ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಂಬಂಧ ಹೇಗಿರಬೇಕು ?

ಸಂಬಂಧ….

ಹೌದು ಸಂಬಂಧ ಹೇಗಿರಲು ಎಲ್ಲ ಇಷ್ಟ ಪಡುವಿರಿ?
ಮೊದಲು ನನ್ನ ಜೊತೆಗೆ ನನ್ನ ಸಂಬಂಧ ಚೆನ್ನಾಗಿ ಇರಬೇಕು ನನ್ನ ಬೇಕು ಬೇಡಗಳನ್ನ ನಾನೇ ಪೂರೈಸಿಕೊಳ್ಳಬೇಕು.
ನನ್ನ ಮನಸ್ಸಿನ ತುಮುಲಗಳನ್ನ ನಾವೇ ಅರಿತುಕೊಳ್ಳಬೇಕು.

ನಮ್ಮ ಜೊತೆ ನಮ್ಮ ಸಂಬಂಧ ಚೆನ್ನಾಗಿದ್ದರೆ ಮನೆಯವರ ಜೊತೆ ಅಕ್ಕಪಕ್ಕದವರ ಜೊತೆ ನಮ್ಮ ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು.

ಸಮಾಜದಲ್ಲಿ ಬದುಕುವ ನಾವು ಎಲ್ಲರಲ್ಲೂ ಹಣಕ್ಕಿಂತ ಹೆಚ್ಚಾಗಿ ಸಂಬಂಧಕ್ಕೆ ಬೆಲೆಕೊಡಿ.

ಈಗಿನ ಪರಿಸ್ಥಿತಿಯಲ್ಲಿ ಹುಡುಗ ಆಗಲಿ ಹುಡುಗಿ ಆಗಲಿ ಪ್ರೀತಿ ಎಂಬ ಗಾಳಕ್ಕೆ ಬಿದ್ದು ಕೆಲವು ಕಾರಣಗಳಿಂದ ಒಬ್ಬರಿಗೊಬ್ಬರು ದೂರವಾದರೆ ಒಬ್ಬರಿಗೊಬ್ಬರು ಅವರ ಮೇಲೆ ಇವರು ಇವರಮೇಲೆ ಅವರು ದ್ವೇಷ ಸಾಧಿಸುತ್ತಾರೆ.

  ಕನ್ನಡ ಚಾಣಕ್ಯ ನೀತಿ - Kannada Chanakya Neeti

ಅಣ್ಣ ತಮ್ಮ‌ಆಸ್ತಿಗಾಗಿ ಹೊಡೆದಾಡುತ್ತಾರೆ.

ವಯಸ್ಸಾದ ತಂದೆ ತಾಯಿಗಳಿಗೆ ಒಂದು ತುತ್ತು ಅನ್ನ ಹಾಕದೆ ವೃದ್ದಾಶ್ರಮಕ್ಕೆ ಕಳುಹಿಸುತ್ತಾರೆ.

ಇದು ಯಾಕೆ.

ಮೊದಲು ನನ್ನ ಮನಸ್ಸನ್ನು ವಿಶಾಲವಾಗಿ ವೃಧ್ದಿಸಿಕೊಳ್ಳಬೇಕು.

ಈ ಪ್ರಪಂಚದಲ್ಲಿ ಯಾರಿಗೆ ಯಾರು ಇಲ್ಲ ಈವಾಗ ಇದ್ದೀವಿ ಅನ್ನೊದು ಅಷ್ಟೆ ಸತ್ಯ ಮತ್ತೊಂದು ಕ್ಷಣದಲ್ಲಿ ಏನಾಗುತ್ತೀವೊ ನಮಗೆ ತಿಳಿಯದು.

ಯಾವಾಗ ಈ ಉಸಿರು ನಿಲ್ಲುತ್ತದೊ ಹೇಳಲಾಗದು ಹೀಗಿರುವಾಗ ನಾವು ಯಾಕೆ ದ್ವೇಷ ಅಸೂಯೆಯನ್ನು ನಮ್ಮಲ್ಲಿ ಬೆಳೆಸಿಕೊಂಡು ನಮ್ಮ ಮನಸ್ಸನ್ನು ಕೆಡೆಸಿಕೊಂಡು ಮತ್ತೊಬ್ವರಿಗೂ ನೋವು ಉಂಟು ಮಾಡಿ ಸಮಾಜಕ್ಕೆ ಭಾರವಾಗ ಬೇಕು.

  ಹಿಂದಿನ ಕಾಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗೆ ಅರ್ಥ

ಒಂದು ಸಾರಿ ಯೋಚಿಸಿ ಜೀವನ ತುಂಬಾ ಸರಳ ವಿಶಾಲವಾಗಿದೆ ಪ್ರೀತಿ ಎನ್ನುವ ಹೃದಯವನ್ನು ತೆಗೆದು ನೋಡಿ ವಿಶಾಲವಾಗಿಸಿ ನಿಮ್ಮ ಪ್ರಪಂಚವನ್ನು ಅರಿಯಿರಿ ಸದಾ ನಗುತ್ತಿರಿ.

ಯಾವುದು ಶಾಶ್ವತವಲ್ಲ ಯಾರು ಜೀವನದಲ್ಲಿ ನಮ್ಮ ಜೊತೆ ಬರಲಾರರು ಇರುವವರೆಗೂ ಪ್ರಪಂಚದಲ್ಲಿ ಪ್ರೀತಿಯನ್ನು ಧಾರೆ ಎರೆದು ನಾವು ಪ್ರೀತಿಯನ್ನು ಪಡೆಯೋಣ‌.
ನೀವೆನಂತೀರ…

Leave a Reply

Your email address will not be published. Required fields are marked *

Translate »