ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಓಹ್ ಹೌದೆ? – ಝೆನ್ ಗುರುಗಳ ಕಥೆ

ಓಹ್ ಹೌದೆ? ಎಂದ ಝೆನ್ ಗುರುಗಳ ಕಥೆ

ತನ್ನ ಸಮುದಾಯದಲ್ಲಿ ಉತ್ತಮ ಖ್ಯಾತಿಯನ್ನು ಪಡೆದ ಒಬ್ಬ ಝೆನ್ ಗುರುವಿದ್ದರು. ಒಂದು ದಿನ ಆತನ ನೆರೆಹೊರೆಯವರು ಆ ಝೆನ್ ಗುರುವಿನ ಆಶ್ರಮದ ಬಾಗಿಲ ಬಳಿ ಕೋಪದಿಂದ ಬಂದು ಕೂಗಾಡತೊಡಗಿದರು. ಅವರ ವಠಾರದ ಹದಿಹರೆಯದ ಹುಡುಗಿ ಒಬ್ಬಳು ಗರ್ಭಿಣಿಯಾಗಿದ್ದು , ಆಕೆ ಈ ಗುರುಗಳ ಆಶ್ರಮಕ್ಕೆ ಬರುತ್ತಿದ್ದಿದರಿಂದ , ಅದಕ್ಕೆ ಕಾರಣ ನೀವೇ ಆದ್ದರಿಂದ ಅದರ ಜವಾಬ್ದಾರಿಯನ್ನು ನೀವೇ ಹೊತ್ತುಕೊಳ್ಳಬೇಕಾಗಿದೆ ಎಂದು ಆ ಹುಡುಗಿಯ ತಂದೆ ಆರೋಪಿಸಿದರು.

  ಭಗವಾನ್ ವೆಂಕಟೇಶ್ವರ ಸ್ವಾಮಿ ಅವರ ಗಲ್ಲದ ಮೇಲೆ ಕರ್ಪೂರ ಏಕೆ?

ಝೆನ್ ಮಾಸ್ಟರ್ ಹೇಳಿದರು: “ಓಹ್ ಹೌದೆ”?. ಈ ಸುದ್ದಿ ಊರ ತುಂಬಾ ವದಂತಿಗಳಾಗಿ ಹರಡಿ, ಆ ಝೆನ್ ಗುರುಗಳು ತಮ್ಮ ಖ್ಯಾತಿ ಕಳೆದುಕೊಂಡರು. ಇಷ್ಟೆಲ್ಲ ಆದರೂ ಝೆನ್ ಗುರುಗಳು ತಮ್ಮ ತಾಳ್ಮೆ ಕಳೆದುಕೊಳ್ಲಲಿಲ್ಲ.
ಕೆಲವು ತಿಂಗಳುಗಳ ನಂತರ ಮಗುವು ಹುಟ್ಟಿದ್ದು ಮಗುವನ್ನು ಝೆನ್ ಮಾಸ್ಟರ್ ಬಳಿ ಕರೆದೊಯ್ಯಲಾಯಿತು, ಆ ಮಗುವನ್ನು ಝೆನ್ ಗುರುಗಳ ಬಳಿ ಬಿಡುವುದೆಂದು ತೀರ್ಮಾನವಾಗಿದ್ದನ್ನು ಒಪ್ಪಿಕೊಂಡರು ಮತ್ತು ಮಗುವನ್ನು ನೋಡಿಕೊಂಡರು.

ಒಂದು ವರ್ಷದ ನಂತರ ನೆರೆಮನೆಯವರ ಮಗಳು, ಆ ಮಗುವಿನ ತಂದೆ ವಾಸ್ತವವಾಗಿ ಪಟ್ಟಣದ ಒಬ್ಬ ವ್ಯಾಪಾರಿ ಎಂದು ಒಪ್ಪಿಕೊಂಡಳು. ಈ ಮಾತನ್ನು ಕೇಳಿ ಪೋಷಕರು ದಿಗ್ಭ್ರಮೆಗೊಂಡರು, ಕೊಡಲೇ ಝೆನ್ ಗುರುಗಳ ಆಶ್ರಮಕ್ಕೆ ತೆರಳಿದರು ಮತ್ತು ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದರು ಮತ್ತು ಮಗುವನ್ನು ಮರಳಿ ಕೊಡಲು ಕೇಳಿದರು. ಇದಕ್ಕೆ ಉತ್ತರವಾಗಿ ಝೆನ್ ಮಾಸ್ಟರ್ ಹೇಳಿದರು: “ಓಹ್ ಹೌದೆ?” – ನಂತರ ಮಗುವನ್ನು ಮರಳಿಸಿ ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ತೊಡಗಿಕೊಂಡರು.

  ಪಂಚಮುಖಿ ಆಂಜನೇಯ ಸ್ವಾಮಿ ಹಿನ್ನಲೆ ಕಥೆ

ಈ ಝೆನ್ ಕಥೆಯಲ್ಲಿ “ಪಾಲಿಗೆ ಬಂದದ್ದು ಪಂಚಾಮೃತ” ಎಂಬ ಗಾದೆಯಂತೆ ಹಾಗೂ ತಾಳ್ಮೆಗೆ ಎಂಥಾ ಮಹತ್ವವಿದೆ ಎಂಬುದನ್ನು ಝೆನ್ ಗುರುಗಳು ತಮ್ಮ ನಡೆಯಲ್ಲಿ ನಿರೂಪಿಸಿದರು.

One thought on “ಓಹ್ ಹೌದೆ? – ಝೆನ್ ಗುರುಗಳ ಕಥೆ

  1. ತಾಳ್ಮೆಯ ಮಹತ್ವ ತಿಳಿಸುವ ಅರ್ಥಗರ್ಭಿತ ಝೆನ್ ಕಥೆ.

Leave a Reply

Your email address will not be published. Required fields are marked *

Translate »