ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

೨೪ ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲ

೨೪ ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲಗಳನ್ನು ಸಂಗ್ರಹವಾಗಿ ತಿಳಿದುಕೊಳ್ಳೋಣ…

೧) ಚೈತ್ರ ಶುಕ್ಲ ಏಕಾದಶಿ – ಕಾಮದಾ – ಕೋರಿಕೆಗಳನ್ನು ಪೂರೈಸುತ್ತದೆ.
೨) ಚೈತ್ರ ಬಹುಳ ಏಕಾದಶಿ – ವರೂಧಿನಿ – ಸಹಸ್ರ ಗೋದಾನ ಫಲವು ಲಭಿಸುತ್ತದೆ.
೩) ವೈಶಾಖ ಶುದ್ಧ ಏಕಾದಶಿ – ಮೋಹಿನಿ – ದರಿದ್ರನು ಧನವಂತನಾಗುತ್ತಾನೆ.
೪) ವೈಶಾಖ ಬಹುಳ ಏಕಾದಶಿ – ಅಪರಾ – ರಾಜ್ಯಪ್ರಾಪ್ತಿ
೫) ಜ್ಯೇಷ್ಠ ಶುಕ್ಲ ಏಕಾದಶಿ – ನಿರ್ಜಲ – ಆಹಾರ ಸಮೃದ್ಧಿ
೬) ಜ್ಯೇಷ್ಠ ಬಹುಳ ಏಕಾದಶಿ – ಯೋಗಿನಿ – ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)
೭) ಆಷಾಢ ಶುದ್ಧ ಏಕಾದಶಿ – ದೇವಶಯನಿ – ಸಂಪತ್ ಪ್ರಾಪ್ತಿ – ವಿಷ್ಣುವು ಯೋಗನಿದ್ರೆಗೆ ಜಾರುವ ದಿನ
೮) ಆಷಾಢ ಬಹುಳ ಏಕಾದಶಿ – ಕಾಮಿಕಾ – ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.
೯) ಶ್ರಾವಣ ಶುಕ್ಲ ಏಕಾದಶಿ – ಪುತ್ರದಾ – ಸತ್ ಸಂತಾನ ಪ್ರಾಪ್ತಿ
೧೦) ಶ್ರಾವಣ ಬಹುಳ ಏಕಾದಶಿ – ಅಜಾ – ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ
೧೧) ಭಾದ್ರಪದ ಶುದ್ಧ ಏಕಾದಶಿ – ಪರಿವರ್ತನ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) – ಯೋಗ ಸಿದ್ಧಿ
೧೨) ಭಾದ್ರಪದ ಬಹುಳ ಏಕಾದಶಿ – ಇಂದಿರಾ – ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.
೧೩) ಆಶ್ವಯುಜ ಶುಕ್ಲ ಏಕಾದಶಿ – ಪಾಪಾಂಕುಶ – ಪುಣ್ಯಪ್ರದವಾದುದು
೧೪) ಆಶ್ವಯುಜ ಬಹುಳ ಏಕಾದಶಿ – ರಮಾ – ಸ್ವರ್ಗಪ್ರಾಪ್ತಿ
೧೫) ಕಾರ್ತೀಕ ಶುಕ್ಲ ಏಕಾದಶಿ – ಪ್ರಬೋಧಿನಿ (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) – ಜ್ಞಾನಸಿದ್ಧಿ
೧೬) ಕಾರ್ತೀಕ ಬಹುಳ ಏಕಾದಶಿ – ಉತ್ಪತ್ತಿ – ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)
೧೭) ಮಾರ್ಗಶಿರ ಶುಕ್ಲ ಏಕಾದಶಿ – ಮೋಕ್ಷದಾ – ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ)
೧೮) ಮಾರ್ಗಶಿರ ಬಹುಳ ಏಕಾದಶಿ – ವಿಮಲಾ (ಸಫಲಾ) – ಅಜ್ಞಾನ ನಿವೃತ್ತಿ
೧೯) ಪುಷ್ಯ ಶುಕ್ಲ ಏಕಾದಶಿ – ಪುತ್ರದಾ – ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ)
ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ ಮುಂಚೆಯೇ ಹೇಳಿದೆ.
೨೦) ಪುಷ್ಯ ಕೃಷ್ಣ ಏಕಾದಶಿ – ಕಲ್ಯಾಣೀ (ಷಟ್ತಿಲಾ) – ಶಾರೀರಿಕ ಬಾಧೆಗಳಿಂದ ಮುಕ್ತಿ
೨೧) ಮಾಘ ಶುಕ್ಲ ಏಕಾದಶಿ – ಕಾಮದಾ (ಜಯಾ) – ಶಾಪವಿಮುಕ್ತಿ
೨೨) ಮಾಘ ಕೃಷ್ಣ ಏಕಾದಶಿ – ವಿಜಯಾ – ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)
೨೩) ಫಾಲ್ಗುಣ ಶುಕ್ಲ ಏಕಾದಶಿ – ಆಮಲಕೀ – ಆರೋಗ್ಯ ಪ್ರಾಪ್ತಿ
೨೪) ಫಾಲ್ಗುಣ ಕೃಷ್ಣ ಏಕಾದಶಿ – ಸೌಮ್ಯಾ – ಪಾಪ ವಿಮುಕ್ತಿ

  ಕನ್ನಡ ಭಾಷೆ - Kannada Language Specialties

Leave a Reply

Your email address will not be published. Required fields are marked *

Translate »