ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಜಯ ಏಕಾದಶಿ ಮಹಿಮೆ

ವಿಜಯ ಏಕಾದಶಿ ಮಹಿಮೆ…

ಆದೌ ರಾಮ ತಪೋವನಾಭಿಗಮನಂ ಹತ್ವಾಮೃಗಂ ಕಾಂಚನಮ್
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಮ್ |
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೀ ದಾಹನಮ್
ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತಧ್ಧಿ ರಾಮಾಯಣಮ್||

ಮಾಘಮಾಸ, ಕೃಷ್ಣಪಕ್ಷದ ಏಕಾದಶಿಗೆ ವಿಜಯ ಏಕಾದಶಿ ಎನ್ನುವರು. ಹೆಸರೇ ಸೂಚಿಸುವಂತೆ ಈ ಏಕಾದಶಿ ವ್ರತಾಚರಣೆಯಿಂದ ಎಲ್ಲ ಕಾರ್ಯದಲ್ಲಿ ವಿಜಯ ದೊರೆಯುವದು. ಈ ಏಕಾದಶಿಯ ಮಹಾತ್ಮೆ ಕುರಿತು ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ. ಬ್ರಹ್ಮದೇವರು ನಾರದರಿಗೆ ಹೇಳಿದ ಈ ವ್ರತವನ್ನು ಧರ್ಮರಾಜ ಯುಧೀಷ್ಠಿರನಿಗೆ ಶ್ರೀಕೃಷ್ಣನು ದೃಷ್ಟಾಂತದೊಂದಿಗೆ ತಿಳಿಸುತ್ತಾನೆ.

ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಸೀತೆ ಹಾಗೂ ಲಕ್ಷ್ಮಣನ ಸಹಿತವಾಗಿ ಹದಿನಾಲ್ಕು ವರ್ಷ ವನವಾಸಕ್ಕೆ ಹೊರಡುತ್ತಾನೆ. ಅರಣ್ಯದ ಮಧ್ಯದಲ್ಲಿ “ಪಂಚವಟಿ” ಎಂಬ ಸ್ಥಳದಲ್ಲಿ ವಾಸವಾಗಿರುತ್ತಾನೆ. ಅಲ್ಲಿಯೇ ಸೀತೆಯ ಅಪಹರಣವಾಗುತ್ತದೆ.

ಪ್ರಭು ಶ್ರೀರಾಮನು ಸೀತೆಯನ್ನು ಹುಡುಕುತ್ತ ಸಾಗುತ್ತಾನೆ. ಮರಣಾವಸ್ಥೆಯಲ್ಲಿದ್ದ ಜಟಾಯು ರಾವಣನೇ ಸೀತೆಯನ್ನು ಅಪಹರಿಸಿದ ಸುದ್ದಿ ತಿಳಿಸಿ ಶ್ರೀರಾಮನಿಂದ ಮುಕ್ತಿಹೊಂದುತ್ತಾನೆ. ಕಾನನದಲ್ಲಿ ಸೀತಾನ್ವೇಷಣೆಯಲ್ಲಿ ನಿರತನಾದ ಶ್ರೀರಾಮನಿಗೆ ಹನುಮಂತನ ಸಖ್ಯ ಬೆಳೆಯುತ್ತದೆ.

  ​ಯೋಗಿನಿ ಏಕಾದಶಿ ವ್ರತ ಕಥೆ​

ಮಾತೆ ಸೀತೆಯನ್ನು ರಾವಣ ಲಂಕೆಯ ಅಶೋಕವನದಲ್ಲಿ ಇರಿಸಿರುವುದಾಗಿ ಹನುಮಂತನಿಂದ ತಿಳಿಯುತ್ತದೆ. ನಂತರ ಹನುಮಂತನು ಲಂಕೆಯನ್ನು ಸುಟ್ಟು ಸೀತೆಗೆ ಮುದ್ರಿಕೆಯನ್ನು ಕೊಟ್ಟು ಬರುತ್ತಾನೆ. ವಾಯುಪುತ್ರನಾದ ಹನುಮಂತ ಸಾಗರವನ್ನೇ ಹಾರಿ ಲಂಕೆಯನ್ನು ತಲುಪಿದ ಮರಳಿ ಸುದ್ದಿ ತಂದ.

ಆದರೆ ಮಾನವನಾಗಿ, ವಾನರ ಸೈನ್ಯ ಸಹಿತನಾಗಿ ಶ್ರೀರಾಮನು ಸಮುದ್ರವನ್ನು ದಾಟುವದು ಹೇಗೆ ? ಶ್ರೀರಾಮ ಸಮುದ್ರದ ಹತ್ತಿರ ಬಂದು ನೋಡುತ್ತಾನೆ. ಅಲ್ಲಿರುವ ಭಯಂಕರ ಜಲಚರಗಳು, ಅಗಾಧವಾದ ಜಲರಾಶಿ, ಇಂಥ ಸಮುದ್ರವನ್ನು ದಾಟಿ ಲಂಕೆಯನ್ನು ತಲುಪಿ ಸೀತೆಯನ್ನು ಕರೆತರುವದಾದರೂ ಹೇಗೆ ? ಎಂದು ಚಿಂತಿತನಾಗುತ್ತಾನೆ.

ಯಾವ ಪುಣ್ಯದ ಫಲದಿಂದ ನಾವು ಸಮುದ್ರ ದಾಟಬಲ್ಲೆವು ? ಎಂದು ಲಕ್ಷ್ಮಣನನ್ನು ಕೇಳುತ್ತಾನೆ. ಅದಕ್ಕೆ ಲಕ್ಷ್ಮಣ ಆದಿ ಪುರುಷನಾದ ನಿನಗೆ ತಿಳಿಯದ್ದು ಯಾವುದಿದೆ ? ಆದರೂ ಸಮೀಪದಲ್ಲಿರುವ ಕುಮಾರದ್ವೀಪದಲ್ಲಿ ಋಷಿಗಳ ಆಶ್ರಮವಿದೆ ಅಲ್ಲಿಗೆ ಹೋಗಿ ಅವರ ಸಲಹೆ ಕೇಳೋಣ ಎನ್ನುತ್ತಾನೆ.

  ಗುರು ಪೂರ್ಣಿಮೆ ಪೂಜೆ ವಿಧಾನ ಹಾಗೂ ಮಹತ್ವ

ಶ್ರೀರಾಮನನ್ನು ನೋಡಿದ ಮಹರ್ಷಿಗೆ ಅತ್ಯಾನಂದವಾಗುತ್ತದೆ ವಿಷ್ಣುವಿನ ಅವತಾರವೇ ಆದ ಶ್ರೀರಾಮ ತನ್ನ ಆಶ್ರಮಕ್ಕೇ ಬಂದಿದ್ದಾನೆ. ಎಂಥ ಭಾಗ್ಯ ? ಶ್ರೀರಾಮನು ತನ್ನ ಆಶ್ರಮಕ್ಕೆ ಬಂದ ಕಾರಣವೇನು? ಎಂದು ಕೇಳುತ್ತಾನೆ.

ಆಗ ಶ್ರೀರಾಮ ತಾನು ಈ ಭಯಂಕರ ಸಮುದ್ರವನ್ನು ದಾಟಿ ರಾಕ್ಷಸರಾಜ, ಲಂಕಾಧೀಶ ರಾವಣನೊಡನೆ ಹೋರಾಡಿ ಗೆಲುವು ಸಾಧಿಸಿ ಸೀತೆಯನ್ನು ಮರಳಿ ಕರೆತರಬೇಕು. ಅದಕ್ಕಾಗಿ ಏನು ಮಾಡಬೇಕು ? ಹೇಳಿ ಎನ್ನುತ್ತಾನೆ. ಅದಕ್ಕೆ ಋಷಿಗಳು ನಿನ್ನ ಸಹೋದರ ಲಕ್ಷ್ಮಣ ಹಾಗೂ ವಾನರಸೈನ್ಯದ ಸಹಿತವಾಗಿ ವಿಜಯ ಏಕಾದಶಿ ವ್ರತವನ್ನು ಆಚರಿಸು, ವಿಜಯ ಲಭಿಸುತ್ತದೆ ಎಂದು ಹೇಳುತ್ತಾರೆ. ಸ್ವತಃ ವಿಷ್ಣುವೇ ಶ್ರೀರಾಮನಾಗಿ ಅವತರಿಸಿದ್ದರೂ ಋಷಿಯ ಉಪದೇಶದಂತೆ ವಿಜಯ ಏಕಾದಶಿ ವ್ರತ ಆಚರಿಸುತ್ತಾನೆ. ರಾವಣನೊಡನೆ ಯುದ್ಧಮಾಡಿ ವಿಜಯಿಯಾಗಿ ಸೀತೆಯೊಂದಿಗೆ ಮರಳುತ್ತಾನೆ.

  ಮಾಘ ಹುಣ್ಣಿಮೆ

ವೈದೇಹಿ ಸಹಿತಂ ಸುರದ್ರುಮತಲೇ ಹೈಮೇ ಮಹಾಮಂಡಲೇ
ಮಧ್ಯೇಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
ಅಗ್ರೇ ವಾಚಯತಿ ಪ್ರಭಂಜನಸುತೇ ತತ್ವಂ ಮುನಿಭ್ಯಃ ಪರಮ್
ವ್ಯಾಖ್ಯಾಂತಂ ಭರತಾದಿಭಿಃ ಪರಿವ್ರತಂ ರಾಮಂಭಜೇ ಶ್ಯಾಮಲಮ್ ||

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

Leave a Reply

Your email address will not be published. Required fields are marked *

Translate »