ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನೆಮ್ಮದಿಯ ಬದುಕಿಗಾಗಿ ಒಂದೆರಡು ಬುದ್ದಿ ಮಾತು

ನೆಮ್ಮದಿಯ ಬದುಕಿಗಾಗಿ ಒಂದೆರಡು ಬುದ್ದಿ- ಮಾತು:

ನಿಮಗೆ ಎಲ್ಲರೊಂದಿಗೆ ಸಂಬಂಧಗಳನ್ನು ಸುಮಧುರವಾಗಿ ಉಳಿಸಿಕೊಳ್ಳಬೇಕೆಂಬ ಆಸೆಯಿದೆಯೇ?

 1. ಒಬ್ಬರ ವಿಚಾರ ಇನ್ನೊಬ್ಬರ ಬಳಿ ಮಾತನಾಡಬೇಡಿ, ಅದರಲ್ಲೂ ನಕಾರಾತ್ಮಕ ಸಂಗತಿಗಳನ್ನು ಅವರ ಅನುಪಸ್ಥಿತಿಯಲ್ಲಿ ಇನ್ನೊಬ್ಬರೊಡನೆ ಚರ್ಚಿಸಲೇಬೇಡಿ.
 2. ಸಮಸ್ಯೆಗಳಿದ್ದರೆ ನೇರವಾಗಿ ಪ್ರಶ್ನಿಸಿ ಸ್ಪಷ್ಟನೆ ಪಡೆಯಿರಿ, ನಂಬಿಕೆಗೆ ಯೋಗ್ಯರಲ್ಲದವರ ಬಳಿ ಅಸಮಾಧಾನ ತೋಡಿಕೊಳ್ಳಬೇಡಿ.
 3. ಸ್ನೇಹಿತರ ಬಂಧುಗಳಿಂದ ಅತಿಯಾಗಿ ಏನನ್ನೂ ನಿರೀಕ್ಷಿಸಬೇಡಿ ಹಾಗೂ ಯಾರನ್ನು ಅತಿಯಾಗಿ ಅವಲಂಬಿಸಬೇಡಿ.
 4. ಹಣಕಾಸಿನ ವ್ಯವಹಾರದ ವಿಚಾರದಲ್ಲಿ ಇಬ್ಬರಿಗೂ ಪಾರದರ್ಶಕತೆಯಿರಲಿ.
 5. ಮೊದಲು ನಾನೇ ಏಕೆ ಸ್ಪಂದಿಸಬೇಕೆಂಬ ಅಹಂಕಾರ ಇಬ್ಬರಿಗೂ ಬೇಡ.
 6. ರಾಜಿ ಸಂಧಾನ ಮತ್ತು ಮಾತುಕತೆಗೆ ಸದಾ ಸಿದ್ಧವಾಗಿರಿ.
 7. ತಂದುಹಾಕುವವರ ಬಗ್ಗೆ ಎಚ್ಚರವಿರಲಿ, ಹೇಳಿದನ್ನೆಲ್ಲಾ ಕೇಳುವ ಹಿತ್ತಾಳೆ ಕಿವಿಯಾಗದಿರಿ‌, ಸ್ವಂತ ಬುದ್ಧಿ ಇರಲಿ.
 8. ಎಷ್ಟೇ ಪ್ರೀತಿ ಇದ್ದರೂ ಸ್ನೇಹಿತರಲ್ಲಿ/ ಸಂಬಂಧದಲ್ಲಿ ಉಸಿರುಗಟ್ಟಿಸುವ ಪೊಸೆಸೀವ್ ನೆಸ್ ಬೇಡ.
 9. ತೀರಾ ಹತ್ತಿರದವರಾದರೂ ಸರಿ ಅವರ ಖಾಸಗಿ ಸಂಗತಿಗಳ ಮೇಲೆ ತೀವ್ರ ನಿಗಾ ಇರಿಸಲು ಹೋಗಬೇಡಿ, ನಿಮ್ಮ ಅತಿಪ್ರೀತಿ ಮತ್ತು ಕಾಳಜಿ ಅವರ ಉಸಿರುಗಟ್ಟಿಸದಿರಲಿ.
 10. ಗೆಳೆತನ ಅಥವಾ ಸಂಬಂಧ ನಿಮ್ಮನ್ನು ಉನ್ನತಿಗೇರಿಸುತ್ತಿರಲಿ ಬದಲಾಗಿ ಕೆಟ್ಟಚಠ ಅಥವಾ ಕೆಟ್ಟ ಹವ್ಯಾಸಗಳೆಡೆಗೆ ಸೆಳೆಯದಿರಲಿ.
 11. ಸಮಾನ ಅಭಿರುಚಿಯ ಕೆಲಸಗಳನ್ನು ಹಾಕಿಕೊಳ್ಳಿ ಸಂಬಂಧ ಗಟ್ಟಿಯಾಗಿರುತ್ತದೆ, ಅವರವರ ಕೆಲಸದಲ್ಲಿ ಬ್ಯುಸಿಯಾದಾಗ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅದನ್ನು ಗೌರವಿಸಬೇಕು.
 12. ಪರಸ್ಪರ ಎಷ್ಟೇ ಆತ್ಮೀಯರಾಗಿದ್ದರೂ ಆತ್ಮಗೌರವಕ್ಕೆ ಧಕ್ಕೆ ನೀಡಬೇಡಿ, ಒಂದು ವೇಳೆ ಆ ರೀತಿ ಆಗಿಬಿಟ್ಟರೆ ಮುಲಾಜಿಲ್ಲದೇ ಕ್ಷಮೆ ಕೇಳಿಬಿಡಿ ಮತ್ತು ಕ್ಷಮಿಸಿಬಿಡಿ.
 13. ಎಷ್ಟೇ ಆತ್ಮೀಯರಾಗಿದ್ದರೂ ಅತಿಯಾದ ಸಲುಗೆ ಎಂದಿಗೂ ಸಲ್ಲದು. ಸಂಬಂಧದಲ್ಲಿ ಒಂದು ಮಿತಿ ರೇಖೆ ಇರಲಿ, ನೀವೂ ಅತಿಯಾದ ಸಲುಗೆ ನೀಡದಿರಿ.
 14. ಆಗಾಗ ಮುಖತಃ ಭೇಟಿಗೆ ಮಾತುಕತೆಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಿ, ಸಂದರ್ಭ ನೋಡಿ ಹೃದಯ ಬಿಚ್ಚಿ ಮಾತನಾಡಿ ಹಗುರವಾಗಿ.
 15. ಒಬ್ಬರೆದುರುಗಡೆ ಇನ್ನೊಬ್ಬರನ್ನು ಕೀಳಾಗಿ ನೋಡಬೇಡಿ, ಗೆಳೆಯರೆಲ್ಲರನ್ನೂ ಸಮಾನ ಪ್ರೀತಿಯಿಂದಲ್ಲದಿದ್ದರೂ ಸಮಾನ ಗೌರವದಿಂದ ಕಾಣಿ.
 16. ಸಂಬಂಧಗಳು ಬಹುಪಾಲು ಸಂದರ್ಭದಲ್ಲಿ ಹಾಳಾಗುವುದು ಸ್ವಾರ್ಥದಿಂದ. ಕನಿಷ್ಠ ಬಾಂಧವ್ಯಕ್ಕಾಗಿಯಾದರೂ ಸ್ವಾರ್ಥ ಕಡಿಮೆ ಮಾಡಿಕೊಳ್ಳಿ.
 17. ಸುಳ್ಳಿನ ಮೇಲೆ ಸಂಬಂಧ ಜೀವಿಸುವುದು ಬೇಡ, ಹಾಗಂತ ಸತ್ಯ ಹರಿಶ್ಚಂದ್ರನ ಅಪರಾವತಾರ ದಂತಾಡುವುದೂ ಒಳಿತೇನಲ್ಲ.
 18. ಅವರ ಒಪ್ಪಿಗೆ ಇಲ್ಲದೇ ಕೌಟುಂಬಿಕ ವಿಚಾರಗಳಿಗೆ ತಲೆ ಹಾಕಬೇಡಿ, ಹಾಗೆಯೇ ಸಹಾಯ ಸಹಕಾರ ಬಯಸಿದಾಗ ಶಕ್ತ್ಯಾನುಸಾರ ನೀಡಿ.
 19. ಎಂದಿಗೂ ನಿಮ್ಮ ಸಂಪಾದನೆಯ 1/10 ಭಾಗಕ್ಕಿಂತಾ ಜಾಸ್ತಿ ಯಾರಿಗೂ ಸಾಲ ನೀಡಲು ಹೋಗಬೇಡಿ, ಕನಿಷ್ಠ ಪಕ್ಷ ಅದು ವಾಪಾಸು ಬರದಿದ್ದರೂ ನಿಮ್ಮ ನೆಮ್ಮದಿ ಹಾಳಾಗುವುದಿಲ್ಲ.
 20. ಇರದಿರುವುದನ್ನು ಇರುವಂತೆ ತೋರಿಸುವುದು ಬೇಡ, ಬಿಲ್ಡಪ್ಪುಗಳು, ಜಂಭ ಕೊಚ್ಚಿಕೊಳ್ಳುವುದರಿಂದ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ. ನೀವು ಹಾಗೆ ಮಾಡಬೇಡಿ ಮತ್ತು ಹಾಗೆ ಮಾಡುವವರನ್ನೂ ಎಂಟರ್ ಟೇನ್ ಮಾಡಬೇಡಿ. ಬಾಂಧವ್ಯ ಗೆಳೆತನ ವಾಸ್ತವದ ಆಧಾರದ ಮೇಲಿರಲಿ.
 21. ಗೆಳೆಯರಿಂದ ಸರಿಯಾದ ಫೀಡ್ ಬ್ಯಾಕ್ ಪಡೆದುಕೊಳ್ಳಿ, ಸದಾ ಕಾಲ ಹೊಗಳಿಕೆ ಮೆಚ್ಚುಗೆಯನ್ನೇ ನಿರೀಕ್ಷಿಸಬೇಡಿ. ಸತ್ಯವನ್ನು ಸ್ವೀಕರಿಸುವ ಛಾತಿಯಿರಲಿ.
 22. ಗೆಳೆಯರ ಮೇಲೆ ಗೂಢಾಚಾರಿಕೆ ಮಾಡಬೇಡಿ, 24 ಗಂಟೆ ಏನು ಮಾಡುತ್ತಿದ್ದಾರೆಂದು ತಿಳಿಯಲೇಬೇಕೆಂಬ ಕ್ಯೂರಿಯಾಸಿಟಿ ಇಲ್ಲದಿರಲಿ.
 23. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ತಕ್ಷಣ ತುಂಬಾ ಕ್ಲೋಸ್ ಆಗಬೇಡಿ, ಫೇಸ್ ಬುಕ್ ಲಿ ಬಿಲ್ಡಪ್ ಕೊಡಲು ಹೋಗಬೇಡಿ. ಸಂಬಂಧ ಗಟ್ಟಿಯಾಗುವವರೆಗೆ ಕಾಯಿರಿ, ಅತೀ ಬೇಗ ಗಟ್ಟಿಯಾದ ಸಂಬಂಧಗಳು ಅತೀ ಬೇಗ ದೂರವಾಗುವುದು ಇದೇ ಕಾರಣಕ್ಕೆ.
 24. ಗೆಳೆಯರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಡಿ, ನೀವೂ ಹಾಗೆ ಬಳಕೆಯಾಗಬೇಡಿ‌. ಇಷ್ಟವಿಲ್ಲದ್ದನ್ನು ನೇರವಾಗಿ ನಯವಾಗಿಯೇ ನಿರಾಕರಿಸಿ, ದಾಕ್ಷಿಣ್ಯಕ್ಕೆ ಬಲಿಯಾಗುವುದು ಬೇಡ.
 25. ಗೆಳೆಯರ ವಸ್ತುಗಳನ್ನು ತೀರಾ ಹತ್ತಿರವಾಗುವ ಮೊದಲೇ ಟೇಕನ್ ಫಾರ್ ಗ್ರಾಂಟೆಡ್ ಮಾಡಿಕೊಳ್ಳಬೇಡಿ. ಬೈಕು ಕಾರುಗಳನ್ನು ಸುಖಾಸುಮನೆ ಕೇಳಬೇಡಿ, ತೀರಾ ಅವಶ್ಯಕತೆ ಇದ್ದಾಗ ಮಾತ್ರ ಪಡೆಯಿರಿ ಮತ್ತು ಅವರಿಗೆ ಅವಶ್ಯಕತೆ ಇದ್ದಾಗ ನೀವೂ ಕೊಡಲು ಸಿದ್ಧವಾಗಿರಿ.
 26. ಗೆಳೆಯರೆದುರು ಇರೋ ಬರೋ ಎಲ್ಲಾ ಸೀಕ್ರೇಟ್ಸ್ ನ ತೋಡಿಕೊಳ್ಳೋದು ಬೇಡ, ಹಾಗೆಯೇ ಅವರು ನಿಮ್ಮನ್ನು ನಂಬಿ ಹೇಳಿದ ಗುಟ್ಟುಗಳನ್ನೂ ಬಾಯಿತಪ್ಪಿ ಬಿಟ್ಟುಕೊಡಬೇಡಿ. ಬಾಯಿ ಸುಮ್ಮನಿರಲ್ಲ ಅಂದ್ರೆ ಸೀಕ್ರೇಟ್ಸ್ ಗಳನ್ನು ಕೇಳಿಸಿಕೊಳ್ಳಲು ಹೋಗಲೇಬೇಡಿ.
 27. ಎಷ್ಟೇ ಕ್ಲೋಸ್ ಆದರೂ ನಿಮ್ಮ ಮೊಬೈಲ್ ಮತ್ತು ಪರ್ಸ್ ಅನ್ನು ಯಾರಿಗೂ ಕೊಡಬೇಡಿ, ಇಷ್ಟು ಕ್ಲೋಸಾಗಿದೀವಿ ಮೊಬೈಲ್ ಕೊಡಲ್ವಾ ಅನ್ನೋರನ್ನು ಮೊದಲು ಅನ್ ಫ್ರೆಂಡ್ ಮಾಡಿ ಯಾಕೆಂದರೆ ಕಾಲ ಒಂದೇ ಥರಾ ಇರಲ್ಲ.
 28. ಗೆಳೆತನವನ್ನು ಶೋ ಆಫ್ ಗೆ ಬಳಸಿಕೊಳ್ಳೋದು ಬೇಡ, ಕಣ್ಣು ಕುಕ್ಕುವಂತೆ ವೈಭವೀಕರಿಸಬೇಡಿ, ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಪೋಸ್ ಕೊಡಲು ಹೋಗಬೇಡಿ. ಮಂದಿ‌ ಕಣ್ಣಿಗೆ ಮರ ಮುರಿಯಿತು ಅನ್ನೋ ಗಾದೆ ಸುಳ್ಳಲ್ಲ. ಜನರ ಮುಂದೆ ಮೆರೆಯುವುದು ಬೇಡ.
 29. ಫೇಸ್ ಬುಕ್ ವಾಟ್ಸಾಪ್ ಗೆಳೆತನಕ್ಕೆ ಒಂದು ಲಕ್ಷ್ಮಣ ರೇಖೆ ಇರಲಿ ಮೆಸೆಂಜರ್ ನಲ್ಲಿ ಸ್ವರ್ಗಾನೇ ತೋರಿಸಬಹುದು ಆದರೆ ನಿಜವಾದ ಗೆಳೆತನ ನೆಲದಲ್ಲಿ (ವಾಸ್ತವ) ಇರೋದು ಎಂಬುದು ಗೊತ್ತಿರಲಿ. ಸೂಕ್ತ ಸಂದರ್ಭಗಳು ಬಂದಾಗ ನಿಮಗೇ ಅದು ಅರ್ಥವಾಗಲಿದೆ.
 30. …ಸಂಗ್ರಹ….
 31. ನಿಮ್ಮನ್ನು ಹೊಗಳುವವರು ಮಾತ್ರ ಮಿತ್ರರು ಟೀಕಿಸುವವರೆಲ್ಲ ಶತ್ರುಗಳೆಂಬ ಭ್ರಮೆ ಬಿಡಿ, ಹೊಗಳುವವರಲ್ಲಿ ಕೆಲವರು ಸ್ವಾರ್ಥಿಗಳೂ ಇರಬಹುದು ಟೀಕಿಸುವವರಲ್ಲೊಬ್ಬ ಶುದ್ಧ ಹೃದಯದ ಮಿತ್ರನಿರಬಹುದು. ಈ ಎರಡಕ್ಕೂ ಸೇರದ ಬಹು ದೊಡ್ಡ ವರ್ಗ ನಿಮ್ಮನ್ನು ಕರೆಕ್ಟಾಗಿ ಜಡ್ಜ್ ಮಾಡತ್ತೆ ಅದಕ್ಕೆ ಜಾಸ್ತಿ ಮಹತ್ವ ಕೊಡಿ.
 32. ಗೆಳೆಯರ ಗುಂಪಲ್ಲಿದ್ದಾಗ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಮಾತನಾಡಿ. ಒಬ್ಬರಿಗೇ ಹೇಳುವುದು, ಒಬ್ಬರೊಡನೇ ಮಾತನಾಡುವುದು ಸರಿಯಲ್ಲ. ಹಾಗಿದ್ದರೆ ನಿಮಗೆ ಗೆಳೆಯರ ಗುಂಪೇಕೆ? ಬೇರೆಯವರಿಗೆ ಸಂಬಂಧಿಸದ, ನಿಮ್ಮಿಬ್ಬರಿಗೇ ಸಂಬಂಧಿಸಿದ ವಿಚಾರಗಳಿಗಿಂತಾ ಜನರಲ್ ಟಾಪಿಕ್ ನಿಮ್ಮದಾಗಿರಲಿ. ಎಲ್ಲರ ಕಡೆಗೂ ನೋಡಿ ಮಾತನಾಡಿ, ಬಾಡಿಲಾಂಗ್ವೇಜ್ ನಲ್ಲಿ ಅದು ವ್ಯಕ್ತವಾಗಲಿ.
 33. ಸ್ನೇಹಿತರ ಗುಂಪಿನಲ್ಲಿ ನೀವೊಬ್ಬರೇ ಮಾತನಾಡುತ್ತಿರಬೇಡಿ, ನಿಮ್ಮೊಬ್ಬರದೇ ನಡೆಯಬೇಕು ಎಂಬಂತೆ ವರ್ತಿಸದಿರಿ. ನಿಮ್ಮನ್ನು ಅವರೆಲ್ಲರೂ ನಾಯಕನೆಂದು ಒಪ್ಪಿಕೊಳ್ಳುವ ಮೊದಲೇ ಎಲ್ಲರ ಮೇಲೆ ಅಧಿಕಾರ ಚಲಾಯಿಸುವುದು ಬೇಡ…

Leave a Reply

Your email address will not be published. Required fields are marked *

Translate »