ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಾರತೀಯ ಪರಂಪರೆಯಲ್ಲಿ ಕೈಯಿಂದ ಊಟ ಮಾಡುವುದಕ್ಕೆ ಮಹತ್ವ ಏಕೆ ನೀಡಲಾಗಿದೆ ..?

ಭಾರತೀಯ ಪರಂಪರೆಯಲ್ಲಿ ಕೈಯಿಂದ ಊಟ ಮಾಡುವುದಕ್ಕೆ ಮಹತ್ವ ಏಕೆ ನೀಡಲಾಗಿದೆ..?

ಸಜೀವ ವ್ಯಕ್ತಿಗಳಲ್ಲಿ ನಿರ್ಜೀವ ವಸ್ತುಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಚೈತನ್ಯವಿರುತ್ತದೆ. ಚಮಚ ಧಾತುವಿನದ್ದಾಗಿರುವುದರಿಂದ, ಹಾಗೂ ಅದು ನಿರ್ಜೀವವಾಗಿರುವುದರಿಂದ, ಅದರಲ್ಲಿ ಸಾತ್ತ್ವಿಕತೆ ಮತ್ತು ಚೈತನ್ಯ ಸ್ವಲ್ಪ ಪ್ರಮಾಣದಲ್ಲಿರುತ್ತದೆ. ಅದೇ ಮನುಷ್ಯರಲ್ಲಿ ಕಡಿಮೆಯೆಂದರೂ ಸಾತ್ತ್ವಿಕತೆ ಶೇ. ೨೦ ರಷ್ಟು ಇರುತ್ತದೆ. ಅವನ ಐದೂ ಬೆರಳುಗಳಿಂದ ಪಂಚತತ್ತ್ವಗಳಿಗೆ ಸಂಬಂಧಿಸಿದ ಶಕ್ತಿ ಪ್ರವಹಿಸುತ್ತಿರುತ್ತದೆ. ಇದರ ಬಗ್ಗೆ ಸೂಕ್ಷ್ಮದಿಂದ ದೊರೆತ ಜ್ಞಾನವನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ

ಚಮಚದಿಂದ ಊಟ ಮಾಡುವುದು ಮತ್ತು ಕೈಯಿಂದ ಊಟ ಮಾಡುವುದರಲ್ಲಿರುವ ವ್ಯತ್ಯಾಸ

ಚಮಚದಿಂದ ಆಹಾರವನ್ನು ಸೇವಿಸುವುದು ಕೈಗಳಿಂದ ಆಹಾರವನ್ನು ಸೇವಿಸುವುದು
೧. ಆಹಾರವನ್ನು ಸೇವಿಸುವ ಪದ್ಧತಿ ಯಾವುದು ಪಾಶ್ಚಿಮಾತ್ಯ ಭಾರತೀಯ
೨. ತ್ರಿಗುಣಗಳಲ್ಲಿ ಕಾರ್ಯನಿರತವಾಗಿರುವ ಗುಣ ರಜ-ತಮ ರಜ-ಸತ್ತ್ವ
೩. ಪಂಚತತ್ತ್ವಗಳಲ್ಲಿ ಕಾರ್ಯನಿರತ ತತ್ತ್ವ ಪೃಥ್ವಿ ಕಿರುಬೆರಳಿನಲ್ಲಿ ಪೃಥ್ವಿ, ಅನಾಮಿಕಾದಲ್ಲಿ (ಉಂಗುರದ ಬೆರಳು) ಆಪ, ಮಧ್ಯಮಾದಲ್ಲಿ ತೇಜ, ತೋರು ಬೆರಳಿನಲ್ಲಿ ವಾಯು ಮತ್ತು ಹೆಬ್ಬರಳಿನಲ್ಲಿ ಆಕಾಶ, ಹೀಗೆ ಪಂಚತತ್ತ್ವಗಳೂ ಕಾರ್ಯನಿರತವಾಗಿರುತ್ತವೆ
೪. ಶಕ್ತಿಪಾತ ಯೋಗಕ್ಕನುಸಾರ ಆಹಾರವನ್ನು ಸೇವಿಸುವುದರಿಂದ ದೇಹದ ಶಕ್ತಿ ಪುನಃ ದೇಹದಲ್ಲಿ ಪ್ರವೇಶಿಸುವುದು / ಪ್ರವೇಶಿಸದಿರುವುದು ಪ್ರವೇಶಿಸುವುದಿಲ್ಲ ಪ್ರವೇಶಿಸುತ್ತದೆ
೫. ಆಹಾರಕ್ಕೆ ಚಮಚ ಅಥವಾ ಕೈಬೆರಳುಗಳ ಸ್ಪರ್ಶ ಆದಾಗ ಆಹಾರದ ಮೇಲಾಗುವ ಪರಿಣಾಮಗಳ ಸ್ವರೂಪ ಆಹಾರದಲ್ಲಿ ಚಮಚದ ರಜ-ತಮ ಲಹರಿಗಳು ಪ್ರವೇಶಿಸುವುದರಿಂದ ಆಹಾರದ ಸಾತ್ತ್ವಿಕತೆಯು ಕಡಿಮೆಯಾಗುವುದು ಬೆರಳುಗಳಿಂದ ಪ್ರವಹಿಸುವ ಸಾತ್ತ್ವಿಕತೆ ಆಹಾರದಲ್ಲಿ ಪ್ರವೇಶಿಸುವುದರಿಂದ ಆಹಾರ ಹೆಚ್ಚು ಸಾತ್ತ್ವಿಕವಾಗುವುದು
೬. ಆಹಾರವನ್ನು ಸೇವಿಸುವುದರಿಂದ ಆಗುವ ಪರಿಣಾಮಗಳ ಸ್ವರೂಪ, ಪ್ರಮಾಣ (ಶೇ.) ಮತ್ತು ಕಾಲಾವಧಿ
೬ಅ. ಸ್ವರೂಪ ತೊಂದರೆದಾಯಕ ಒಳ್ಳೆಯ
೬ಆ. ಪ್ರಮಾಣ (ಶೇ.) ೧೦ ೨೦
೬ಇ. ಕಾಲಾವಧಿ ಕೆಲವು ಗಂಟೆಗಳು ಒಂದು ದಿನ
೭. ಚಮಚ ಅಥವಾ ಕೈಬೆರಳುಗಳಿಂದ ಆಹಾರ ಸೇವಿಸುವುದರಿಂದ ವ್ಯಕ್ತಿಯ ದೇಹದ ಮೇಲಾಗುವ ಪರಿಣಾಮ ದೇಹದಲ್ಲಿರುವ ಸಾತ್ತ್ವಿಕತೆ ಚಮದಲ್ಲಿ ಪ್ರವಹಿಸಿ ಕಡಿಮೆಯಾಗುವುದು ದೇಹದಲ್ಲಿರುವ ಸಾತ್ತ್ವಿಕತೆ ಆಹಾರದ ಮೂಲಕ ಪುನಃ ದೇಹದಲ್ಲಿ ಪ್ರವೇಶಿಸುವುದರಿಂದ ಹೆಚ್ಚಳವಾಗುವುದು
೮. ಎಷ್ಟು ಶೇಕಡಾ ಮಟ್ಟದ ವರೆಗೆ ಪರಿಣಾಮವಾಗುತ್ತದೆ ? (ಟಿಪ್ಪಣಿ) ೨೦ ರಿಂದ ೬೦ ೩೦ಕ್ಕಿಂತ ಮುಂದೆ
ಟಿಪ್ಪಣಿ : ಶೇ. ೬೧ ಮಟ್ಟದ ಬಳಿಕ ಬಾಹ್ಯ ವಿಷಯಗಳಿಂದ ದೇಹದ ಸಾತ್ತ್ವಿಕತೆಯ ಮೇಲಾಗುವ ಪರಿಣಾಮದ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಶೇ. ೬೧ ಮಟ್ಟದ ಬಳಿಕ ಚಮಚದಿಂದ ಆಹಾರ ಸೇವಿಸುವುದರ ಪರಿಣಾಮವು ಕಡಿಮೆಯಾಗತೊಡಗುತ್ತದೆ. ಶೇ. ೭೧ ರಿಂದ ೮೦ ರಷ್ಟು ಮಟ್ಟದವರೆಗೆ ಚಮಚದಿಂದ ಆಹಾರ ಸೇವಿಸುವುದರ ಪರಿಣಾಮ ಕೇವಲ ಶೇ. ೧ ರಷ್ಟು ಆಗುತ್ತದೆ ಮತ್ತು ಶೇ. ೮೧ ರಷ್ಟು ಮಟ್ಟದ ನಂತರ ಈ ಪರಿಣಾಮ ಶೇ. ೦ ರಷ್ಟು, ಅಂದರೆ ಸ್ವಲ್ಪವೂ ಆಗುವುದಿಲ್ಲ.

  ನಾಗ ದೋಷ ಹೇಗೆ ಬರುತ್ತದೆ ..? ನಾಗ ದರ್ಶನ ಶುಭ ಅಶುಭ ಸೂಚನೆ ವಿವರ

ವ್ಯಕ್ತಿಯು ಕೈಯಿಂದ ಊಟ ಮಾಡುವಾಗ ಅವನ ಕೈಯ ಐದೂ ಬೆರಳುಗಳಿಂದ ಪ್ರಕ್ಷೇಪಿಸುವ ಸಾತ್ತ್ವಿಕತೆ ಅವನ ಕೈಯಲ್ಲಿರುವ ತುತ್ತಿನ ಕಡೆಗೆ ಪ್ರವಹಿಸುತ್ತದೆ ಮತ್ತು ಅವನು ಆಹಾರ ಸೇವಿಸಿದಾಗ ಈ ಸಾತ್ತ್ವಿಕತೆ ಪುನಃ ಅವನ ದೇಹದಲ್ಲಿ ಹೋಗುತ್ತದೆ. ಈ ರೀತಿ ಶಕ್ತಿಪಾತಯೋಗಕ್ಕನುಸಾರ ವ್ಯಕ್ತಿಯಿಂದ ಪ್ರಕ್ಷೇಪಿಸುವ ಸಾತ್ತ್ವಿಕತೆ ಮತ್ತು ಶಕ್ತಿ ಅವನಿಗೆ ಪುನಃ ಸಿಗುತ್ತದೆ. ಅದೇ ಚಮಚವನ್ನು ಉಪಯೋಗಿಸುವುದರಿಂದ ಶಕ್ತಿಯು ಹೆಬ್ಬೆರಳು ಮತ್ತು ತೋರು ಬೆರಳಿನ ಮೂಲಕ ಚಮಚದಲ್ಲಿ ಪ್ರವೇಶಿಸಿ ಚಮಚದ ರಜ-ತಮ ಕಡಿಮೆಯಾಗಲು ಉಪಯೋಗವಾಗುತ್ತದೆ. ಇದರಿಂದ ಅವನಿಗೆ ತನ್ನ ಸಾತ್ತ್ವಿಕತೆಯನ್ನು ಸೇವಿಸಲು ಸಾಧ್ಯವಾಗುವುದಿಲ್ಲ. ಚಮಚದಲ್ಲಿನ ರಜ-ತಮಾತ್ಮಕ ಸ್ಪಂದನಗಳು ಚಮಚದಲ್ಲಿರುವ ಆಹಾರಕಣಗಳಲ್ಲಿ ಹೋಗುತ್ತವೆ ಮತ್ತು ಅವನಿಗೆ ಆಹಾರದಿಂದ ರಜ-ತಮಾತ್ಮಕ ಶಕ್ತಿ ದೊರಕುತ್ತದೆ. ಇದರಿಂದ ಅವನಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವ ಬದಲು ಹಾನಿಯೇ ಆಗುತ್ತದೆ.

  ಬೆಳಗ್ಗಿನ ಸಮಯದಲ್ಲಿ ಏಕೆ ಸ್ನಾನ ಮಾಡಬೇಕು ?

ಆದುದರಿಂದ ವ್ಯಕ್ತಿಯು ಚಮಚದಿಂದ ಆಹಾರ ಸೇವಿಸುವುದಕ್ಕಿಂತ ಕೈಯಿಂದ ಸೇವಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಅಧಿಕ ಯೋಗ್ಯವಾಗಿದೆ. ಹೀಗಿದ್ದರೂ, ಚರ್ಮರೋಗ, ಕೈಯ ಬೆರಳುಗಳಿಗೆ ಏನಾದರೂ ಗಾಯಗಳಾಗಿದ್ದರೆ ಅಥವಾ ಸೂಪ್, ಪಾಯಸಗಳಂತಹ ಪದಾರ್ಥಗಳನ್ನು ಸೇವಿಸುವಾಗ ವ್ಯಕ್ತಿಯ ಕೈಗಳಿಗಿಂತ ಚಮಚದಿಂದ ಆಹಾರವನ್ನು ಸೇವಿಸುವುದು ಅಧಿಕ ಯೋಗ್ಯವಾಗಿದೆ. ಮೇಲಿನ ಕೆಲವು ಅಪವಾದಾತ್ಮಕ ಪರಿಸ್ಥಿತಿಯನ್ನು ಹೊರತುಪಡಿಸಿದರೆ ವ್ಯಕ್ತಿಯು ಕೈಗಳಿಂದ ಆಹಾರವನ್ನು ಸೇವಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿದೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »