ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಾಲಗಣನೆ , ಪಂಚಾಂಗ , ವಾರ, ತಿಥಿ, ನಕ್ಷತ್ರ, ಯೋಗ, ಮತ್ತು ಕರಣ ಬಗ್ಗೆ ತಿಳಿಯೋಣ

ಸನಾತನ ಸಂಸ್ಕ್ರತಿಯ ಕೆಲವು ಕಾಲಗಣನೆ ಮತ್ತು ಮುಹೂರ್ತ ಇತ್ಯಾದಿ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯೋಣ.

1)ಪಂಚಾಂಗವೆಂದರೇನು ?

ಪಂಚಾಂಗವೆಂದರೆ ಐದು ಅಂಗಗಳು . ವಾರ, ತಿಥಿ, ನಕ್ಷತ್ರ, ಯೋಗ, ಮತ್ತು ಕರಣಗಳೇ ಆ ಐದು ಅಂಗಗಳು. ಪಂಚಾಂಗ ಭಾರತೀಯರ ವೈಜ್ಞಾನಿಕ ಕಾಲಗಣನೆಯ ಕ್ಯಾಲೆಂಡರ್ ಹೊರತು ಧಾರ್ಮಿಕ ಗ್ರಂಥವಲ್ಲ

2)ಮಹೂರ್ತ ಎಂದರೇನು?
ಮಹೂರ್ತ ಎಂದರೆ ಸಮಯ ಗಂಟೆಯೆಂದು ಅರ್ಥೈಸಬಹುದು 30ಕಲೆಗಳು ಸೇರಿದರೆ 1 ಮಹೂರ್ತವಾಗುತ್ತದೆ. 30ಕಾಷ್ಠಾಗಳು ಸೇರಿದರೆ 1ಕಲೆಯಾಗುತ್ತದೆ. 18 ನಿಮಿಷಗಳು ಸೇರಿದರೆ 1ಕಾಷ್ಠಾ ಆಗುತ್ತದೆ.

3) ತಿಥಿ ಎಂದರೇನು ?
ತಿಥಿಯೆಂದರೆ ದಿವಸ 30 ಮಹೂರ್ತಗಳು ಸೇರಿ ದಿವಸ ಅಹೋರಾತ್ರ

4) ವಾರಯೆಂದರೇನು?
ಏಳು ಗ್ರಹಗಳ ಹೆಸರನ್ನೊಳಗೊಂಡ ಏಳು ದಿವಸಗಳು

5) ಪಕ್ಷ ಎಂದರೇನು ?
15 ದಿವಸಗಳನ್ನು ಪಕ್ಷ ಎನ್ನುವರು ಎರಡು ಪಕ್ಷಗಳಿವೆ ಕ್ರಿಷ್ಣ ಪಕ್ಷ ಶುಕ್ಲ ಪಕ್ಷ

6) ಮಾಸ ಎಂದರೇನು ?
30 ದಿವಸಗಳನ್ನು ಮಾಸ ಎನ್ನುವರು

7) ಋತು ಎಂದರೇನು?
2 ಮಾಸಗಳು ಸೇರಿ ಒಂದು ಋತು

8) ಆಯನ ಎಂದರೇನು?
6 ಮಾಸಗಳು ಸೇರಿ 1ಆಯನ ಆಗ ಸೂರ್ಯನು ಪಥ ಬದಲಾಯಿಸುವುದರಿಂದ ಉತ್ತರಾಯನ ದಕ್ಷಿಣಾಯನ ಎನ್ನುವರು

9) ಸಂವತ್ಸರ ಎಂದರೇನು?
12 ಮಾಸಗಳು ಸೇರಿ 1 ಸಂವತ್ಸರ

ಒಂದು ವರ್ಷದ ಕ್ಯಾಲೆಂಡರ್ ಆಚೆಗೂ ನಮ್ಮ ಪೂರ್ವಜರು ಕಾಲಗಣನೆ ಮಾಡಿದ್ದರು ಏಕೆಂದರೆ ಗಣಿತ ಮತ್ತು ಖಗೋಳದಲ್ಲಿ ಭಾರತೀಯರು ಗ್ರೀಕ್ ರೋಮನ್ನರಿಗಿಂತ ಮುಂದುವರೆದಿದ್ದರು

ವರ್ಷದಿಂದ ಆಚೆಗೆ ದಿವ್ಯ ವರ್ಷವಿದೆ

10) ದಿವ್ಯ ವರ್ಷವೆಂದರೇನು ?
360 ಸಂವತ್ಸರಗಳು 1ದಿವ್ಯವರ್ಷ

11) ಯುಗ ಎಂದರೇನು ?
12 ಸಾವಿರ ದಿವ್ಯವರ್ಷಗಳು ಸೇರಿ ಯುಗ

12) ಮನ್ವಂತರ ಎಂದರೇನು ?
71ದಿವ್ಯಯುಗಗಳು ಸೇರಿ ಮನ್ವಂತರ

13) ಬ್ರಹ್ಮದಿನ ಎಂದರೇನು ?
1ಸಾವಿರ ದಿವ್ಯಯುಗಗಳು ಸೇರಿ ಬ್ರಹ್ಮದಿನ

14) ಕಲ್ಪ ಎಂದರೇನು ?
ಗಣನೆಗೆ ಸಿಗದ ಕಾಲವನ್ನು ಮಹಾಪ್ರಳಯ ಕಲ್ಪ ಎನ್ನುವರು

ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಪಂಚಾಂಗ ಇರಬೇಕು ಏಕೆಂದರೆ ಅದು ನಮ್ಮ ಕ್ಯಾಲೆಂಡರ್

  ಗರುಡ ಪುರಾಣದ ಪ್ರಕಾರ ಸೂರ್ಯಸ್ತದ ನಂತರ ಹೆಣ ಸುಡಬಾರದು ಯಾಕೆ ?

ಹಿಂದೂ ಪಂಚಾಂಗ[ಬದಲಾಯಿಸಿ]
ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ. ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ ,ಮತ್ತು ಕರಣಗಳು – ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

ತಿಥಿಗಳು

ತಿಥಿಗಳು ಮೂವತ್ತು(೩೦). ೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ. ಪ್ರತಿ ಮಾಸದ ಪಕ್ಷ ಮತ್ತು ತಿಥಿಗಳನ್ನು ಕೆಳಗಿನ ನೀಡಿವೆ.

ಶುಕ್ಲಪಕ್ಷ : ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); ಏಕಾದಶಿ (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಹುಣ್ಣಿಮೆ (೧೫)

ಕೃಷ್ಣಪಕ್ಷ : ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); ಏಕಾದಶಿ (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಅಮಾವಾಸ್ಯೆ (೩೦)

ವಾರಗಳು

ವಾರಗಳು ಏಳು (೭). ಅವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ. ನವಗ್ರಹಗಳಲ್ಲಿ ರಾಹು,ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳಿಗೆ ಹೆಸರಿಸಿದೆ.

ನಕ್ಷತ್ರಗಳು

ನಕ್ಷತ್ರಗಳು ಇಪ್ಪತ್ತೇಳು (೨೭).ಅವು:-

೧.ಅಶ್ವಿನಿ ೨.ಭರಣಿ ೩.ಕೃತ್ತಿಕೆ ೪.ರೋಹಿಣಿ ೫.ಮೃಗಶಿರ ೬.ಆರ್ದ್ರೆ ೭.ಪುನರ್ವಸು ೮.ಪುಷ್ಯ ೯.ಆಶ್ಲೇಷ ೧೦.ಮಖೆ೧೧. ಪುಬ್ಬೆ ೧೨. ಉತ್ತರೆ ೧೩. ಹಸ್ತ ೧೪.ಚಿತ್ತೆ ೧೫.ಸ್ವಾತಿ ೧೬.ವಿಶಾಖ ೧೭.ಅನೂರಾಧ ೧೮.ಜ್ಯೇಷ್ಠ ೧೯.ಮೂಲ ೨೦. ಪೂರ್ವಾಷಾಢ ೨೧.ಉತ್ತರಾಷಾಢ ೨೨.ಶ್ರವಣ ೨೩.ಧನಿಷ್ಥೆ ೨೪.ಶತಭಿಷೆ ೨೫.ಪೂರ್ವಾಭಾದ್ರೆ ೨೬.ಉತ್ತರಾಭಾದ್ರೆ ೨೭.ರೇವತಿ.

  ಅಪರಾಧ ತಡೆ ಮುಂಜಾಗ್ರತೆ ಕ್ರಮಗಳು

ಕರಣಗಳು
ಕರಣಗಳು ಒಟ್ಟು ೧೧. ಅವುಗಳೆಂದರೆ : ಬವ , ಬಾಲವ , ಕೌಲವ , ತೈತಲೆ , ಗರಜೆ ,ವಣಿಕ್ , ಭದ್ರೆ , ಶಕುನಿ , ಚತುಷ್ಪಾತ್ , ನಾಗವಾನ್ ಹಾಗೂ ಕಿಂಸ್ತುಘ್ನ

ಯೋಗಗಳು
ಯೋಗಗಳು ಒಟ್ಟು ೨೭. ಅವು :
೧.ವಿಷ್ಕಂಭ ೨.ಪ್ರೀತಿ ೩.ಆಯುಷ್ಮಾನ್ ೪.ಸೌಭಾಗ್ಯ ೫.ಶೋಭನ ೬.ಅತಿಗಂಡ ೭.ಸುಕರ್ಮ ೮.ಧೃತಿ ೯.ಶೂಲ ೧೦.ಗಂಡ ೧೧.ವೃದ್ಢಿ ೧೨.ಧ್ರುವ ೧೩.ವ್ಯಾಘಾತ ೧೪.ಹರ್ಷಣ ೧೫.ವಜ್ರ ೧೬.ಸಿದ್ಧಿ ೧೭.ವ್ಯತೀಪಾತ ೧೮.ವರಿಯಾನ್ ೧೯.ಪರಿಘ ೨೦.ಶಿವ ೨೧.ಸಿದ್ಧ ೨೨.ಸಾಧ್ಯ ೨೩.ಶುಭ ೨೪.ಶುಕ್ಲ ೨೫.ಬ್ರಹ್ಮ ೨೬.ಐಂದ್ರ ೨೭.ವೈಧೃತಿ

ಮಾಸಗಳು
ಚಾಂದ್ರಮಾನ ಮಾಸಗಳು
ವರ್ಷದಲ್ಲಿ, ಕೆಲವು ನಕ್ಷತ್ರದ ಹೆಸರಿನೆ ಮೂಲಕ, ಚಾಂದ್ರಮಾನದ ಹನ್ನೆರಡು (೧೨) ಮಾಸಗಳನ್ನು ಕೆಳಗೆ ನೀಡಿವೆ.

೧. ಚೈತ್ರ (ಚಿತ್ರ/ಚಿತ್ತ); ೨. ವೈಶಾಖ (ವಿಶಾಖ); ೩. ಜ್ಯೇಷ್ಠ (ಜ್ಯೇಷ್ಠ); ೪. ಆಷಾಢ (ಆಷಾಢ)
೫. ಶ್ರಾವಣ (ಶ್ರವಣ); ೬. ಭಾದ್ರಪದ (ಭದ್ರ); : ೭. ಆಶ್ವೀಜ (ಅಶ್ವಿನಿ); ೮. ಕಾರ್ತೀಕ (ಕೃತ್ತಿಕ/ಕೃತ್ತಿಕೆ)
೯. ಮಾರ್ಗಶಿರ (ಮೃಗಶಿರ); ೧೦. ಪುಷ್ಯ (ಪುಷ್ಯ/ಪುಬ್ಬ); ೧೧. ಮಾಘ (ಮಘ/ಮಖ); ೧೨. ಫಾಲ್ಗುಣ (ಫಾಲ್ಗುಣಿ)

ಅಧಿಕ ಮಾಸಗಳು
ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ. ಸಂಕ್ರಮಣವಾಗಿರುವ ಮಾಸವನ್ನು ಶುದ್ಧ ಚೈತ್ರ ಅಥವಾ ನಿಜ ಚೈತ್ರ ಮಾಸವೆನ್ನುತ್ತಾರೆ.

  ಕನ್ನಡದ ಸಾವಿರದ-ಒಂದು ಗಾದೆಗಳು - ಭಾಗ ೨ - 1001 Kannada Proverbs - Part 2

ಸೌರಮಾನ ಮಾಸಗಳು
ಸೂರ್ಯನು ಹನ್ನೆರಡು (೧೨) ರಾಶಿಗಳಲ್ಲಿ, ಒಂದು ರಾಶಿಯಿಂದ ಮುಂದಿನ ರಾಶಿಯಲ್ಲಿ ಪ್ರವೇಶ ಮಾಡುವತ್ತಾನೆ. ಇದನ್ನು ಸಂಕ್ರಮಣವೆನ್ನುತ್ತಾರೆ. ಓಂದು ರಾಶಿಯಲ್ಲಿರುವಾಗ ಆ ಮಾಸದ ಹೆಸರು, ರಾಶಿಯ ಹೆಸರನಿಂದ ಕರೆಯುತ್ತಾರೆ. ಹೀಗೆ ಸೌರಮಾನದ ಮಾಸಗಳು, ಹೇಗೆ ಕರೆಯಲಾಗಿದೆ.

೧. ಮೇಷ; ೨. ವೃಷಭ; ೩. ಮಿಥುನ; ೪. ಕರ್ಕ; ೫. ಸಿಂಹ; ೬. ಕನ್ಯ ೭. ತುಲ; ೮. ವೃಷ್ಚಿಕ; ೯. ಧನು; ೧೦. ಮಕರ; ೧೧. ಕುಂಭ; ೧೨, ಮೀನ

ಸೂರ್ಯನ ಧನು ಸಂಕ್ರಮಣ ದಿಂದ ಮಕರಸಂಕ್ರಮಣ ವರೆಗೆ ಬರುವ ಮಾಸವನ್ನು ಧನುರ್ಮಾಸವೆಂತ ಕರೆಯಲಾಗಿದೆ. ಈ ಮಾಸ ಧರ್ಮ ಶಾಸ್ತ್ರದಲ್ಲಿ ವಿಶೇಷವಾದದ್ದು.

ಋತುಗಳು ೬ (೨ ಮಾಸಗಳಿಗೆ ಒಂದು ಋತು)
೧. ವಸಂತ ಋತು (ಚೈತ್ರ – ವೈಶಾಖ)
೨. ಗ್ರೀಷ್ಮ ಋತು (ಜ್ಯೇಷ್ಠ – ಆಷಾಢ)
೩. ವರ್ಷ ಋತು (ಶ್ರಾವಣ – ಭಾದ್ರಪದ)
೪. ಶರದೃತು (ಆಶ್ವೀಜ – ಕಾರ್ತೀಕ)
೫. ಹೇಮಂತ ಋತು (ಮಾರ್ಗಶಿರ – ಪುಷ್ಯ)
೬. ಶಿಶಿರ ಋತು (ಮಾಘ – ಪಾಲ್ಗುಣ)

ಆಯನಗಳು – ೨
ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ (ಪುಷ್ಯ, ಮಕರ ಸಂಕ್ರಮಣ) ರಿಂದ ಜುಲೈ ೧೬ (ಆಷಾಢ , ಕರ್ಕ ಸಂಕ್ರಮಣ) ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣವೆಂದೂ, ಜುಲೈ ೧೬ ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣವೆಂದೂ ಗುರುತಿಸಲಾಗಿದೆ.

ಕೃಪೆ : ಜಾಲತಾಣ ಸಂಗ್ರಹ.

Leave a Reply

Your email address will not be published. Required fields are marked *

Translate »