www.vishaya.in ಬಿಲ್ಲುಗಾರ vs ಝೆನ್ ಮಾಸ್ಟರ್ ಮೇಲಿನ ಈ ಝೆನ್ ಕಥೆ ಯಾರು ನಿಜವಾದ ಚಾಂಪಿಯನ್ ಎಂದು ತಿಳಿಸುತ್ತದೆ.
ಝೆನ್ ಕಥೆ
ಒಬ್ಬ ಬಿಲ್ಲುಗಾರ ಕೌಶಲ್ಯಕ್ಕೆ ಹೆಸರಾದ ಝೆನ್ ಮಾಸ್ಟರ್ ಇದ್ದರು. ಓರ್ವ ಕಿರಿಯ ಚಾಂಪಿಯನ್ ಬಿಲ್ಲುಗಾರನೊಬ್ಬ ಹಲವಾರು ಬಿಲ್ಲುಗಾರಿಕೆ ಸ್ಪರ್ಧೆಗಳನ್ನು ಗೆದ್ದ ನಂತರ, ಈ ಝೆನ್ ಮಾಸ್ಟರ್ ರವರನ್ನು ಸವಾಲು ಮಾಡಿ ಗೆಲ್ಲೆಬೇಕೆಂದು ಹಾಗು ಅಪ್ರತಿಮ ಬಿಲ್ಲುಗಾರನಾಗಿ ಹೆಸರು ಮಾಡಬೇಕೆಂದುಕೊಂಡು ಝೆನ್ ಮಾಸ್ಟರ್ ಬಳಿ ಬಂದು ನೇರವಾಗಿ ಸವಾಲು ಮಾಡಿದನು. ಝೆನ್ ಮಾಸ್ಟರ್ ಯಾವುದೇ ಸಂಕೋಚವಿಲ್ಲದೆ ಅವನ ಸವಾಲನ್ನು ಸ್ವೀಕರಿಸಿದರು.
ಯುವಕನು ಕೂಡಲೇ ತನ್ನ ಬಿಲ್ಲು ಬಾಣಗಳನ್ನು ತೆಗೆದು , ತನ್ನ ಮೊದಲ ಪ್ರಯತ್ನದಲ್ಲೆ ದೂರದ ಒಂದು ಮರಕ್ಕೆ ಗುರಿ ಇತ್ತು ಹೊಡೆದಾಗ ಗಮನಾರ್ಹವಾದ ತಾಂತ್ರಿಕ ಕುಶಲತೆಯನ್ನು ಪ್ರದರ್ಶಿಸಿದನು, ನಂತರ ಅವನ ಎರಡನೇ ಪ್ರಯತ್ನದಲ್ಲಿ ಮೊದಲಿಗೆ ಹೊಡೆದ ಬಾಣವನ್ನು ಎರಡು ಭಾಗವಾಗಿ ಬೇರ್ಪಡಿಸಿದನು.
“ಅಲ್ಲಿ ನೋಡಿ ,” ಎಂದು ಹೇಳುತ್ತಾ ಝೆನ್ ಮಾಸ್ಟರ್ ಕಡೆ ತಿರುಗಿ , “ನೀವು ಅದನ್ನು ಸರಿಹೊಂದಿಸುವಂತೆ ನಿಮ್ಮ ಸಾಮರ್ಥ್ಯ ಪ್ರದರ್ಶಿಸಿ ನೋಡೋಣ! ಎಂದು ಸವಾಲ್ ಹಾಕಿದನು”
ಮುಜುಗರವಿಲ್ಲದೆ, ಝೆನ್ ಮಾಸ್ಟರ್ ತನ್ನ ಬಿಲ್ ನ್ನು ಸೆಳೆಯಲಿಲ್ಲ, ಬದಲಿಗೆ ಯುವ ಬಿಲ್ಲುಗಾರನನ್ನು ತಾನು ಹೋಗುತ್ತಿರುವ ಪರ್ವತದತ್ತ ಹಿಂಬಾಲಿಸಲು ಕೈ ಸನ್ನೆ ಮಾಡಿದರು .
ಝೆನ್ ಮಾಸ್ಟರ್ ನ ಉದ್ದೇಶ ಏನೆಂದು ಅರ್ಥವಾಗದ ಕಿರಿಯ ಬಿಲ್ಲುಗಾರ ಕುತೂಹಲದಿಂದ, ಅವರು ಪರ್ವತದತ್ತ ಹೋಗುತ್ತಿದ್ದುದನ್ನು ನೋಡಿ ಹಿಂಬಾಲಿಸಿದನು ಮತ್ತು ಅವರು ತುಂಬ ಹಳೆಯದಾದ , ಹಾಳಾಗಿದ್ದ ಮತ್ತು ಅಲುಗಾಡುತ್ತಿರುವ ಒಂದು ಮರದ ಸೇತುವೆಯೇ ಮೂಲಕ
ಅದರ ಕೆಳಗೆ ವ್ಯಾಪಿಸಿರುವ ಆಳವಾದ ಕಮರಿಯನ್ನು ನೋಡುತ್ತಾ ಸೇತುವೆಯ ಮಧ್ಯಭಾಗಕ್ಕೆ ತಲುಪಿದರು. ಅಸ್ಥಿರವಾದ ಮತ್ತು ಖಂಡಿತವಾಗಿ ಅಪಾಯಕಾರಿ ಸೇತುವೆಯ ಮಧ್ಯಭಾಗಕ್ಕೆ ಸಮಾಧಾನವಾಗಿ ಹೋದ ಝೆನ್ ಮಾಸ್ಟರ್ ಓರ್ವ ಅಪ್ರತಿಮ ಗುರೀಕಾರನಂತೆ ದೂರದ ಮರವನ್ನು ತೋರಿಸಿ ಅದಕ್ಕೆ ಗುರು ಇತ್ತು ತನ್ನ ಬಿಲ್ಲಿನಿಂದ ಬಾಣವನ್ನು ಬಿಟ್ಟು ಸ್ವಚ್ಛ, ನೇರವಾದ ಗುರಿಯನ್ನು ಹೊಡೆದರು.
“ಈಗ ನಿಮ್ಮ ಅವಕಾಶ ,” ಎಂದು ಹೇಳುತ್ತಾ ಅವರು ಸುರಕ್ಷಿತ ಜಾಗಕ್ಕೆ ಮರಳಿ ಬಂದಾಗ ಹೇಳಿದರು.
ತಳಬುಡವಿಲ್ಲದ ಮತ್ತು ಅಪಾಯಾಕಾರಿಯಾಳದ ಪ್ರಪಾತವನ್ನು ನೋಡುತ್ತಾ , ಕಾಲಿಟ್ಟರೆ ಮುರಿದು ಬೀಳುವಂತ ಹಳೆಯ ಮರದ ಸೇತುವೆಯನ್ನು ನೋಡಿ ಯುವಕನು ಗಾಬರಿಗೊಂಡಿದ್ದನು , ಸ್ವತಃ ಅವನಿಗೆ ಮರದ ಸೇತುವೆಯ ಮರದ ಮೇಲೆ ಕಾಲಿಟ್ಟರು , ಬಿಲ್ಲು ಬಾಣ ಗುರಿ ಇಟ್ಟು ಬಿಡುವಷ್ಟು ಏಕಾಗ್ರತೆ ಬರಲಿಲ್ಲ. ತನ್ನ ಕೈಯಲ್ಲಿ ಏನು ಮಾಡಲಾಗದೆ ಹತಾಶೆಯಿಂದ ವಾಪಾಸ್ ಬಂದನು.
“ನೀವು ಒಬ್ಬ ಬಿಲ್ಲುಗಾರನಾಗಿ ಹೆಚ್ಚು ಕೌಶಲ್ಯವನ್ನು ಹೊಂದಿದ್ದೀರಿ” ಎಂದು ಮಾಸ್ಟರ್ ತನ್ನ ಚಾಲೆಂಜ ಮಾಡಿದ ಕಿರಿಯ ಬಿಲ್ಲುಗಾರನನ್ನು ಸಮಾಧಾನಿಸಿದರು, “ಆದರೆ ಮನಸ್ಸನ್ನು ನಿಗ್ರಹಿಸಿ ಮಾಡುವ ಕೆಲಸದಲ್ಲಿ ಇನ್ನು ಹೆಚ್ಚಿನ ಕೌಶಲ್ಯ ಬೇಕು ” ಎಂದು ಹೇಳುತ್ತಾ ವಾಪಾಸ್ ಹಿಂದಿರುಗಿದರು.