ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಚಂಡಿಯಾಗ ಎಂದರೇನು?

🕉 ಚಂಡಿಯಾಗ ಎಂದರೇನು?

ದೇವಿ ಉಪಾಸನೆಯ ಪ್ರಮುಖ ಭಾಗವೇ ದುರ್ಗಾಸಪ್ತಶತಿ ಪಾರಾಯಣ. ದುರ್ಗಾಸಪ್ತಶತಿಯಲ್ಲಿ 700 ಶ್ಲೋಕಗಳಿವೆ. ಪ್ರತಿಯೊಂದು ಶ್ಲೋಕವನ್ನು ಮಂತ್ರರೂಪಕವಾಗಿ ಚರುವಿನ ಮೂಲಕ ಮಾಡುವ ಯಜ್ಞವೇ ಚಂಡಿಕಾಯಾಗ. ಚಂಡಿಕಾಯಾಗದ ಮೂಲಕ ಮಹಾಲಕ್ಷ್ಮಿ, ಮಹಾಸರಸ್ವತಿ ಮತ್ತು ಮಹಾದುರ್ಗಿಯರನ್ನು ಸ್ತೋತ್ರಭಾಗದಿಂದ ಆರಾಧಿಸಲಾಗುತ್ತದೆ. ಚಂಡಿಕಾ ದೇವಿಯು ಮಧುಕೈಟಭ, ಮಹಿಷಾಸುರ, ಶುಂಭ, ನಿಶುಂಭ, ಚಂಡಮುಂಡ, ರಕ್ತಬೀಜ ರಾಕ್ಷಸರನ್ನು ತ್ರಿಶಕ್ತಿಯ ರೂಪದಿಂದ ವಧಿಸುತ್ತಾಳೆ. ಲೋಕ ಪಾವನಿಯಾಗಿ, ಲೋಕ ಕಲ್ಯಾಣವನ್ನು ಮಾಡುತ್ತಾಳೆ. ದೇವಿ ಮಹಾತ್ಮ್ಯೆಯಲ್ಲಿ ಚಂಡಿಕಾದೇವಿಯ ವರ್ಣನೆಯಿದೆ. ಆಕೆ ಹದಿನೆಂಟು ಕೈಗಳನ್ನು ಹೊಂದಿದ್ದಾಳೆ. ಪ್ರತಿಯೊಂದು ಕೈಯಲ್ಲೂ ಒಂದೊಂದು ಬಗೆಯ ಶಸ್ತ್ರಗಳನ್ನು ಹಿಡಿದಿದ್ದಾಳೆ.

  ನವರಾತ್ರಿಯ 7ನೇ ದಿನ ಕಾಲರಾತ್ರಿ ಪೂಜಾ ವಿಧಾನ

ಯಾರು ಮಾಡಬಹುದು?: ದುಷ್ಟಪೀಡೆ, ಅರಿಷ್ಟ, ಶತ್ರುಬಾಧೆ, ಗ್ರಹದೋಷಗಳಿಂದ ಬಾಧಿತರಾಗಿದ್ದರೆ, ಮಾಟ, ಮಂತ್ರ, ವಶೀಕರಣದ ಪ್ರಭಾವಕ್ಕೆ ಒಳಗಾಗಿದ್ದೇವೆ ಎಂದೆನಿಸಿದ್ದರೆ, ಜೀವ ಭಯ, ಮೃತ್ಯು ಭಯದಿಂದ ಬಾಧಿತರಾಗಿದ್ದರೆ, ದೇವಿಯ ಕೃಪೆಗೆ ಪಾತ್ರರಾಗಬೇಕೆನ್ನುವ ಇಚ್ಛೆಯಿದ್ದರೆ.

ಚಂಡಿ ಹೋಮದ ಲಾಭಗಳು : ನಕಾರಾತ್ಮಕ ಅಂಶಗಳು ಮರೆಯಾಗಿ ಸಕಾರಾತ್ಮಕ ಚಿಂತನೆ, ಶಕ್ತಿ ಉಂಟಾಗುತ್ತದೆ. ಶಾಪ, ಪೀಡೆಗಳು ಪರಿಹಾರವಾಗುತ್ತವೆ. ಎಲ್ಲಾ ಬಗೆಯ ಸಂಕಷ್ಟಗಳು ಮರೆಯಾಗುತ್ತವೆ. ಉತ್ತಮ ಆರೋಗ್ಯ, ಸಂಪತ್ತು, ಅಭಿವೃದ್ಧಿ, ಕಠಿಣತಮವಾದ ಕಾಯಿಲೆಗಳಿಂದ ಪರಿಹಾರ, ಶತ್ರು ಬಾಧಾ ನಿವಾರಣೆ.

ಯಾವಾಗ ಮಾಡಬೇಕು?: ನವರಾತ್ರಿ, ಅಷ್ಟಮಿ, ನವಮಿ, ಚತುರ್ದಶಿ, ಮಾಘ ಅಮಾವಾಸ್ಯೆ, ಜ್ಯೇಷ್ಠ ಅಮಾವಾಸ್ಯೆ, ಚೈತ್ರ ಮತ್ತು ಕಾರ್ತಿಕ ಪೌರ್ಣಮಿ ಶುಭ ದಿನಗಳು.

  ಚೂಡಾಮಣಿ ಸೂರ್ಯ ಗ್ರಹಣದ ಸಂಪೂರ್ಣ ವಿವರ

ಚಂಡಿ ಹೋಮದ ಬಗೆ: ಚಂಡಿಕಾ ಯಾಗದಲ್ಲಿ ಎರಡು ಬಗೆಯಿದೆ. ಶತ ಚಂಡಿಕಾ ಯಾಗ, ಪ್ರಯೂತ ಚಂಡಿಯಾಗ, ಆಯುತ ಚಂಡಿಯಾಗ. ಆಯುತ ಚಂಡಿಯಾಗವೆಂದರೆ ದುರ್ಗಾಸಪ್ತಶತಿಯ 700 ಶ್ಲೋಕಗಳನ್ನು ಹತ್ತು ಸಾವಿರ ಬಾರಿ ಜಪಿಸುತ್ತಾರೆ. ಪ್ರಯೂತ ಚಂಡಿಯಾಗವೆಂದರೆ 700   ಶ್ಲೋಕಗಳನ್ನು ಒಂದು ದಶಲಕ್ಷ ಬಾರಿ ಜಪಿಸುತ್ತಾರೆ.

Leave a Reply

Your email address will not be published. Required fields are marked *

Translate »