ಸಂತ ಜ್ಞಾನೇಶ್ವರ ..!
ಸುಮಾರು ಹದಿನಾರು ವರ್ಷಗಳ ಹುಡುಗನೊಬ್ಬ ತನ್ನ ಊರಿನ ಗುರುಗಳ ಬಳಿಗೆ ಹೋಗಿ ಉದ್ದಂಡ ಪ್ರಮಾಣ ಮಾಡಿ, ಗುರುಗಳೇ ನನ್ನ ಜೀವನದಲ್ಲಿ ವ್ಯರಾಗ್ಯ ಬಂದಿದೆ ಆದ್ದರಿಂದ ನನ್ನಗೆ ಸನ್ಯಾಸ ದೀಕ್ಷೆ ನೀಡಿ ನನ್ನನು ಭಾವ ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಬೇಡಿಕೊಂಡನು, ಗುರುಗಳು ಅವನಾಡುವ ಮಾತು ಕೇಳಿ ದಿಗ್ಭ್ರಮೆ ಉಂಟಾಯಿತ್ತು
ಗುರುಗಳು ನೀನು ತುಂಬಾ ಚಿಕ್ಕವನು ಗೆಳೆಯರೊಂದಿಗೆ ಆಡಿ ನಲಿದಾಡುತ್ತಾ ಬೆಳೆಯಬೇಕಾದವನು ಚಂಚಲವಾದ ಮನಸ್ಸನು ಏಕಾಗ್ರತೆಯಿಂದ ಪರಮಾತ್ಮನಲ್ಲಿ ನೆಲೆಗೊಳಿಸಿ ದೇಹ ದಂಡಿಸಿ ಪ್ರಾಪಂಚಿಕವಾದ ಎಲ್ಲಾ ಸುಖ ಸಂತೋಷಗಳನ್ನು ತೊರೆದು ವಿರಕ್ತನಾಗಬೇಕು ಇದು ನಿನ್ನಿಂದ ಸಾಧ್ಯವೇ? ಅದಕ್ಕೂ ಒಂದು ಕಾಲವಿದೆ, ವಯಸ್ಸಿದೆ ಆಗ ಬಾ ನೋಡೋಣ ಈಗ ಮನೆಗೆ ಹೋಗು ಎಂದು ಹೇಳಿ ತಪೋ ಮಗ್ನರಾದರು.
ಆದರೆ ತನ್ನ ಬಿಗಿ ಪಟ್ಟು ಬಿಡದ ಆ ಬಾಲಕ ತನಗೆ ದೀಕ್ಷೆಯನ್ನು ಕೊಡಲೇಬೇಕೆಂದು ದುಂಬಾಲು ಬಿದ್ದನು. ಅವನ ಬೇಡಿಕೆಯಲ್ಲಿ ಅಚಲವಾದ ಛಲವಿತ್ತು ಬೇರೆ ದಾರಿ ಕಾಣದ ಗುರುಗಳು ಮಗು ಹಾಗಾದರೆ ನಾನು ನಿನಗೊಂದು ಪರೀಕ್ಷೆ ಮಾಡುತೇನೆ ಅದರಲ್ಲಿ ನೀನು ವಿಜಯಿಯಾದರೆ ಮಾತ್ರ ನಿನ್ನಗೆ ಸನ್ಯಾಸ ದೀಕ್ಷೆ ನೀಡುವೆನು ಎಂದು ನುಡಿದರು.
ಆಗ ಹುಡುಗ ನೀವು ನೀಡುವ ಯಾವುದೇ ಪರೀಕ್ಷೆಗೂ ನಾನು ಸಿದ್ಧನಾಗಿದ್ದೇನೆ ಎಂದು ನುಡಿವಾಗ ಗುರುಗಳು ಎಲ್ಲಿ ನಿನ್ನ ನಾಲಿಗೆಯನ್ನು ಹೊರ ಚಾಚು ಎಂದರು ಹುಡುಗ ಹಾಗೇ ಮಾಡಿದನು ಬಳಿಕ ಗುರುಗಳು ಅವನ ನಾಲಿಗೆಯ ಮೇಲೆ ಒಂದು ಕಲ್ಲುಸಕ್ಕರೆಯ ತುಂಡನ್ನು ಇರಿಸಿ ನೋಡುತ್ತಾ ಕುಳಿತರು ಎಷ್ಟು ಹೊತ್ತಾದರು ಕಲ್ಲುಸಕ್ಕರೆಯ ಒಂದಂಶವೂ ಕರಗಲಿಲ್ಲ ಹಾಗೂ ಬಾಯಿಯಿಂದ ಒಂದು ಹನಿ ಜೊಲ್ಲು ಕೂಡಾ ಬೀಳಲಿಲ್ಲ ಹುಡುಗನು ಮಾತ್ರ ಪದ್ಮಾಸನ ಹಾಕಿಕೊಂಡು ಕಣ್ಣುಚ್ಚಿ ಕಲಾಪ್ರತಿಮೆಯಂತ ಕುಳಿತಿದ್ದ.
ಕಾಮ,ಕ್ರೋಧ,ಲೋಭ, ಮೋಹ ಮದ ಮಾತ್ಸರ್ಯಗಳಿಂದ ಅರಿಷಡ್ವರ್ಗಗಳು ಆ ಹುಡುಗನಿಂದ ಅದೊಂದೇ ದೂರಾಗಿದ್ದೆವು ಇನ್ನು ಜಿಹ್ವಾ ಚಾಪಲ್ಯವೆಲ್ಲಿ? ಕಲ್ಲುಸಕ್ಕರೆ ಕರಗಲೇ ಇಲ್ಲ ಅದನ್ನು ಕಂಡು ಗುರುಗಳು ಮೂಕವಿಸ್ಥಿತರಾದರು. ಅವರು ಮಗು ನಾನು ನಿನ್ನಂತಾಗಲು ಅದೆಷ್ಟೋ ವರ್ಷ ಕಷ್ಟಪಟ್ಟಿದ್ದೆ ನಿನ್ನ ಮುಂದೆ ನಾನು ತೀರ ಚಿಕ್ಕವನಾಗಿ ಬಿಟ್ಟೆ.
ಸಾಧನೆಗೆ ವಯಸ್ಸು ಮುಖ್ಯವಲ್ಲ ಅದಕ್ಕೆ ಶ್ರದ್ದೆ ಆತ್ಮವಿಶ್ವಾಸ ಮುಖ್ಯ ಅದು ನಿನ್ನಲ್ಲಿದೆ ನೀನು ನಾನಿಟ್ಟ ಪರೀಕ್ಷೆಯಲ್ಲಿ ಉತೀರ್ಣನಾಗಿದ್ದೀಯಾ ದೀಕ್ಷೆ ಪಡೆಯಲು ಸಾಮರ್ಥನಾಗಿದ್ದೀಯಾ ಇಂದು ನಾನು ನಿನಗೆ ಮನಃಪೂರ್ವಕವಾಗಿ ಸನ್ಯಾಸ ದೀಕ್ಷೆಯನ್ನು ನೀಡುತ್ತಿದ್ದೇನೆ “ವಿಜಯೀಭಾವ” ಎಂದು ಎರಡು ಕೈ ಎತ್ತಿ ಆಶೀರ್ವಾದಿಸಿದರು ಆ ಹುಡಗನೇ ಸಾಧು ಸಂತ ಶ್ರೇಷ್ಟವೆನಿಸಿದ ಸಂತ “ಜ್ಞಾನೇಶ್ವರ”….
ಇವರು ಹದಿಮೂರನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮೊದಲ ಭಕ್ತಿ ಚಳುವಳಿಯನ್ನು ಪ್ರಾರಂಭ ಮಾಡಿದ ಸಂತ ಕವಿ….