ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಧೃತರಾಷ್ಟ್ರನ ೧೦೦ ಪುತ್ರ ಶೋಕಕ್ಕೆ ಕಾರಣದ ಕಥೆ

ಕುರುಕ್ಷೇತ್ರ ಯುದ್ಧ ಮುಗಿದಿತ್ತು.

ತನ್ನನ್ನು ನೋಡಲು ಬಂದ ಶ್ರೀಕೃಷ್ಣನನ್ನು ಧೃತರಾಷ್ಟ್ರ ಕೇಳಿದನು..

ನನ್ನ ನೂರು ಮಕ್ಕಳನ್ನೂ ನೀನು ಯುದ್ಧದಲ್ಲಿ ಕೊಲ್ಲಿಸಿದೆಯಲ್ಲ. ಏಕೆ?

ಕೃಷ್ಣ:-೫೦ ಜನ್ಮಗಳ ಹಿಂದಿನ ನಿನ್ನ ಜನ್ಮದಲ್ಲಿ, ನೀನೊಬ್ಬ ಬೇಟೆಗಾರನಾಗಿದ್ದೆ. ಬೇಟೆಯಾಡಲು ಹೋದಾಗ ಒಂದು ಗಂಡು ಪಕ್ಷಿಯ ಮೇಲೆ ಬಾಣ ಬಿಟ್ಟೆ. ಆದರೆ ಅದೃಷ್ಟವಶಾತ್ ಆ ಹಕ್ಕಿಯು ತಪ್ಪಿಸಿಕೊಂಡು ಹಾರಿಹೋಯಿತು. ಸಿಟ್ಟುಗೊಂಡ ನೀನು ಗೂಡಿನಲ್ಲಿದ್ದ ಅದರ ನೂರು ಪುಟ್ಟ ಮರಿಗಳನ್ನು ನಿಷ್ಕರುಣೆಯಿಂದ ಕೊಂದು ಹಾಕಿದೆ.ಪಕ್ಕದ ಮರದ ಮೇಲೆ ಕುಳಿತಿದ್ದ ತಂದೆ ಪಕ್ಷಿಯು,ಕಣ್ಣೆದುರೇ ತನ್ನ ಮರಿಗಳನ್ನು ನೀನು ಕೊಲ್ಲುತ್ತಿರುವುದನ್ನು ಅಸಹಾಯಕವಾಗಿ ನೋಡುತ್ತ ರೋದಿಸುತ್ತಿತ್ತು.

ಆ ಪಕ್ಷಿಯ ಪುತ್ರಶೋಕಕ್ಕೆ ನೀನು ಕಾರಣನಾಗಿದ್ದೆ.
ಕಣ್ಣೆದುರೇ ನೂರು ಮಕ್ಕಳನ್ನು ಕಳೆದುಕೊಂಡ ಹಕ್ಕಿಯ ದುಃಖ ಎಷ್ಟಿರಬಹುದು? ಅದನ್ನು ನೀನು ಅನುಭವಿಸಲು ನಿನ್ನ ನೂರು ಮಕ್ಕಳು ಈ ಯುದ್ಧದಲ್ಲಿ ಮಡಿಯಬೇಕಾಯಿತು.

  ನವರಾತ್ರಿ ಎನ್ನುವ ಆಯುರ್ವೇದ ಹಬ್ಬ

ಧೃತರಾಷ್ಟ್ರ: ಸರಿˌ ಆದರೆ ಇದಕ್ಕಾಗಿ ನಾನು ೫೦ ಜನ್ಮಗಳಷ್ಟು ದೀರ್ಘಕಾಲ ಕಾಯುವಂತಾದುದು ಏಕೆ?

ಕೃಷ್ಣ:ನೂರು ಮಕ್ಕಳನ್ನು ಪಡೆಯಲು ಬಹಳ ಪುಣ್ಯಫಲ ಬೇಕು.ಅಷ್ಟು ಪುಣ್ಯ ಸಂಚಯನಕ್ಕಾಗಿ ೫೦ ಜನ್ಮ ಬೇಕಾಯಿತು.
ನೂರು ಮಕ್ಕಳನ್ನು ಪಡೆಯುವಷ್ಟು ಪುಣ್ಯ ಸಂಪಾದನೆ ಮಾಡಿದ ನಂತರವೇ,೫೦ ಜನ್ಮಗಳ ಹಿಂದೆ, ನೂರು ಮರಿಗಳನ್ನು ಕೊಂದ ಪಾಪದ ಪಲದ ಅನುಭವ ನಿನಗಾಗಬೇಕಾಗಿತ್ತು.ಭಗವದ್ಗೀತೆಯಲ್ಲಿ ಅರ್ಜುನನಿಗೆ ಇದನ್ನೇ

“ಕರ್ಮಣೋ ಹ್ಯಪಿ ಬೋದ್ಧವ್ಯಂಬೋದ್ಧವ್ಯಂ ಚ ವಿಕರ್ಮಣಃ | ಅಕರ್ಮಣಶ್ಛ ಬೋದ್ಧವ್ಯಂ
ಗಹನಾ ಕರ್ಮಣೋ ಗತಿಃ ||” (4-17)

ಕರ್ಮ ಮತ್ತು ಅಕರ್ಮದ ಸ್ವರೂಪವನ್ನು ತಿಳಿಯ ಬೇಕು. ಹಾಗೆಯೇ,ವಿಕರ್ಮದ ಸ್ವರೂಪವನ್ನೂ ತಿಳಿಯ ಬೇಕಾದುದು ಅವಶ್ಯಕ.ಏಕೆಂದರೆˌ ಕರ್ಮದ ಗತಿಯು ಬಹಳ ಗಹನವಾಗಿದೆ.ಕ್ರಿಯೆ ಮತ್ತು ಪ್ರತಿಕ್ರಿಯೆಯು ಹೇಗೆ ಕೆಲಸ ಮಾಡುತ್ತದೆ ಎಂಬ ರೀತಿಯು ಬಹಳ ಸಂಕೀರ್ಣವಾದುದು. ಪಾಪ ಮಾಡಿದ ಜೀವಿಗಳಿಗೆ, ಯಾವಾಗ, ಯಾವ ರೀತಿ,ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಭಗವಂತ ನಿರ್ಧರಿಸುತ್ತಾನೆ. ಅಂತಹ ಸಕಾಲವನ್ನು ನಿರೀಕ್ಷಿಸುತ್ತ, ಕೆಲವನ್ನು ಈ ಜನ್ಮದಲ್ಲಿ,ಮತ್ತೆ ಕೆಲವನ್ನು ಮುಂದಿನ ಜನ್ಮದಲ್ಲಿ ಅನುಭವಿಸುವಂತೆ ಮಾಡುತ್ತಾನೆ.

  ಆಸ್ತಿಕ ಋಷಿಯು ಜನಮೇಜಯನ ಸರ್ಪಯಾಗ - ಕಥೆ

ಹೀಗೊಂದು ಮಾತಿದೆ…
“ಭಗವಂತನ ಗಾಣವು ಬಹಳ ನಿಧಾನಗತಿಯಲ್ಲಿ ತಿರುಗುತ್ತಿರುತ್ತದೆ.ಆದರೆ ಅದರಲ್ಲಿ ಸಿಕ್ಕಿಕೊಂಡ ವಸ್ತುವನ್ನು ( ಜೀವಿ) ಸರಿಯಾದ ಹದದಲ್ಲಿ,ನುಣ್ಣಗೆ ಹಿಟ್ಟಾಗಿಸುತ್ತದೆ”

ಆದ್ದರಿಂದ ಪ್ರತಿ ಪ್ರಕ್ರಿಯೆಯೂ ಅದರ ಲೆಕ್ಕದಲ್ಲಿ ಈಗಲೋ, ನಂತರವೋ, ಆಮೇಲೋ, ಎಂದು ಸೇರಿರುತ್ತದೆ.ಅಂತೆಯೇ ಕರ್ಮಫಲದ ಉರುಳು ಸರಿಯಾದ ಸಮಯದಲ್ಲಿ ಬಿಗಿಯುತ್ತದೆ. ಯಾವುದೂ ತಪ್ಪಿಸಿಕೊಂಡು ಇದರಿಂದ ಉಳಿಯುವುದಿಲ್ಲ.

ಇದಕ್ಕೆ ಭಗವದ್ಗೀತೆಯಲ್ಲಿ ಒಂದು ಉದಾಹರಣೆ ಇದೆ.
ಸಾವಿರ ಕರುಗಳಿರುವ ಗುಂಪಿನಲ್ಲಿ ತಾಯಿ ಹಸುವನ್ನು ಬಿಟ್ಟರೆ,ಆ ಹಸು ಸಾವಿರ ಕರುಗಳಲ್ಲಿ ತನ್ನ ಕರು ಯಾವುದೆಂದು ಸರಿಯಾಗಿ ಗುರುತಿಸಿ ಹಾಲೂಡಿಸುತ್ತದೆ.
ಅಥವಾ ಸಾವಿರ ಹಸುಗಳ ನಡುವೆ ಒಂದು ಕರುವನ್ನು ಬಿಟ್ಟರೂ,ಕರು ತನ್ನ ತಾಯಿ ಯಾವುದೆಂದು ಗುರುತಿಸಿ ಅದನ್ನು ಸೇರಿಕೊಳ್ಳುತ್ತದೆ.ಇದು ಸೃಷ್ಟಿಯಲ್ಲಿಯೇ ಅವುಗಳಲ್ಲಿ ಅಂತರ್ಗತವಾದ ಶಕ್ತಿ.

  ಆಧ್ಯಾತ್ಮಿಕ ಪರಿಹಾರಕ್ಕಾಗಿ ‘ದಶಪ್ರಣವೀ ಗಾಯತ್ರಿ ಮಂತ್ರ’

ಇದೇ ರೀತಿಯಲ್ಲಿ ಕರ್ಮವೂ ಸಹ ಜಗತ್ತಿನಲ್ಲಿರುವ ಕೋಟ್ಯಂತರ ಜೀವಿಗಳಲ್ಲಿ ನಮ್ಮನ್ನು ಗುರುತಿಸಿ ಪಾಪದ ಕರ್ಮ ಫಲವನ್ನು ಅನುಭವಿಸುವಂತೆ ಮಾಡುತ್ತದೆ. ರಸ್ತೆಯಲ್ಲಿ ನೂರಾರು ಜನ ಓಡಾಡು ತ್ತಿರುತ್ತಾರೆ.ಅವರೆಲ್ಲರಿಗೂ ಆಕಸ್ಮಿಕ ಅಪಘಾತವಾ ಗುವುದಿಲ್ಲ. ಪಾಪ ಕರ್ಮದ ಫಲವಾಗಿ,ಅಂಗಹೀನ,
ಅಥವಾ ಸಾಯುವ ಯೋಗವಿದ್ದವನು ಮಾತ್ರ ಅದಕ್ಕೆ ಬಲಿಯಾಗುತ್ತಾನೆ.

ಇದು ಆಕಸ್ಮಿಕವಲ್ಲ.ಪೂರ್ವ ನಿರ್ಧಾರಿತ ಕರ್ಮಫಲ.

ಇದು ಕರ್ಮದ ನಿಯಮ.
ಗತಿ ನಿಧಾನವಾಗಿರಬಹುದು.ಆದರೆ ಯಾರೂ ತಪ್ಪಿಸಿಕೊಳ್ಳಲಾರರು.
🙏🙏🙏

Leave a Reply

Your email address will not be published. Required fields are marked *

Translate »