ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕೆಲಸ ಮತ್ತು ವಿಶ್ರಾಂತಿಯ ಜೆನ್ ಕಥೆ

www.vishaya.in ದಿನಕ್ಕೊಂದು ಕಥೆಯಲ್ಲಿ – ಕೆಲಸ ಮತ್ತು ವಿಶ್ರಾಂತಿಯ ಬಗ್ಗೆ ಈ ಝೆನ್ ಕಥೆ #ಕನ್ನಡ, #ಕಥೆ , #ಜೆನ್, #ನೀತಿಕಥೆ , #ಮುದುಕ, #ಗುರು , #ಝೆನ್_ಕಥೆ , #ಕೆಲಸ, #ವಿಶ್ರಾಂತಿ, #kannada #zen #neetikathe #old #master #work #rest #zen #story

ಇದು ಝೆನ್ ಮಾಸ್ಟರ್ ಲಾವೊ ಟ್ಸು ಅವರ ಬೋಧನೆಗಳ ಆಧಾರದ ಮೇಲೆ ಇರುವ ಪುರಾತನ ಝೆನ್ ಕಥೆಯಾಗಿದೆ.
90 ವರ್ಷ ವಯಸ್ಸಿನ ಝೆನ್ ಮಾಸ್ಟರ್ ಲಾವೊ ಟ್ಸುನ ಹಳೆಯ ಹಿಂಬಾಲಕನೊಬ್ಬನು ತನ್ನ ಚಿಕ್ಕ ಮಗನೊಂದಿಗೆ ಬಾವಿ ನೀರನ್ನು ಎಳೆಯುತ್ತಿರುತ್ತಾನೆ. ಮಾಸ್ಟರ್ ಕನ್ಫ್ಯೂಷಿಯಸ್ ಅಕಸ್ಮಾತ್ತಾಗಿ ಅದೇ ದಾರಿಯಲ್ಲಿ ಹಾಡು ಹೋಗುತ್ತಿರುವಾಗ, ಅವರು ಆ ಮುದುಕ ಮತ್ತು ಸಣ್ಣ ಹುಡುಗ ಕೆಲಸ ಮಾಡುವದನ್ನು ನೋಡಿದರು ಮತ್ತು ಹಳೆಯ ಮನುಷ್ಯನ ಬಳಿಗೆ ಹೋಗಿ ಹೇಳಿದರು: “ಹೇ ಮೂರ್ಖ, ನಿನಗೆ ಗೊತ್ತೇ, ಈಗ ನಾವು ಈ ರೀತಿಯ ಕೆಲಸ ಮಾಡಲು ಕುದುರೆಗಳು ಅಥವಾ ಎತ್ತುಗಳನ್ನು ಬಳಸುತ್ತೇವೆ? ನೀನೇಕೆ ಅನಾವಶ್ಯಕವಾಗಿ ನಿನ್ನನ್ನು ಮತ್ತು ಈ ಚಿಕ್ಕ ಹುಡುಗನನ್ನು ದಣಿಸುತ್ತಿರುವೆ ? “ಎಂದು ಕೇಳಿದನು. ಆಗ ಆ ಮುದುಕ “ದಯವಿಟ್ಟು, ನನ್ನ ಮಗನ ಮುಂದೆ ಇದನ್ನು ನಾನು ಮಾತನಾಡುವುದಿಲ್ಲ. ನನ್ನ ಹುಡುಗ ಊಟಕ್ಕೆ ಹೋದಾಗ ಸ್ವಲ್ಪ ಸಮಯದ ನಂತರ ನೀವು ಬರಬಹುದು ಆಗ ಈ ವಿಷಯದ ಬಗ್ಗೆ ಮಾತಾಡೋಣ . ” ಎಂದು ಹೇಳಿದನು.
ಇದನ್ನು ಕೇಳಿ ಮಾಸ್ಟರ್ ಕನ್ಫ್ಯೂಷಿಯಸ್ಗೆ ಆಶ್ಚರ್ಯವಾಯಿತು , ಆದರೂ ಕೂಡ ಮಧ್ಯಾಹ್ನ ಊಟದ ಸಮಯ ಆಗುವವರೆಗೂ ಕಾದು ಕುಳಿತರು.

  ದೇವರ ಅನುಗ್ರಹದ ಕಥೆ

ಮಧ್ಯಾಹ್ನವಾಗುತ್ತಿದ್ದಂತೆ ಮಗನು ಊಟಕ್ಕೆ ಹೋದನು, ಇದನ್ನು ಗಮನಿಸಿದ ಮಾಸ್ಟರ್ ಕನ್ಫ್ಯೂಷಿಯಸ್ ಕೂಡಲೇ ಮುದುಕನ ಬಳಿ ಬಂದು “ನಾನು ನಿಮಗೆ ಹೇಳಿದ್ದನ್ನು, ಯಾಕೆ ನಿನ್ನ ಮಗನು ಕೇಳಬಾರದು, ಅದರಲ್ಲೇನಿದೆ ತಪ್ಪು ?” ಎಂದು ಕೇಳಿದನು. “ನಾನು 90 ವರ್ಷ ವಯಸ್ಸಿನವನಾಗಿದ್ದೇನೆ ಮತ್ತು ಇನ್ನೂ ಯುವ ವ್ಯಕ್ತಿಯೊಂದಿಗೆ ಕೆಲಸ ಮಾಡಲು ಶಕ್ತಿಯನ್ನು ಹೊಂದಿದ್ದೇನೆ” . ನಾನು ಭಾವಿಯ ನೀರನ್ನು ಎಳೆಯಲು ಕುದುರೆಗಳನ್ನು ಬಳಸಿದರೆ, ನನ್ನ ಮಗನಿಗೆ 90 ರ ವೇಳೆಗೆ ಅದೇ ಶಕ್ತಿ ಇರುವುದಿಲ್ಲ. ಆದ್ದರಿಂದ ಇದನ್ನು ನನ್ನ ಮಗನ ಮುಂದೆ ಮಾತನಾಡುವುದಿಲ್ಲ. ಇದು ಅವನ ಆರೋಗ್ಯದ ಒಂದು ಪ್ರಶ್ನೆಯಾಗಿದೆ. ನಗರಗಳಲ್ಲಿ, ಕುದುರೆಗಳು ಬಾವಿ ನೀರನ್ನು ಎಳೆಯುತ್ತವೆ ಎಂದು ನನಗೆ ಗೊತ್ತು. ಈ ಕೆಲಸ ಮಾಡುವ ಯಂತ್ರಗಳು ಕೂಡ ಇವೆ ಎಂದು ನನಗೆ ಗೊತ್ತು. ಆದರೆ ನಂತರ, ನನ್ನ ಮಗ ಏನು ಕೆಲಸ ಮಾಡುತ್ತಾನೆ? ಅವನು ದುಡಿಯದಿದ್ದರೆ ಹೇಗೆ? ಕೆಲಸ ಮಾಡದಿದ್ದರೆ ಅವನ ಆರೋಗ್ಯ, ಅವನ ಜೀವಂತಿಕೆ ಏನಾಗುತ್ತದೆ? ” ಎಂದು ಉತ್ತರಿಸಿದನು.

  ತೆನಾಲಿ ರಾಮನ ನೆಚ್ಚಿನ ಸಿಹಿತಿಂಡಿಗಳ ಕಥೆ

ಲಾವೊ ಟ್ಸು ಅವರ ಬೋಧನೆಗಳ ಪ್ರಕಾರ, “ಕೆಲಸ ಮತ್ತು ವಿಶ್ರಾಂತಿ ಒಂದಕ್ಕೊಂದು ಸಂಬಂಧ ಹೊಂದಿವೆ. ನೀವು ವಿಶ್ರಾಂತಿ ಬಯಸುವುದಾದರೆ , ಕಷ್ಟಪಟ್ಟು ಶ್ರಮಿಸಬೇಕು. ಆಗ ವಿಶ್ರಾಂತಿ ಮಾಡುವ ಸಮಯದಲ್ಲಿ ಅಥವಾ ರಾತ್ರಿ ಉತ್ತಮವಾದ ನಿದ್ದೆಯಿಂದ ವಿಶ್ರಾಂತಿ ಸಿಗುತ್ತದೆ. ಅದೇ ಹರೆಯದ ವಯಸ್ಸಿನಲ್ಲಿ ಕಷ್ಟ ಪಡಲಿಲ್ಲವೆಂದರೆ , ಇಳಿವಯಸ್ಸಿನಲ್ಲಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗುತ್ತದೆ ಎಂಬ ನೀತಿಯನ್ನು ಈ ಸಣ್ಣ ಝೆನ್ ಕಥೆಯ ಮೂಲಕ ತಿಳಿಸಿದ್ದಾರೆ.

“ನಡೆಯುತ್ತಿರುವ ಒಂದು ಇರುವೆ , ನಿದ್ದೆ ಮಾಡುವ ಒಂದು ಡಜನ್ ಎತ್ತುಗಳಿಗಿಂತ ಹೆಚ್ಚು ಕೆಲಸ ಮಾಡುತ್ತದೆ.”

Leave a Reply

Your email address will not be published. Required fields are marked *

Translate »