ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವ ಕ್ರಮ

ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವ ಕ್ರಮ

1.ತೀರ್ಥವನ್ನು ಬಲಗೈಯಲ್ಲಿಯೇ ಸ್ವೀಕರಿಸಬೇಕೆಂಬುದು ನಿಯಮ.

2.ಕೈಕೆಳಗೆ ವಸ್ತ್ರವೊಂದನ್ನು ಇಲ್ಲವೇ ಉತ್ತರೀಯವನ್ನು, (ಸ್ತ್ರೀಯರು ತಮ್ಮ ಸೀರೆಯ ಸೆರಗಿನ ತುದಿಯನ್ನು) ಹಿಡಿದಿರಬೇಕು. ಇದರ ಉದ್ದೇಶವೇನೆಂದರೆ, ಸ್ವೀಕರಿಸುವಾಗ ಅಥವಾ ಪ್ರಾಶನ ಮಾಡುವಾಗ ತೀರ್ಥವು ಕೆಳಗೆ ಬೀಳದಂತೆ ಎಚ್ಚರ ವಹಿಸುವುದಾಗಿದೆ.

2.ತೀರ್ಥವನ್ನು ಸ್ವೀಕರಿಸುವಾಗ ನಮ್ಮ ತೋರುಬೆರಳನ್ನು ಹೆಬ್ಬೆರಳಿನ ಅಂತಿಮ ರೇಖೆಗೆ ಮುಟ್ಟುವಂತೆ ಮಡಿಸಿ ಅದರ ಮೇಲೆ ಹೆಬ್ಬೆರಳನ್ನು ಮಡಿಚಿಡಬೇಕು. ಉಳಿದ ಮೂರು ಬೆರಳುಗಳಲ್ಲಿ ಮಧ್ಯದ ಬೆರಳು ಮೇಲಿರುವಂತೆ, ನಂತರ ಉಂಗುರದ ಬೆರಳು ಮತ್ತು ಕೊನೆಯಲ್ಲಿ ಕಿರುಬೆರಳಿರುವಂತೆ ನೇರವಾಗಿ ಚಾಚಿರಬೇಕು.

  1. ಪ್ರಪ್ರಥಮವಾಗಿ ತೀರ್ಥವನ್ನು ತಲೆಯಮೇಲೆ ಪ್ರೋಕ್ಷಿಸಿಕೊಳ್ಳಬೇಕು. (ಮಧ್ವಗುರು ಪೂಜೆಯಲ್ಲಾದರೂ ಸರಿ)
  2. ಮುಂಜಾನೆ ಸಂಧ್ಯಾವಂದನೆ ;ದೇವರಪೊಜೆ ನಂತರ ಆಹಾರ ಸೇವನೆಗೂ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು.(ಸಾತ್ವಿಕ ಆಹಾರ ಇದ್ದಲ್ಲಿ ಅಡ್ಡಿ ಇಲ್ಲ )
  ವಸುದೇವ ಹಾಗೂ ದೇವಕಿ ಪೂರ್ವ ಜನ್ಮದ ಕರ್ಮದ ಫಲದ ಕಥೆ

6.ಮಹಾಪೂಜೆ ಯಲ್ಲೂ ಸಹ ಊಟದ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು. ಏಕಾದಶಿಯಂದು ಒಂದೇ ಸಲ ತೀರ್ಥ ಪ್ರಾಶನ ಮಾಡಬೇಕು)

7.ತೀರ್ಥಗಳನ್ನು ಪ್ರಾಶನ ಮಾಡಿದ ನಂತರ ಕೈಯಲ್ಲಿ ಉಳಿದಿರುವ ತೇವಾಂಶವೂ ನಷ್ಟವಾಗದಂತೆ ನೆತ್ತಿಯ ಮೇಲೆ ಸವರಿಕೊಳ್ಳಬೇಕು, ಇಲ್ಲವಾದರೆ ಕೈಗಳ ಕೆಳಗೆ ಹಿಡಿದಿದ್ದ ವಸ್ತ್ರದಿಂದ ಅದನ್ನು ಒತ್ತಿಕೊಂಡು ಒರೆಸಿಕೊಳ್ಳಬೇಕು.

8.ತೀರ್ಥವನ್ನು ಸ್ವೀಕರಿಸುವಾಗ ದೇಹವನ್ನು ಬಗ್ಗಿಸಿರಬೇಕು. ಇದು ದೇವರ ಅಭೀಷೇಕದ ತೀರ್ಥಕ್ಕೆ ನಾವು ನೀಡುವ ಗೌರವ ಮತ್ತು ತೋರುವ ಭಕ್ತಿಯ ಸಂಕೇತವಾಗಿರುತ್ತದೆ.

9.ಮೂರು ತೀರ್ಥಗಳ ಸಾಂಕೇತಿಕ ವಿವರಣೆ:
ಪ್ರಥಮಂ ಕಾಯಶುದ್ಧ್ಯರ್ಥಂ
ದ್ವಿತೀಯಂ ಧರ್ಮಸಾಧನಂ
ತೃತೀಯಂ ಮೋಕ್ಷಸಿದ್ಧ್ಯರ್ಥಂ
ಏವಂ ತೀರ್ಥಂ ಪಿಬೇತ್||
ಅರ್ಥ: ಮೊದಲನೆಯದು ಕಾಯ ಅಥವಾ ದೇಹ ಶುದ್ಧಿಗಾಗಿ; ಎರಡನೆಯದು ಧರ್ಮಸಾಧನೆಗಾಗಿ ಮತ್ತು ಮೂರನೆಯದು ಮೋಕ್ಷಸಿದ್ಧಿಗಾಗಿ ಈ ತೀರ್ಥಗಳನ್ನು ಕುಡಿಯಬೇಕು.
ಕೆಲವೆಡೆ ಒಂದೇ ಬಾರಿ ತೀರ್ಥವನ್ನು ನೀಡುವರಾದರೂ ಒಂದರಲ್ಲೇ ಮೂರು ತೀರ್ಥಗಳನ್ನು ಅನುಸಂಧಾನಿಸಿ ಕುಡಿಯಬೇಕು.

  ಭಾರತದ ಮಹಾನ್ ಪುರಾಣಗಳು ‌- ಅಷ್ಟಾದಶ ಪುರಾಣಗಳೆಂದು ಪ್ರಖ್ಯಾತವಾಗಿರುವ ಹದಿನೆಂಟು ಪುರಾಣ

10.ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ* :

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸರ್ವ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇವರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll
ಸಂಗ್ರಹ
ಪ್ರಶಾಂತಭಟ್.

Leave a Reply

Your email address will not be published. Required fields are marked *

Translate »