ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀಮಧ್ವ ನವಮೀ – ಶ್ರೀಮದಾಚಾರ್ಯರು – ಮಧ್ವಾಚಾರ್ಯರ ಸಂಪೂರ್ಣ ವಿವರ

ಶ್ರೀಮಧ್ವ ನವಮೀ…

ಶ್ರೀ ಆಚಾರ್ಯ ಮಧ್ವರ ಅವತಾರ : ಕ್ರಿ ಶ 1238

ಶ್ರೀಮದಾಚಾರ್ಯರು ಬದರಿಕಾಶ್ರಮ ಪ್ರವೇಶ : ಕ್ರಿ ಶ 1317

ಶ್ರೀಮಧ್ವವಿಜಯ…

ಮುಕುಂದಭಕ್ತೈ ಗುರುಭಕ್ತಿಜಾಯೈ ಸತಾಂ ಪ್ರಸತ್ತೈ ಚ ನಿರಂತರಾಯೈ ।
ಗರೀಯಸೀ೦ ವಿಶ್ವಗುರೋರ್ವಿಶುದ್ಧಾ೦ ವಕ್ಷ್ಯಾಮಿ ವಾಯೋರವತಾರಲೀಲಾಮ್ ।।

ಶ್ರೀ ವಾಯುದೇವರು ಮೋಕ್ಷ ಯೋಗ ಜೀವರಿಗೆ ಗುರುವಾಗಿರುವುದರಿಂದ ” ವಿಶ್ವಗುರು ” ಯೆಂದೆನಿಸಿರುವರು. ಶ್ರೀ ವಾಯುದೇವರು ಶ್ರೀ ಹನುಮದವತಾರ, ಶ್ರೀ ಭೀಮಸೇನಾವತಾರ, ಶ್ರೀ ಮಧ್ವಾವತಾರಗಳೆಂಬ ಮೂರು ಅವತಾರಗಳನ್ನು ಸ್ವೀಕರಿಸಿರುವರು.

ಆ ಮೂರು ಅವತಾರಗಳಲ್ಲಿಯೂ ನಾನಾ ವಿಧಗಳಾದ ಲೀಲೆಗಳನ್ನು ಮಾಡಿರುವರು. ಆ ಲೀಲೆಗಳೆಲ್ಲವೂ ಪರಿಶುದ್ಧವಾದವುಗಳೂ; ಅತಿ ಶ್ರೇಷ್ಠವಾದವುಗಳೂ ಮತ್ತು ಮೋಕ್ಷಕ್ಕೆ ಸಾಧನವಾದವುಗಳು.

ಮೋಕ್ಷದಾಯಕವಾದದ್ದು ಮುಕುಂದನ ಭಕ್ತಿ. ಆ ಮುಕುಂದನ ಭಕ್ತಿ ಗುರುಗಳ ಭಕ್ತಿಯಿಂದ ಹುಟ್ಟುತ್ತದೆ. ಅದು ಮಾತ್ರವಲ್ಲ. ಸಜ್ಜನರ ಅನುಗ್ರಹವೂ ಮುಕುಂದನ ಭಕ್ತಿಗೆ ಸಾಧನವಾಗುತ್ತದೆ. ಆ ಸಜ್ಜನರ ಅನುಗ್ರಹವನ್ನು ಎಡೆಬಿಡದಂತೆ ಸಾಧಿಸಬೇಕು. ಅದಕ್ಕಾಗಿ ಶ್ರೀ ವಾಯುದೇವರ ಅವತಾರ ಲೀಲೆಗಳನ್ನು ಹೇಳುವೆನು!!

” ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ಗುರುಮಧ್ವಪತಿವಿಠ್ಠಲರ ಮಾತಲ್ಲಿ…. “

ಶ್ರೀಪತಿ ನಾಭಿಯಿಂದ ಅಜನು ಜನಿಸಿದನು । ಅಜನ ಮಾನಸ ಪುತ್ರರೇ ಸನಕಾದ್ಯರು । ಸನಕಾದಿಗಳ ಪುತ್ರರೇ ದುರ್ವಾಸರು । ದುರ್ವಾಸರ ಶಿಷ್ಯರೇ ಸತ್ಯಪ್ರಜ್ಞರು । ಸತ್ಯಪ್ರಜ್ಞರ ಶಿಷ್ಯರೇ ಪರತೀರ್ಥರು । ಪರತೀರ್ಥರ ಶಿಷ್ಯರೇ ಪ್ರಾಜ್ಞತೀರ್ಥರು । ಪ್ರಾಜ್ಞತೀರ್ಥರ ಶಿಷ್ಯರೇ ಅಚ್ಯುತಪ್ರೇಕ್ಷರು । ಅಚ್ಯುತಪ್ರೇಕ್ಷರ ಕರ ಸಂಜಾತರೇ ಪೂರ್ಣಪ್ರಜ್ಞರು । ಪೂರ್ಣಪ್ರಜ್ಞರೇ ನಮ್ಮ ಭಾಷ್ಯಕಾರರು । ನಮ್ಮ ಭಾಷ್ಯಕಾರರೇ ಶ್ರೀಮದಾನಂದತೀರ್ಥರು । ಗುರು ಮಧ್ವಪತಿವಿಠ್ಠಲನ್ನ ನಿಜ ದಾಸರು ।।

700 ವರ್ಷಗಳ ಹಿಂದಿನ ಮಾತು. ಪಶ್ಚಿಮ ಕರಾವಳಿಯ ಶಿವಳ್ಳಿ ಗ್ರಾಮದ ಶ್ರೀ ಅನಂತೇಶ್ವರ ದೇವಸ್ಥಾನದೆದುರು ಅಂದು ಭಾರೀ ಗಲಾಟೆ.

ಉಡುಪಿಯ ಕ್ಷೇತ್ರ ಸ್ವಾಮಿಯಾದ ಶ್ರೀ ಅನಂತೇಶ್ವರ ಶ್ರೀ ಪರಶುರಾಮ ಕ್ಷೇತ್ರದ ಆದಿದೈವ. ಸಂಕ್ರಮಣ ದಿನದಂದು ಅಲ್ಲಿ ನೆರೆಯುವ ದೊಡ್ಡ ಜಾತ್ರೆಗೆ ಅಸಂಖ್ಯ ಭಕ್ತರು ಕಿಕ್ಕಿರಿದು ನೆರೆದಿದ್ದರು.

ಮಂಗಲ ವಾದ್ಯಗಳು ಭೋರ್ಗೋರೆಯುತ್ತಿದ್ದವು. ವಿದ್ವಾಂಸರು ವೇದ ಘೋಷ ಮಾಡುತ್ತಿದ್ದರು. ಉತ್ಸಾಹದ ಕಾರ್ಯ ಕಲಾಪಗಳನ್ನು ನಿರೀಕ್ಷಿಸುವ ಕುತೂಹಲದಿಂದ ದೇವಸ್ಥಾನದೆದುರು ಜನ ಜಾತ್ರೆಯು ಕೋಲಾಹಲವನ್ನು ಮಾಡುತ್ತಲಿತ್ತು.

ದೇವಾಲಯದ ಎದುರು ಗಗನ ಚುಂಬಿತವಾದ ಗರುಡಗಂಬವೊಂದು ತಲೆ ಎತ್ತಿ ನಿಂತಿದೆ. ಜನರ ಗುಂಪಿನೊಳಗಿಂದ ಹುಚ್ಚನಂತೆ ಕಾಣುವ ಒಬ್ಬ ಮನುಷ್ಯನು ಆ ಗರುಡಗಂಬವನ್ನು ಸರಸರ ಏರ ತೊಡಗಿದನು. ಜನರೆಲ್ಲರೂ ಕುತೂಹಲದಿಂದ ಉಸಿರು ಬಿಗಿ ಹಿಡಿದು ಅವನೆಡೆಗೆ ನೋಡ ಹತ್ತಿದರು. ಆ ಕಂಬವನ್ನು ಏರುವವನ ಮೈಯಲ್ಲಿ ದೇವರ ಆವೇಶವು ಬಂದಂತೆ ಇತ್ತು.

ತಲೆ ಎತ್ತಿ ನೋಡಿದರೆ ಕಣ್ಣು ತಿರುವಂತಿದ್ದ ಆ ಎತ್ತರ ಕಂಬವನ್ನು ಚಪಲತೆಯಿಂದ ಅರೆಚಣದಲ್ಲಿ ಏರಿದ ಆ ಅರೆ ಹುಚ್ಚ. ಅಂಗೈ ಅಗಲದ ಕಂಬದ ತುದಿಯಲ್ಲಿ ಅವನು ಕುಣಿಯ ತೊಡಗಿದ. ರಂಗಭೂಮಿಯ ಮೇಲೆ ನಟ ಸಾರ್ವಭೌಮನ ನೃತ್ಯದಂತೆ ಇತ್ತು ಅವನ ಆ ಸ್ವಚ್ಛಂಧ ನಾಟ್ಯ. ಜನರ ಸದ್ದು ಗದ್ದಲಗಳೆಲ್ಲ ಒಮ್ಮೆಲೆ ಶಾಂತವಾದವು. ಎವೆ ಪಿಳಕಿಸದ ಸಾವಿರಾರು ಕಣ್ಣುಗಳು ಅವನಲ್ಲಿ ಕೇಂದ್ರೀಕೃತವಾದವು.

ಸ್ತಂಭದ ತುದಿಯಲ್ಲಿ ಸ್ವಚ್ಛಂಧವಾಗಿ ತಾಂಡವಗೈವ ಆ ನೃತ್ಯ ಧೀರನು ಎರಡೂ ಕೈಗಳನ್ನು ಮೇಲೆತ್ತಿ ಘೋಷಣೆ ಗೈದ. ” ಸ್ವಲ್ಪ ದಿನಗಳಲ್ಲಿ ಸರ್ವಜ್ಞರ ಅವತಾರ. ಸಜ್ಜನರಿಗೆಲ್ಲ ಕಲ್ಯಾಣ. ಅದು ಕೂಡಾ ಈ ” ಶ್ರೀ ಪರಶುರಾಮ ಕ್ಷೇತ್ರ ” ದಲ್ಲಿ ಬೇಗನೆ ಆಗಲಿರುವದು “

ಅವನು ಈ ಮಾತನ್ನು ಮೂರು ಸಲ ಜನರಿಗೆಲ್ಲಾ ” ಕೇಳಿರಿ ” ” ಕೇಳಿರಿ ” ಯೆಂದು ಕೈ ಎತ್ತಿ ಮತ್ತೆ ಮತ್ತೆ ಹೇಳಿದ. ಆಣೆಯಿಟ್ಟು ಹೇಳಿದಂತೆ ಯಿತ್ತು ಅವನ ಆ ನಿರ್ಧಾರದ ಕಣಿ.

ಹುಸಿ ಹೋಗಲಿಲ್ಲ ಆ ಹುಚ್ಚನ ಮಾತು. ಮುಂದೆ ಕೆಲವೇ ದಿನಗಳಲ್ಲಿ ಉಡುಪಿಯ ಸಮೀಪದ ” ಪಾಜಕಾ ಕ್ಷೇತ್ರ ” ದಲ್ಲಿ ” ಜೀವೋತ್ತಮರಾದ ಶ್ರೀ ವಾಯುದೇವರು ” ಅವತಾರ ಮಾಡಿದರು.

ಪವಿತ್ರಂ ಪಾಜಕ ಕ್ಷೇತ್ರಂ

ಪಾಜಕ ಕ್ಷೇತ್ರವು ಶ್ರೀ ಪರಶುರಾಮದೇವರ ಕಾಲದಿಂದಲೂ ಪ್ರಸಿದ್ಧ ಕ್ಷೇತ್ರವೆನಿಸಿದೆ. ಈ ಗ್ರಾಮದ ಬದಿಯ ಬೆಟ್ಟದಲ್ಲಿ ಆ ರಾಮ ಕೃಷ್ನನ ತಂಗಿಯನ್ನು ಪ್ರತಿಷ್ಠೆ ಮಾಡಿದ. ಶ್ರೀ ಪರಶುರಾಮರ ಈ ದುರ್ಗಾ ಪ್ರತಿಷ್ಠಾ ಮಹೋತ್ಸವವನ್ನು ನೋಡಲು ಅಂದು ವಿಮಾನದಲ್ಲಿ ಬಂದಿದ್ದರಂತೆ. ಅದಕ್ಕಾಗಿಯೇ ” ವಿಮಾನಗಿರಿ ” ಯೆಂದು ಈಗಲೂ ಅದಕ್ಕೆ ಹೆಸರು.

ಈ ಪಾಜಕದ ಸುತ್ತಲೂ ಶ್ರೀ ಪರಶುರಾಮದೇವರ ಬಿಲ್ಲು – ಬಾಣ – ಕೊಡಲಿ – ಗದೆಗಳಿಂದ ರೂಪುಗೊಂಡಿವೆ ನಾಲ್ಕು ತೀರ್ಥಗಳು. ನಿಸರ್ಗ ಸೌಂದರ್ಯದ ನೆಲೆವೀಡಾದ ಈ ಪಾವನ ಕ್ಷೇತ್ರವೆಲ್ಲವೂ ಮಧ್ಯಗೇಹ ಮನೆತನದ ಸಾಗರಿ ನಾರಾಯಣಾಚಾರ್ಯರ ಮನಸ್ಸನ್ನು ಸೆಳೆಯಿತು. ಅವರನ್ನು ಶ್ರೀ ಮಧ್ಯಗೇಹಭಟ್ಟರೆಂದೂ ಕರೆಯುತ್ತಿದ್ದರು. ಶ್ರೀ ಭಟ್ಟರು ತಮ್ಮ ಗ್ರಾಮವನ್ನು ಬಿಟ್ಟು ಪಾಜಕ ಕ್ಷೇತ್ರ ” ದಲ್ಲಿ ನೆಲೆಸಿದರು.

ಶ್ರೀ ಮಧ್ಯಗೇಹಭಟ್ಟರು ಉಡುಪಿಯ ಶ್ರೀ ಅನಂತೇಶ್ವರ ಸ್ವಾಮಿಯ ಏಕನಿಷ್ಠ ಭಕ್ತರು. ಇತಿಹಾಸ – ಪುರಾಣಗಳೆಲ್ಲಾ ಅವರ ಕರತಲದಲ್ಲಿ ಆ ಮಲಕ. ಮಧುರ ಕಂಠದಿಂದ ಅವರು ಪುರಾಣ ಹೇಳಹತ್ತಿದರೆ ಜನರ ಸರ್ವೇ೦ದ್ರಿಯಗಳಿಗೂ ಆಪ್ಯಾಯಮಾನವಾಗುತ್ತಿತ್ತು.

ಶ್ರೀ ಮಧ್ಯಗೇಹಭಟ್ಟರು ಸತ್ ಸಂತಾನಕ್ಕಾಗಿ ೧೨ ವರ್ಷ ಶ್ರೀ ಅನಂತೇಶ್ವರನನ್ನು ಸೇವಿಸಿದರು. ಅವರ ಮಡದಿ ಸಾಧ್ವೀ ವೇದವತಿಯೂ ಆ ಸ್ವಾಮಿಯ ಸೇವೆಯಲ್ಲಿ ಮೈ ಸವೆಯಿಸಿದಳು. ಶ್ರೀ ಭಟ್ಟರಿಗೆ ಬೇಕಾದದ್ದು ಬರೀ ತಮ್ಮ ವಂಶ ಉದ್ಧಾರ ಮಾಡುವ ಮಗನಲ್ಲ. ವಿಶ್ವೋದ್ಧಾರ ಮಾಡುವ ಮಗ. ಇಂಥಹಾ ಮಗನಿಗಾಗಿ ಆ ದಂಪತಿಗಳು ತಮ್ಮ ಕುಲಸ್ವಾಮಿಗೆ ಹರಕೆ ಹೊತ್ತರು. ಪಯೋವ್ರತ ಮೊದಲಾದ ವ್ರತಗಳನ್ನು ಮಾಡಿದರು. ದೇವ ದೇವೋತ್ತಮನಾದ ಜಗನ್ನಾಥನು ಕಣ್ತೆರೆದ!

  ಅನಂತ ಚತುರ್ದಶಿ : ಇಲ್ಲಿದೆ ಶುಭ ಮುಹೂರ್ತ, ಮಹತ್ವ, ಪೂಜೆ ವಿಧಾನ ಮತ್ತು ಆಚರಣೆಯ ಕಾರಣ..

ಶ್ರೀಮದಾಚಾರ್ಯರ ಅವತಾರ

ಶ್ರೀ ಮಧ್ವ ವಿಜಯ…

ಸಂತುಷ್ಯತಾಂ ಸಕಲಸನ್ನಿಕರೈರಸಾದ್ಭಿ:
ಖಿದ್ಯೇತ ವಾಯುರಯಮಾವಿರಭೂತ್ ಪೃಥುವ್ಯಾ೦ ।
ಆಖ್ಯಾನಿತೀವ ಸುರದುಂದುಭಿಮಂದ್ರನಾದಃ
ಪ್ರಾಶ್ರಾವಿ ಕೌತುಕವಶೈರಿಹ ಮಾನವೈಶ್ಚ ।।

ವಿಜಯದಶಮೀ ಮಹಾ ಶುಭ ದಿನದಂದು ” ಶ್ರೀ ಮಧ್ಯಗೇಹಭಟ್ಟರು ” ಶ್ರೀ ಅನಂತೇಶ್ವರನ ದರ್ಶನಕ್ಕೆ ಉಡುಪಿಗೆ ಹೋಗಿದ್ದರು. ಸ್ವಾಮಿಯ ಸೇವೆ ಮಾಡಿ ಶ್ರೀಭಟ್ಟರು ಮಗೆಗೆ ಮರಳಿದಾಗ ಹೊತ್ತು ನೆತ್ತಿಗೇರಿತ್ತು. ಶ್ರೀ ಭಟ್ಟರು ಮನೆಯ ಹತ್ತಿರಕ್ಕೆ ಬಂದಾಗ ಮಂಗಳ ವಾದ್ಯಗಳು ಮೊಳಗುತ್ತಿರುವುದು ಕೇಳಿಸಿತು. ಅವು ಮಾನವರು ಬಾರಿಸುವ ವಾದ್ಯಗಳಲ್ಲ. ಆಗಸದ ಓಲಗದವರು ಬಾರಿಸಿದ ದೇವದುಂದುಭಿಗಳೇ ಆಗಿದ್ದವು.

ಅಂಥಹಾ ಮಧುರವಾದ ಮಂಗಳ ವಾದ್ಯಗಳ ಮಂಜುಲ ಘೋಷವನ್ನು ನೆಲದ ಜನರು ಎಂದೂ ಕೇಳಿರಲಿಲ್ಲ. ಅದನ್ನು ಕೇಳಿದ ಜನರೆಲ್ಲರೂ ಕೌತುಕದ ಕೊನೆ ಏರಿ ನಿಂತರು. ಶ್ರೀಮದಾಚಾರ್ಯರು ಅವತರಿಸಿದರು. ಸಜ್ಜನರು ಸಂತೋಷಗೊಂಡರು. ದೇವತೆಗಳು ನಲಿದಾಡಿದರು.

ಶ್ರೀ ಮಧ್ಯಗೇಹಭಟ್ಟರು ಮನೆಗೆ ಬಂದು ತಮ್ಮ ಸುಂದರ ಮಗುವನ್ನು ಕಣ್ಣು ತುಂಬಾ ನೋಡಿ ತಣಿದರು. ೧೨ ವರ್ಷ ತಾವು ಸೇವಿಸಿದ ಶ್ರೀ ಮುಕುಂದನ ದಯೆಯೇ ಈ ಕಂದನ ರೂಪದಿಂದ ಬಂದಿದೆ ಎಂದು ತೋರಿತು ಅವರ ಮನಸ್ಸಿಗೆ. ಅವರು ನಿಂತಲ್ಲಿಂದಲೇ ಶ್ರೀ ಅನಂತೇಶ್ವರನನ್ನು ವಂದಿಸಿದರು.

ಶ್ರೀ ವಾಯುದೇವರ ಅವತಾರ ಭೂತರಾದ ಆ ಮಗುವಿಗೆ ತಂದೆಯಿಟ್ಟ ಹೆಸರು ” ಶ್ರೀ ವಾಸುದೇವ “.

” ಶ್ರೀ ವೆಂಕಟವಿಠ್ಠಲರ ಕಣ್ಣಲ್ಲಿ…”

ಶುದ್ಧ ಸತ್ತ್ವಾತ್ಮಕ ಶರೀರ ಶ್ರೀ ಗುರುವಾರಾ ।
ಮಧ್ವರಾಯರೇ ಕರುಣದಿ ।
ಮಧ್ಯಗೇಹ್ಯಾರೆಂಬ ಸುರರ ಸತಿ ಉದರದಲಿ ।
ಉದ್ಭವಿಸಿಮ್ಯರದೆ ಜಗದಿ ।।
ಸದ್ವೈಷ್ಣವರ ಪೊರೆದು ಅದ್ವೈತರ ಸದದು ।
ಮಧ್ವಮತ ಸಿದ್ಧಾಂತವನು ಮಾಡಿದೆ ।
ವಿದ್ಯಾರಣ್ಯ ಮಣಿಮಂತ ದೈತ್ಯರನೆಲ್ಲ ।
ವೊದ್ದೊದ್ದು ಅವರ ಅಂಧಂತಮಕೆ ಗುರಿಮಾಡ್ದೆ ।।

” ಕೂಸಿನ ಕಂಡೀರಾ ಗುರು ಮುಖ್ಯಪ್ರಾಣನ ಕಂಡೀರಾ “

ಆ ಶುಶುವಿಗೆ ಹಾಲು ಉಣಿಸಲಿಕ್ಕಾಗಿ ಒಂದು ಹಸುವನ್ನು ಕೊಟ್ಟ ಮೂಡಿಲ್ಲಾಯರಿಗೆ ಮೋಕ್ಷ ವಿದ್ಯೆಯು ಕರತಲಾಮಲಕವಾಯಿತು. ಶ್ರೀ ಭಟ್ಟರು ಒಂದುದಿನ ಆ ಮಗುವನ್ನು ಉಡುಪಿಗೆ ಕರೆದುಕೊಂಡು ಹೋಗಿ ಶ್ರೀ ಅನಂತೇಶ್ವರನ ಪಾದದ ಮೇಲೆ ಹಾಕಿದರು. ಆ ಭಗವಂತನ ಆಶೀರ್ವಾದ ಪಡೆದು ಮಗುವಿನೊಂದಿಗೆ ಮರಳಿ ಹೊರಟರು. ರಾತ್ರಿ ಕಾಡಿನಲ್ಲಿ ನಡೆದು ಬರುವಾಗ ಇವರನ್ನು ಕಬಳಿಸ ಬಂದ ಒಂದು ಭೂತವು ಆ ಮಗುವಿಗೆ ಹೆದರಿ ಅವರನ್ನು ಬಿಟ್ಟು ದೂರಹೋಯಿತು.

” ಖಂಡಗ ಹುರಳಿ ತಿಂದಿತು ಕೂಸು “

ಒಮ್ಮೆ ತಾಯಿ ಮನೆಯಲ್ಲಿ ಇಲ್ಲದಾಗ ಮಗುವು ಅಳತೊಡಗಿತು. ರೋದನವು ಜೋರಾದಾಗ ಅವನ ಅಕ್ಕ ಏನು ಮಾಡುವದು ತಿಳಿಯದೆ ದನಕ್ಕೆ ತಿನ್ನಿಸಲಿಕ್ಕೆ ನೆನೆಸಿಯಿಟ್ಟ ಹುರಳಿಯನ್ನು ತಿನ್ನಲು ಕೊಟ್ಟಳು. ಅವೆಲ್ಲವನ್ನೂ ತಿಂದು ತೇಗಿತು ಆ ಪುಟ್ಟ ಕೂಸು. ತಾಯಿ ಬಂದು ಅದನ್ನು ಕೇಳಿ ಗಾಬರಿಯಾದಳು. ಅವಳಿಗೇನು ಗೊತ್ತು ಹಿಂದೆ ಎರಡು ಸಲ ವಿಷವುಂಡು ಪಚನ ಮಾಡಿಕೊಂಡ ಮಗು ಇದೆಂದು. ಭಂಡಿ ಅನ್ನ ಉಂಡ ಕೂಸು ಇದು!!

ಶ್ರೀ ವಾಸುದೇವನು ತುಸು ದೊಡ್ಡವನಾದಾಗ ಶ್ರೀ ಭಟ್ಟ ದಂಪತಿಗಳಿಗೆ ಅವನನ್ನು ಹಿಡಿಯುವುದೇ ಕಷ್ಟವಾಯಿತು. ಒಂದುದಿನ ಬೆಳಿಗ್ಗೆ ಎತ್ತಿನ ಬಾಲ ಹಿಡಿದು ಆ ಕೂಸು ಕಾಡಿಗೆ ಹೋಗಿಬಿಟ್ಟಿತು. ಮನೆಯ ಜನ ಊರೆಲ್ಲಾ ಹುಡುಕಾಡಿ ದಿಗ್ಭ್ರಾ೦ತರಾಗಿ ಕುಳಿತು ಕೊಂಡಿದ್ದರು. ಸಂಜೆಯ ವೇಳೆಗೆ ಬಸವನ ಹಿಂದೆ ಬಾಲವಾಗಿ ಲೀಲೆಯಿಂದ ಜೋಕಾಲಿ ಆಡುತ್ತಾ ಮಗು ಮನೆಗೆ ಬಂದ!!

” ಉಪನಯನ – ಅಧ್ಯಯನ “

ಶ್ರೀ ಮಧ್ವ ವಿಜಯ…

ಸಮುಚಿತ ಗ್ರಹ ಯೋಗ ಗುಣಾನ್ವಿತಂ
ಸಮವಧಾರ್ಯ ಮುಹೂರ್ತಮದೂಷಣಮ್ ।
ಪ್ರಣಯ ಬಂಧುರ ಬಾಂಧವವಾನಸೌ
ದ್ವಿಜಕುಲಾಕುಲ ಮುತ್ಸವಮಾತನೋತ್ ।।

ಶ್ರೀ ವಾಸುದೇವನು ಎಂಟನೇ ವಯಸ್ಸಿನಲ್ಲಿದ್ದಾಗ ಶ್ರೀ ಮಧ್ಯಗೇಹಭಟ್ಟರು ಎಲ್ಲ ಆಪ್ತೇಷ್ಟರಿಂದೊಡಗೂಡಿ ಅವನ ಉಪನಯನವನ್ನು ನೆರವೇರಿಸಿದರು. ಉಪನಯನವಾದ ಬಳಿಕ ಶ್ರೀ ಭಟ್ಟರು ವಾಸುದೇವನನ್ನು ವೇದ ಶಾಸ್ತ್ರಗಳ ಅಧ್ಯಯನಕ್ಕಾಗಿ ತೋಟಂತಿಲ್ಲಾಯ ಎಂಬ ವಿದ್ವಾಂಸರ ಬಳಿಗೆ ಕಳುಹಿಸಿದರು. ಗುರುಗಳು ವಾಸುದೇವನ ವಿಲಕ್ಷಣ ಪ್ರತಿಭೆಯನ್ನು ಕಂಡು ಬೆರಳು ಕಚ್ಚಿದರು. ಸರ್ವಜ್ಞರ ಸಂಕ್ಷಿಪ್ತ ಆವೃತ್ತಿಯಂತಿದ್ದ ವಾಸುದೇವನು ಕೆಲವು ದಿನಗಳಲ್ಲಿಯೇ ತೋಟಂತಿಲ್ಲಾಯರಲ್ಲಿ ಓದುವ ಶಾಸ್ತ್ರ ಮಾಡಿ ಮುಗಿಸಿದರು. ಕೊನೆಗೆ ಅವರಿಗೆ ಗುರುದಕ್ಷಿಣಾ ರೂಪವಾಗಿ ” ಐತರೇಯೋಪತ್ತಿ ” ನ ರಹಸ್ಯಾರ್ಥವನ್ನು ತಿಳಿಸಿದರು. ಅದರಿಂದ ಆ ಗುರುಗಳಿಗೆ ಗೋವಿಂದನಲ್ಲಿ ಭಕ್ತಿ ಹುಟ್ಟಿತು. ಮುಕ್ತಿ ಕಾರಗತವಾಯಿತು.

ಉಪನಯನವಾದ ಬಳಿಕ ಶ್ರೀ ವಾಸುದೇವನ ವೃತ್ತಿ ವಿಲಕ್ಷಣವಾಗಿದ್ದಿತು. ವೈಷ್ಣವ ಸಿದ್ಧಾಂತದ ಪ್ರಸಾರ ಮತ್ತು ವೇದ ಸಿದ್ಧಾಂತದ ಪುನರುದ್ಧಾರವನ್ನು ಮಾಡಬೇಕೆಂದು. ಶ್ರೀ ಹರಿಯು ಅಂದು ತಮಗೆ ಮಾಡಿದ ಆದೇಶದ ಅರಿವು ಅವರ ಹೃದಯದಲ್ಲಿ ನಿತ್ಯ ನಿಶ್ಚಳವಾಗಿದ್ದಿತು.

” ಸಂನ್ಯಾಸ ಸ್ವೀಕಾರ “

ಶ್ರೀ ಮಧ್ವ ವಿಜಯ…

ಅಥೋಪಗಮೈಷ ಗುರು ಜಗದ್ಗುರು:
ಪ್ರಸಾದ್ಯ ತಂ ದೇವವರ ಪ್ರಸಾದಿತಃ ।
ಸದಾ ಸಮಸ್ತಾಶ್ರಮಭಾಕ್ ಸುರೇಶ್ವರೋ
ವಿಶೇಷತಃ ಖಲ್ವಭಜದ್ವರಾಶ್ರಮಮ್ ।।

ರುದ್ರಾದಿ ದೇವತೆಗಳು ಒಲಿಸಿದ ಶ್ರೀ ವಾಸುದೇವ ಗುರುವಾದ ಶ್ರೀ ಅಚ್ಯುತಪ್ರೇಕ್ಷಾಚಾರ್ಯರಲ್ಲಿಗೆ ತೆರಳಿ ಅವರನ್ನು ಪಡಿಸಿದರು ಸದಾ ಎಲ್ಲ ರೀತಿಯ ಆಶ್ರಮ ಧರ್ಮಗಳನ್ನೂ ಪರಿಪಾಲಿಸುವ ದೇವ ಶ್ರೇಷ್ಠರಾದ ಅವರು ಆಗ ವಿಶೇಷವಾಗಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು.

” ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ “

  ಶನಿಮಹಾತ್ಮೆ ಶನಿ ಶಿಂಗನಪುರ

ವೇದಾಂತವಿದ್ಯಾನಿಜರಾಜ್ಯಪಾಲನೇ
ಸಂಕಲ್ಪ್ಯಮಾನೋ ಗುರುಣಾಗರೀಯಸೀ ।
ಅದಭ್ರಚೇತಾ ಅಭಿಷಿಚ್ಯತೇ ಪುರಾ ಸ
ವಾರಿಭಿರ್ವಾರಿಜ ಪೂರಿತೈರಥ ।।

” ವೇದಾಂತ ವಿದ್ಯೆ ” ಎಂಬುವ ತಮ್ಮ ಸಾಮ್ರಾಜ್ಯದ ಪರಿಪಾಲನೆ ಎಂಬ ಹಿರಿದಾದ ಕಾರ್ಯದಲಿ ಸರ್ವಜ್ಞರಾದ ಶ್ರೀ ಪೂರ್ಣಪ್ರಜ್ಞರನ್ನು ನಿಯಮಿಸಬೇಕೆಂದು ನಿಶ್ಚಯಿಸಿ ಗುರುಗಳಾದ ಶ್ರೀ ಅಚ್ಯುತಪ್ರೇಕ್ಷರು ಅವರಿಗೆ ಶಂಕದಲ್ಲಿ ತುಂಬಿದ ಪುಣ್ಯ ಜಲಗಳಿಂದ ಅಭಿಷೇಕ ಮಾಡಿದರು. ಶ್ರೀ ವಾಸುದೇವನು ” ಆನಂದತೀರ್ಥ ” ರಾದರು.

ಆನಂದ ರೂಪಸ್ಯ ಪರಸ್ಯ ಪಾತ್ರದೀರಾ
ನಂದಸಂದಾಯಿಸುಶಾಸ್ತ್ರಕೃತ್ ಸ ಯತ್ ।
ಆನಂದತೀರ್ಥೇತಿ ಪದಂ ಗುರೂದಿತಂ
ಬಭೂವ ತಸ್ಯಾತ್ಯನುರೂಪರೂಪಕಮ್ ।।

ಆನಂದ ರೂಪನೂ; ಸರ್ವೋತ್ತಮನೂ ಆದ ಶ್ರೀ ಹರಿಯಲ್ಲಿಯೇ ನೆಲೆಸಿದ ಮನಸ್ಸಿನ ಸ್ವರೂಪಾನಂದಕ್ಕೆ ಸಾಧನವಾಗುವ ಶಾಸ್ತ್ರವನ್ನು ರಚಿಸಿರುವ ಶ್ರೀ ಪೂರ್ಣಪ್ರಜ್ಞರಿಗೆ ಗುರುಗಳಿರಿಸಿದ ” ಆನಂದತೀರ್ಥ ” ಯೆಂಬ ಹೆಸರು ಅತ್ಯಂತ ಅರ್ಥಪೂರ್ಣವೆನಿಸಿತು.

ಕಕ್ಷೆ ; 3

ಅಂಶ : ಸಾಕ್ಷಾತ್ ಶ್ರೀ ವಾಯುದೇವರು ( ಭಾವಿ ಬ್ರಹ್ಮದೇವರು )

” ಶ್ರೀ ಜಗನ್ನಾಥದಾಸರ ಕಣ್ಣಲ್ಲಿ…. “

ಶ್ರೀ ಮರುತಾತ್ಮ ಸಂಭೂತ ಹನುಮ ।
ಭೀಮ ಮಧ್ವಾಖ್ಯ ಯತಿನಾಥ ಮೂಲ ।
ರಾಮ ಕೃಷ್ಣಾರ್ಪಿತ ಸುಚೇತಾ ।
ಮಾಮ ಸ್ವಾಮಿ ಚೈತ್ತೈಸೆನ್ನ ಮಾತಾ ।।

ಚತುರಶ್ಚತುರಾನನಃ ಸ್ವಯಂ ಪವನೋ ವಾ ವ್ರತಿರೂಪ ಆವ್ರಜನ್ ।
ಶ್ರುತಿನಾಥದಿಧೃಕ್ಷಯಾನ್ಯಥಾ ನ ಖಲು ಸ್ಯಾನ್ನಿಖಿಲಾಗ್ರ್ಯಲಕ್ಷ್ಮವಾನ್ ।।

ಶ್ರುತಿನಾಥರಾದ ಶ್ರೀ ವೇದವ್ಯಾಸದೇವರನ್ನು ಕಾಣುವ ಬಯಕೆಯಿಂದ ಸ್ವತಃ ಚತುರ್ಮುಖ ಬ್ರಹ್ಮದೇವರೋ ಅಥವಾ ವಾಯುದೇವರೋ ಯತಿ ರೂಪದಿಂದ ಬರುತ್ತಿರುವಂತಿದೆ. ಇಲ್ಲವಾದಲ್ಲಿ ಹೀಗೆ ಸಕಲ ಲಕ್ಷಣಗಳನ್ನು ಹೊಂದಿರಲು ಸಾಧ್ಯವಿಲ್ಲ.

ಆಶ್ರಮ ಗುರುಗಳು : ಶ್ರೀ ಅಚ್ಯುತಪ್ರೇಕ್ಷಾಚಾರ್ಯರು

ಆಶ್ರಮ ಶಿಷ್ಯರು :

ಶ್ರೀ ಮರುದಂಶ ಪ್ರಾಣೇಶದಾಸರ ನುಡಿಮುತ್ತುಗಳಲ್ಲಿ ಶ್ರೀಮದಾಚರ್ಯರಿಂದ ಸ್ಥಾಪನೆಗೊಂಡ ಮಠಗಳೂ ಹಾಗೂ ಯತಿಗಳು..

ಸುಖತೀರ್ಥರೆದುವರನ । ಸ್ಥಾಪಿ ।
ಸ್ಯೊಂಭತ್ತೆತಿಗಳನು ಮಾಡಿ ಅವರವರಿಗೆ ।
ಅಕಳಂಕ ನಾಮಗಳ ಮೂರ್ತಿಗಳ ಕೊಟ್ಟು ।
ವಿವರ ಬಣ್ಣಿಸುವೆ ಸುಜನರು ಕೇಳಿ ।।

ಶ್ರೀ ಪದ್ಮನಾಭ ಹೃಷಿಕೇಶ ।
ನರಹರಿ ಜನಾರ್ದನ ಯತಿ ।
ಉಪೇಂದ್ರತೀರ್ಥ ಪಾಪಘ್ನ ವಾಮನ ಮುನಿಪಾ ।
ವಿಷ್ಣು ಯತಿ ರಾಮತೀರ್ಥಧೋಕ್ಷಜತೀರ್ಥರು ।।

ಶ್ರೀ ಪದ್ಮನಾಭಾತೀರ್ಥರು ( ಶ್ರೀ ರಾಯರಮಠ, ಶ್ರೀ ವ್ಯಾಸರಾಜಮಠ, ಶ್ರೀಶ್ರೀಪಾದರಾಜರ ಮಠಕ್ಕೆ ಸೇರಿದವರು)

ಶ್ರೀ ಹೃಷಿಕೇಶತೀರ್ಥರು – ಶ್ರೀ ಪಲಿಮಾರು ಮಠ

ಶ್ರೀ ನರಸಿಂಹತೀರ್ಥರು – ಶ್ರೀ ಅದಮಾರು ಮಠ

ಶ್ರೀ ಜನಾರ್ದನತೀರ್ಥರು – ಶ್ರೀ ಕೃಷ್ಣಾಪುರ ಮಠ

ಶ್ರೀ ಉಪೇಂದ್ರತೀರ್ಥರು – ಶ್ರೀ ಪುತ್ತಿಗೆ ಮಠ

ಶ್ರೀ ವಾಮನತೀರ್ಥರು – ಶ್ರೀ ಶಿರೂರು ಮಠ

ಶ್ರೀ ವಿಷ್ಣುತೀರ್ಥರು – ಶ್ರೀ ಸೋದೆ ಮಠ

ಶ್ರೀ ಶ್ರೀ ರಾಮತೀರ್ಥರು – ಶ್ರೀ ಕಾಣಿಯೂರು ಮಠ

ಶ್ರೀ ಅಧೋಕ್ಷಜತೀರ್ಥರು – ಶ್ರೀ ಪೇಜಾವರ ಮಠ

” ಸಂಸ್ಥಾನಗಳಿಗೆ ಕೊಟ್ಟ ಪ್ರತಿಮೆಗಳು “

ಈ ಪೆಸರಿಲೊಂಭತ್ತು ಮಂದಿ ರಘುಪತಿ ।
ಕಾಳೀ ಮಥನ ವಿಠ್ಠಲನೆರಡೆರಡು ।
ಭೂಪತಿ ನರಸಿಂಹ ವಿಠಲ ಹೀಗೆ ।
ಒಂಭತ್ತು ಮೂರ್ತಿಗಳ ಕೊಟ್ಟು ।।

ಪದುಮನಾಭರಿಗೆ ರಾಮನ ಕೊಟ್ಟು ।
ಸಕಲ ದೇಶವ ನಾಳಿ ಧನವ ತಾ ಯೆನುತಲಿ ।
ಅದರ ತರುವಾಯ ಹೃಷಿಕೇಶ ತೀರ್ಥರಿ ।
ಗೊಂದು ರಾಮ ಮೂರ್ತಿಯನು ಕೊಟ್ಟು ।।

ಬಧಜನಾರ್ಜಿಯ ನೃಸಿಂಹಾರ್ಯರಿಗೆ ।
ಕಾಳೀಯಮರ್ದನನಾದ ಶ್ರೀ ಕೃಷ್ಣಮೂರ್ತಿ ।
ಹೃದಯ ನಿರ್ಮಲ ಜನಾರ್ದನತೀರ್ಥರಿಗೆ ।
ಕಾಳೀ ಮಥನ ಶ್ರೀ ಕೃಷ್ಣಮೂರ್ತಿಯನು ಕೊಟ್ಟು ।।

ಯತಿವರ ಉಪೇಂದ್ರರಾಯರಿಗೆ ವಿಠಲನ ।
ವಾಮನ ತೀರ್ಥರಿಗೆ ವಿಠಲನಾ ।
ನಟ ಸುರದ್ರುಮ ವಿಷ್ಣುತೀರ್ಥರಿಗೆ ವರಾಹ ।
ಶ್ರೀ ರಾಮ ತೀರ್ಥರಿಗೆ ನರಸಿಂಹ ।।

ಅತಿ ಸುಗುಣ ಅಧೋಕ್ಷಜತೀರ್ಥರಿಗೆ ವಿಠಲ ।
ನಿಂತು ಒಂಭತ್ತು ಮೂರ್ತಿಗಳ ಕೊಟ್ಟು ।
ಕ್ಷಿತಿಯೊಳಗೆ ತ್ಯಾಪಪೇಹ ಪುರಸ್ಥ ।
ಪ್ರಾಣೇಶವಿಠ್ಠಲನ ಅರ್ಚನೆಗಿಟ್ಟರು ಕೇಳಿ ।।

ಶ್ರೀ ಪದ್ಮನಾಭತೀರ್ಥರು – ಶ್ರೀಮದಾಚಾರ್ಯ ಕರಾರ್ಚಿತ ಶ್ರೀ ದಿಗ್ವಿಜಯರಾಮದೇವರು.

ಶ್ರೀ ಹೃಷಿಕೇಶತೀರ್ಥರು – ಶ್ರೀ ರಾಮದೇವರು
ಶ್ರೀ ನರಸಿಂಹತೀರ್ಥರು – ಶ್ರೀ ಕಲೀಯಮರ್ದನ ಕೃಷ್ಣ ದೇವರು
ಶ್ರೀ ಜನಾರ್ದನತೀರ್ಥರು – ಶ್ರೀ ಕಲೀಯಮರ್ದನ ಕೃಷ್ಣ ದೇವರು
ಶ್ರೀ ಉಪೇಂದ್ರತೀರ್ಥರು – ಶ್ರೀ ವಿಠ್ಠಲದೇವರು
ಶ್ರೀ ವಾಮನತೀರ್ಥರು – ಶ್ರೀ ವಿಠ್ಠಲದೇವರು
ಶ್ರೀ ವಿಷ್ಣುತೀರ್ಥರು – ಶ್ರೀ ಭೂವರಾಹದೇವರು
ಶ್ರೀ ರಾಮತೀರ್ಥರು – ಶ್ರೀ ನರಸಿಂಹದೇವರು
ಶ್ರೀ ಅಧೋಕ್ಷಜತೀರ್ಥರು – ಶ್ರೀ ವಿಠ್ಠಲದೇವರು

ಗ್ರಂಥಗಳು “

ಏಕಮೇವಾನ್ ದ್ವಿತಿಯೆಂಬ ಶ್ರುತ್ಯರ್ಥಗಳ ।
ನೇಕ ಭಾಷ್ಯ ಗ್ರಂಥಗಳ ಕಲ್ಪಿಸಿ ।
ಯೇಕವಿಂಶತಿ ಕುಮತ ಕಾಕುಮಾಯಿಗಳನ । ನಿ ।
ರಾಕರಿಸಿ ಹರಿಯೇ ಜಗಕೀಶನೆನಿಸಿ ।।
ಯೇಕಚಿತ್ತದಿ ತನ್ನ ನಂಬಿದ್ದ ಭಕ್ತರ್ಗೆ ಶೋಕಗಳ ನಾಶಗೈಸಿ ।
ಮಾಕಳತ್ರನ ಸದನನೋಕನಿಯ್ಯನ ತೋರು ।
ಆಖಣಾಶ್ಮ ಸಮ ಚರಣ ವ್ಯಾಕುಲವ ಪರಿಹರಿಸು ।।

” ಗೀತಾ ಪ್ರಸ್ಥಾನ ಗ್ರಂಥಗಳು “

ಗೀತಾ ಪ್ರಸ್ಥಾನದ ಮೇಲೆ ಎರಡು ಗ್ರಂಥಗಳನ್ನು ರಚಿಸಿದ್ದಾರೆ.

ಗೀತಾಭಾಷ್ಯಮ್ ಮತ್ತು ಗೀತಾತಾತ್ಪರ್ಯನಿರ್ಣಯಃ

” ಸೂತ್ರ ಪ್ರಸ್ಥಾನ ಗ್ರಂಥಗಳು “

ಸೂತ್ರಭಾಷ್ಯಮ್, ಅಣುಭಾಷ್ಯಮ್ , ಅನುವ್ಯಾಖ್ಯಾನಮ್, ನ್ಯಾಯವಿವರಣಮ್

ಶ್ರೀ ಶಂಕರಾಚಾರ್ಯರೇ ಆಗಲೀ; ಶ್ರೀ ರಾಮಾನುಜಾಚಾರ್ಯರೇ ಆಗಲೀ ” ಅಣುಭಾಷ್ಯ ” ದಂಥ ” ಸಂಗ್ರಹ ಭಾಷ್ಯ ” ಬರೆದಿಲ್ಲ.
ಅಣುಭಾಷ್ಯ ಮತ್ತು ಅನುವ್ಯಾಖ್ಯಾನ ಎರಡೂ ಕೃತಿಗಳೂ ಶ್ಲೋಕ ರೂಪದಲ್ಲಿವೆ. ಸೂತ್ರಗಳಿಗೆ ಅಲಂಕಾರ ಕೊಟ್ಟು ತತ್ತ್ವ ಸಾಹಿತ್ಯಕ್ಕೆ ಶ್ಲೋಕ ರೂಪವಾಗಿ ಒದಗಿಸಿದ ಅದ್ವಿತೀಯ ಪ್ರತಿಭೆ ಶ್ರೀಮದಾಚಾರ್ಯರದ್ದು.ಶ್ರೀ ಶಂಕರಾಚಾರ್ಯರು ಸೂತ್ರಕ್ಕೆ ಒಂದೇ ಒಂದು ಭಾಷ್ಯ ರಚಿಸಿದ್ದಾರೆ.ಶ್ರೀ ರಾಮನಾಜಾಚಾರ್ಯರು ಶ್ರೀಭಾಷ್ಯ, ವೇದಾಂತದೀಪ ಮತ್ತು ವೇದಾಂತಸಾರ ಎಂಬ ಮೂರು ಕೃತಿಗಳನ್ನು ರಚಸಿದ್ದಾರೆ.

  ಮಾರ್ಕಂಡೇಯನ ಭಕ್ತಿ ಕಥೆ

” ಉಪನಿಷತ್ ಪ್ರಸ್ಥಾನ ಗ್ರಂಥಗಳು “

ಉಪನಿಷತ್ ಪ್ರಸ್ಥಾನದಲ್ಲಿ ಪ್ರಧಾನವಾದ ” ಹತ್ತು ” ಉಪನಿಷತ್ತುಗಳಿಗೆ ಶ್ರೀಮದಾಚಾರ್ಯರು ಭಾಷ್ಯವನ್ನು ರಚಿಸಿದ್ದಾರೆ. ಅದರಲ್ಲೂ ಒಂದು ವಿಶೇಷವುಂಟು. ಬಹುಪಾಲು ವಿದ್ವಾಂಸರು ಐತರೇಯೋಪನಿಷತ್ತಿನ 3 ಅಧ್ಯಾಯಗಳಿಗೆ ಮಾತ್ರ ಟೀಕೆ ಬರೆದಿದ್ದರೇ ಶ್ರೀಮನ್ಮಧ್ವಾಚಾರ್ಯರು ಐತರೇಯ ಅರಣ್ಯಕದ ಇಡೀ ಉಪನಿಷತ್ಕಾಂಡಕ್ಕೆ ( 9 ಅಧ್ಯಾಯಗಳು ) ಭಾಷ್ಯ ರಚಿಸಿದ್ದಾರೆ.

ಐತರೇಯಭಾಷ್ಯಮ್ – ತೈತ್ತಿರೀಯಭಾಷ್ಯಮ್ – ಬೃಹದಾರಣ್ಯಕಭಾಷ್ಯಮ್ – ಈಶಾವಾಸ್ಯಭಾಷ್ಯಮ್ – ಕಾಠಕೋಪನಿಷದ್ಭಾಷ್ಯಮ್ –
ಛಾಂದೋಗ್ಯಭಾಷ್ಯಮ್ – ಅಥರ್ವಣಭಾಷ್ಯಮ್ – ಮಾಂಡೂಕ್ಯಭಾಷ್ಯಮ್ – ಷಟ್ಪ್ರಶ್ನಭಾಷ್ಯಮ್ – ತಲವಕಾರೋಪನಿಷದ್ಭಾಷ್ಯಮ್ – ಮಾಂಡೂಕೋಪನಿಷತ್ತಿನ ಮಧ್ಯದಲ್ಲಿ ಬರುವ ಶ್ಲೋಕಗಳನ್ನು ಗೌಡಪಾದರ ಕಾರಿಕೆಗಳೆಂದು ತಪ್ಪಾಗಿ ಭ್ರಮಿಸಲಾಗುತ್ತಿದೆ.
ಆಚಾರ್ಯ ರಾಮಾನುಜರು ಇವು ಉಪನಿಷತ್ತಿನ ಭಾಗವೇ ಎಂದು ಒಪ್ಪಿಕೊಂಡಿದ್ದಾರೆ.
ಆಚಾರ್ಯ ಮಧ್ವರಂತೂ ಈ ಮಂತ್ರಗಳಿಗೆ ಭಾಷ್ಯ ರಚಿಸಿ ಈ ತಪ್ಪು ಕಲ್ಪನೆಯನ್ನು ತಿರಸ್ಕರಿಸಿದ್ದಾರೆ.
ಬ್ರಹ್ಮಾನಂದ ಮುಂತಾದ ಹಿರಿಯ ಅದ್ವೈತ ವಿದ್ವಾಸಂರೂ ಸಹ ಇವು ಉಪನಿಷನ್ಮಂತ್ರಗಳೇ ಎಂದು ಒಪ್ಪಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದು.

” ಶ್ರುತಿ ಪ್ರಸ್ಥಾನ ಗ್ರಂಥಗಳು “

ಶ್ರುತಿ ಪ್ರಸ್ಥಾನದಲ್ಲಿ ಋಗ್ವೇದದ 40 ಸೂಕ್ತಗಳಿಗೆ ಅಧ್ಯಾತ್ಮದ ಅರ್ಥ ಬರೆದು ಮಾರ್ಗದರ್ಶನ ಮಾಡಿದ್ದೂ ಅಲ್ಲದೇ, ಐತರೇಯ ಬ್ರಾಹ್ಮಣದ ಕೆಲವು ಖಂಡಗಳಿಗೂ; ಅರಣ್ಯಕದ ಮಹಾನ್ನಾಮ್ನೀಖಂಡಕ್ಕೂ ವ್ಯಾಖ್ಯಾನ ರಚಿಸಿ ಬ್ರಾಹ್ಮಣ – ಅರಣ್ಯಗಳ ಸಮನ್ವಯದ ದಾರಿ ತೋರಿದ್ದಾರೆ.

ಋಗ್ಭಾಷ್ಯಮ್

” ಇತಿಹಾಸ ಗ್ರಂಥಗಳು “

ಇತಿಹಾಸ ಪುರಾಣಗಳ ಸಮನ್ವಯಕ್ಕಾಗಿ ಮಹಾಭಾರತ, ಭಾಗವತಗಳ ಹೃದಯವನ್ನು ತೆರೆದು ತೋರುವ ಮೂಲ ಕೃತಿಗಳು.

ಮಹಾಭಾರತ ತಾತ್ಪರ್ಯ ನಿರ್ಣಯಃ – ಯಮಕ ಭಾರತಮ್ – ಭಾಗವತತಾತ್ಪರ್ಯ ನಿರ್ಣಯಃ

” ಪ್ರಕರಣ ಗ್ರಂಥಗಳು “

ಪ್ರಮಾಣ ಪ್ರಮೇಯಗಳ ನಿಷ್ಕರ್ಷೆಗಾಗಿ ಪ್ರಕರಣ ಗ್ರಂಥಗಳು.

ಪ್ರಮಾಣಲಕ್ಷಣಮ್ – ಕಥಾಲಕ್ಷಣಮ್ – ಮಾಯಾವಾದಖಂಡನಮ್ – ಉಪಾಧಿಖಂಡನಮ್ – ಪ್ರಪಂಚಮಿಥ್ಯಾತ್ವಾನುಮಾನಖಂಡನಮ್ – ತತ್ತ್ವ ಸಂಖ್ಯಾನಮ್ – ತತ್ತ್ವ ವಿವೇಕಃ – ತತ್ತ್ವೋದ್ಯೋತಃ – ಕರ್ಮನಿರ್ಣಯಃ
ವಿಷ್ಣುತತ್ತ್ವನಿರ್ಣಯಃ

” ಆಚಾರ ಗ್ರಂಥಗಳು “

ಧರ್ಮಶಾಸ್ತ್ರದ ವ್ರತ – ಅನುಷ್ಠಾನಗಳ; ವಾಸ್ತುಶಿಲ್ಪ; ಮಂತ್ರ – ತಂತ್ರಗಳ; ಗೃಹಸ್ಥ ಮತ್ತು ಸಂನ್ಯಾಸಿಗಳ ಆಚಾರ, ಧರ್ಮಗಳ ಬಗ್ಗೆ ಮಾರ್ಗದರ್ಶನ ಮಾಡುವ ಗ್ರಂಥಗಳು.

ತಂತ್ರಸಾರಸಂಗ್ರಹಃ – ಸದಾಚಾರಸ್ಮೃತಿಃ – ಜಯಂತೀನಿರ್ಣಯಃ – ಕೃಷ್ಣಾಮೃತಮಹಾರ್ಣವಃ – ಯತಿಪ್ರಣವಕಲ್ಪಃ – ಸಂನ್ಯಾಸಪದ್ಧತಿ – ತಿಥಿನಿರ್ಣಯಃ

” ಸ್ತೋತ್ರ ಗ್ರಂಥಗಳು “

ನಖಸ್ತುತಿಃ – ದ್ವಾದಶಸ್ತೋತ್ರಮ್ – ಕಂದುಕಸ್ತುತಿಃ

” ಶ್ರೀಮದಾಚಾರ್ಯರ ಭಾಷವೇ ಪರಮ ಶ್ರೇಷ್ಠ ಭಾಷ್ಯ “

ಇಪ್ಪತ್ತೊಂದು ಕುಭಾಷ್ಯ ತಪ್ಪಾನೆ ಸೋಲಿಸಿದ ।
ಸರ್ಪಶಯನನ ವೊಲಿಸಿದಾ ಕೋಲೆ ।
ಸರ್ಪಶಯನನ ವೊಲಿಸಿದ ಗುರುಗಳ ।
ಟಪ್ಪನೆ ನೆನೆವೇನನುದಿನ ಕೋಲೆ ।।

21 ಕುಭಾಷ್ಯಗಳ ವಿವರ…

ಭಾರತೀವಿಜಯ, ಸಚ್ಚಿದಾನಂದ, ಬ್ರಹ್ಮಘೋಷ, ಶತಾನಂದ, ಉಧ್ವರ್ತ, ವಿಜಯ, ರುದ್ರಭಟ್ಟ, ವಾಮನಿ, ಯಾದವಪ್ರಕಾಶ, ರಾಮಾನುಜ, ಭರ್ತೃ ಪ್ರಪಂಚ, ದ್ರಾವಿಡ, ಬ್ರಹ್ಮದತ್ತಿ, ಭಾಸ್ಕರ, ಪಿಶಾಚ, ವೃತ್ತಕಾರ, ವಿಜಯಭಟ್ಟ, ವಿಷ್ಣುಕ್ರಾಂತ, ವಾದೀಂದ್ರ, ಮಾಧವದಾಸ, ಶಂಕರಭಾಷ್ಯ.

ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವ ಮತ್ತು ಉತ್ತರ ಮೀಮಾಂಸಾ.
ಶ್ರೀಮದ್ವೇದವ್ಯಾಸದೇವರು ಉತ್ತರ ಮೀಮಾಂಸಾ ಪ್ರವರ್ತಕರು.
ಬ್ರಹ್ಮ ಸೂತ್ರಗಳಿಗೆ ಮೇಲೆ ತಿಳಿಸಿದಂತೆ 21 ಜನ ಆಚಾರ್ಯರುಗಳು ಭಾಷ್ಯವನ್ನು ಬರೆದರು.
ಇವರೆಲ್ಲರ ಭಾಷ್ಯಗಳನ್ನೂ ಖಂಡಿಸಿ ಶ್ರೀಮದಾಚಾರ್ಯರು 22ನೇ ಭಾಷ್ಯವನ್ನು ರಚಿಸಿ…

” ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ “

ಎಂಬ ಮಾಯಾವಾದವನ್ನು ಶ್ರೀಮದಾನಂದತೀರ್ಥರು ಖಂಡಿಸಿದರು.

ಗುರುವಮಧ್ವರಾಯರೇ ಹರಿದಾಸ್ಯವಿತ್ತು ।
ದ್ಧರಿಸುವರು ಸರ್ವಜ್ನರೂ ।
ಹರಿಪುರವಕಾಂಬದಕೆ ಪ್ರಥಮಾಂಗರೆಂದೆಮ್ಮ ।
ಹಿರಿಯರೆಲ್ಲ ಪೇಳ್ವರೂ ।।
ಅರಿ ಶಂಖ ಗದ ಪದ್ಮಧರ ಶೇಷಶಾಯಿ । ಶ್ರೀ ।
ಸಿರಿಪತಿಯ ಚರಣ ತೋರೋ ।
ಪರಮ ಕರುಣಾನಿಧಿ ವರ ವೃಕೋದರ ಅಸ್ಮದ್ ।
ಗುರುಗಳಂತರ್ಯಾಮಿ ನರಹರಿ ಪೊಂಡಿಸು ।।

ಮೇದಿನಿಯ ಮ್ಯಾಲುಳ್ಳ ಪಾಜಕ ಕ್ಷೇತ್ರದಲಿ ।
ಮೋದತೀರ್ಥರಾಗಿ ಅವತರಿಸಿದೆ ।
ಬಾದರಾಯಣ ಪ್ರಸಾದದಿಂದಲಿ ಚತುರ ।
ವೇದಗಳ ವಡನುಡಿಸಿದೆ ।।
ಆದಿಕಾರಣ ಕರ್ತ ನಾರಾಯಣೆಂದರುಹಿ ।
ದ್ವಾದಶ ಸ್ತೋತ್ರದಿಂದಲಿ ಸ್ತುತಿಸಿದೆ ।
ವೇದಗರ್ಭನ ಜನಕ ವೆಂಕಟವಿಠ್ಠಲನ ।
ಪಾದ ಮೂಲದಲಿಪ್ಪ ಪವನರಾಯರೇ ದಯದಿ ।।

ಮಾಘ ಶುದ್ಧ ನವಮೀ ಅದೃಶ್ಯರಾಗಿ ದೊಡ್ಡ ಬದರಿಗೆ ತೆರಳಿದರು.
( ಶ್ರೀ ವೇದವಾಸ್ಯದೇವರ ವಾಸ ಸ್ಥಾನವಾದ ಬರದಿಕಾಶ್ರಮಕ್ಕೆ )

” ಅದೃಶ್ಯತೋ ರೌಪ್ಯ ಪೀಠೇಸ್ತಿ ದೃಶ್ಯೋಸ್ತಿ ಬದರೀ ತಟೇ “

ಬ್ರಹ್ಮಾಂತಾ ಗುರವಃ ಸಾಕ್ಷಾದಿಷ್ಟಂ ದೈವಂ ಶ್ರಿಯಃ ಪತಿಃ ।
ಆಚಾರ್ಯಃ ಶ್ರೀಮದಾಚಾರ್ಯಾಸ್ಸಂತು ಮೇ ಜನ್ಮಜನ್ಮನೀ ।।

ನಮಸ್ತೇ ಪ್ರಾಣೇಶ ಪ್ರಣತ ವಿಭವಾಯಾವನಿಮಗಾ ।
ನಮಸ್ವಾಮೀನ್ ರಾಮ ಪ್ರಿಯತಮ ಹನುಮಾನ್ ಗುರುಗುಣ ।।
ನಮಸ್ತುಭ್ಯ೦ ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್ ।
ನಮ ಶ್ರೀ ಮನ್ಮಧ್ವ ಪ್ರದಿಶ ಸದೃಶ೦ ಜಯ ಜಯ ।।

ಲೇಕಕರಿಗೆ ನನ್ನ ಅನಂತ ನಮನಗಳು🙏🙏🙏

Leave a Reply

Your email address will not be published. Required fields are marked *

Translate »