ಬಾಳೆಎಲೆ..!
ಬಾಳೆ ಎಲೆಯಲ್ಲಿ ಏಕೇ ಊಟ ಮಾಡಬೇಕು?
ವೈಜ್ಞಾನಿಕ ಕಾರಣ ಇಲ್ಲಿದೆ ನೋಡಿ ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಾವು ಕೆಲವು ಅತ್ಯುತ್ತಮ ಹಳೆಯ ಆಚಾರ ವಿಚಾರಗಳನ್ನು ಮೂಲೆಗುಂಪಾಗಿಸಿದ್ದೇವೆ.
ಅವುಗಳಲ್ಲಿ ಬಾಳೆಲೆಯಲ್ಲಿ ಊಟ ಮಾಡುವ ಪದ್ಧತಿಯೂ ಒಂದು.
ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ.
ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು.
ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ.
ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರವೆಂದು ಹೇಳಲಾಗುತ್ತದೆ.
ಬಾಳೆಎಲೆ ಊಟದಿಂದ ಕೇವಲ ತುಂಬುವುದೊಂದೇ ಅಲ್ಲ, ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ ಮುಖ್ಯವಾದ ಲಾಭಗಳು ಇಲ್ಲಿವೆ,
1.ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ
ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ, ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಾಗುತ್ತದೆ.
2.ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ.
ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.
3.ಚೆನೈನ ಆಯುರ್ವೇದ ತಜ್ಞರ ಪ್ರಕಾರ, ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆಯಿದ್ದವರು ನಿತ್ಯ ಬಾಳೆಎಲೆಯಲ್ಲಿ ಊಟಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.
4.ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು.
ಆದರೆ, ಬಾಳೆಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.
5.ಬಾಳೆಎಲೆ ಊಟ ಆರೋಗ್ಯಕ್ಕೆತಂಪು. ಗ್ಯಾಸ್ ಅಡುಗೆಯಿಂದ ಆಹಾರ ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.
6.ಬಾಳೆಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ, ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ.
ಭವಿಷ್ಯದಲ್ಲಿ ಚರ್ಮರೋಗಗಳು ಬಾರದಮತೆ ತಡೆಯುವ ವೈದ್ಯೋದ್ದೇಶ ಇದರದ್ದು.
ತೆಂಗಿನೆಣ್ಣೆ ಲೇಪಿತ ಬಾಳೆಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ.
7.ಮಕ್ಕಳ ತ್ವಚೆಗೆ ಪರಿಹಾರ
ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.
8.ಸುಟ್ಟ ಗಾಯಗಳಿಗೆ
ದೇಹದ ಮೇಲೆ ಕಂಡು ಬರುವ ಯಾವುದಾದರು ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ ಅದ್ದಿದ ಬಾಳೆ ಎಲೆಯನ್ನು ಹಾಕಿ ಕಟ್ಟು ಕಟ್ಟಿದರೆ ಅಥವಾ ಮುಚ್ಚಿದರೆ ಸುಟ್ಟ ಗಾಯವನ್ನು ಸಹ ಶಮನಗೊಳಿಸುತ್ತದೆ.