ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸತ್ಯನಾರಾಯಣ ಪೂಜೆ ಮಾಡುವ ಅಥವಾ ಕಥೆ ಹೇಳುವ ವಿಧಾನ

ಸತ್ಯನಾರಾಯಣ ಪೂಜೆ ಮಾಡುವ ಅಥವಾ ಕಥೆ ಹೇಳುವ ವಿಧಾನ:
ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳುವವರು ಸತ್ಯನಾರಾಯಣ ಪೂಜೆಗೂ ಮುಂಚಿನ ದಿನ ಉಪವಾಸವನ್ನು ಮಾಡಬೇಕಾಗುತ್ತದೆ. ಸತ್ಯನಾರಾಯಣ ಪೂಜೆ ಮಾಡುವಾಗ ಪೂಜಾ ಸ್ಥಳವನ್ನು ಹಸುವಿನ ಸಗಣಿಯ ಮೂಲಕ ಪವಿತ್ರಗೊಳಿಸಿಕೊಳ್ಳಬೇಕಾಗುತ್ತದೆ. ತದನಂತರ ಕುರ್ಚಿಯಾಗಿರಬಹುದು, ಮೇಜಾಗಿರಬಹುದು ಅಥವಾ ನೆಲದಿಂದ ಸ್ವಲ್ಪ ಎತ್ತರದಲ್ಲಿ ಯಾವುದಾದರೊಂದು ವಸ್ತುಗಳನ್ನಿಟ್ಟು ಆ ವಸ್ತುಗಳ ನಾಲ್ಕೂ ಬದಿಗಳಲ್ಲಿ ಬಾಳೆಗಿಡವನ್ನು ಕಟ್ಟಿ ಅಥವಾ ನೆಟ್ಟು ಆ ವಸ್ತುವಿನ ಮೇಲೆ ವಿಷ್ಟುವಿನ ಫೋಟೋ ವನ್ನಾಗಲಿ, ಪ್ರತಿಮೆಯನ್ನಾಗಲಿ ಇಡಬೇಕು.

ಸತ್ಯನಾರಾಯಣ ಪೂಜೆಯನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸಿ, ನಂತರ ಇಂದ್ರಾದಿ, ದಶದಿಕ್ಪಾಲಕರನ್ನು, 5 ಲೋಕಪಾಲರನ್ನು, ರಾಮ, ಲಕ್ಷ್ಮಣ, ಸೀತೆಯನ್ನು ಸೇರಿದಂತೆ ರಾಧಾ, ಕೃಷ್ಣರನ್ನೂ ಕೂಡ ಪೂಜಿಸಬೇಕು. ತದನಂತರ ಸತ್ಯನಾರಾಯಣ ಅಥವಾ ವಿಷ್ಣುವನ್ನು ಪೂಜಿಸಿ. ಸತ್ಯನಾರಾಯಣನನ್ನು ಪೂಜಿಸಿದ ನಂತರ ಲಕ್ಷ್ಮೀ ಮಾತೆಯನ್ನು ಹಾಗೂ ಪೂಜೆಯ ಕೊನೆಯಲ್ಲಿ ಪರಶಿವನನ್ನು ಮತ್ತು ಬ್ರಹ್ಮದೇವನನ್ನು ಪೂಜಿಸಬೇಕು. ಪೂಜೆ ಮುಗಿದ ನಂತರ ಎಲ್ಲಾ ದೇವರಿಗೆ ಆರತಿ ಬೆಳಗಿ, ಚರಣಾಮೃತವನ್ನು ವಿತರಿಸಿ.

  ಭಾನುಮತಿ, ಶ್ರೀಕೃಷ್ಣರ ಭೇಟಿ - ವ್ಯಾಸ ಮಹಾಭಾರತ

ಒಂದುವೇಳೆ ಸತ್ಯನಾರಾಯಣ ಪೂಜೆಯಲ್ಲಿ ಪುರೋಹಿತರು ಭಾಗಿಯಾಗಿದ್ದರೆ ಅವರಿಗೆ ದಕ್ಷಿಣೆ ಮತ್ತು ಬಟ್ಟೆಗಳನ್ನು ದಾನಮಾಡುವುದರೊಂದಿಗೆ ಆಹಾರ ಪದಾರ್ಥಗಳನ್ನು ನೀಡಬೇಕು. ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡವರು ತಾವು ಪ್ರಸಾಧ ಊಟವನ್ನು ಸ್ವೀಕರಿಸುವ ಮೊದಲು ಪುರೋಹಿತರ ಚರಣಗಳಿಗೆ ಎರಗಿ ಆಶೀರ್ವಾದವನ್ನು ಪಡೆಯಬೇಕು.

ಸತ್ಯನಾರಾಯಣ ಪೂಜೆ ಅಥವಾ ಕಥೆಯ ಮಹತ್ವ: ಸತ್ಯನಾರಾಯಣ ಪೂಜೆಯನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡು ಬಂದ ಪೂಜೆಯಲ್ಲ, ಬದಲಾಗಿ ಇದನ್ನು ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ‘ಸ್ಕಂದ ಪುರಾಣ’ದಲ್ಲಿ ಹೇಳಲಾಗಿದೆ. ನಾರದ ಮುನಿಗಳು ವಿಷ್ಣುವಿನಲ್ಲಿ ಭೂಮಿಯ ಮೇಲಿನ ಜನರು ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಲು ಯಾವುದಾದರೂ ಉತ್ತಮ ಮಾರ್ಗವಿದೆಯೇ ಎಂದು ಕೇಳಿದಾಗ ಮಹಾವಿಷ್ಣು ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಕಷ್ಟವು ದೂರಾಗುತ್ತದೆಂದು ಹೇಳುತ್ತಾರೆಂತೆ.

Satyanarayan Puja
ಸಂಕಷ್ಟಗಳನ್ನು ದೂರ ಮಾಡಲು ಸತ್ಯನಾರಾಯಣ ಪೂಜೆ

ಇದರ ಆಧಾರದ ಮೇಲೆ ಇಂದಿಗೂ ಕೂಡ ಸತ್ಯನಾರಾಯಣ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದೊಂದು ಪವಿತ್ರ ಊಜೆಯೆಂದು ಪರಿಗಣಿಸಲಾಗಿದ್ದು, ಈ ಪೂಜೆಯನ್ನು ಮನೆಯಲ್ಲಿ ಮಗು ಜನಿಸಿದಾಗ, ವಿವಾಹ ಸಂದರ್ಭದಲ್ಲಿ, ಗೃಹ ಪ್ರವೇಶದ ಸಂದರ್ಭದಲ್ಲಿ ಸೇರಿದಂತೆ ಇನ್ನು ಹಲವಾರು ಸಂತಸದ ಸಮಯಗಳಲ್ಲಿ ಆಚರಿಸಲಾಗುತ್ತದೆ. ಜನರು ಅನಾರೋಗ್ಯದಿಂದ ಬಳಲುತ್ತಿದ್ದರೆ, ನಷ್ಟವನ್ನು ಅನುಭವಿಸುತ್ತಿದ್ದರೆ ಅಥವಾ ತಮ್ಮ ಆಸೆಗಳನ್ನು ಈಡೇರಿಸಕೊಳ್ಳಲು ಕೂಡ ಸತ್ಯನಾರಾಯಣ ಪೂಜೆಯನ್ನು ನಡೆಸುತ್ತಾರೆ. ಈ ಪೂಜೆಯಿಂದ ದುಷ್ಟರನ್ನು ಶಿಕ್ಷಿಸಿ, ಸಿಷ್ಟರನ್ನು ರಕ್ಷಿಸಲು ಸಹಾಯಕವಾಗಿದೆ.

  ಅಲ್ಲಮಪ್ರಭು ವಚನ ಸಂಪೂರ್ಣ ಸಂಗ್ರಹ - Allamaprabhu Vachana collection

ಯಾವಾಗ ಸತ್ಯನಾರಾಯಣ ಪೂಜೆಯನ್ನು ಮಾಡಬೇಕು..?
ಭಗವಾನ್‌ ಸತ್ಯನಾರಾಯಣನನ್ನು ಯಾವಾಗ ಬೇಕಾದರೂ ಪೂಜಿಸಬಹುದು. ಆದರೆ ಈ ಪೂಜೆಯನ್ನು ಹುಣ್ಣಿಮೆ, ಸಂಕ್ರಾಂತಿ, ಗುರುವಾರ ಅಥವಾ ಇನ್ನಿತರ ದೊಡ್ಡ ಕಷ್ಟದ ಸಮಯದಲ್ಲೂ ಮಾಡಬಹುದು. ಪೂಜೆಯಂದು ಮುಂಜಾನೆ ಸ್ನಾನ ಮಾಡಿ, ಶುಚಿಯಾದ ಬಟ್ಟೆಯನ್ನು ಅಥವಾ ಹೊಸ ಬಟ್ಟೆಯನ್ನು ಧರಿಸಿ, ಹಣೆಯ ಮೇಲೆ ತಿಲಕವನ್ನಿಟ್ಟು ಶುಭ ಸಮಯದಲ್ಲಿ ಪೂಜೆಯನ್ನು ಪ್ರಾರಂಭಿಸಿ. ಸತ್ಯನಾರಾಯಣ ಪೂಜೆಯ ವೇಳೆ ವಿಷ್ಣುವಿನ ಕಥೆಯನ್ನು ಓದಿ ಅಥವಾ ಕೇಳಿ.

ಸತ್ತ ನಂತರ ಮಾಡುವ ಸತ್ಯನಾರಾಯಣ ಪೂಜೆ:
ವ್ಯಕ್ತಿಯ ಮರಣದ ನಂತರ ಮನೆಯಲ್ಲಿ ಸೂತಕದ ವಾತಾವರಣ ತುಂಬಿಕೊಂಡಿರುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವಾಗಲಿ, ಪೂಜಾ ವಿಧಿ – ವಿಧಾನಗಳಾಗಲಿ ಹಮ್ಮಿಕೊಳ್ಳಲಾಗುವುದಿಲ್ಲ. ಹಾಗಾಗಿ ಶವಸಂಸ್ಕಾರ ಮುಗಿದು ಸೂತಕವು ಕಳೆದ ನಂತರ ಮನೆಯಲ್ಲಿ ಭಗವಾನ್‌ ವಿಷ್ಣುವಿನ ಆರಾಧನೆ ಅಥವಾ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಈ ಕಥೆಯನ್ನು ಆಯೋಜಿಸುವ ಮೂಲಕ ಮನೆಯನ್ನು ಮತ್ತೆ ಶುದ್ಧೀಕರಿಸಲಾಗುತ್ತದೆ ಮತ್ತು ಪೂಜೆಯ ಆಚರಣೆಗಳು ನಿಯಮಿತವಾಗಿ ಆರಂಭವಾಗುತ್ತದೆ.

Leave a Reply

Your email address will not be published. Required fields are marked *

Translate »

You cannot copy content of this page