 ಕಟ್ಟ್ ಮಾಡಲಾಗುವುದು.

ದೊಡ್ಡ ಮೊತ್ತಕ್ಕೆ 2 ರ ಬದಲು 1% ಅಥವಾ 0.5% ಸೀಲಿಂಗ್ ಇಡ ಬಹುದು.

ಉಪಯೋಗ:

1.ಹೀಗೆ ಸರ್ಕಾರಕ್ಕೆ ಈಗ ಬರುವ ತೆರಿಗೆ ಹಣಕ್ಕಿಂತ ಮೂರು ಪಟ್ಟು ಹಣ ಬರಬಹುದೆಂಬ ಅಂದಾಜಿದೆ.

2. ಯಾರು ಹಣ ಮನೆಯಲ್ಲಿಟ್ಟು ಕೊಂಡು ಬ್ಲ್ಯಾಕ್ ಹಣ ನಿರ್ಮಿಸುವುದಿಲ್ಲ.

3. ಪ್ರತೀ ಪ್ರಜೆಯು ತೆರಿಗೆ ಕಟ್ಟುವಂತಾಗುವುದು.

4. Income Tax ನ ವಿಭಾಗದ ಅವಶ್ಯಕತೆ ಇರುವುದಿಲ್ಲ. ಈ ಕೆಲಸ ಬ್ಯಾಂಕ್ಗಳೆ ನಿಭಾಯಿಸುವುದು.

5. 2% , ಯಾರಿಗೂ ನೋವಾಗುವಂತಿಲ್ಲ. ಜನರು ಸಂತೋಷವಾಗಿ ಕೊಡುವರು. ಅದರಲ್ಲೂ ದೊಡ್ಡ ಮೊತ್ತಕ್ಕೆ 0.5 ರಷ್ಟು ಮಾಡಬಹುದು.

6. ಮನೆ ಹಾಗು ಆಫೀಸ್ ಗಳಲ್ಲಿ ಯಾವುದೇ ಹಣ ಇಡುವಂತಿಲ್ಲ. ಒಂದು ವೇಳೆ ಇದ್ದರೂ ಬ್ಯಾಂಕಿನಿಂದ ತೆಗೆದ ಪ್ರೂಫ್ ಇರಬೇಕು. ಅಂದರೆ, ಅಗಾಗಲೆ ಅದಕ್ಕೆ ಬ್ಯಾಂಕ್ Transaction Charge ಹಾಕಿದೆ ಎಂದು ಅರ್ಥ.

7. ಆವಾಗ ಎಲ್ಲವೂ ಪಾರದರ್ಶಕ ವಾಗುವುದು.ಅಡಗಿಸುವ ಅವಶ್ಯಕತೆಯೆ ಬರುವುದಿಲ್ಲ.

8. ಒಬ್ಬ ಭ್ರಷ್ಟಾಚಾರದಿಂದ ಹಣ ಪಡೆದು ಬ್ಯಾಂಕಿಗೆ ಹಾಕಿದರೆ, Transaction Charge ಆಗಿಯೆ ಆಗುವುದು. ಅವನ ಭ್ರಷ್ಟಾಚಾರವನ್ನು ಸರಕಾರದ ಏಜೆನ್ಸಿಗಳು ಹಿಡಿದರೆ, ಅದಕ್ಕೆ ತಕ್ಕ ಫೈನ್ ಹಾಗು ಶಿಕ್ಷೆ ನ್ಯಾಯಾಲಯ ಕೊಟ್ಟೆ- ಕೊಡುವುದು.

ಇಲ್ಲಿ ಭ್ರಷ್ಟಾಚಾರಕ್ಕೆ ಕೊಟ್ಟ ಹಣವೂ ಬ್ಯಾಂಕಿನಿಂದಲೆ ಬಂದಿರುವುದರಿಂದ, ಅದಕ್ಕೂ ಆಗಲೆ Transaction Charges ಸರ್ಕಾರ ಪಡೆದಿರುತ್ತದೆ.

ಭ್ರಷ್ಟ ವ್ಯವಸ್ಥೆಯಿಂದ ಸಂಪಾದಿಸಿದ ಹಣದ ವಿಷಯ ಸರಕಾರವು ಬೇರೆಯೆ ರೀತಿಯಲ್ಲಿ ವಿಜಿಲೆನ್ಸ್ ನ ವ್ಯವಸ್ಥೆ ಮಾಡಬೇಕು.

9. ನಿಜವಾಗಿ ದೇಶದ ಅಬಿವ್ರದ್ದಿಗೆ ಸಹಾಯ ಮಾಡುವ ಎಲ್ಲಾ ತರಹದ ಬ್ಯುಸಿನೆಸ್ ಕಮ್ಯುನಿಟಿಗಳು ನಿಶ್ಚಿಂತೆಯಿಂದ ತಮ್ಮ-ತಮ್ಮ ವಾಣಿಜ್ಯ ಕ್ಷೇತ್ರಗಳನ್ನು ಬೆಳೆಸ ಬಹುದು.

10. ದೇಶವು ” ತೆರಿಗೆ ಸ್ವರ್ಗ” “Tax Heaven” ಆಗಿ ಇನ್ವೆಸ್ಟ್ಮೆಂಟ್ಸ್ ನ ಮಾಹಾ ಪೂರಕವೇ ಹರಿದು ಬರುವುದು.

11. ಉದ್ಯೋಗವು ತನ್ನಿಂದ ತಾನೆ ಉದ್ಭವವಾಗುವುದು.

12. ವಾಣಿಜ್ಯ ಜಳ- ಜಳಿಸುವುದು. ಕ್ಯಾಶ್ ಫ್ಲೋ ಹರಿದು ಬರುವುದು. ಮಾರ್ಕೇಟ್ ರಂಗೇರುವುದು.

13. ಬುಸಿನೆಸ್ಸ್ ನಿಂದ ಗಳಿಸಿದ ಹಣ ಬುಸಿನೆಸ್ಸ್ ಗೆ ಬರುವುದು.

14. ಎಲ್ಲರೂ ಯಾವುದೇ ಮುಜುಗರ, ಹೆದರಿಕೆ ಹಾಗು ಸಂಕೋಚವಿಲ್ಲದೆ, ಆತ್ಮ ಸಾಕ್ಷಿಯಾಗಿ ಬದುಕುವ ದಿನ ಬರುವುದು.

  ಪ್ರಜಾಕೀಯ ಪಕ್ಷ ಚುನಾವಣಾ ಅಭ್ಯರ್ಥಿ ಗಮನಕ್ಕೆ

15. ನಿಜವಾದ ಭಾರತದ ಹಣಕಾಸು ಜನರ ಮದ್ಯೆಯೇ ಹರಿದು ಬಂದು ಗ್ರೋತ್ ಫ್ಯಾಕ್ಟರ್ ಆಕಾಶಕ್ಕೆರುವುದರಲ್ಲಿ ಸಂಶಯವಿಲ್ಲ.

16. Bank Transaction ಮೂರು ಪಟ್ಟು ಜಾಸ್ತಿಯಾಗಿ, ಸರ್ಕಾರಕ್ಕೆ ಬರುವ ಹಣ ಮೂರು ಪಟ್ಟಾಗುವುದು.

17. ಎಲ್ಲಾ ಪ್ರಜೆಗಳು ಸಮಾನವಾಗಿ, ನಾನು ತೆರಿಗೆ ಕಟ್ಟುತ್ತೇನೆ ಅಥವಾ ಕಟ್ಟುವುದಿಲ್ಲ ವೆಂಬ ಮಾತು ಬರುವುದಿಲ್ಲ.

WARNING:
Inflation – ಹಣದುಬ್ಬರ ಖಂಡಿತಾ ಇರುವುದು. ಪ್ರಜೆಗಳ ಇನ್ಕಂ ಲೆವೆಲ್ ಡಬಲ್ ಆಗಲೆ ಬೇಕಾಗುವುದು. ಅದು ಆಗಿಯೆ ಆಗುತ್ತೆ.

ನಗದು ವ್ಯವಹಾರಕ್ಕೆ ಕಟ್ಟು- ನಿಟ್ಟಾದ ಕಾನೂನು ತರಬೇಕು.
₹10,000 ದ ಮೇಲೆ ಯಾವುದೇ ನಗದು ವ್ಯವಹಾರ ಸಂಪೂರ್ಣ ನಿಷೇಧಿಸಬೇಕು.

ಇಲ್ಲಿ ಫೆಡರಲ್ ಸಿಸ್ಟಂನಲ್ಲಿ
ರಾಜ್ಯ ಹಾಗು ಕೇಂದ್ರದ ಪಾಲು ನಿರ್ಧರಿಸ ಬೇಕಾಗಿದೆ.ಆಯಾಯ ರಾಜ್ಯದಲ್ಲಿ ಕಲೆಕ್ಟ್ ಆದ 50%, ಆ ರಾಜ್ಯದ ಬೊಕ್ಕಸಕ್ಕೆ ಸೇರಬೇಕು.

Conclusion:

ಇನ್ನೂ ಸರಿಯಾಗಿ ಅಂಕಿ ಅಂಶಗಳನ್ನು ಪರಿಶೀಲನೆ ಮಾಡಿ ಮುಂದುವರಿಯ ಬೇಕು. ಇದು ಸಾಧ್ಯವೆಂದು ತೋರುತ್ತದೆ.

ಇದಕ್ಕೆ ಪೂರಕ ನಮ್ಮ ದೇಶದ ಜನ ಸಂಖ್ಯೆ. ಆದ್ದರಿಂದಲೆ ಇಂತಹ ಸಿಸ್ಟಂ ನಮ್ಮ ದೇಶದಲ್ಲಿ ಖಂಡಿತಾ ಜಯಗಳಿಸುವುದು.

ಬೇರೆ ಯಾವುದೇ ತೆರಿಗೆ ಖಂಡಿತಾ ಇರಬಾರದು.

ಅಗತ್ಯ ಬಿದ್ದರೆ ಪ್ರತೀಯೊಂದು 14 ವರ್ಷದ ಮೇಲಿನ ಪ್ರಜೆಯ ಬ್ಯಾಂಕ್ ಅಕೌಂಟ್ ಸರ್ಕಾರವೇ ಆಧಾರ್ ಕಾರ್ಡ್ನ ಮುಖಾಂತರ ಓಪನ್ ಮಾಡಬಹುದು. ಈಗಾಗಲೆ ಅಕೌಂಟ್ ಇದ್ದವರ ಅವಶ್ಯಕತೆ ಇಲ್ಲ. ಅದಕ್ಕೊಂದು 20,000 ಸಾವಿರ ಕೋಟಿ ಖರ್ಚಾದರೂ ತೊಂದರೆ ಇಲ್ಲ.

ಇದರಿಂದ ಡಿಜಿಟಲ್ ಬ್ಯಾಂಕಿಂಗ್ ವೇಗವಾಗಿ ವ್ರದ್ದಿ
Suresh Kunder:
Taxation- ತೆರಿಗೆ.

ಈ ಶಿರ್ಷಕೆಯಲ್ಲಿ ನಾನು ನಿನ್ನೆ ಬರೆದ ತೆರಿಗೆ ಸುಧಾರಣೆಯ ವಿಷಯ ತುಂಬಹ ವಿಮರ್ಶೆಗಳು ಬಂದಿರುವುದು.

ಮೊಟ್ಟ- ಮೊದಲಾಗಿ ಈ 2% Transaction Charge ( ಎಲ್ಲಾ Income Tax, GST, etc. ಬದಲಿಗೆ) ಕೊಡಲು ಸಿಧ್ಧವಿಲ್ಲದ ಪ್ರಜೆಗೆ ಯಾವ ದೇಶದಲ್ಲೂ ಬದುಕುವ ಹಕ್ಕಿಲ್ಲ.

ಅವನು ದೇಶದ ಸಾರಿಗೆ, ರಸ್ತೆ, ನೀರು, ವಿದ್ಯುತ್, ವಿಧ್ಯಾಭ್ಯಾಸ, ಆರೋಗ್ಯ, ಉದ್ಯೋಗ, ಆಹಾರ ಹಾಗು ಯಾವುದೇ ಸೌಕರ್ಯವನ್ನು ಉಪಯೋಗಿಸಲು ಅರ್ಹನಲ್ಲ.

ಆದ್ದರಿಂದ ಈ 2% ಗಾಗಿ ಪ್ರಜೆಗಳು ತಮ್ಮ ಹಣವನ್ನು ಮನೆಯಲ್ಲಿ ಇಟ್ಟು ಕೊಳ್ಳುವರೆಂಬ ಊಹೆ ತಪ್ಪು.

ಸಾಮಾನ್ಯ ಜನರಿಗೆ ಈ 2% ನಿಂದ ಅತಿಯಾದ ಲಾಭವಾಗುವುದು. GST ಇಲ್ಲದೆ ವಸ್ತುಗಳ ಕ್ರಯ 12ರಿಂದ 28% ಕಡಿಮೆಯಾಗುವುದು.

ಬಿಸಿನೆಸ್ನ ಎಲ್ಲಾ ವ್ಯವಹಾರವು ಮುಕ್ತವಾಗಿ ಬ್ಯಾಂಕ್ ಮುಖಾಂತರವಾಗುವುದು.

ಇಲ್ಲಿ ಕೇವಲ ಲಂಚದಿಂದ ಬಂದ ಹಣದ, ಕದ್ದ ಹಣದ ಹಾಗು ಅನೈತಿಕ ರೀತಿಯಿಂದ ಬಂದ ಹಣದ ಸಮಸ್ಯೆ ಇರಬಹುದು. ಆದಕ್ಕೆ ಸರಿಯಾದ ವಿಜಿಲೆನ್ಸ್ ಇರಲೇ ಬೇಕಾಗುವುದು.

ಯಾವುದೇ ವ್ಯವಹಾರದಲ್ಲಿ ₹ 10,000ಕ್ಕಿಂತ ಮೇಲೆ ನಗದು ತೆಗೆದು ಕೊಳ್ಳುವುದನ್ನು ನಿಷೇದಿಸಲೆ ಬೇಕು. ಅದಕ್ಕಿಂತ ಮೇಲೆ ಬ್ಯಾಂಕ್ ಮೂಲಕ ಚೆಕ್, ಡ್ರಾಫ್ಟ್, ಕಾರ್ಡ್ ಹಾಗು ಬ್ಯಾಂಕ್ ಟ್ರಾನ್ಸ್ಫರ್ ಮೂಲಕವೇ ಆಗಬೇಕು.

ಆದ್ದರಿಂದ ₹ 10,000 ದಿಂದ ಕೆಳಗೆ ಕ್ಯಾಶ್ ವ್ಯವಹಾರ ಮಾಡುವವನಿಗೆ ಯಾವುದೇ ತೊಂದರೆ ಇರುವುದಿಲ್ಲ.
ಯಾರಾದರೂ ಈ ಹಣವನ್ನು ತನ್ನ ಬ್ಯಾಂಕ್ ನಿಂದಲೆ ತಂದಿರುವುದಲ್ಲವೇ ? ಆವಾಗ ಅವನು ಆ 2% ಕೊಟ್ಟಿರ ಬೇಕಲ್ಲವೇ ?

ಇನ್ನೊಂದು ವಿಷಯ, ಯಾರಾದರೂ ತನ್ನ ಹಣವನ್ನು ಬ್ಯಾಂಕ್ನಲ್ಲಿ ತಂದಿಟ್ಟಾಗ, ಅದರ ಮೇಲೆ 2% ಕೊಟ್ಟಿರುತ್ತಾನೆ. ಆನಂತರ ಅವನು ನಿಶ್ಚಿಂತೆಯಾಗಿರ ಬಹುದಲ್ಲವೇ ?
ಆ ಅಕೌಂಟ್ಗೆ ಬ್ಯಾಂಕ್ ಬಡ್ಡಿ ಕ್ರೆಡಿಟ್ ಮಾಡಿದಾಗ, ಕೇವಲ ಬಡ್ಡಿಯ ಮೇಲೆ 2% ಕೊಡ ಬೇಕಾಗುತ್ತದೆ.

ಬೇನಾಮಿ ಬಿಸಿನೆಸ್ ( ಲಂಚ, ಅನೈತಿಕ, ಇತ್ಯಾಧಿ) ಗಳ ಹಣವು, ಕೊಡುವವನ ಬ್ಯಾಂಕ್ನಿಂದಲೆ ಬಂದಿರ ಬೇಕಲ್ಲವೇ ?

ನಾನು ಸರಕಾರಿ ಆಫೀಸರ್ ಗೆ ಲಂಚ ಕೊಡುತ್ತೇನೆ ಎಂದು ಭಾವಿಸುವ. ಅಂದರೆ ನನ್ನ ಸಂಬಳ ನನ್ನ ಬ್ಯಾಂಕ್ ಅಕೌಂಟ್ ಗೆ ಬಂದಾಗ ಅದರಿಂದ ಡ್ರಾ ಮಾಡಿ ಕೊಡಬೇಕಲ್ಲವೇ ? ಆವಾಗ ನಾನು ಅದಕ್ಕೆ 2% ತೆರಿಗೆ ಕೊಟ್ಟಿರುವೆನಲ್ಲವೇ ?

ಆದರೆ ತೆಗೆದು ಕೊಂಡವನು ಅದನ್ನು ಬ್ಯಾಂಕ್ಗೆ ಹಾಕದೆ ಇರಬಹುದು. ಆದರೆ ಅವನೂ ₹ 10,000ದ ಮೇಲೆ ಮಾರ್ಕೇಟ್ ನಲ್ಲಿ ಉಪಯೋಗಿಸಲಾಗುವುದಿಲ್ಲ. ಅವನಿಗೆ ಅದರ ಬೆಲೆ ಇರುವುದಿಲ್ಲ.

ಇಂತಹ ಹಣವು ಮನೆಯಲ್ಲಿ ಶೇಖರಣೆ ಆಗಬಹುದು. ಇವುಗಳನ್ನು ಹಿಡಿದು ಸರಕಾರದ ಖಜಾನೆಗೆ ವಜಾಮಾಡಿ, ಇದ್ದವರಿಗೆ ದೊಡ್ಡ ಫೈನ್ ಹಾಕಬೇಕು. ಯಾವ ಕೋರ್ಟ್- ಕಚೇರಿಯ ಕಾರ್ಯಕ್ರಮ ಇರಬಾರದು.ಇಂತಹ ಕಾನೂನು ತರಬೇಕು.

  ಪಾರದರ್ಶಕ ಸರಕಾರ - ಪ್ರಜಾಕೀಯ

ಈ ಸ್ಥಿತಿಯಲ್ಲಿ ನಿಜವಾದ ಬುಸಿನೆಸ್ಸ್ ಮಾಡುವವರು ನಿರಾಳವಾಗಿ ಬುಸಿನೆಸ್ಸ್ ಮಾಡುತ್ತಾರೆ. ಅವರೆ ನಮ್ಮ ದೇಶದ- ರಾಜ್ಯದ ಬೆನ್ನೆಲುಬು. ಅವರಿಗೆ ಎಲ್ಲಾ ತರಹದ ಪ್ರೋತ್ಸಾಹ ಸಿಗುವುದು.

ಕಳ್ಳ- ಕಾಕರು, ಲಂಚ ಕೊರರು, ಮಾಫೀಯಾಗಳು ಹಾಗು ಅನೈತಿಕ ವ್ಯವಹಾರ ಮಾಡುವವರು ದೇಶ ದ್ರೋಹಿಗಳು ಹಾಗು ಇವರಿಂದ ದೇಶಕ್ಕೆ ಯಾವ ಉಪಯೋಗವೂ ಇಲ್ಲ. ಇಂತವರನ್ನು ಅತೀಯಾಗಿ ದಂಡಿಸುವ ಕಾನೂನು ತರಬೇಕು.

ಇವರಿಂದಾಗಿ ದೇಶದ ನಿಜವಾದ ಅರ್ಥ ವ್ಯವಸ್ಥೆಯು ತಿಳಿಯುತ್ತಲೆ ಇಲ್ಲ. ಎಲ್ಲಾ ಯೋಜನೆಗಳು ನೆಲ ಕಚ್ಚುತ್ತಿದೆ. ಎಲ್ಲವೂ ಫೈಲ್ ಆಗುತ್ತಿದೆ. ಇದು ಕೇವಲ 1ರಿಂದ 2% ಜನರು ( 2ರಿಂದ 3 ಕೋಟಿ ದೇಶ ದ್ರೋಹಿಗಳು).

ನಮ್ಮ ಯೋಜನೆಗಳು ಉಳಿದ 128 ಕೋಟಿ( 98%) ಪ್ರಜೆಗಳ ಸೇವೆಗೆ ಬರಬೇಕು.

ದೇಶ ಅತೀ ಕಡಿಮೆ ತೆರಿಗೆ ಇದ್ದಾಗ ಹೂಡಿಕೆದಾರರು ಮುಗಿ ಬೀಳುತ್ತಾರೆ. ಕೈಗಾರಿಕೆಗಳು ವೇಗವಾಗಿ ವ್ರಧ್ಧಿಯಾಗುವುದು. ನಮ್ಮ ಸಾಮಾಗ್ರಿಗಳು ಚೈನಾಕ್ಕಿಂತ ಕಡಿಮೆ ಬೆಲೆಗೆ ಸಿಕ್ಕರೆ, ಪ್ರಪಂಚವೇ ಭಾರತದ ಕಡೆ ನೋಡುವಂತಾಗುವುದು.

ಉದ್ಯೋಗವು ವೇಗವಾಗಿ ವ್ರಧ್ಧಿಯಾಗುವುದು. ಮಾರ್ಕೇಟ್ ಜಗ-ಜಗಿಸುವುದು.

ಈಗ ನಮ್ಮ ದೇಶದ ಬಜೆಟ್ ವಾರ್ಷಿಕ ಸುಮಾರು 24ಲಕ್ಷ ಕೋಟಿ, ಅದರಲ್ಲಿ ಸುಮಾರು 16 ಲಕ್ಷ ಕೋಟಿ ತೆರಿಗೆಯಿಂದ ಬರುವುದು.

ನಾವು ಹೇಳಿದ 2% ನಲ್ಲಿ ಖಂಡಿತಾ 16 ಲಕ್ಷ ಕೋಟಿಗಿಂತ ಹೆಚ್ಚಿಗೆ ಹಾಗು ಮುಂದಿನ 4-5 ವರ್ಷದಲ್ಲಿ ಅದು ಮೂರು ಪಟ್ಟಾಗುವುದು.

ಇದರೊಂದಿಗೆ ಪ್ರಜೆಗಳನ್ನು ಬ್ಯಾಂಕ್ ಮುಖಾಂತರ ವ್ಯವಹಾರ ಮಾಡಲು ಎಲ್ಲಾ ರೀತಿಯ ಸವಲತ್ತು ಮಾಡಿ ಕೊಡಬೇಕು.

ಬ್ಯಾಂಕ್ ನೌಕರರನ್ನು ಪುನರ್ ಟ್ರೈನಿಂಗ್ ಗೆ ಕಳುಹಿಸಿ ಕಸ್ಟಮರ್ ಫ್ರಂಡ್ಲಿ ಮಾಡ ಬೇಕು. ಅದಕ್ಕಾಗಿ ಗ್ರಾಹಕರಿಗೆ ಸೇವೆ ಕೊಡುವಂತಹ ಕಾನೂನೂ ತರಬಹುದು.

ಹಳ್ಳಿ ಕಡೆ ಬ್ಯಾಂಕ್ಗಳಲ್ಲಿ ಇಂತಹ ಸೇವೆ ಇರಲೇ ಬೇಕು. ಕ್ರಮೇಣ ಡಿಜಿಟಲ್ ಬ್ಯಾಂಕಿಂಗ್ ಗೆ ಅತಿಯಾದ ಪ್ರೋತ್ಸಾಹ ಕೊಡಬೇಕು.

ಈ ‌2% ಗೆ ಪ್ರಜೆಗಳು ಹಣವನ್ನು ಅಡಗಿಸುವರಾದರೆ, ಅವರು ಈ ದೇಶದಲ್ಲಿ ಬದುಕಲು ಅರ್ಹರಲ್ಲ.

ಒಬ್ಬ ತಂದೆ- ತಾಯಿ ತನ್ನ ಗಳಿಕೆಯ 90% ತನ್ನ ಹೆಂಡತಿ-ಗಂಡ ಮಕ್ಕಳಿಗೆ ಮುಡಿಪಾಗಿಡುವಾಗ, ದೇಶಕ್ಕೆ 2% ಕೊಡಲಾಗದ ಮನುಷ್ಯ ಈ ದೇಶದ ಪ್ರಜೆಯಾಗಲು ಹೇಗೆ ಸಾಧ್ಯ ?

ಈ 2% ನಿಯಮದಲ್ಲಿ ಎಲ್ಲಾ ಪ್ರಜೆಗಳು ಇನ್ಕ್ಲೂಸಿವ್ ಆಗುವುದರಿಂದ, ಪ್ರತೀಯೊಬ್ಬ ಪ್ರಜೆ, ತಾನು ತೆರಿಗೆ ಕೊಡುವೆನೆಂದು ಗರ್ವದಿಂದ ಹೇಳಬಹುದು.

ಸರ್ಕಾರವೇ ಆಧಾರ್ ಕಾರ್ಡ್ನ ಮುಖಾಂತರ ಬ್ಯಾಂಕ್ ಅಕೌಂಟ್ ಓಪನ್ ಮಾಡಿ, ಅಕೌಂಟ್ ಇಲ್ಲದವರಿಗೆ ಮಾಡಿ ಕೊಡಬಹುದು. ಅದಕ್ಕೆ ಒಂದು 20,000 ಕೋಟಿ ಖರ್ಚಾದರೂ ತೊಂದರೆ ಇಲ್ಲ. ಅದು ನಮ್ಮ ಬಜೆಟ್ನ 0.001% ಕೂಡಾ ಅಲ್ಲ.

ಬೇರೆ ಏನಾದರೂ ಪ್ರಶ್ನೆ ಇದ್ದರೆ ಉದಾಹರಣೆಯೊಂದಿಗೆ ಬರೆಯಿರಿ. ಉತ್ತರಿಸಲು ಪ್ರಯತ್ನಿಸುವೆನು.

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ.

Taxation- ತೆರಿಗೆ – ಭಾಗ 3.

Illustration- ವಿವರಣೆ.

ಒಂದು ಕಂಪೆನಿಯಲ್ಲಿ ಸುಮಾರು 100 ಜನರು ಕೆಲಸ ಮಾಡುವರೆಂದು ಪರಿಗಣಿಸುವ.

ಇವರಿಗೆ ಆ ಕಂಪೆನಿ ಸುಮಾರು ತಿಂಗಳಿಗೆ, ಎಲ್ಲಾ ಕೆಲಸದವರು ಸಂಬಳ ಸೇರಿಸಿ 30 ಲಕ್ಷ ಸಂಬಳ ಕೊಡುತ್ತದೆ ಎಂದು ಪರಿಗಣಿಸುವ.

ಕಂಪೆನಿಯು ಸಂಬಳ ಎಲ್ಲಾ ಕೆಲಸದವರ ಖಾತೆಗೆ ಟ್ರಾನ್ಸ್ಫರ್ ಮಾಡುವಾಗ 2% – ₹ 60,000 ಸರ್ಕಾರಕ್ಕೆ ಬ್ಯಾಂಕ್ ಮುಖಾಂತರ ತೆರಲಾಗುವುದು. ಅಲ್ಲಿಗೆ ಕಂಪೆನಿಯ ಕೆಲಸ ಮುಗಿಯುತ್ತದೆ.

ಉದಾಹರಣೆಗೆ, ನಾನೂ ಒಬ್ಬ ಈ ಕಂಪೆನಿಯ ಕೆಲಸದವನಾಗಿದ್ದು, ಕಂಪೆನಿಯು ನನ್ನ ಬ್ಯಾಂಕ್ ಅಕೌಂಟ್ ಗೆ ₹ 50,000 ಟ್ರಾನ್ಸ್ಫರ್ ಮಾಡಿತು.

ಆವಾಗ ನನ್ನ ಖಾತೆಯಿಂದ ನನ್ನ ಬ್ಯಾಂಕ್ 2 % – ₹ 1,000 ಸರಕಾರದ ತೆರಿಗೆ ತೆಗೆದು ಸರಕಾರಕ್ಕೆ ಕೊಡುವುದು. ನನ್ನ 50,000ಕ್ಕೆ ಬೇರೆ ಯಾವುದೇ( Income Tax and GST) ತೆರಿಗೆ ಇರುವುದಿಲ್ಲ.

ಹಾಗೆ 50,000- ತೆರಿಗೆ ₹ 1,000
Balance ₹ 49,000.

ಇದರಿಂದ ನಾನು ₹ 20,000 ಡ್ರಾ ಮಾಡಿದೆ, ಆಗ ತೆರಿಗೆ 2%-
₹ 400

ಉಳಿದ 28,600 ದಲ್ಲಿ ₹ 10,000 ದ ಚೆಕ್ ಕೊಟ್ಟೆ, ಆಗ ತೆರಿಗೆ 2%
₹ 200.

ಉಳಿದದ್ದು ₹ 18,400ದಲ್ಲಿ ಪುನಹ ₹ 10,000 ಡ್ರಾ ಮಾಡಿದೆ, ಆಗ ತೆರಿಗೆ 2% – ₹ 200

  ಮಹಾಲಕ್ಷ್ಮಿ ದೇವಸ್ಥಾನ, ಗುಬ್ಬಿ

ಉಳಿದದ್ದು ₹ 8,200 ನನ್ನ ಸೇವಿಂಗ್ಸ್ ಆಯಿತು.

ಇಲ್ಲಿ ನಾನು ಟೋಟಲ್ ಕೊಟ್ಟ ತೆರಿಗೆ
₹ 1,000
₹. 400
₹. 200
₹. 200

₹ 1,800 ಟೋಟಲ್ ತೆರಿಗೆ

50,000 ಕ್ಕೆ ಕೊಟ್ಟ ತೆರಿಗೆ ₹ 1,800= 3.6% only.

30% Income Tax ಹಾಗು 12% ರಿಂದ 28% GST ಯ ಬದಲು ಕೇವಲ 3.6% ತೆರಿಗೆ ನನಗೆ ಸುಮಾರು 38% ಲಾಭದಾಯಕವಲ್ಲವೇ ?

ಇದರಿಂದ ಸೇವಿಂಗ್ಸ್ ಗೆ ತುಂಬಹ ಪ್ರೋತ್ಸಾಹ ಸಿಗುವುದು. ಕೇವಲ ಬ್ಯಾಂಕ್ ಗಳು ಬಡ್ಡಿ ಕ್ರೆಡಿಟ್ ಮಾಡಿದಾಗ, ಬಡ್ಡಿಯ ಮೇಲೆ 2% ಕಟ್ಟಾಗುವುದು. ಅಸಲಿ ಮೇಲೆ ಯಾವ ಇಫೆಕ್ಟ್ ಇಲ್ಲ.

ಏನೇ ಆದರೂ 4% ಗಿಂತ ಮೇಲೆ ಹೋಗುವುದೇ ಇಲ್ಲ. ಇದು ಖಂಡಿತಾ.

ಇದರಿಂದ 38 ರಿಂದ 40% ಹಣ ಜನರ ಕೈಯಲ್ಲಿ (ಭ್ಯಾಂಕ್ನಲ್ಲಿ ) ಜಾಸ್ತಿಯಾಗಿ, ಪ್ರಜೆಗಳ ಪರ್ಚೆಸಿಂಗ್ ಪವರ್ ಹೆಚ್ಚಾಗಿ, ಮಾರ್ಕೇಟ್ ತುಂಬಿ ತುಳುಕುವುದು.

ಇದರಿಂದ ಹಣದುಬ್ಬರ- Inflation ಖಂಡಿತಾ ಸ್ವಲ್ಪ ಮಟ್ಟಿಗೆ ಆಗುವುದು. ಆಗಲೇ ಬೇಕು. ಅದೇ ಅರ್ಥ ಶಾಸ್ತ್ರ.

Taxation -ತೆರಿಗೆ – ಭಾಗ 4.

Conclusion- ಮುಕ್ತಾಯ

ನಾವು ಮೊದಲ ಭಾಗದಲ್ಲಿ ವಿವರಿಸಿದಂತೆ, ಯಾವುದೇ ಪ್ರಜೆ, ಕಂಪೆನಿ, ಸಂಸ್ಥೆ, ಬ್ಯಾಂಕ್, ಇತ್ಯಾದಿಗಳಿಗೆ Maximum 4% ತೆರಿಗೆ ಕೊಡ ಬೇಕಾಗುವುದು.

ಆದರೆ ಸರ್ಕಾರಕ್ಕೆ ಬರುವ ತೆರಿಗೆ Unlimited.

ಹೇಗೆ ಎಂಬ ಪ್ರಶ್ನೆ ?

ಭಾಗ 3 ರಲ್ಲಿ ತಿಳಿಸಿದಂತೆ.

ಬ್ಯಾಂಕ್ ಅಥವಾ ಗಿರಾಕಿಗಳು ಕಂಪೆನಿಗೆ 30 ಲಕ್ಷ ಹಣ ಟ್ರಾನ್ಸಫರ್ ಮಾಡುವಾಗ 2% ತೆರಿಗೆ ಸರ್ಕಾರಕ್ಕೆ ಕೊಟ್ಟಿರುತ್ತಾರೆ.

ಹಾಗೆ ಕಂಪೆನಿ ಖಾತೆಗೆ ಬಂದಾಗ ಪುನಹ 2% ತೆರಿಗೆ ಹೋಗುವುದು

ಪುನಹ ಕಂಪೆನಿ ಕೆಲಸದವರು ಸಂಬಳ ಟ್ರಾನ್ಸಫರ್ ಮಾಡಿದಾಗ 2% ತೆರಿಗೆ ಸರ್ಕಾರಕ್ಕೆ ಕೊಡುವುದು.

ಕೆಲಸದವರು ಖಾತೆಗೆ ಬಂದಾಗ ಪುನಹ ಅವರಿಂದ 2% ತೆರಿಗೆ ವಸೂಲಿಯಾಗುವುದು.

ಕೆಲಸದವರು ಪುನಹ ಡ್ರಾ ಅಥವಾ ಬೇರೆಯವರಿಗೆ ಬ್ಯಾಂಕ್ ಮುಖಾಂತರ ( ಚೆಕ್, ಡ್ರಾಫ್ಟ್, ಟ್ರಾನ್ಸ್ಫರ್) ಪೇ ಮಾಡಿದಾಗ ಪುನಹ 2% ತೆರಿಗೆ ಕೊಡುವುದು.

ಹೀಗೆ ಈ ಇಷ್ಟರವರೆಗೆ ಆ 30ಲಕ್ಷದ ಮೇಲೆ ಸರಕಾರಕ್ಕೆ ಸುಮಾರು 10% ತೆರಿಗೆ ಸಿಗುವುದು.

ಈ ಚೈನ್ ಮುಂದುವರಿಯುವುದು. ಕೇವಲ ನಗದು ವ್ಯವಹಾರ ಇದರಲ್ಲಿ ಬರುವುದಿಲ್ಲ. ನಗದು ತೆಗೆದು ಕೊಂಡ ಅಂಗಡಿಯವನೂ ಅದನ್ನು ಬ್ಯಾಂಕಿಗೆ ಹಾಕ ಬೇಕಾಗುವುದು. ತಿರುಗಿ- ತಿರುಗಿ ಬ್ಯಾಂಕಿಗೆ ಬರುವುದು.

ಆದರೆ ಪ್ರತಿ ಪ್ರಜೆ, ಕಂಪೆನಿ, ಸಂಸ್ಥೆ ಗಳು ಕೇವಲ maximum 4% ಮಾತ್ರ ತೆರಿಗೆ ಕೊಡುವುದು.

ಬ್ಯಾಂಕ್ ವ್ಯವಹಾರ ಜಾಸ್ತಿಯಾದಂತೆ ತೆರಿಗೆ ಹಣವೂ ಜಾಸ್ತಿ ಬರುವುದು.ಇದು ಬ್ಯಾಂಕ್ ವಹಿವಾಟಿನ ಮೇಲೆ ನಿರ್ಧಾರವಾಗುವುದು.

ಎಲ್ಲಾ ಬ್ಯಾಂಕ್ಗಳ ಒಂದು ವರ್ಷದ ವಹಿವಾಟುಗಳು ಲೆಕ್ಕಮಾಡಿ ದೇಶದ ರೆವೆನ್ಯೂ ತಿಳಿಯ ಬಹುದು. ಹಣ ಕೈಯಿಂದ ಕೈಗೆ ಹೋದಾಗಲೆಲ್ಲಾ ಸರ್ಕಾರಕ್ಕೆ ತೆರಿಗೆ ಬರುವುದು.

ಇಲ್ಲಿ ಭ್ರಷ್ಟಾಚಾರಕ್ಕೂ ಅವಕಾಶವಿಲ್ಲ. ಭ್ರಷ್ಟ CA ಗಳಿಗೂ ಯಾವುದೇ ಅವಕಾಶವಿರುವುದಿಲ್ಲ.

ಬ್ಯಾಂಕ್ಗಳ ಕಂಪ್ಯೂಟರ್ನಲ್ಲಿ ಅಟೊಮ್ಯಾಟಿಕ್ ತೆರಿಗೆ ಕಟ್ಟು ಮಾಡುವ ಹಾಗು ದೇಶದ ಖಜಾನೆ ಟ್ರಾನ್ಸ್ಫರ್ ಮಾಡುವ ಪ್ರೋಗ್ರಾಂ ಹಾಕಿ ಬಿಡಬೇಕು. ಟ್ಯಾಕ್ಸ್ ಕಲೆಕ್ಟ್ ಮಾಡಲು ಯಾರ ಅವಶ್ಯಕತೆಯೂ ಇರುವುದಿಲ್ಲ.

ಇದು ಖಂಡಿತಾ ಕ್ರಾಂತಿಕಾರಿಯಾಗುವುದಕ್ಕೆ ಸಂಶಯವಿಲ್ಲ.

ಈಗ GST ಶ್ಯಾರ್ ಮಾಡಿದ ಹಾಗೆ, ಈ ತೆರಿಗೆಯನ್ನು ಕೇಂದ್ರ ಹಾಗು ರಾಜ್ಯ ಸರ್ಕಾರ ಪಾಲು ಮಾಡಿಕೊಳ್ಳ ಬೇಕು. ಅದಕ್ಕೆ ಬೇಕಾದ ಒಪ್ಪಂದ ಮಾಡಿ ಕೊಳ್ಳಬೇಕು.

ಎಲ್ಲರಿಗೂ ನನ್ನ ಧನ್ಯವಾದಗಳನ್ನು ತಿಳಿಸುತ್ತಾ ಈ ವಿಷಯವನ್ನು ಇಲ್ಲಿಗೆ ಮುಕ್ತಾಯ ಮಾಡುತ್ತಿರುವೆನು.

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ.
ಈ ವಿಷಯವಾಗಿ ಇನ್ನೂ ತುಂಬಹ ವಿಮರ್ಶೆಯಾಗುವುದು ಅವಶ್ಯಕತೆ ಇದೆ.

WhatsApp: 8277445647
Tell: 7975822460

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ.

Leave a Reply

Your email address will not be published. Required fields are marked *

Translate »