ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನೆಲದ ಮೇಲೆ ಕುಳಿತು ಊಟ ಮಾಡುವುದರ ಲಾಭಗಳು

ನೆಲದ ಮೇಲೆ ಕುಳಿತು ಊಟ ಮಾಡುವುದರ ಲಾಭಗಳು

ಊಟ ಮಾಡುವುದು ಕೇವಲ ಒಂದು ಚಟುವಟಿಕೆ
ಎಂದಾಗಿರುವ ಈ ಕಾಲದಲ್ಲಿ ,ನೆಲದ ಮೇಲೆ ಕುಳಿತು ಊಟ ಮಾಡುವುದು ಎಂದರೆ ಕಷ್ಟದ ಕೆಲಸದಂತಾಗಿದೆ.ಅದರಲ್ಲೂ ಯುವಕರಲ್ಲಿ ಅಸಡ್ಡೆಯ ಜೊತೆಗೆ ಅಸಾಧ್ಯದ ಭಾವನೆಯೇ ಎದ್ದು ಕಾಣುತ್ತದೆ.
ಈಗಿನ ಜೀವನಶೈಲಿಯಲ್ಲಿ ಮನೆಮಂದಿಯೆಲ್ಲಾ ಒಟ್ಟಿಗೆ ಊಟಕ್ಕೆ ಕೂರುವುದು ಎಂದರೆ ಅದು ಎಲ್ಲರ ಸೌಭಾಗ್ಯವೆ ಸರಿ.

ನಮ್ಮ ಸನಾತನ ಧರ್ಮದಲ್ಲಿ ಊಟ ಎಂದರೆ ಅದೊಂದು ಗೌರವ ಪೂರ್ವಕವಾಗಿ ನಡೆಸುವ ದೈನಂದಿನ ಯಜ್ಞವಿದ್ದಂತೆ.ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಕ್ರಿಯೆ ಅಲ್ಲ.ನೆಲದ ಮೇಲೆ ಪದ್ಮಾಸನದಲ್ಲಿ (ಸುಖಾಸನ)ಕುಳಿತು ಕೈ ಮುಗಿದು ಪ್ರಾರ್ಥಿಸಿ ,ನಿಶ್ಚಿಂತೆಯಿಂದ ಬರಿಗೈಯಲ್ಲಿ ಸೇವಿಸುವ ಆಹಾರ ನಮ್ಮ ಜಠರಕ್ಕೆ ಅಷ್ಟೇ ಅಲ್ಲದೆ ಆತ್ಮಕ್ಕೂ ತೃಪ್ತಿ ನೀಡುವುದು .ಊಟದ ನಂತರ “ಅನ್ನ ದಾತೋ ಸುಖೀ ಭವ” ಎಂಬ ಒಂದು ವ್ಯಾಖ್ಯಾನ ಅಡಿಗೆ ತಯಾರಿಸಿದವರ ಪಾಲಿಗೆ ಸಾರ್ಥಕತೆಯ ಅನುಭವ ನೀಡುತ್ತದೆ.

  ಊಟ ಮಾಡುವುದೂ ಒಂದು ಕಲೆ - 50 ಆರೋಗ್ಯ ಸೂತ್ರಗಳು

ನೆಲದ ಮೇಲೆ ಕುಳಿತು ಊಟ ಮಾಡುವುದರ ಹಿಂದಿನ ವೈಜ್ಞಾನಿಕ ವಿಚಾರ

  1. ಯೋಗಾಸನದಲ್ಲಿ ಪ್ರಮುಖ ಆಸನವಾದ ಪದ್ಮಾಸನದಲ್ಲಿ ಕುಳಿತಾಗ ನಮ್ಮ ಕಿಬ್ಬೊಟ್ಟೆಯ ಮೇಲಿನ ಭಾಗಗಳೆಲ್ಲವೂ ಬೆನ್ನು ಹುರಿಯ ಸಹಾಯದಿಂದ ನೇರವಾಗುತ್ತದೆ ಹಾಗು ಪೆಲ್ವಿಕ್ ಸ್ನಾಯುಗಳು ಹಿಗ್ಗುತ್ತದೆ.ಇದರಿಂದ ನಮ್ಮ ಜೀರ್ಣಾಂಗವ್ಯೂಹವು ಉತ್ತಮ ಸ್ಥಿತಿಯನ್ನು ತಲುಪಿ ಜೀರ್ಣಕ್ಕೆ ಸಹಕರಿಸುತ್ತದೆ.
  2. ನೆಲದ ಮೇಲೆ ಕುಳಿತಾಗ ಮನಸ್ಸು ಪ್ರಶಾಂತಗೊಳ್ಳುತ್ತದೆ ಹಾಗು ಸ್ಥಿರತೆಯನ್ನು ವೃದ್ಧಿಗೊಳಿಸಿ ಆಹಾರದತ್ತ ಗಮನ ಹರಿಸಲು ಸಾಧ್ಯವಾಗುತ್ತದೆ.
  3. ನಮ್ಮ ಕುಟುಂಬದ ಸದಸ್ಯರೊಡನೆ ಸಮಯ ಕಳೆಯಲು ಇದೊಂದು ಸುಯೋಗವಿದ್ದಂತ್ತೆ.ಎಲ್ಲರ ಅಭಿರುಚಿ ತಿಳಿಯುವ ವೇದಿಕೆಯೂ ಹೌದು.
  4. ಕೆಲವು ಅಧ್ಯಯನಗಳ ಪ್ರಕಾರ ಕೆಳಗೆ ಕೂತು ಊಟಮಾಡುವವರು ಯಾವುದೇ ಸಹಾಯವಿಲ್ಲದೆ
    ಏಳಲು ಶಕ್ತರಾಗಿದಲ್ಲಿ ಅವರ ಆಯಸ್ಸು ವೃದ್ಧಿಸುತ್ತದೆ.
  ಗಣೇಶ ಚತುರ್ಥಿ ದಿನ ಚಂದ್ರನ ನೋಡಬೇಕಾ? ನೋಡಬಾರದ?

4.ಮೊಣಕೈ ಹಾಗು ಕಾಲುಗಳಿಗೆ ವ್ಯಾಯಾಮ ದೊರೆಯುತ್ತದೆ,ಇದರಿಂದ ಸಂಧಿವಾತ ಹಾಗು ಓಸ್ಟಿಯೋ ಪೋರೆಸಿಸ್ ಕಾಯಿಲೆಗಳನ್ನು ತಡೆಯಬಹುದು.

5.ಬರಿಗೈಯಲ್ಲಿ ಊಟ ಮಾಡುವಾಗ ನಮ್ಮ ಐದು ಬೆರಳುಗಳು ಸೇರಿ ಒಂದು ಮುದ್ರೆ ರಚನೆಗೊಳ್ಳು ತ್ತದೆ ಇದು ಪಂಚೇಂದ್ರಿಯಗಳನ್ನು ಪ್ರೇರೇಪಿಸಿ ಮೆದುಳಿಗೆ ಸಂದೇಶ ರವಾನಿಸುತ್ತದೆ,ಆಗ ಜೀರ್ಣ ಕ್ರಿಯೆಗೆ ಬೇಕಾದ ಜೀರ್ಣರಸಗಳು ಸಹಜವಾಗಿ ಬಿಡುಗಡೆಗೊಳ್ಳುತ್ತದೆ.

5.ಕೈಯಲ್ಲಿ ತಿನ್ನುವಾಗ ಆಹಾರದ ಬಿಸಿ ಹಾಗೂ ಮೃದುತ್ವ ನಮ್ಮ ಗಮನಕ್ಕೆ ಬರುತ್ತದೆ.

6.ವೈದಿಕ ಶಾಸ್ತ್ರದ ಪ್ರಕಾರ ನಮ್ಮ ಕೈ ಬೆರಳುಗಳು ಪಂಚ ತತ್ವಗಳಿಂದ ಕೂಡಿದೆ
ಹೆಬ್ಬೆರಳು – ಅಗ್ನಿ,ತೋರುಬೆರಳು – ವಾಯು, ಮಧ್ಯ ಬೆರಳು – ಆಕಾಶ, ಉಂಗುರ ಬೆರಳು – ಭೂಮಿ,ಕಿರು ಬೆರಳು – ನೀರು.

7.ಊಟ ಮಾಡುವಾಗ ಬಾಗಿ ಏಳುವ ಪರಿ ಆಹಾರವನ್ನು ಸುಲಭವಾಗಿ ಜಠರಕ್ಕೆ ಜಾರಲು ಸಹಕರಿಸುತ್ತದೆ

  ಔದಂಬರ ಅಥವಾ ಅತ್ತಿಮರ…

ಎಷ್ಟೆಲ್ಲಾ ತಿಳಿದ ಮೇಲೆ ವೃದ್ಧರು,ಅಶಕ್ತರಿಗೆ ಡೈನಿಂಗ್ ಟೇಬಲ್ ಅತ್ಯವಶ್ಯಕ ಆದರೆ ನಮ್ಮ ಯುವಕರಿಗೆ,ಮಕ್ಕಳಿಗೆ ಇದರ ಅಭ್ಯಾಸವಿಲ್ಲವಾದಾಗ ಲಾಮರ್ಕ್ ನ “Use and Disuse theory “ನೆನಪಿಗೆ ಬರುತ್ತದೆ.ಯಾವ ಪದ್ದತಿಯನ್ನು ನಾವು ಅನುಸರಿಸುವುದಿಲ್ಲವೋ ಅದು ಕಾಲಕ್ರಮೇಣ ಕ್ಷೀಣಿಸು ವುದರಲ್ಲಿ ಅನುಮಾನವಿಲ್ಲ .ನಮ್ಮ ಮಕ್ಕಳಲ್ಲಿ ಇದು ಅಸಾಧ್ಯವಾದಲ್ಲಿ ಮುಂದಿನ ಪೀಳಿಗೆಗೆ ಕಾಲು
ಮಡಿಸಲೂ ಅಶಕ್ತರಾಗುವ ಸ್ಥಿತಿ ಬರುವಲ್ಲಿ ಸಂದೇಹವಿಲ್ಲ ಅಲ್ಲವೇ??

~ ಸಂಗ್ರಹ

Leave a Reply

Your email address will not be published. Required fields are marked *

Translate »