ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು ?

ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು?

ಪೂಜೆಯ ಪ್ರಾರಂಭದಲ್ಲಿ ಮತ್ತು ಆರತಿಯನ್ನು ಮಾಡುವ ಮೊದಲು ಶಂಖವನ್ನು ಊದುವುದರಿಂದ ಮುಂದಿನ ಲಾಭಗಳಾಗುತ್ತವೆ.

ಅ. ಶಂಖನಾದದಿಂದಾಗಿ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗುತ್ತದೆ.

ಆ. ಬ್ರಹ್ಮಾಂಡದಲ್ಲಿ ಕಾರ್ಯನಿರತವಿರುವ ಶ್ರೀವಿಷ್ಣುವಿನ ಸಗುಣ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ ಮತ್ತು ಅದರ ಲಾಭವು ಶಂಖನಾದ ಮಾಡುವವರಿಗೆ ಮತ್ತು ಕೇಳುವವರಿಗೆ ಆಗುತ್ತದೆ.

ಇ. ವಾತಾವರಣದಲ್ಲಿನ ಕೆಟ್ಟ ಶಕ್ತಿಗಳ ಸಂಚಾರವು ಕಡಿಮೆಯಾಗಿ, ಪೂಜಾವಿಧಿಯಲ್ಲಿ ದೇವತೆಗಳನ್ನು ಆವಾಹನೆ ಮಾಡಿದಾಗ ಆಕರ್ಷಿತವಾಗುವ ದೇವತೆಗಳ ಸಾತ್ತ್ವಿಕ ಲಹರಿಗಳ ಪ್ರವಾಹಕ್ಕಾಗುವ ತ್ರಾಸದಾಯಕ ಸ್ಪಂದನಗಳ ಅಡಚಣೆಯು ಕಡಿಮೆಯಾಗುತ್ತದೆ.
ಈ. ಪೂಜೆಯಲ್ಲಿನ ಉಪಕರಣಗಳ ಸುತ್ತಲೂ ಈಶ್ವರೀ ಚೈತನ್ಯದ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ.

ಉ. ದೇವರ ಪೂಜೆಯ ವಿಧಿಯನ್ನು ಆರತಿಯಿಂದ ಮುಗಿಸುತ್ತಾರೆ. ಈ ಸಮಯದಲ್ಲಿಯೂ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಗಳ ಲಹರಿಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಪೂಜಾಸ್ಥಳದತ್ತ ಆಕರ್ಷಿತವಾಗುತ್ತಿರುವುದರಿಂದ ಈ ಲಹರಿಗಳ ಪ್ರವಾಹಕ್ಕೆ ಅಡಚಣೆಯನ್ನು ಉಂಟುಮಾಡುವ ರಜ-ತಮಾತ್ಮಕ ಲಹರಿಗಳ ವಿಘಟನೆಯಾಗಲು ಆರತಿಯ ಪ್ರಾರಂಭ ದಲ್ಲಿ ಶಂಖವನ್ನು ಊದುತ್ತಾರೆ. ಇದರಿಂದಾಗಿ ವಾತಾವರಣವು ಶುದ್ಧವಾಗುವುದರಿಂದ, ಪೂಜಾವಿಧಿಯಿಂದ ಹರಡುವ ಚೈತನ್ಯವು ಪೂಜೆಯ ನಂತರವೂ ವಾತಾವರಣದಲ್ಲಿ ತುಂಬಾ ಸಮಯ ಉಳಿಯಲು ಸಹಾಯವಾಗುತ್ತದೆ. ಆದುದರಿಂದ ಪೂಜೆಯಲ್ಲಿ ದೇವತೆಗಳನ್ನು ಆಹ್ವಾನಿಸುವ ಮೊದಲು ಮತ್ತು ಆರತಿಯನ್ನು ಪ್ರಾರಂಭಿಸುವ ಮೊದಲು ಶಂಖನಾದವನ್ನು ಮಾಡಬೇಕು ಹಾಗೂ ಈ ಸಮಯದಲ್ಲಿ ಪೂಜಾವಿಧಿಯತ್ತ ಅತ್ಯಧಿಕ ಪ್ರಮಾಣದಲ್ಲಿ ಆಕರ್ಷಿತವಾಗುವ ದೇವತೆಗಳ ಸಾತ್ತ್ವಿಕ ಲಹರಿಗಳಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು. –

  ಮೋಹಿನಿ ಏಕಾದಶಿ ‌ ‌ವ್ರತದ ಮಹತ್ವವೇನು? ಆಚರಣೆ ಹೇಗೆ ?

ತಲೆಯನ್ನು ಮೇಲಕ್ಕೆ ಎತ್ತಿ ಸ್ವಲ್ಪ ಹಿಂಬದಿಗೆ ಬಾಗಿಸಿ ಶಂಖವನ್ನು ಏಕೆ ಊದಬೇಕು?

ತಲೆಯನ್ನು ಸ್ವಲ್ಪ ಹಿಂಬದಿಗೆ ಬಗ್ಗಿಸಿ ಶಂಖನಾದವನ್ನು ಮಾಡುವುದರಿಂದ ದೇವತೆಯ ತಾರಕ-ಮಾರಕ ತತ್ತ್ವವು ಜಾಗೃತವಾಗುವುದು. ತಲೆಯನ್ನು ಮೇಲಕ್ಕೆ ಎತ್ತಿ ಸ್ವಲ್ಪ ಹಿಂಬದಿಗೆ ಬಾಗಿಸುವುದರಿಂದ ಶಂಖವನ್ನು ಊದುವ ಜೀವದ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಬಾಯಿಯಿಂದ ಹೊರಬರುವ ತೇಜ ಮತ್ತು ವಾಯುತತ್ತ್ವಕ್ಕೆ ಸಂಬಂಧಿಸಿದ ಲಹರಿಗಳಲ್ಲಿನ ರಜ-ಸತ್ತ್ವ ಕಣಗಳ ಯೋಗ್ಯ ಸಮತೋಲನವನ್ನು ಕಾಪಾಡಲು ಸಹಾಯವಾಗುತ್ತದೆ. ಇದರಿಂದ ಆವಶ್ಯಕತೆಗನುಸಾರವಾಗಿ ಆಯಾ ಪರಿಸ್ಥಿತಿಗೆ ಯೋಗ್ಯ ವಾದಂತಹ ದೇವತೆಯ ತಾರಕ-ಮಾರಕ ತತ್ತ್ವವು ಜಾಗೃತವಾಗುತ್ತದೆ.
ಶಂಖನಾದದಿಂದ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗುತ್ತದೆ: ಶಂಖನಾದದಿಂದ ಹೊರಬೀಳುವ ನಾದಶಕ್ತಿಯಿಂದಾಗಿ ಊರ್ಧ್ವ ದಿಕ್ಕಿನಿಂದ ಬರುವ ಬ್ರಹ್ಮಾಂಡದಲ್ಲಿನ ಸೂಕ್ಷ್ಮತರ ಲಹರಿಗಳು ಜಾಗೃತವಾಗಿ ಕಡಿಮೆ ಸಮಯದಲ್ಲಿ ರಜ-ತಮ ಕಣಗಳ ವಿಘಟನೆಯಾಗುತ್ತದೆ.

  ತಂದೆ ತಾಯಿಯರ ಶ್ರಾದ್ಧ ಪಿತೃಕಾರ್ಯ

ಶಂಖನಾದದಿಂದ ಕೆಟ್ಟ ಶಕ್ತಿಗಳು ಪ್ರಕಟವಾಗುತ್ತವೆ: ಶಂಖನಾದದಿಂದ ಹೊರಬೀಳುವ ನಾದಶಕ್ತಿಯುಕ್ತ ಲಹರಿಗಳ ವೇಗದಿಂದ ರಜೋಕಣಗಳ ಘರ್ಷಣೆಯಾಗಿ ಸೂಕ್ಷ್ಮಜ್ವಾಲೆಗಳು ನಿರ್ಮಾಣವಾಗುತ್ತವೆ. ಇದರಿಂದ ಕೆಟ್ಟ ಶಕ್ತಿಗಳ ವಾಯುರೂಪೀ ದೇಹದ ಸುತ್ತಲೂ ಇರುವ ಕೋಶವು ಉರಿಯುತ್ತದೆ. ಇದರಿಂದಾಗಿ ಕೆಟ್ಟ ಶಕ್ತಿಗಳಿಗೆ ಶಂಖಧ್ವನಿಯನ್ನು ಸಹಿಸಲು ಸಾಧ್ಯವಾಗದೇ ಪ್ರಕಟವಾಗುತ್ತವೆ. ಭುವರ್ಲೋಕ ಮತ್ತು ಪಾತಾಳದಲ್ಲಿನ ಕೆಲವು ಮಾಂತ್ರಿಕರು (ಮಾಂತ್ರಿಕರು ಎಂದರೆ ಎಲ್ಲಕ್ಕಿಂತ ಬಲಾಢ್ಯ ಅಸುರೀ ಶಕ್ತಿಗಳು) ಶಂಖನಾದದಿಂದ ತೊಂದರೆಯಾದರೂ ಏನೂ ಆಗಿಲ್ಲದಂತೆ ನಟಿಸುತ್ತಾರೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »