ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪೂರ್ವಜರ ಮಾತಿದು ಮರಿಬ್ಯಾಡ

ಪೂರ್ವಜರಿಂದ ಬಳುವಳಿಯಾಗಿ ಬಂದ ನೂರೆಂಟು ರೀತಿ-ರಿವಾಜುಗಳನ್ನು ಇಲ್ಲಿ ಕೇಳಿ…ಇವುಗಳಲ್ಲಿ ಯಾವುದನ್ನು ನಂಬುತ್ತೀರೋ, ಯಾವುದನ್ನು ಬಿಡುತ್ತೀರೋ ನಿಮಗೇ ಬಿಟ್ಟಿದ್ದು.   

ಇಡಿ-ಕುಂಬಳದಕಾಯಿ ಗೃಹದೊಳಗೆ ತರಬ್ಯಾಡ 
ಮನೆಯೊಳಗೆ ಉಗುರ ತೆಗಿ-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧ ||

ಮಧ್ಯಾಹ್ನ ಮೇಲೆ ತುಳಸಿಯ ಕೊಯ್-ಬ್ಯಾಡ
ಹೊತ್ತ್-ಮುಳ್ಗದ್ ಮ್ಯಾಲೇ ಗುಡಿಸ್-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೨ ||

ಉಪ್ಪು, ಮೊಸರುಗಳ ಕಡ ಕೊಡುವದೇ ಬ್ಯಾಡ
ಬಿಸಿ-ಅನ್ನಕೆಂದೂ ಮೊಸರ್-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೩ ||

ಮನೆ ಬಾಗ್ಲು ಹಾಕ್ವಾಗ ಚಿಲಕ ಶಬ್ದವು ಬ್ಯಾಡ
ಊಟ ಮಾಡ್ವಾಗ ಏಳ್ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೪ ||

ಸೋಮವಾರದ ದಿನದಿ ತಲೆಗೆಣ್ಣೆ ಹಾಕ್-ಬ್ಯಾಡ
ಒಂಟಿ ಕಾಲಲ್ಲಿ ನಿಲಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೫ ||

ಮಂಗ್ಳಾರ ತವರಿಂದ ಮಗ್ಳು ಮನಿಗೆ ಹೋಪ್ದ್-ಬ್ಯಾಡ
ಸೊಸೆ ಶುಕ್ರವಾರ ಕಳ್ಸ್-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೬ ||

  ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ

ತಲೆ-ಕೂದಲೆಂದೂ ಒಲೆ-ಬೆಂಕಿಗ್ ಹಾಕ್ಬ್ಯಾಡ
ಹೊಸ್ತಿಲನು ಮೆಟ್ಟುತ ದಾಟ್-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೭ ||

ಮನೆ ಬಿಟ್ಟು ಹೊರಟಾಗ ಕಸ ಗುಡ್ಸುವದು ಬ್ಯಾಡ
ಗೋಡೆ ಮೇಲ್ ಕಾಲ್ಕೊಟ್ಟು ಮಲಗ್ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೮ ||

ರಾತ್ರಿಯ ಹೊತ್ತೆಂದೂ ಬಟ್ಟೆ ಒಗೆಯಲು-ಬ್ಯಾಡ
ಅಕ್ಕಿ ನೀರಿಗೆ ಹಾಕಿ ತೊಳಿ-ಬ್ಯಾಡ… ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೯ ||

ಒಂದು ಕಾಯಿಯ ನೀರ ಮೂರ್-ಮಕ್ಳಿಗ್ ಕುಡ್ಸ್-ಬ್ಯಾಡ
ಒಡಕು ಬಳೆಗಳನು ಧರಿಸ್-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೦ ||

ಮಲಗ್-ಕೊಂಡ ಚಾಪೆಯ ಮಡಿಸದೇ ಬಿಡಬ್ಯಾಡ
ಉಗುರು ಕಚ್ಚುವದ ಮಾಡ್-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೧ ||

  ತುಳಸೀ ದಳಗಳನ್ನು ಹೇಗೆ ಉಪಯೋಗಿಸಬೇಕು ?

ಅಣ್ಣ-ತಮ್ಮ ಒಂದೇ ದಿನ ಚೌರ ಮಾಡ್-ಬ್ಯಾಡ
ಕತ್ತರಿ, ಚೂರಿಗಳು ಕೈಗ್-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೨ ||

ಹುಟ್ಟಿದ ದಿನದಂದು ಮುಂಜಿ ಮಾಡ್ವದು ಬ್ಯಾಡ
ಒಂದೇ ಬಾಳೆಲೆಯ ತರಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೩ ||

ಹಿಡಿ-ಕಟ್ಟು ಮೇಲ್ಮುಖವ ಮಾಡಿ ನಿಲ್ಲಿಸಬ್ಯಾಡ
ಉಂಡ್ ಕೈ ಎಂದೂ ಒಣಗ್ಸ್-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ  || ೧೪ ||

ಸತ್ತವರ ಮೀಯಿಸಲು ಹಾಕುವದ ಮರೆ-ಬ್ಯಾಡ
ಹುಣ್ಮೆ-ಅಮವಾಸ್ಯೆಗೆ [ಗದ್ದೆ]ಹೂಡ್-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ  || ೧೫ ||

ಮುಸ್ಸಂಜೆ ಹೊತ್ತಿನಲಿ ಮಲಗಲು ಹೋಗ್-ಬ್ಯಾಡ 
ಉದ್ಧಾರವಾಗದು ನಿನ-ಪಾಡು … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೬ ||

ನೀರು ಕಾಲಿಗೆ ಹಾಕ್ತ(ಹಾಕುತ) ಮಡು-ನೆನೆಸ ಮರೆಬ್ಯಾಡ
ಮರೆತರೆ ಶನಿ ಕಾಟ ತಪ್ಪದಿರದು … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೭ ||

  ಉತ್ತಮ ಪ್ರಜಾಕೀಯ ಪಕ್ಷ ದ ಗ್ರಾಮ ಪಂಚಾಯತ್ ಚುನಾವಣಾ ಅಭ್ಯರ್ಥಿ

ಕೇಳು ನೀ ಹೊಸ್ತಿಲಿನ ಮೇಲೆ ಕೂಡಲು-ಬ್ಯಾಡ 
ನರಸಿಂಹ ಹಿರಣ್ಯನ ಸೀಳಿರುತಿಹ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೮ ||

ಒಂದ್ ಚಪ್ಲಿ ಹಾಕ್ಕೊಂಡು ಏಳ್-ಹೆಜ್ಜೆ ನಡಿ-ಬ್ಯಾಡ
ಸಾವ ನಿಮ್ಮನೆಗೆ ತರ-ಬ್ಯಾಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೯ || 

ಉಂಡಾದ ಮೇಲೆಂಟು ಹೆಜ್ಜೆ ಇಡದಿರ-ಬ್ಯಾಡ  
ಯಮ ಕಾಯುತಿರುವ ಸರಿ ನೋಡ … ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೨೦ ||

ಹೀಗುಂಟು ನೂರೆಂಟು ನಮ್ಮ “ಬೇಕು-ಬ್ಯಾಡ”
ತಿಳಿದು ನೋಡುವದ ಬಿಡಬ್ಯಾಡ … ನನ ಕಂದ
ನಂಬುವದೋ-ಬಿಡುವದೋ ನೀ ನೋಡ || ೨೧ ||

Leave a Reply

Your email address will not be published. Required fields are marked *

Translate »