ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪರಿವರ್ತಿನಿ ಏಕಾದಶಿ – ಪೂಜೆ ವಿಧಾನ, ಮಹತ್ವ


ಪರಿವರ್ತಿನಿ ಏಕಾದಶಿ – ಇಲ್ಲಿದೆ ಪೂಜೆ ವಿಧಾನ, ಮಹತ್ವ ಮತ್ತು ಪೂಜೆ ಸಾಮಗ್ರಿ..!

ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಪದ್ಮ ಏಕಾದಶಿ ಅಥವಾ ಪರಿವರ್ತಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಚಾತುರ್ಮಾಸದ ಯೋಗ ನಿದ್ರೆಯಲ್ಲಿ ಮಲಗಿರುವ ಭಗವಾನ್ ವಿಷ್ಣು ಈ ದಿನ ಮಲಗುವ ಭಂಗಿಯನ್ನು ಬದಲಾಯಿಸುತ್ತಾನೆ ಎಂಬುದು ಪೌರಾಣಿಕ ನಂಬಿಕೆ. ಈ ಕಾರಣದಿಂದ ಇದನ್ನು ಪರಿವರ್ತಿನಿ ಏಕಾದಶಿ ಎಂದೂ ಕರೆಯುತ್ತಾರೆ. ಈ ದಿನ ಜನರು ಉಪವಾಸ ಆಚರಿಸುತ್ತಾರೆ ಮತ್ತು ವಿಷ್ಣುವಿನ ವಾಮನ ರೂಪವನ್ನು ಪೂಜಿಸುತ್ತಾರೆ. ಚಾತುರ್ಮಾಸದಲ್ಲಿ ಪಾತಾಳ ಲೋಕದಲ್ಲಿ ಭಗವಾನ್ ವಿಷ್ಣು ವಾಮನ ರೂಪದಲ್ಲಿ ನೆಲೆಸುತ್ತಾನೆ ಎನ್ನುವ ನಂಬಿಕೆಯಿದೆ.

​ಪರಿವರ್ತಿನಿ ಏಕಾದಶಿ ಮಹತ್ವ

ಭಾದ್ರಪದ ಮಾಸದಲ್ಲಿ ಬರುವ ಈ ಪರಿವರ್ತಿನಿ ಏಕಾದಶಿಯ ಮಹತ್ವವು ತುಂಬಾ ಹೆಚ್ಚಾಗಿರುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಪರಿವರ್ತಿನಿ ಏಕಾದಶಿ ವ್ರತವನ್ನು ಆಚರಿಸುವುದರಿಂದ ನಾವು ವಾಜಪೇಯಿ ಯಜ್ಞ ಮಾಡಿದಷ್ಟು ಫಲವನ್ನು ಪಡೆದುಕೊಳ್ಳಬಹುದು . ಈ ಏಕಾದಶಿಯನ್ನು ಮಹಾಭಾರತದಲ್ಲಿಯೂ ವಿವರಿಸಲಾಗಿದೆ. ಇದರ ಪ್ರಕಾರ, ಯುಧಿಷ್ಠಿರ ಮಹಾರಾಜನು ತನ್ನ ಚಿಕ್ಕಪ್ಪ ಅರ್ಜುನನಿಗೆ ಈ ಏಕಾದಶಿಯ ಬಗ್ಗೆ ಹೇಳಿದ್ದನು. ಈ ದಿನ ಲಕ್ಷ್ಮಿ ದೇವಿಯನ್ನು ಮತ್ತು ಭಗವಾನ್‌ ವಿಷ್ಣುವಿನ ವಾಮನ ಅವತಾರವನ್ನು ಪೂಜಿಸುವುದರಿಂದ ನಿಮಗೆ ಸಂಪತ್ತು, ಅದೃಷ್ಟ ಮತ್ತು ಸಂತೋಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟು ಮಾತ್ರವಲ್ಲ, ಈ ವ್ರತವನ್ನು ಆಚರಿಸುವ ಒಬ್ಬ ವ್ಯಕ್ತಿಯು ಎಲ್ಲಾ ರೀತಿಯ ಪಾಪಗಳಿಂದ ಸ್ವಾತಂತ್ರ್ಯವನ್ನು ಪಡೆಯುತ್ತಾನೆ ಮತ್ತು ಎಂದಿಗೂ ಆತ ಹಣದ ಕೊರತೆಯನ್ನು ಎದುರಿಸುವುದಿಲ್ಲ ಎನ್ನುವ ನಂಬಿಕೆಯಿದೆ.

  ಸಂತೋಷದ ಧ್ವನಿ - ಝೆನ್ ಕಥೆ

ಪರಿವರ್ತಿನಿ ಏಕಾದಶಿಯಂದು ದಾನ

ಪರಿವರ್ತಿನಿ ಏಕಾದಶಿಯಂದು ದಾನ ಮಾಡುವುದಕ್ಕೆ ಶಾಸ್ತ್ರದಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ದಿನ ಅಕ್ಕಿ, ಹಾಲು, ಮೊಸರು, ತಾಮ್ರ ಮತ್ತು ಬೆಳ್ಳಿಯ ವಸ್ತುಗಳನ್ನು ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ವಿಷ್ಣು ಭಗವಂತನಿಗೆ ಕಮಲದ ಹೂವನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

​ಪರಿವರ್ತಿನಿ ಏಕಾದಶಿ ಪೂಜೆ ಸಾಮಗ್ರಿಗಳು

 • ಪೂಜೆ ಭಗವಾನ್‌ ವಿಷ್ಣುವಿನ ಮೂರ್ತಿ ಅಥವಾ ಪ್ರತಿಮೆ ಅಥವಾ ಚಿತ್ರಪಟ
 • ತುಳಸಿ, ಪತ್ರೆ, ಪುಷ್ಪಗಳು
 • ತೆಂಗಿನಕಾಯಿ
 • ತಾಂಬೂಲ
 • ಹಣ್ಣುಗಳು
 • ಲವಂಗ
 • ಧೂಪ
 • ದೀಪ
 • ತುಪ್ಪ
 • ಅಕ್ಷತೆ
 • ಪಂಚಾಮೃತ
 • ಭೋಗ
 • ಶ್ರೀಗಂಧ
  ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ.

​ಪರಿವರ್ತಿನಿ ಏಕಾದಶಿ ಪೂಜೆ ವಿಧಾನ
ಧಾರ್ಮಿಕ ದೃಷ್ಟಿಕೋನದಿಂದ, ಪರಿವರ್ತಿನಿ ಏಕಾದಶಿ ವ್ರತದ ಸಂಕಲ್ಪವನ್ನು ಶುಭ ಸಮಯದಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ವ್ರತವು ಸೂರ್ಯಾಸ್ತದ ನಂತರ ದಶಮಿಯ ಸಂಜೆಯಿಂದ ಆರಂಭವಾಗುತ್ತದೆ ಮತ್ತು ಏಕಾದಶಿಯ ಮರುದಿನ ಪಾರಣ ಸಮಯದಲ್ಲಿ ಕೈಬಿಡಲಾಗುತ್ತದೆ. ಉಪವಾಸದ ದಿನ, ಮೊದಲು ಬೆಳಿಗ್ಗೆ ಎದ್ದು ಸ್ನಾನ ಮಾಡಿ. ಇದರ ನಂತರ, ದೇವರ ಕೋಣೆಯನ್ನು ಅಲಂಕರಿಸಿ. ಮರದ ಪೀಠದ ಮೇಲೆ ಹಳದಿ ಬಟ್ಟೆಯನ್ನು ಹಾಕಿ ಮತ್ತು ಅದರ ಮೇಲೆ ವಿಷ್ಣುವಿನ ಮೂರ್ತಿಯನ್ನು ಇರಿಸಿ. ವಿಷ್ಣುವಿನ ವಾಮನ ಅವತಾರವನ್ನು ಈ ದಿನ ಪೂಜಿಸಲಾಗುತ್ತದೆ. ವಿಷ್ಣುವಿನ ವಾಮನ ಅವತಾರವನ್ನು ಧ್ಯಾನಿಸಿದ ನಂತರ ಪೂಜೆ ಮತ್ತು ಆರತಿಯನ್ನು ಮಾಡಿ. ಉಪವಾಸದ ದಿನ ಹಳದಿ ಬಣ್ಣದ ವಸ್ತುಗಳನ್ನು ಬಳಸಿ. ವಿಷ್ಣುವಿಗೆ ಹಳದಿ ಬಣ್ಣ ಹೆಚ್ಚು ಪ್ರಿಯವೆಂದು ಹೇಳಲಾಗುತ್ತದೆ, ಹಾಗಾಗಿ ಪರಿವರ್ತಿನಿ ಏಕಾದಶಿಯ ದಿನ ಹಳದಿ ಬಣ್ಣವನ್ನು ಬಳಸಿ. ಮತ್ತು ಸ್ವತಃ ನೀವು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ.

  ಗಣೇಶ ಚತುರ್ಥಿ ಶಾಸ್ತ್ರೋಕ್ತ ಪೂಜಾ ವಿಧಾನ..!

ಪೂಜೆಯಲ್ಲಿ ಭಗವಂತನಿಗೆ ಹಳದಿ ಹೂವುಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ. ತುಳಸಿ ಎಲೆ, ಹಣ್ಣುಗಳನ್ನು ಮತ್ತು ಎಳ್ಳನ್ನು ಪೂಜೆಯಲ್ಲಿ ಸೇರಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ದ್ವಾದಶಿಯ ದಿನ ಪೂರ್ಣ ವಿಧಿವಿಧಾನಗಳೊಂದಿಗೆ ಉಪವಾಸವನ್ನು ಕೈಬಿಡಬೇಕು. ಪರಿವರ್ತನಿ ಏಕಾದಶಿಯ ಉಪವಾಸವನ್ನು ಸಂಪೂರ್ಣ ಆಚರಣೆಗಳೊಂದಿಗೆ ಆಚರಿಸುವ ಭಕ್ತನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಪಾಪಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *

Translate »