ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಟ್ಲ ಸಮೀಪದ ನಾರ್ಶ್ಯ ಕ್ಷೇತ್ರ ಮಧ್ವಪೂಜಿತ ಶ್ರೀ ನರಸಿಂಹ ದೇವರು

ಮಧ್ವಯಾತ್ರೆಯನ್ನು ಮಾಡೋಣ ಬದುಕಿನ ಭಾರವನ್ನು ಹಗುರಾಗಿಸಿ ಕಾಪಾಡುವ ಮಧ್ವಪೂಜಿತ ಶ್ರೀ ನರಸಿಂಹ ದೇವರು..

ಸುಮಾರು 800 ವರ್ಷಗಳ ಹಿಂದಿನ ಘಟನೆಯಿದು. ಒಮ್ಮೆ ಶ್ರೀ ಮಧ್ವಾಚಾರ್ಯರು ಸಂಚಾರಕ್ರಮೇಣ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ನಾರ್ಶ್ಯ ಕ್ಷೇತ್ರಕ್ಕೆ ಬರುತ್ತಾರೆ. ಇವರನ್ನು ಪರೀಕ್ಷಿಸಲು ವಿದ್ವಾಂಸರು ಹಾಗೂ ಪರಾಕ್ರಮಿ ಗಳು ಸೇರಿರುತ್ತಾರೆ. ಉತ್ಸವದ ಹಿನ್ನೆಲೆಯಲ್ಲಿ ಜನಸಾಗರವೇ ಸೇರಿರುತ್ತದೆ. ಇದ್ದಕ್ಕಿದ್ದಂತೆ ಆಚಾರ್ಯರು ಅತ್ಯಂತ ಸಣ್ಣವಯಸ್ಸಿನ ಬ್ರಹ್ಮಚಾರಿಯ ಮೇಲೆ ಕುಳಿತು ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆಯನ್ನು ಮಾಡುತ್ತಾರೆ. ಮಹಾಬಲಿಷ್ಠರಾದ ಆಚಾರ್ಯರು ಸಣ್ಣ ಮಗುವಿನ ಮೇಲೆ ಕುಳಿತು ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಮಾಡಿದ್ದನ್ನು ನೋಡಿ ವಿರೋಧಿಗಳು ಪಲಾಯನವನ್ನು ಮಾಡಿದರು. ಆಶ್ಚರ್ಯಚಕಿತರಾದ ಶಿಷ್ಯರು ಪ್ರಶ್ನೆಯನ್ನು ಮಾಡಿದರು. ಈ ಘಟನೆ ನಡೆದದ್ದು ಹೇಗೆ?? ಎಂದು. ಆಗ ಆಚಾರ್ಯರು ಉತ್ತರಿಸಿದರು….. ಈ ನರಸಿಂಹದೇವರ ಅನುಗ್ರಹದಿಂದ ಪ್ರಾಪ್ತವಾದ ಲಘಿಮಾ ಸಿದ್ಧಿಯಿಂದ ನಡೆಯಿತು ಎಂದು. ಅಂದರೆ ಶ್ರೀ ನರಸಿಂಹ ದೇವರ ಅನುಗ್ರಹದಿಂದ ಸಕಲ ಆಪತ್ತುಗಳೂ ನಿವಾರಣೆಗೊಂಡು ಜೀವನದಲ್ಲಿ ಜಯವನ್ನು ಪಡೆಯಬಹುದು.
ಮಧ್ವವಿಜಯದಲ್ಲಿ “ನಿರ್ಯತ್ನಂ ವಟುಮಧಿರುಹ್ಯ ಮಂದಹಾಸೀ ಸ ಪ್ರಾಯಾದಿಹ ನೃಸಿಂಹಗೇಹಮ್ | ಐಶ್ವರ್ಯೈರಿತಿ ಲಘಿಮಾದಿಕೈರುಪೇತೋ ಮಧ್ವೋ$ಭೂತ್ ತ್ರಿಭುವನಚಿತ್ರರತ್ನರಾಜ:” (16/30) ಆದ್ದರಿಂದ ನಮ್ಮ ಬದುಕಿನ ಭಾರವನ್ನು ನಿವಾರಿಸಿ ನಮ್ಮನ್ನು ಹಗುರು ಮಾಡುವ ನಾರ್ಶ್ಯಕ್ಷೇತ್ರದ ಮಧ್ವಪೂಜಿತ ಯೋಗಾನರಸಿಂಹ ದೇವರ ಸನ್ನಿಧಿಗೆ ಒಮ್ಮೆಯಾದರೂ ಯಾತ್ರೆ ಮಾಡೋಣ. ನರಸಿಂಹಸ್ತುತಿಯನ್ನು ಪಾರಾಯಣ ಮಾಡಿ ಧನ್ಯರಾಗೋಣ 🙏🙏.

  ನವರಾತ್ರಿ 4ನೇ ದಿನ - ಕೂಷ್ಮಾಂಡ ದೇವಿ ಆರಾಧನೆ ಪೂಜಾ ವಿಧಾನ 

ಸಂಪರ್ಕಿಸಿ – ವಿದ್ವಾನ್ ಸತ್ಯಾಭಿಜ್ನಾಚಾರ್ +918217648583

ಸಂಗ್ರಹ ಗೋಪಾಲಚಾರ್ಯ ಪುತ್ತಿಗೆ

Leave a Reply

Your email address will not be published. Required fields are marked *

Translate »