ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇವಲೋಕದ ಪುಷ್ಪ ಪಾರಿಜಾತ ಮಹತ್ವ

ದೇವಲೋಕದ ಪುಷ್ಪ ಪಾರಿಜಾತ…

👉ಪಾರಿಜಾತ – ಒಂದು ಬಗೆಯ ಹೂವು. ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು.

👉ಪುರಾಣಗಳಲ್ಲಿ ಪಾರಿಜಾತ, ಅಗ್ನಿಪುರಾಣದ ಪ್ರಕಾರ
ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ನಂತರ ಇಂದ್ರನ ನಂದನವನದಲ್ಲಿ ಪಲ್ಲವಿಸಿತು.

👉ಕೃಷ್ಣಾವತಾರ ಕಾಲದಲ್ಲಿ, ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ. ಪುರಾಣಗಳಲ್ಲಿ ಉಲ್ಲೇಖಗೊಂಡ ಪಾರಿಜಾತದ ಹೂ, ಒಂದು ಕಾಲ್ಪನಿಕ ಪುಷ್ಪ. ಸಸ್ಯಶಾಸ್ತ್ರಜ್ಞರ ಪ್ರಕಾರ, ಇದು ಹೂವಲ್ಲವಂತೆ.

🌺🌺ಪಾರಿಜಾತದ ಮಹತ್ವ 🌺🌺

👉ಪಂಚ ವೃಕ್ಷಗಳಲ್ಲಿ ಒಂದು. ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತವನ್ನು ತಿಳಿವಳಿಕೆಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನೆಲದ ಮೇಲೆ ಉದುರಿದ ಹೂವನ್ನು ದೇವರಿಗೆ ಸಮರ್ಪಿಸುವುದಿಲ್ಲ.

  ಬೆಲ್ಲದಿಂದ ಆರೋಗ್ಯಕ್ಕಾಗುವ ಉತ್ತಮ ಲಾಭಗಳು

👉ಆದರೆ ಪಾರಿಜಾತ ಮತ್ತು ಬಕುಳದ ಹೂವುಗಳಿಗೆ ಮಾತ್ರ ಇದರಿಂದ ವಿನಾಯಿತಿ ಉಂಟು. ನಮ್ಮ ದೇಶದ ಸುಗಂಧಿತ ಪುಷ್ಪಗಳಲ್ಲಿ ‘ಪಾರಿಜಾತ,’ ಒಂದು ವಿಶಿಷ್ಟಸ್ಥಾನವನ್ನು ಪಡೆದಿದೆ. ಕನ್ನಡದ ಆದಿಕವಿ ಪಂಪ, ತನ್ನ ಕಾವ್ಯಗಳಲ್ಲಿ ಪಾರಿಜಾತದ ಹೂವಿನ ವರ್ಣನೆಯನ್ನು ಬಹಳವಾಗಿ ಮಾಡಿದ್ದಾನೆ. ಪಾರಿಜಾತದ ಕಂಪು ಮೂಗಿಗೆ ಹಿತ. ಹೆಚ್ಚಿನ ತೀಕ್ಷ್ಣತೆಯಿಲ್ಲದ ಕೋಮಲವಾದ ಹೂವನ್ನು ಎಲ್ಲರೂ ಪ್ರೀತಿಸುತ್ತಾರೆ.ಪಾರಿಜಾತ, ‘Nyctanthes arbor-tristis’, ಎಂಬ ಸಸ್ಯಶಾಸ್ತ್ರೀಯವರ್ಗಕ್ಕೆ ಸೇರುತ್ತದೆ. ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ.

🌹🌹ಪಾರಿಜಾತ ಹೂವಿನ ವೃತ್ತಾಂತ🌹🌹

👉ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರಬಗ್ಗೆ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ.

  ಹಲಸಿನ ಹಣ‍್ಣು , ಪನಸ , ಆರ್ಟೋಕಾರ್ಪಸ್ ಹೆಟಿರೋಫೈಲಸ್ , ಜಾಕ್ ಫ‍್ರೂಟ್

👉ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವಮೊದಲೇ ಹೂ ಉದುರಿಸಿತ್ತವೆ.

👉ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿಅರಳುವಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ.

🌷🌷ಪಾರಿಜಾತ ಮರ ಹಾಗೂ ಹೂವಿನ ಉಪಯೋಗಗಳು🌷🌷

👉ಪಾರಿಜಾತ ಸುಗಂಧವನ್ನು ತಯಾರಿಸುತ್ತಾರೆ. ಹೂವಿನ ಕಿತ್ತಳೆಗೆಂಪಿನ ನಾಳ ಬಣ್ಣ ಕಟ್ಟಲು ಉಪಯೋಗಕ್ಕೆ ಬರುತ್ತದೆ.
ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ.
ಪಾರಿಜಾತ ಸಹಜವಾಗಿ ಅಸ್ಸಾಮ್ ಈಶನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಮರದ ತೊಗಟೆಯಿಂದ ಟ್ಯಾನಿನ್ ಅನ್ನು ತಯಾರಿಸುತ್ತಾರೆ.
ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು, ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ.

  ದೇಹದ ಆರೋಗ್ಯ ಇಂದ್ರಿಯ ದೇವತೆ

🌸🌸ಪಾರಿಜಾತದ ಔಷಧೀಯ ಗುಣಗಳು🌸🌸

👉ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ, ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ.
ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.
(ಮಾಹಿತಿ ಕೃಪೆ: ಸಂಗ್ರಹ)

🌹🙏🌹ಶುಭೋದಯ, ಶುಭದಿನ, ಶುಭಮಸ್ತು ಸರ್ವೇ ಜನಾ ಸುಖೀನೋ ಭವಂತು🌹🙏🌹

🥀🌿ವಂದನೆಗಳೊಂದಿಗೆ ಕೆ ಆರ್ ರಮೇಶ್🌿🥀


ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »