ಕನ್ನಡ ಒಗಟುಗಳ ಕ್ವಿಜ್ ನಲ್ಲಿ ಜಾನಪದ ಒಗಟುಗಳನ್ನ ನೀಡಲಾಗಿದೆ , ಓದಿ ಉತ್ತರಿಸಿ , ನಾನ್ಯಾರು ಎಂದು ತಿಳಿಸಿ , ತಿಳಿಯಿರಿ.
ನಾನ್ಯಾರು – ಕನ್ನಡ ಒಗಟುಗಳು
#1. ಹತ್ನಾರ್ದ ಮರಕ್ಕೆ , ಹತ್ತುತನೆ ಕರಿಯಣ್ಣ, ನಾನ್ಯಾರು / He climbs a tree which no one climbs , who am i ?
#2. ಕಾಲಿಲ್ಲದೆ ನಡೆಯುವುದು , ಬಾಯಿಲ್ಲದೆ ನುಡಿಯುವುದು, ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು, ನಾನ್ಯಾರು / It walks without legs , it speaks without mouth , its a home for many , who am i ?
#3. ಬಿಳಿಯ ಪೊರೆ ಬಿಡುವ ನಾಗವಲ್ಲ ! ಗುಂಡಗಿರುವೆ ಗೋಲಿಯ ಗುಂಡಲ್ಲ! ದೇಹವು ಮಡಿಕೆಗಳಿಂದ ಕೂಡಿರುವುದು , ಕುಂಬಳ ಕಾಯಲ್ಲ, ನಾನ್ಯಾರು / I am not a snake which leaves its white scurf , I am round but not a ball , Body is like a pot , but I am not pumpkin, who am i?
#4. ಸುತ್ತಲೂ ಸುಣ್ಣದ ಗೋಡೆಗೆ , ಒಂದೂ ಬಾಗಿಲಿಲ್ಲ, ನಾನ್ಯಾರು / For one white wall , there are no doors , who am i?
#5. ಕಿರೀಟವುಂಟು ರಾಜನಲ್ಲ , ಗಡ್ಡವುಂಟು ತುರುಕನಲ್ಲ ನಾನ್ಯಾರು ? / It has a crown but not a king , it has a beard but not a turkey , Who Am i?