ಬುದ್ದನ ಜೀವನದ ಒಂದು ಪ್ರಸಂಗ
ಎಂದಿನಂತೆ ಪ್ರಪಂಚದ ಒಳಿತಿನ ಬಗ್ಗೆ ಆಳವಾಗಿ ಚಿಂತಿಸುತ್ತಾ ಕುಳಿತಿದ್ದ ಬುದ್ದನ ಬಳಿ ಶಿಷ್ಯನೊಬ್ಬ ಬಂದು ಹೇಳಿದರು ಸ್ವಾಮಿ ಪ್ರಪಂಚದ ಬಗ್ಗೆ ಯೋಚಿಸುವ ನೀವು ನಿಮ್ಮ ಶಿಷ್ಯರಬಗ್ಗೆಯೂ ಸ್ವಲ್ಪ ಯೋಚಿಸಬಾರದೇ ?
ಇದನ್ನು ಕೇಳಿದ ಬುದ್ದ ನಸುನಗುತ್ತ ಹೇಳು ನಿನಗಾಗಿ ಏನು ಮಾಡಬೇಕಾಗಿದೆ
ಶಿಷ್ಯ ನನ್ನ ವಸ್ತ್ರ ಹರಿದು ಹೋಗಿದೆ ನನಗೆ ಒಂದು ವಸ್ತ್ರ ಅಗತ್ಯ ಇದೆ ಶಿಷ್ಯನ ಮಾತು ಕೇಳಿ ಬುದ್ದ ಆತನಿಗೆ ಒಂದು ಜೊತೆ ನೂತನ ವಸ್ತ್ರ ವನ್ನು ವ್ಯವಸ್ಥೆ ಮಾಡಿದರು ಆ ವಸ್ತ್ರವನ್ನು ಧರಿಸಿ ಬಂದ ಶಿಷ್ಯನನ್ನು ಕುರಿತು ಬುದ್ದ ಹೀಗೆ ಹೇಳಿದರು ವಸ್ತ್ರ ಸರಿಯಾಗಿದೆಯೇ ಈಗ ನಿನಗೆ ಖುಷಿಯಗಿದೆಯೇ ?
ಶಿಷ್ಯ : ನೀವು ನೀಡಿರುವ ವಸ್ತ್ರ ತುಂಬ ಆರಾಮವಾ ಗಿದೆ ನನಗೀಗ ಅತ್ಯಂತ ಸಂತೋಷ ವಾಗಿದೆ ಇನ್ನೇನು ಬೇಕಿಲ್ಲ ಎಂದ .
ಬುದ್ದ : ನೂತನ ವಸ್ತ್ರ ಬಂದ ಮೇಲೆ ನೆನ್ನ ಹಳೆಯ ವಸ್ತ್ರಗಳನ್ನು ಏನು ಮಾಡಿದೆ ?
ಹಳೆಯ ವಸ್ತ್ರಗಳನ್ನು ನಾನೀಗ ಹಾಸಿಗೆಯಮೇಲೆ ಹಾಸುವ ಬಟ್ಟೆಯನ್ನಾಗಿ ಉಪಯೋಗಿಸಿದೆ
ಬುದ್ದ : ಈ ಮೊದಲು ಉಪಯೋಗಿಸುತ್ತಿದ್ದ ಹಾಸಿಗೆಯ ಬಟ್ಟೆಯನ್ನು ಏನು ಮಾಡಿದೆ
ಶಿಷ್ಯ :ಅದನ್ನು ಈಗ ಕಿಟಕಿಯ ಪರದೆಯಾಗಿ ಉಪಯೋಗಿಸುತ್ತಿದ್ದೇನೆ .
ಬುದ್ದ : ಹಳೆಯ ಪರದೇಯನ್ನು ಏನು ಮಾಡಿದೆ
ಶಿಷ್ಯ ; ಆ ಬಟ್ಟೆಯನ್ನು ಅಡಿಗೆ ಮನೆಯಲ್ಲಿ ಬಿಸಿ ಪಾತ್ರೆಗಳನ್ನು ಹಿಡಿಯಲು ಉಪಯೋಗಿಸಿದೆ
ಬುದ್ದ : ಹಾಗಿದ್ದಲ್ಲಿ ಈ ಮೊದಲು ಉಪಯೋಗಿಸುತ್ತಿದ್ದ ಹಳೆ ಬಟ್ಟೆಯನ್ನು ಏನು ಮಾಡಿದೆ?
ಶಿಷ್ಯ: ಆ ಬಟ್ಟೆಯನ್ನು ನೆಲ ಶುಭ್ರ ಗೊಳಿಸಲು ಉಪಯೋಗಿಸುತ್ತಿದ್ದೇನೆ
ಬುದ್ದ : ಮೊದಲಿನ ಬಟ್ಟೆಯನ್ನು ಬಿಸಾಡಿ ಬಿಟ್ಟೆಯಾ ?
ಶಿಷ್ಯ : ಇಲ್ಲ ಅದು ತುಂಬ ಶಿಥಿಲ ಗೊಂಡಿತ್ತು ಅದಕ್ಕೆ ಅದರಿಂದ ಬತ್ತಿಯನ್ನು ಮಾಡಿ ಲಾಟಿನ್ನಿಗೆ ಹಾಕಿ ಹಚ್ಚುತ್ತೇನೆ ಈಗ ಲಾಟ್ಟಿ ನಿ ನಲ್ಲಿರುವ ಬತ್ತಿ ಅದೇ ಆಗಿದೆ
ಶಿಷ್ಯನ ಮಾತನ್ನು ಕೇಳಿ ಬುದ್ದ ನಸು ನಕ್ಕು ಹೊರ ನಡೆದರು
ನಮ್ಮ ಜೀವನದಲ್ಲಿಯೂ ಅಷ್ಟೇ ನಮ್ಮ ಮನೆ ಹಾಗು ಕಚೇ ರಿಗಳಲ್ಲಿರುವ ವಿವಿದ ಸಂಪನ್ನ್ಮೂ ಲಗಳಿವೆ ಅರ್ಹ ಉಪಯೋಗವನ್ನು ನಾವು ಕಂಡುಹಿಡಿಯ ಬೇಕು ಹಾಗೆಯೆ ಈ ಪೃಥ್ವಿಯ ಮೇಲೆ ಪ್ರಕೃತಿ ನೀಡಿರುವ ಎಲ್ಲ ಸಹಜ ಹಾಗು ಅನೇಕ ಸಂಪನ್ಮೂಲಗಳನ್ನು ತಲೆಮಾರು ಗಳ ಕಾಲ ಉಪಯುಕ್ತ ವಾಗುವಂತೆ ನಾವು ನೋಡಿಕೊಳ್ಳಬೇಕು.