ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಆಧ್ಯಾತ್ಮಿಕ ದೃಷ್ಟಿಯಿಂದ ಮದ್ಯ ಹಾನಿಕರ, ಹಣ್ಣಿನ ರಸ ಲಾಭದಾಯಕ ಏಕೆ ?

ಆಧ್ಯಾತ್ಮಿಕ ದೃಷ್ಟಿಯಿಂದ ಮದ್ಯ ಹಾನಿಕರ, ಹಣ್ಣಿನ ರಸ ಲಾಭದಾಯಕ…
ಅಧ್ಯಾತ್ಮ ವಿಶ್ವವಿದ್ಯಾಲಯವು ಇಲೆಕ್ಟ್ರೋಸೊಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್ ಎಂಬ ತಂತ್ರಜ್ಞಾನದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ.

ಮದ್ಯಪಾನದಿಂದ ಶಾರೀರಿಕ, ಮಾನಸಿಕ, ಆರ್ಥಿಕ, ಕೌಟುಂಬಿಕ, ಸಾಮಾಜಿಕ ಇತ್ಯಾದಿ ಅನೇಕ ಸ್ತರಗಳಲ್ಲಿನ ತಾತ್ಕಾಲಿಕ ಮತ್ತು ದೂರಗಾಮಿ ದುಷ್ಪರಿಣಾಮಗಳು ಎಲ್ಲರಿಗೂ ತಿಳಿದಿವೆ. ಆರೋಗ್ಯದ ದೃಷ್ಟಿಯಿಂದ ಹಣ್ಣಿನ ರಸದ ಒಳ್ಳೆಯ ಪರಿಣಾಮಗಳೂ ಎಲ್ಲರಿಗೂ ತಿಳಿದಿವೆ. ಮದ್ಯ ಮತ್ತು ಹಣ್ಣಿನ ರಸದಿಂದ ವ್ಯಕ್ತಿಗಳ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಯಾವ ಪರಿಣಾಮಗಳಾಗುತ್ತವೆ ? ಎಂಬುದನ್ನು ವೈಜ್ಞಾನಿಕ ದೃಷ್ಟಿಯಿಂದ ತಿಳಿದುಕೊಳ್ಳಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಇದರಲ್ಲಿ ಮದ್ಯ ಮತ್ತು ಹಣ್ಣಿನ ರಸವನ್ನು ಸೇವಿಸುವುದರಿಂದ ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ೫ ಸಾಧಕರು ಮತ್ತು ಕೆಟ್ಟ ಶಕ್ತಿಗಳ ತೊಂದರೆಯಿರುವ ೫ ಸಾಧಕರ ಕುಂಡಲಿನಿ ಚಕ್ರಗಳ ಕಾರ್ಯಶೀಲತೆಯ ಮೇಲಾಗುವ ಪರಿಣಾಮಗಳನ್ನು ವೈಜ್ಞಾನಿಕ ಉಪಕರಣದ ಸಹಾಯದಿಂದ ಅಧ್ಯಯನ ಮಾಡಲಾಯಿತು. ಇದಕ್ಕಾಗಿ ‘ಇಲೆಕ್ಟ್ರೋಸೊಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್’ ಎಂಬ ತಂತ್ರಜ್ಞಾನವನ್ನು ಉಪಯೋಗಿಸಲಾಯಿತು. ಈ ಪ್ರಯೋಗದ ಸ್ವರೂಪ, ಅಳೆಯಲಾದ ನೋಂದಣಿಗಳ ವಿವೇಚನೆ ಮತ್ತು ಅವುಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ಸ್ವರೂಪ

ಮೊದಲು ಪ್ರಯೋಗದಲ್ಲಿ ಭಾಗವಹಿಸುವ ಎಲ್ಲ ಸಾಧಕರ ಸ್ಕ್ಯಾನಿಂಗ್ ಮಾಡಿ ಅವರ ಕುಂಡಲಿನಿಚಕ್ರಗಳ ಸ್ಥಿತಿಯನ್ನು ಅಳೆದು ಬರೆದಿಡಲಾಯಿತು. ಇದು ಅವರ ಮೂಲ ನೋಂದಣಿ, ಅಂದರೆ ಅವರ ಮೂಲ ಸ್ಥಿತಿ. ಅದರ ನಂತರ ಪರೀಕ್ಷಣೆಯಲ್ಲಿ ಭಾಗವಹಿಸಿದ ಎಲ್ಲ ಸಾಧಕರು ಒಂದೇ ರೀತಿಯ ಮದ್ಯವನ್ನು ಒಂದೇ ಪ್ರಮಾಣದಲ್ಲಿ ಸೇವಿಸಿದರು. ಒಂದು ಗಂಟೆಯ ನಂತರ ಪ್ರತಿಯೊಬ್ಬ ಸಾಧಕನ ಕುಂಡಲಿನಿಚಕ್ರಗಳ ಸ್ಥಿತಿಯನ್ನು ಮೊದಲು ಬರೆದಿಡಲಾಯಿತು. ಅದರ ನಂತರ ನಿಶ್ಚಿತ ಕಾಲಾವಧಿಯಲ್ಲಿ ಸಾಧಕರ ಸ್ಕ್ಯಾನಿಂಗ್ ಮಾಡಿ ಅವರ ಕುಂಡಲಿನಿಚಕ್ರಗಳ ಸ್ಥಿತಿಯ ಬಗ್ಗೆ ಅಳತೆ ಮಾಡಿ ನೋಂದಣಿಯನ್ನು ಮಾಡಲಾಯಿತು. ಸಾಧಕರ ಕುಂಡಲಿನಿ ಚಕ್ರಗಳ ಸ್ಥಿತಿಯು ಅವರ ‘ಮೂಲ ನೋಂದಣಿಗೆ (ಮೂಲ ಸ್ಥಿತಿಯವರೆಗೆ) ಬರುವ ತನಕ ಅಂದರೆ ಮದ್ಯದ ಪರಿಣಾಮವು ದೂರವಾದ ಮೇಲೆ ಕುಂಡಲಿನಿ ಚಕ್ರಗಳ ಸ್ಥಿತಿಯ ನೋಂದಣಿ ಮಾಡುವುದನ್ನು ನಿಲ್ಲಿಸಲಾಯಿತು. ಇದರ ನಂತರ ಅದೇ ಸಾಧಕರು ಒಂದೇ ರೀತಿಯ ಹಣ್ಣಿನ ರಸವನ್ನು ಒಂದೇ ಪ್ರಮಾಣದಲ್ಲಿ ಸೇವಿಸಿದನು. ಮೇಲಿನಂತೆ ಅವರ ಕುಂಡಲಿನಿ ಚಕ್ರಗಳ ಸ್ಥಿತಿಯನ್ನು ನಿಶ್ಚಿತ ಕಾಲಾವಧಿಯ ನಂತರ ಮಾಡಿದ ಅಳತೆಗಳ ನೋಂದಣಿಗಳನ್ನು ಬರೆದಿಡಲಾಯಿತು ಮತ್ತು ಅವರ ಕುಂಡಲಿನಿ ಚಕ್ರಗಳ ಸ್ಥಿತಿಯು ಮೂಲ ನೋಂದಣಿಗೆ ಬಂದ ಮೇಲೆ ಪರೀಕ್ಷಣೆಯನ್ನು ನಿಲ್ಲಿಸಲಾಯಿತು. ಆಮೇಲೆ ಅಳತೆಗಳ ನೋಂದಣಿಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.
ಯಾವ ಸಮಯದಲ್ಲಿ ಪ್ರಸಕ್ತ ಸ್ಥಿತಿಯಲ್ಲಿನ ವಾಯುಮಂಡಲದಲ್ಲಿನ ರಜ-ತಮದ ಪ್ರಮಾಣವು ಹೆಚ್ಚಾಗಿರುತ್ತದೆಯೋ, ಆ ಸಮಯದಲ್ಲಿ ದೇಹದ ಸ್ಥಿತಿಯೂ ಆಯಾ ತ್ರಾಸದಾಯಕ ಸ್ಪಂದನಗಳ ಸಂಪರ್ಕದಲ್ಲಿದ್ದು ದೂಷಿತ ವಾಯುಮಂಡಲದೊಂದಿಗೆ ಒಂದಾಗುತ್ತದೆ. ಇಂತಹ ಸ್ಥಿತಿಯಲ್ಲಿ ರಜ-ತಮಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುವ ಮತ್ತು ಗ್ರಹಿಸುವ ಪೇಯವನ್ನು ಸೇವಿಸಿದರೆ, ದೇಹವು ಆ ತಮೋಗುಣಿ ಪೇಯದ ಪರಿಣಾಮ ಉಳಿಯುವ ಕಾಲಾವಧಿಯನ್ನು ಗರಿಷ್ಠ ಸ್ತರದಲ್ಲಿ ತೋರಿಸುತ್ತದೆ. ಆದ್ದರಿಂದ ಮದ್ಯದ ಪರಿಣಾಮ ಉಳಿಯುವ ಗರಿಷ್ಠ ಕಾಲಾವಧಿ ಹೆಚ್ಚಿಗಿತ್ತು.

  ಪೂರ್ವಜರ ಮಾತಿದು ಮರಿಬ್ಯಾಡ

೩ ಇ ೨. ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ಮೇಲೆ ಮದ್ಯ ಮತ್ತು ಹಣ್ಣಿನ ರಸದ ಪರಿಣಾಮ ಉಳಿಯುವ ಕಾಲಾವಧಿ ಮತ್ತು ಅದರ ಕಾರಣಗಳು

ಕೆಟ್ಟ ಶಕ್ತಿಗಳ ತೊಂದರೆಯಿರುವ ೫ ಸಾಧಕರಲ್ಲಿ ಮದ್ಯ ಸೇವಿಸಿದ ನಂತರ ಅದರ ಪರಿಣಾಮ ಉಳಿಯುವ ಗರಿಷ್ಠ ಕಾಲಾವಧಿಯು ೧೩೮ ಗಂಟೆ ೫ ನಿ. ಆಗಿತ್ತು ಮತ್ತು ಹಣ್ಣಿನ ರಸದ ಪರಿಣಾಮ ಉಳಿಯುವ ಅತ್ಯಧಿಕ ಕಾಲಾವಧಿಯು ೨೬ ಗಂಟೆ ೧೨ ನಿ. ದಷ್ಟು ಕಡಿಮೆಯಿತ್ತು. ಇವುಗಳ ಕಾರಣಗಳನ್ನು ಮುಂದೆ ಕೊಡಲಾಗಿದೆ.

  ಭಾರತೀಯ ಪರಂಪರೆಯಲ್ಲಿ ಕೈಯಿಂದ ಊಟ ಮಾಡುವುದಕ್ಕೆ ಮಹತ್ವ ಏಕೆ ನೀಡಲಾಗಿದೆ ..?

೩ ಇ ೨ ಅ. ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ದೇಹದಲ್ಲಿ ತ್ರಾಸದಾಯಕ ಸ್ಪಂದನಗಳಿಗೆ ಬೇಗ ಮತ್ತು ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸುವ ತ್ರಾಸದಾಯಕ ಶಕ್ತಿಗಳ ಸ್ಥಾನಗಳಿರುವುದರಿಂದ ಹಣ್ಣಿನ ರಸದ ತುಲನೆಯಲ್ಲಿ ತಾಮಸಿಕ ಮದ್ಯದ ಪರಿಣಾಮವು ಚಕ್ರಗಳ ಮೇಲೆ ಉಳಿಯುವ ಕಾಲಾವಧಿಯು ಹೆಚ್ಚಿರುವುದು : ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ದೇಹದಲ್ಲಿ ತ್ರಾಸದಾಯಕ ಸ್ಪಂದನಗಳಿಗೆ ಬೇಗ ಮತ್ತು ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸುವ ತ್ರಾಸದಾಯಕ ಶಕ್ತಿಗಳ ಸ್ಥಾನಗಳಿರುತ್ತವೆ. ಅವರ ದೇಹವು ಬಾಹ್ಯ ವಾಯುಮಂಡಲದಲ್ಲಿನ ರಜ-ತಮಾತ್ಮಕ ಘಟಕಗಳೊಂದಿಗೆ ಕಾರ್ಯವನ್ನು ಮಾಡಲು ಹೆಚ್ಚು ಪೂರಕವಾಗಿರುತ್ತದೆ. ಆದುದರಿಂದ ಅವರ ದೇಹದಲ್ಲಿನ ಚಕ್ರಗಳ ಮೇಲೆ ರಜ-ತಮಾತ್ಮಕ ಘಟಕದ ಪರಿಣಾಮ ಉಳಿಯುವ ಕಾಲಾವಧಿಯು ಯಾವುದಾದರೊಂದು ಸಾತ್ತ್ವಿಕ ಘಟಕದ ಪರಿಣಾಮ ಉಳಿಯುವ ಕಾಲಾವಧಿಗಿಂತ ಹೆಚ್ಚಿರುತ್ತದೆ.

೩ ಇ ೨ ಆ. ಹಣ್ಣಿನ ರಸದಲ್ಲಿನ ಒಳ್ಳೆಯ ಶಕ್ತಿಯು ದೇಹದಲ್ಲಿನ ತ್ರಾಸದಾಯಕ ಸ್ಥಾನಗಳನ್ನು ನಾಶ ಮಾಡಲು ಉಪಯೋಗವಾಗುವುದರಿಂದ ಅದರ ಪರಿಣಾಮವು ಮದ್ಯದ ಪರಿಣಾಮಕ್ಕಿಂತ ಕಡಿಮೆ ಸಮಯ ಉಳಿಯುವುದು : ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ದೇಹದ ಮೇಲೆ ಸಾತ್ತ್ವಿಕ ಘಟಕದ ಪರಿಣಾಮವು ಯುದ್ಧದಂತಿರುತ್ತದೆ. ಇದರಿಂದಾಗಿ ಆ ಘಟಕದಲ್ಲಿನ ಒಳ್ಳೆಯ ಶಕ್ತಿಗೆ ಸಂಬಂಧಿಸಿದ ಸ್ಪಂದನಗಳನ್ನು ದೇಹವು ಗ್ರಹಿಸಿದರೂ ಅದು ದೇಹದಲ್ಲಿನ ತ್ರಾಸದಾಯಕ ಸ್ಪಂದನಗಳನ್ನು ನಾಶಗೊಳಿಸಲು ಬಳಕೆಯಾಗುವುದರಿಂದ ಸಾತ್ತ್ವಿಕ ಘಟಕದ ಪರಿಣಾಮವು ಅಸಾತ್ತ್ವಿಕ ಘಟಕದ ಪರಿಣಾಮಕ್ಕಿಂತ ಕಡಿಮೆ ಸಮಯ ಉಳಿಯುತ್ತದೆ. ಇದರಿಂದಾಗಿ ಮದ್ಯದ ಅಸಾತ್ತ್ವಿಕ ಪೇಯದ ಪರಿಣಾಮವು ಎಷ್ಟು ಸಮಯ ಉಳಿಯಿತೋ, ಅಷ್ಟು ಸಮಯ ಹಣ್ಣಿನ ಸಾತ್ತ್ವಿಕ ಪೇಯದ ಪರಿಣಾಮ ಉಳಿಯಲಿಲ್ಲ.

  ಬೆಲೆ ಕಟ್ಟಲಾಗದ ಭಾವನಾತ್ಮಕ ಗ್ರಾಮೀಣ ಜಗತ್ತು

೪.ನಿಷ್ಕರ್ಷ

ಅ. ಮದ್ಯದಲ್ಲಿನ ತಮೋಗುಣದ ಸಂಪರ್ಕದಿಂದ ಮನುಷ್ಯನು ವಾಮಮಾರ್ಗಿಯಾಗುತ್ತಾನೆ ಮತ್ತು ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿಗಳ ತೊಂದರೆಯು ಇನ್ನೂ ಹೆಚ್ಚಾಗುತ್ತದೆ.

ಆ. ಹಣ್ಣಿನ ರಸದಂತಹ ಸಾತ್ತ್ವಿಕ ಪೇಯವನ್ನು ಸೇವಿಸಿದರೆ ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿಗಳ ತೊಂದರೆಯು ಕಡಿಮೆಯಾಗುತ್ತದೆ ಮತ್ತು ಕೆಟ್ಟ ಶಕ್ತಿಗಳ ತೊಂದರೆಯಿಲ್ಲದಿರುವ ವ್ಯಕ್ತಿಗಳ ಸಾತ್ತ್ವಿಕತೆಯು ಇನ್ನೂ ಹೆಚ್ಚಾಗುತ್ತದೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
.

Leave a Reply

Your email address will not be published. Required fields are marked *

Translate »