“ಹಿಂದೂ ಧರ್ಮದಲ್ಲಿ ಅರಿಶಿನ ಹಾಗೂ ಕುಂಕುಮದ ಮಹತ್ವ”
ಹಿಂದೂ ಧರ್ಮದಲ್ಲಿ ಕುಂಕುಮ ಮತ್ತು ಅರಿಶಿನಕ್ಕೆ ಪವಿತ್ರ ಸ್ಥಾನವಿದ್ದು ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಇವುಗಳನ್ನು ವಿಶೇಷವಾಗಿ ಬಳಸಿಕೊಳ್ಳುತ್ತಾರೆ ಮತ್ತು ಪೂಜನೀಯ ಸ್ಥಾನವನ್ನು ನೀಡುತ್ತಾರೆ. ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು ಹಣೆಗೆ ಕುಂಕುಮದ ಸಿಂಧೂರವನ್ನಿಟ್ಟು ತಮ್ಮ ಮುತ್ತೈದೆತನವನ್ನು ಸಂಕೇತಿಸುತ್ತಾರೆ.
ಅಲ್ಲದೆ ಕುಂಕುಮ ಮತ್ತು ಅರಿಶಿನ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಅರಿಶಿನವು ಬರಿಯ ಅಲಂಕಾರಿಕ ಇಲ್ಲವೇ ಪೂಜನೀಯ ಸಾಮಾಗ್ರಿಯಾಗಿ ಹೆಸರು ಪಡೆದುಕೊಂಡಿರುವುದು ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ಕೂಡ ಅರಿಶಿನ ಗಣನೀಯ ಸ್ಥಾನವನ್ನು ಪಡೆದುಕೊಂಡಿದೆ. ಮನೆಮದ್ದಾಗಿ ಎಲ್ಲರ ಮನೆಯಲ್ಲೂ ಸ್ಥಾನವನ್ನು ಪಡೆದುಕೊಂಡಿರುವ ಅರಶಿನ ಒಂದು ರೀತಿಯಲ್ಲಿ ಸಂಜೀವಿನಿಯಾಗಿದೆ....
ಕುಂಕುಮ ವಿವಾಹಿತ ಮಹಿಳೆಯರ ಗುರುತು: ಅನಾದಿ ಕಾಲದಿಂದಲೂ, ವಿವಾಹಿತ ಮಹಿಳೆಯರು ಕುಂಕುಮವನ್ನು ಸಿಂಧೂರ ಮತ್ತು ತಿಲಕದಂತೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಪತಿಯ ದೀರ್ಘಾಯುಷ್ಯದ ಸಂಕೇತವಾಗಿ ಇವರುಗಳು ಕುಂಕುಮದಿಂದ ಬೈತಲೆಯ ನಡುವೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಾರೆ.
ಅರಿಶಿನ ಶುದ್ಧೀಕರಣದ ಸಂಕೇತ ಹಿಂದೂ ವಿವಾಹ ಪದ್ಧತಿಗಳಲ್ಲಿ ಅರಿಶಿನ ಶಾಸ್ತ್ರ ಇದ್ದೇ ಇರುತ್ತದೆ. ಮದುಮಗಳಿಗೆ ಅರಶಿನದ ಮಿಶ್ರಣವನ್ನು ಹಚ್ಚುತ್ತಾರೆ. ವಿವಾಹದಂತಹ ಪರಿಶುದ್ಧ ಶಾಸ್ತ್ರದಲ್ಲಿ ಹುಡುಗಿಯನ್ನು ಎಲ್ಲಾ ಬಗೆಯಲ್ಲೂ ಪುನೀತಳನ್ನಾಗಿ ಮಾಡಲು ಅರಿಶಿನ ಶಾಸ್ತ್ರವನ್ನು ಇಟ್ಟುಕೊಳ್ಳುತ್ತಾರೆ.
ಕುಂಕುಮದ ಮಹತ್ವ ಹಿಂದೂ ಶಾಸ್ತ್ರಗಳು ಹೇಳುವಂತೆ, ಸೌಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿ ಕುಂಕುಮವನ್ನು ಕಾಣಲಾಗುತ್ತದೆ. ಹಣೆಯನ್ನು ಮೇಷ ರಾಶಿಯ ಸ್ಥಾನವಾಗಿ ಹೇಳಲಾಗಿದ್ದು ಮೇಷ ರಾಶಿಯ ದೇವನು ಮಂಗಳನಾಗಿದ್ದಾನೆ. ಆದ್ದರಿಂದಲೇ ಅದೃಷ್ಟವನ್ನು ತರುತ್ತದೆ ಎಂಬ ಕಾರಣಕ್ಕಾಗಿ ವಿವಾಹಿತ ಸ್ತ್ರೀಯರು ತಮ್ಮ ಹಣೆಯನ್ನು ಕುಂಕುಮದಿಂದ ಅಲಂಕರಿಸಿಕೊಳ್ಳುತ್ತಾರೆ.
ಕುಂಕುಮ ಮಹಿಳೆಯರ ಶಕ್ತಿಯ ಸಂಕೇತ ವಿದ್ವಾನರ ಪ್ರಕಾರ, ಕೆಂಪು ಶಕ್ತಿ ಮತ್ತು ಬಲದ ಸಂಕೇತವಾಗಿದೆ. ಪಾರ್ವತಿ ಮತ್ತು ಸತಿ ದೇವಿಯ ಶಕ್ತಿಗೆ ಸಮನಾಗಿ ಇದನ್ನು ಹೋಲಿಸಲಾಗುತ್ತದೆ. ಹಿಂದೂ ಶಾಸ್ತ್ರಗಳ ಪ್ರಕಾರ, ಸತಿಯು ತನ್ನ ಪತಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸುತ್ತಾಳೆ. ಅದೇ ರೀತಿಯಲ್ಲಿ ಪ್ರತಿಯೊಬ್ಬ ಪತ್ನಿ ಕೂಡ ತನ್ನ ಪತಿಗಾಗಿ ನಿಷ್ಟತೆಯನ್ನು ತೋರ್ಪಡಿಸಿ ಮತ್ತು ತನ್ನ ಭಕ್ತಿಯನ್ನು ಆತನ ಪ್ರತಿಯಾಗಿ ತೋರುತ್ತಾರೆ.
ಅರಿಶಿನದ ಬಣ್ಣದ ಮಹತ್ವ ಅರಿಶಿನವು ಹಳದಿ ಮತ್ತು ಕಿತ್ತಳೆ ಬಣ್ಣದಲ್ಲಿ ಲಭ್ಯವಿದೆ. ಹಳದಿ ಬಣ್ಣವು ಕನ್ಯತ್ವ ಹಾಗೂ ಇಂದ್ರಿಯ ನಿಗ್ರಹದ ದ್ಯೋತಕವಾಗಿದ್ದರೆ ಕಿತ್ತಳೆ ಬಣ್ಣವು ಸೂರ್ಯ, ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದೆ.
ಆರೋಗ್ಯದ ದೃಷ್ಟಿಯಲ್ಲಿ ಅರಿಶಿನದ ಪಾತ್ರ ಬೆಚ್ಚನೆಯ ಹಾಲಿನಲ್ಲಿ ಅರಿಶಿನವನ್ನು ಮಿಶ್ರಮಾಡಿ ಸೇವಿಸುವುದು ನಮ್ಮನ್ನು ಹಿತವಾಗಿರಿಸುತ್ತದೆ. ಇಷ್ಟಲ್ಲದೆ ಅರಿಶಿನ ಹಾಲು ನಮ್ಮ ದೇಹದಲ್ಲಿರುವ ಆಮ್ಲ ಹಿಮ್ಮುಖ ಹರಿವು ಮತ್ತು