ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಂಪೂರ್ಣ ಕರ್ನಾಟಕ ಯೋಜನೆ

ಅಂಕಿ ಅಂಶ – Data – ಸಂಪೂರ್ಣ ಕರ್ನಾಟಕ*

*ಯಾವುದೇ ಯೋಜನೆ – Plan ಮಾಡಲು ಅಂಕಿ- ಅಂಶಗಳು ಅತೀ ಅವಶ್ಯ.*

ಒಬ್ಬ ಸಾಮಾನ್ಯ ಗ್ರಹಿಣಿ ಕೂಡಾ ಮಾರ್ಕೆಟಿಗಾಗಿ ಹೊರಟಾಗ ತನ್ನ ಅಂಕಿ- ಅಂಶಗಳನ್ನು ಸರಿಯಾಗಿ ನಿರ್ಧರಿಸಿಯೇ ಮುಂದುವರಿಯುತ್ತಾಳೆ.

1.ಮೊದಲನೆಯದಾಗಿ ಈಗಾಗಲೆ ಮನೆಯಲ್ಲಿ ಏನೆಲ್ಲಾ ಇದೆ.

2. ಏನೆಲ್ಲಾ ಖರೀದಿಸುವ ಅವಶ್ಯಕತೆ ಇದೆ.

3. ಎಷ್ಟು ದಿನಕ್ಕಾಗಿ ಬೇಕಾಗುವುದು.

4. ತನ್ನಲ್ಲಿ ಹಣವೆಷ್ಟಿರುವುದು.

5. ಮನೆಯಲ್ಲಿ ಗಂಡನ ಇಷ್ಟದ, ಮಕ್ಕಳ ಇಷ್ಟದ, ತನ್ನ ಇಷ್ಟದ ಹಾಗು ಹಿರಿಯರ ಇಷ್ಟದ ತರಕಾರಿ, ಹಣ್ಣು, ಇತ್ಯಾದಿಗಳನ್ನು, ತನ್ನಲ್ಲಿರುವ ಹಣದಲ್ಲಿ ಬರುವಂತೆ ಯೋಜನೆ ಮಾಡಿ ಖರೀದಿಸುತ್ತಾಳೆ.

6. ಅಷ್ಟೆ ಅಲ್ಲ, ಖರೀದಿಸಿದ ವಸ್ತುಗಳು ಹಾಳಾಗುವ ಮೊದಲೆ ಉಪಯೋಗಿಸಲು ಯೋಜನೆ ಹಾಕುತ್ತಾಳೆ.

ಕೇವಲ 4 ಅಥವಾ 6 ಜನರ ಅವಶ್ಯಕತೆ ಪೂರೈಸಲು ಗ್ರಹಿಣಿಯೊಬ್ಬಳು, ಇಷ್ಟೊಂದು ಯೋಜನೆ ಮಾಡುವಾಗ, 135 ಕೋಟಿ ಜನರಿರುವ ದೇಶ ಹಾಗು 6.5 ಕೋಟಿ ಜನರಿರುವ ಕರ್ನಾಟಕ ರಾಜ್ಯ ತನ್ನ ಅಂಕಿ-ಅಂಶಗಳನ್ನು ಎಷ್ಟು ಕೂಲಂಕೂಷವಾಗಿ ತಯಾರು ಮಾಡ ಬೇಕು ?

ಈ ಕಂಪ್ಯೂಟರ್ ಯುಗದಲ್ಲಿ ಇದು ಖಂಡಿತಾ ಸಾಧ್ಯ.

*ಪ್ರಜಾಕೀಯಾದಲ್ಲಿ ಹಾಗು ಉತ್ತಮ ಪ್ರಜಾಕೀಯಾ ಪಕ್ಷದ ( ಉ.ಪಿ.ಪಿ.) ಸರಕಾರದಲ್ಲಿ ಇದು ಮೊದಲನೆ ಕೆಲಸವಾಗ ಬೇಕು.*

ಪ್ರತಿಯೊಬ್ಬ ಪ್ರಜೆಯ ಸಂಪೂರ್ಣ ಮಾಹಿತಿ *ಬ್ಲೊಕ್ ಚೈನ್ ಟೆಕ್ನಾಲಜಿ* ಮುಖಾಂತರ ಸರಕಾರದ ಕಂಪ್ಯೂಟರ್ ಕೇಂದ್ರಗಳಲ್ಲಿ, ಬೆರಳ ತುದಿಯಲ್ಲಿ ಸಿಗುವಂತಿರ ಬೇಕು.

ಈ ಅಂಕಿ- ಅಂಶಗಳನ್ನು ಯಾರೂ ಅನ್ಯಾಯವಾಗಿ ಉಪಯೋಗಿಸದಂತೆ, ಅದಕ್ಕೆ ಬೇಕಾದ ಚೆಕ್ & ಬ್ಯಾಲೆನ್ಸ್ ಇರಬೇಕು.

*ಬ್ಲೋಕ್ ಚೈನ್ ಟೆಕ್ನಾಲಜಿಯಲ್ಲಿ ಇಂತಹ ಅನ್ಯಾಯಗಳನ್ನು ಹಿಡಿಯಲು ಎಲ್ಲಾ ರೀತಿಯ ವ್ಯವಸ್ಥೆ ಇರುವುದು.*

*ಪ್ರತೀ ಪ್ರಜೆಯು ಆಧಾರ್ ಕಾರ್ಡ್ನ ಮುಖಾಂತರ ಅವನ ಎಲ್ಲಾ ಆಂಕಿ- ಅಂಶಗಳನ್ನು ಕಾಧಿರಿಸ ಬೇಕು.*

ಆಧಾರ್ ಕಾರ್ಡ್ ಸಂಖ್ಯೆ ಕಂಪ್ಯೂಟರ್ನಲ್ಲಿ ಹಾಕಿದಾಗ, ಅವನ ಎಲ್ಲಾ ವಿವರವೂ ಸರ್ಕಾರಕ್ಕೆ ತಿಳಿಯುವಂತಿರಬೇಕು.

ಪ್ರತೀ ಪ್ರಜೆಯ ಅಂಕಿ-ಅಂಶಗಳನ್ನು ಮೂರು ಡಬ್ಬಿ (ಬಾಕ್ಸ್) ಗಳನ್ನಾಗಿ ಮಾಡ ಬೇಕು.

  ಪ್ರಜಾಕೀಯ - ರಾಜಕೀಯ

*1. ಮೊದಲ ಬಾಕ್ಸ್*

A. ಹೆಸರು.
B. ಜನ್ಮ ದಿನ – ಹುಟ್ಟಿದ ವರ್ಷ.
C. ತಂದೆಯ ಹೆಸರು.
D. ತಾಯಿಯ ಹೆಸರು.
E. ವಿವಾಹಿಕ ವಿವರ.
F. ಹೆಂಡತಿ/ ಗಂಡನ ಹೆಸರು.
G. ಮಕ್ಕಳ ವಿವರ.
H. ಜಾತಿ – ಪಂಗಡ
I. ಧರ್ಮ.
J. ಮೂಲ ವಿಳಾಸ.
K. ಈಗಿನ ವಿಳಾಸ.
L. ಟೆಲಿಫೋನ್ ನಂಬರ್.
M. ಈ ಮೈಲ್.
N. ಉದ್ಯೋಗ.

*2. ಎರಡನೆ ಡಬ್ಬಿ- ಬಾಕ್ಸ್*

A. ಆಧಾರ್ ಸಂಖ್ಯೆ
B. ಪಡಿತರ ಚಿಟ್ಟಿ ಸಂಖ್ಯೆ
C. ವೋಟರ್ ಚಿಟ್ಟಿ ಸಂಖ್ಯೆ.
D. ಪಾನ್ ಕಾರ್ಡ್ ಸಂಖ್ಯೆ.
E. ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ.
F. ಸ್ವಂತ ಬ್ಯಾಂಕ್ ಖಾತೆ ಸಂಖ್ಯೆ.
G. ಬ್ಯಾಂಕ್ನ ಹೆಸರು
H. ಬ್ಯಾಂಕ್ನ ಬ್ರಾಂಚ್.
I. IFSC ಸಂಖ್ಯೆ.
J. ಪಾಸ್ಪೋರ್ಟ್ ಸಂಖ್ಯೆ
K. ಪಾಸ್ಪೋರ್ಟ್ ಅಂತ್ಯ ತಾರೀಕು.
L. ಪಾಸ್ಪೋರ್ಟ್ ನಮೂದಿಸಿದ ಸ್ಥಳ.

*3. ಮೂರನೆ ಡಬ್ಬಿ- ಬಾಕ್ಸ್.*
A. ಸ್ವಂತ ತಿಂಗಳ ಆದಾಯ.
B. ಕೆಲಸ ಮಾಡುವ ಕಂಪೆನಿ ವಿವರ.
C. ಬಿಸಿನೆಸ್ ಇದ್ದರೆ, ಅದರ ವಿವರ ಹಾಗು ಆದಾಯ.
D.ಆದಾಯ ತೆರಿಗೆ ವಿವರ.

ಹೀಗೆ ಮೂರು ಬೇರೆ- ಬೇರೆ ಡಬ್ಬಿ- ಬಾಕ್ಸ್ ಅಥವಾ ಪುಟಗಳ ವಿವರ ಸಂಗ್ರಹಿಸಬೇಕು.

ಮೊದಲ ಡಬ್ಬಿಯ ವಿವರ ಯಾರಿಗೆ ಬೇಕಾದರೂ ಕೊಡ ಬಹುದು.

ಆದರೆ ಎರಡನೆ ಹಾಗು ಮೂರನೆ ಡಬ್ಬಿಯ ವಿವರ ಕೇವಲ ಸರ್ಕಾರ ಮಾತ್ರ ಉಪಯೋಗಿಸ ಬಹುದು ಹಾಗು ಹೊರಗೆ ಯಾರಿಗೂ ತಲುಪುವಂತಿಲ್ಲ.

ತಲುಪಿಸಿದವರಿಗೆ ಕಠಿಣ ಶಿಕ್ಷೆಯಾಗ ಬೇಕು.

ಪ್ರಜೆಯೆ ತನ್ನ ವಿವರವನ್ನು ಬೇರೆಯವರಿಗೆ ತಲುಪಿಸಿದರೆ, ಅದು ಅವನಿಗೆ ಬಿಟ್ಟದ್ದು.

ಅಂಕಿ- ಅಂಶಗಳು ಏನೆಲ್ಲಾ ಬೇಕೆಂದು ಸರಿಯಾಗಿ ಚರ್ಚಿಸಿ ಹಾಗು ಅದರ ಫಾರ್ಮೇಟ್ ತಯಾರಿಸ ಬೇಕು.

*ಎಲ್ಲಾ ಕೆಟಗರಿಯ ಸ್ಟೇಟ್ ಮೆಂಟ್ ತೆಗೆಯುವ ವ್ಯವಸ್ಥೆ ಕಂಪ್ಯೂಟರ್ ಪ್ರೋಗ್ರಾಂ ನಲ್ಲಿ ಇರಬೇಕು.*

  ಬಲರಾಮ ಜಯಂತಿ ಹಿನ್ನೆಲೆ ಪೂಜೆ ಮುಹೂರ್ತ

ಮುಂದೆ
6020 ಗ್ರಾಮ ಪಂಚಾಯಿತಿ.
ಹಾಗು6158 ವಾರ್ಡ್ ಆಫೀಸ್ ಗಳಲ್ಲಿ ಕಂಪ್ಯೂಟರ್ ಪೊಯಿಂಟ್ ಇದ್ದು, ಅವುಗಳಿಂದ ಬೇಕಾದ, ಕೇವಲ ಆ ಗ್ರಾಮದ ಅಥವಾ ವಾರ್ಡ್ನ ಅಂಕಿ-ಅಂಶಗಳನ್ನು ತಿಳಿಯುವಂತಿರ ಬೇಕು.

*ಹಾಗೆ ಉ.ಪಿ.ಪಿ. ಯ ಸರ್ಕಾರಿ ಬಂದಾಗ 6020 ಗಾ.ಪ. ಹಾಗು 6158 ವಾರ್ಡ್ಗಳಲ್ಲಿ ಸುಸಜ್ಜಿತ ಪೋಲೀಸ್ ಸ್ಟೇಷನ್ ಗಳಿದ್ದು, ಅಲ್ಲಿಯೂ 12,178 ಕಂಪ್ಯೂಟರ್ ಪೋಯಿಂಟ್ ಗಳಿದ್ದು, ಆ ಸ್ಥಳಗಳ ಅಂಕಿ-ಅಂಶಗಳನ್ನು ಅವರಿಗೆ ಒದಗಿಸಬೇಕು.*

ಇವೆಲ್ಲದ್ದಕ್ಕೂ ಬೇರೆ ಮಿನಿಸ್ಟ್ರೀಯ ಕಂಪೂಟರ್ಗಳ ಸಂಪರ್ಕವನ್ನೂ ಒದಗಿಸ ಬಹುದು.

ಪೋಲೀಸರಿಗೆ, ನ್ಯಾಯಾಂಗ ಹಾಗು ಪೋಲೀಸ್ ವಿಭಾಗದ ಎಲ್ಲಾ ವಿವರಗಳನ್ನು ಈ ಕಂಪ್ಯೂಟರ್ ಮುಖಾಂತರ ತಿಳಿಸ ಬಹುದು.

*ಸರಕಾರದ ಎಲ್ಲಾ ಸೂಚನೆ, ನಿಯಮ, ಕಾನೂನು, ವಿವರಗಳು ಈ ಕಂಪ್ಯೂಟರ್ನಲ್ಲಿ ಒದಗಿಸಿದರೆ, ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗು ಪೋಲೀಸರು ಒಳ್ಳೆಯ ಸೂಚನೆ ( Communication) ಹೊಂದಿದ್ದು, ಅವರವರ ಕಾರ್ಯಗಳನ್ನು ಸುಸಜ್ಜಿತವಾಗಿ ಮಾಡ ಬಲ್ಲರು.*

ಜನನ, ಮರಣ, ಮದುವೆ, ವಿಚ್ಚೇಧನೆಗಳ ವಿವರಗಳು ಕಂಪ್ಯೂಟರ್ಗೆ ಕೂಡಲೆ ತಲುಪುವಂತಹ ವ್ಯವಸ್ಥೆಗಳನ್ನು ಈ ಕಂಪ್ಯೂಟರ್ ಪೋಯಿಂಟ್ಗಳಿಂದ ತಿಳಿಸುವಂತಾಗ ಬೇಕು.

*ಅದರ ಮೇಲೆ ಜನನ, ಮರಣ, ಮದುವೆ, ವಿಚ್ಚೇಧನದ ಪ್ರಮಾಣ ಪತ್ರ ಇದರ ಮೂಲಕವೇ ಕೊಡಬೇಕು.*

ಪ್ರತೀಯೊಬ್ಬ ಪ್ರಜೆಯ ವಿವರ ಸರಕಾರದಲ್ಲಿ ಇರಲೇ ಬೇಕು.

ಸರಕಾರದ ಎಲ್ಲಾ ಯೋಜನೆಗಳನ್ನು ಈ ಅಂಕಿ- ಅಂಶಗಳಿಂದ ಮಾಡಿ, ಅದರ ಲಾಭ ಸಂಪೂರ್ಣ ಪ್ರಜೆಗಳಿಗೆ ನೇರ ತಲುಪುವಂತಿರಬೇಕು.

*ಅಂದರೆ, ನೇರವಾಗಿ ಅವರ ಬ್ಯಾಂಕ್ ಖಾತೆಗೆ ತಲುಪಿದರೆ, ಭ್ರಷ್ಟಾಚಾರಕ್ಕೆ ಅವಕಾಶವೇ ಇರುವುದಿಲ್ಲ.*

18 ವರ್ಷದ ಕೆಳಗಿನ ಪ್ರಜೆಗಳ ಪೋಷಕರ ಖಾತೆಗೆ ತಲುಪುವಂತಿರಬೇಕು.

ಯಾವುದೇ ಪ್ರಜೆ, ತನಗೆ ಬರಬೇಕಾದ ಯೋಜನೆಯ ಲಾಭ ಪಡೆಯಲು ಸರ್ಕಾರಿ ಆಫೀಸ್ ಗಳಿಗೆ ಹೋಗುವ ಅವಶ್ಯಕತೆ ಇರಬಾರದು.

*ರೀಜನಲ್ ಟ್ರಾಫಿಕ್ ಆಫೀಸ್ (RTO) ಗಳಿಂದ ಎಲ್ಲಾ ವಿವರಗಳು ಆಧಾರ್ ಕಾರ್ಡ್ನ ಮೂಲಕ ಪ್ರಜೆಗಳ ಅಂಕಿ-ಅಂಶಗಳಿಗೆ ಸೇರಿ ಕೊಳ್ಳುವಂತೆ ವ್ಯವಸ್ಥೆ ಮಾಡಬೇಕು.*

*ಆವಾಗ ಯಾರ ಹತ್ತಿರ ಎನಿದೆ ( ಕಾರು, ಟು ವೀಲರ್ , ರಿಕ್ಷಾ, ಇತ್ಯಾದಿ) ಎಂದೂ ತಿಳಿಯುವುದು.*

  ಪ್ರಜಾಕೀಯಾ ಏನು ? ಹೇಗೆ ? ತಿಳಿಯಿರಿ

*ಸಂಪೂರ್ಣ ಅಂಕಿ- ಅಂಶಗಳ ಕಂಟ್ರೋಲ್ ಮುಖ್ಯ ಮಂತ್ರಿಯ ಆಫೀಸಿನಿಂದಲೆ ನಿರ್ವಹಿಸಬೇಕು.*

*ಸರಕಾರದ ಎಲ್ಲಾ ಹಾಗು-ಹೋಗುಗಳು ಈ ಬ್ಲೋಕ್ ಚೈನ್ ತಂತ್ರ ಜ್ಞಾನದಿಂದ ನಡೆದರೆ, ಕಾಗದ ಪತ್ರಗಳಿಗೆ,‌ಪೋಸ್ಟ್ಗೆ, ಕುರಿಯರ್ ಸರ್ವಿಸ್ ಗಳಿಗೆ ಖರ್ಚಾಗುವ ಕೋಟಿ – ಕೋಟಿ ಹಣ ಉಳಿತಾಯವಾಗುವುದು.*

ಸರ್ಕಾರಿ ಆಫೀಸ್ಗಳಲ್ಲಿ ಜನರ ಬೀಡು ನಿಂತು ಹೋಗುವುದು.

*ಎಲ್ಲಾ ಅಂಕಿ- ಅಂಶಗಳು ಕಂಪ್ಯೂಟರ್ನಲ್ಲಿ ಇದ್ದು, ಒಂದು ನಿಮಿಷದಲ್ಲಿ ವೆರಿಫಿಕೇಷನ್ ಆಗುವುದು.*

*ಮೇಲೆ ಹೇಳಿದಂತೆ 12,178 ಪೋಲೀಸ್ ಸ್ಟೇಷನ್ ಗಳು ಕೇವಲ ಕಾನೂನು ವ್ಯವಸ್ಥೆ ಅಲ್ಲದೆ, ವೆರಿಫೀಕೇಷನ್ ಮಾಡಿ, ಕಂಪ್ಯೂಟರ್ ಮುಖಾಂತರ ಪ್ರಿಂಟ್ ಮಾಡಿ ಪ್ರಮಾಣ ಪತ್ರಗಳನ್ನು ಪ್ರಜೆಗಳಿಗೆ ತಲುಪಿಸಬಹುದು.*

*ಈ ಅಂಕಿ-ಅಂಶಗಳಿಂದ ರಾಜ್ಯವು ನಿಜವಾದ ರಾಮ- ರಾಜ್ಯವಾಗುವುದರಲ್ಲಿ ಸಂಶಯವಿಲ್ಲ.*

ಮೊದಲ 6 ರಿಂದ 12 ತಿಂಗಳು ಅಂಕಿ- ಅಂಶಗಳನ್ನು ಸಂಗ್ರಹಿಸುವ ತನಕ ಸ್ವಲ್ಪ ಕಷ್ಟವಾಗ ಬಹುದು.

ಆದರೆ ಮುಂದೆ ಎಲ್ಲವೂ ಬೆರಳ ತುದಿಯಿಂದಲೆ ಆಗುವುದು. ಇದು ಅತಿಶಯೋಕ್ತಿ ಅಲ್ಲ.

ಕಂಪ್ಯೂಟರ್ ನಿಪುಣರಿಂದ ಇನ್ನೂ ಇದನ್ನು ಸಂಸ್ಕರಿಸಿ, ಮುಂದುವರಿಯಬೇಕು.

*ಇದು ಕೇವಲ ಪ್ರಜಾಕೀಯಾ ತತ್ವದಡಿ ನಡೆಯುವ ಉತ್ತಮ ಪ್ರಜಾಕೀಯಾ ಪಕ್ಷದಿಂದ ಮಾತ್ರ ಸಾಧ್ಯ.*

ಇಷ್ಟರವರೆಗೆ ಇದು ಆಗದಿರುವುದು ಕರ್ನಾಟಕ ರಾಜ್ಯ ಸರ್ಕಾರಗಳಿಗೆ ನಾಚಿಕೆ ಆಗಬೇಕು.

*ಸಂಪೂರ್ಣ ಪ್ರಪಂಚಕ್ಕೆ ಸಾಫ್ಟ್ ವೇರ್ ಸಪ್ಲೈ ಮಾಡುವ ಕರ್ನಾಟಕದಲ್ಲಿಯೆ ಸರ್ಕಾರಿ ವಿಭಾಗದಲ್ಲಿ ಸರಿಯಾದ ಕಂಪ್ಯೂಟರಿಕರಣ ಇಲ್ಲವಲ್ಲ.*

*ಇದು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ ಆಗಬೇಕು.*

*ಭ್ರಷ್ಟಾಚಾರ ನಿಂತು, ಅಬಿವ್ರಧ್ಧಿ ಹೊಂದಿದ ಹಾಗು ಸುಂದರ ಕರ್ನಾಟಕ ಆಗುವುದರಲ್ಲಿ, ಎಳ್ಳಷ್ಟೂ ಸಂಶಯವಿಲ್ಲ.*

*ಜೈ ಪ್ರಜಾಕೀಯಾ.*
*ಜೈ ಉತ್ತಮ ಪ್ರಜಾಕೀಯಾ ಪಕ್ಷ.*

From : Suresh Kunder [Prajaakeeya Member]

Leave a Reply

Your email address will not be published. Required fields are marked *

Translate »