ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನಾವು ದಾನವನ್ನು ಯಾಕೆ ಕೊಡಬೇಕು..? – ಕಥೆ

🕉️🕉️🕉️🙏🏻🙏🏻🙏🏻🕉️🕉️

ದಾನದ ಮಹತ್ವ ನಾವು ದಾನವನ್ನು ಯಾಕೆ ಕೊಡಬೇಕು..?

ಒಂದು ದಿನ ಕೈಲಾಸಪರ್ವತದಲ್ಲಿ ಶಿವ ಪಾರ್ವತಿಯರು ಭೂಲೋಕದ ಜನರ ಬಗ್ಗೆ ಮಾತನಾಡುತ್ತಿರಲು, ಪಾರ್ವತಿಯು ತನ್ನ ಮನಸ್ಸಿನಲ್ಲಿ ಮೂಡಿದ ಸಂಶಯವನ್ನು ನಿವಾರಣೆ ಪಡಿಸಿಕೊಳ್ಳುವ ಉದ್ದೇಶದಿಂದ ಮಹಾದೇವನಲ್ಲಿ, ಪ್ರಭೋ …! ಮನುಷ್ಯರಲ್ಲಿ ಕೆಲವರಿಗೆ ಆರೋಗ್ಯ ಭರಿತ ತಾರುಣ್ಯವಿದ್ದರೂ ತಿನ್ನಲು ಉಣ್ಣಲು ಗತಿಯಿಲ್ಲದೆ ದರಿದ್ರದಿಂದ ಕೂಡಿರುತ್ತಾರೆ, ಇನ್ನು ಕೆಲವರಿಗೆ ಮುಪ್ಪಿನಲ್ಲಿ ಬೇಕಾದಷ್ಟು ಸಂಪತ್ತು ಪ್ರಾಪ್ತಿಯಾಗಿದ್ದರು ಅನಾರೋಗ್ಯ ನಿಮಿತ್ತವಾಗಿ ಅದನ್ನು ಅನುಭವಿಸುವ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಹಾಗೆ ಇನ್ನು ಕೆಲವರು ಉತ್ತಮ ಜ್ಞಾನಿಗಳು ಪಂಡಿತರು ಆಗಿದ್ದರು ಹುಟ್ಟು ದರಿದ್ರರಾಗಿರುತ್ತಾರೆ. ಕೆಲವರು ಆಗರ್ಭ ಶ್ರೀಮಂತರಾಗಿ ಮೆರೆಯುತ್ತಿದ್ದರು ನಿರಕ್ಷರರಾಗಿರುತ್ತಾರೆ. ವಿದ್ಯೆ ಬುದ್ದಿ ಸಂಪತ್ತನ್ನು ಮನುಷ್ಯರಿಗೆ ಕರುಣಿಸುವ ಸರ್ವಶಕ್ತನಾದ ಭಗವಂತನಿಗೆ ಯಾರುಯಾರಿಗೆ ಯಾವ ಸಂಪತ್ತನ್ನು ಯಾವ ಕಾಲದಲ್ಲಿ ಕೊಡಬೇಕೆಂಬ ತಿಳುವಳಿಕೆ ಇಲ್ಲವೇ ಎಂದು ಪ್ರಶ್ನಿಸಿದಳು.

  ಕೃಷ್ಣ ಸುಧಾಮ ನ ಅವಲಕ್ಕಿ ಹಿಂದಿನ ಕಥೆ

ಆಗ ಶಿವನು, ಪ್ರಿಯೆ … ಮಾನವನ ಪೂರ್ವಜನ್ಮದಲ್ಲಿ ಮಾಡಿದ ದಾನ, ಪಾಪ, ಪುಣ್ಯಕ್ಕನುಗುಣವಾಗಿ ಭಗವಂತನು ಈ ಜನ್ಮದಲ್ಲಿ ಎಲ್ಲವನ್ನು ಕರುಣಿಸುತ್ತಾನೆ . ಹಿಂದಿನ ಜನ್ಮದಲ್ಲಿ ಯವ್ವನದ ಅಮಲಿನಲ್ಲಿ ದುರಹಂಕಾರಿಯಾಗಿದ್ದು, ಯಾರಿಗೂ ಏನನ್ನೂ ಕೊಡದೆ, ಮುಪ್ಪುಬಂದು ಕೈಕಾಲುಗಳು ಸತ್ವರಹಿತವಾಗಲು, ತಾನು ಇಲ್ಲಿಯವರೆಗೆ ಯಾರಿಗೂ ಏನನ್ನೂ ಕೊಡದಿರುವುದರಿಂದ ಮುಂದೇನು ಗತಿಯೆಂದು ಹೆದರಿ ದೇಹಾಂತ್ಯದ ಸಮಯದಲ್ಲಿ ಯಾರು ದಾನವನ್ನು ಕೊಡುತ್ತಾನೋ ಅವನಿಗೆ ಮುಂದಿನ ಜನ್ಮದಲ್ಲಿ ವೃದ್ದಾಪ್ಯದಲ್ಲಿಯೇ ಸಂಪತ್ತು ಪ್ರಾಪ್ತಿಯಾಗುವುದು. ಇದೇರೀತಿ, ಹಿಂದಿನ ಜನ್ಮದಲ್ಲಿ ಬೇಕಾದಷ್ಟು ಸಂಪತ್ತಿದ್ದರೂ ಅದನ್ನು ದಾನ ಮಾಡದೇ ಕೇವಲ ವಿದ್ಯಾದಾನ ವನ್ನು ಮಾಡಿದರೆ, ಮುಂದಿನ ಜನ್ಮದಲ್ಲಿ ಜ್ಞಾನಿಯಾದರು ಶ್ರೀಹೀನನಾಗಿ ಬಾಳಬೇಕಾಗುತ್ತದೆ.

ಇದೇರೀತಿ ಪೂರ್ವಜನ್ಮದಲ್ಲಿ, ವಿದ್ವಾಂಸನಾಗಿದ್ದರೂ ವಿದ್ಯಾ ದಾನವನ್ನು ಮಾಡದೇ ಕೇವಲ ಸಂಪತ್ತನ್ನು ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ನಿರಕ್ಷರನಾದ ಧನಿಕನಾಗಿ ಜನ್ಮವನ್ನು ತಾಳುವನು. ನಾವು ಈ ಜನ್ಮದಲ್ಲಿ ದಾನ ಕೊಟ್ಟದ್ದನ್ನು ಮುಂದಿನ ಜನ್ಮದಲ್ಲಿ ಅನುಭವಿಸುವಂತೆ ಭಗವಂತನು ಅನುಗ್ರಹ ಮಾಡುತ್ತಾನೆ ಎಂದು ಪರಮೇಶ್ವರನು ಸತಿದೇವಿಯ ಸಂಶಯವನ್ನು ನಿವಾರಿಸುತ್ತಾನೆ.ಒಮ್ಮೆ ಸಂತ ಸಮರ್ಥದಾಸರು ರಾಮನಾಮವನ್ನು ಜಪಿಸುತ್ತಾ ,ಜೋಳಿಗೆ ಹಿಡಿದುಕೊಂಡು ಬರುತ್ತಿದ್ದರು.ಇದನ್ನು ಗಮನಿಸಿದ ಒಂದು ಮನೆಯ ಹೆಂಗಸು ದಾಸರು ಬಂದರೆ ಏನನ್ನಾದರೂ ಕೊಡಬೇಕಾದೀತೆಂದು ಅರಿತು ತನ್ನ ಮನೆಯ ಕದವನ್ನು ಧಡಾರನೆ ಮುಚ್ಚಿದಳು.ಇದನ್ನು ಕಂಡ ದಾಸರು ಅವಳ ಮನೆಯ ಮುಂದೆ ಬಂದು ಬಾಗಿಲು ತಟ್ಟಿ ಅವಳು ಬಾಗಿಲು ತೆರೆಯುವ ವರೆಗೆ ಸಹನೆಯಿಂದ ಕಾದು ಕುಳಿತರು.ಆ ಹೆಂಗಸು ಕೊನೆಗೆ ಸಂಕೋಚದಿಂದ ಬಾಗಿಲನ್ನು ತೆರೆದಳು.ಆಗ ದಾಸರು”ತಾಯೀ….ಮನೆಯ ಮುಂದಿನ ಮಣ್ಣನ್ನು ಒಂದು ಹಿಡಿಯಷ್ಟು ತೆಗೆದು ನನ್ನ ಜೋಳಿಗೆಗೆ ಹಾಕು” ಎಂದು ಹೇಳಿದರು.ಆಗ ಆ ಹೆಂಗಸು ಮನಸ್ಸಿನಲ್ಲೇ ಇವರು ಎಂಥ ದಾಸರಪ್ಪ ಎಂದು ಗೊಣಗಿಕೊಂಡು “ಅಕ್ಕಿಯಿರುವ ಜೋಳಿಗೆಗೆ ಮಣ್ಣನ್ನು ಹಾಕಿದರೆ ಅದನ್ನು ಆರಿಸಿಕೊಳ್ಳಲು ತೊಂದರೆಯಾಗದೆ?”ಎಂದು ಪ್ರಶ್ನಿಸಿದಳು.ಆಗ ದಾಸರು ನಗುತ್ತಾ “ತಾಯಿ…ನನಗೆ ತೊಂದರೆಯಾದರೂ ಪರವಾಗಿಲ್ಲ ,ನಿನ್ನ ಕೈಗಳಿಗೆ ಏನನ್ನಾದರೂ ಎತ್ತಿ ಕೊಡುವ ಸಂಸ್ಕಾರ ಬಂದು ಮುಂದಿನ ಜನ್ಮದಲ್ಲಿ ಅಕ್ಕಿಯನ್ನು ಹಾಕುವಂತಾಗಲಿ “ಎಂದು ಹಾರೈಸುತ್ತಾ ಮುಂದೆ ನಡೆದರು.ಕೈಗೆ ದಾನವೇ ಭೂಷಣ…! ಬಂಗಾರದ ಬಳೆಗಳಲ್ಲ….ಎಂಬುದು ಶ್ರೀಪಾದರಾಜರ ಅಭಿಮತ. “ದಾನ ನಮಗಾಗಿ ..ಪರರಿಗಾಗಿ” ಕೊಟ್ಟದ್ದು ನಮಗೆ ಬಚ್ಚಿಟ್ಟದ್ದು ಪರರಿಗೆ.

  ಕೋಲಾರ ಜಿಲ್ಲೆಯಲ್ಲಿರುವ ಪುರಾತನ ಪುಣ್ಯಕ್ಷೇತ್ರ ವಕ್ಕಲೇರಿಯ ಮಾರ್ಕಂಡೇಶ್ವರಸ್ವಾಮಿ

🕉️🕉️🙏🏻🕉️🕉️🙏🏻🙏🏻🕉️🕉️

Leave a Reply

Your email address will not be published. Required fields are marked *

Translate »